ವೀಡಿಯೊಗಳು : ಅಮೆರಿಕ-ಇಸ್ರೇಲ್‌ ದಾಳಿ ; ಇರಾನಿನಲ್ಲಿ 201 ಸಾವು, 700 ಕ್ಕೂ ಹೆಚ್ಚು ಮಂದಿಗೆ ಗಾಯ; ಯುಎಇ, ಕತಾರ್‌, ಸೌದಿ ಮೇಲೆ ಇರಾನ್‌ ದಾಳಿ

ಇರಾನಿನಾದ್ಯಂತ ಅಮೆರಿಕ-ಇಸ್ರೇಲ್ ದಾಳಿಗಳಲ್ಲಿ ಕನಿಷ್ಠ 201 ಜನರು ಸಾವಿಗೀಡಾಗಿದ್ದಾರೆ ಮತ್ತು 747 ಜನರು ಗಾಯಗೊಂಡಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. 24 ಪ್ರಾಂತ್ಯಗಳ ಮೇಲೆ ನಡೆದ ಈ ದಾಳಿಗಳು ವ್ಯಾಪಕ ಸಾವುನೋವುಗಳು ಮತ್ತು ಹಾನಿಯನ್ನುಂಟುಮಾಡಿವೆ ಎಂದು ವರದಿಗಳು … Continued

ದಾಳಿಗೆ ಪ್ರತಿದಾಳಿ ; ಬಹ್ರೇನ್, ಕುವೈತ್, ಯುಎಇಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತಿ ದಾಳಿ ನಡೆಸಿದ ಇರಾನ್‌

ಅಮೆರಿಕದ ಸಹಾಯದೊಂದಿಗೆ ಇಸ್ರೇಲ್ (ಟೆಲ್ ಅವಿವ್), ಇರಾನಿನ ತೆಹ್ರಾನ್ ಮೇಲೆ ಶನಿವಾರ ಬೆಳಿಗ್ಗೆ  ಮುನ್ನೆಚ್ಚರಿಕಾ ದಾಳಿ (preemptive attack) ನಡೆಸಿದ ನಂತರಈ ದಾಳಿಗೆ ಪ್ರತಿಯಾಗಿ ಇರಾನ್ ಇಸ್ರೇಲ್ ಕಡೆಗೆ “ಕ್ಷಿಪಣಿಗಳ ಸುರಿಮಳೆ” ಗರೆದಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಅಮೆರಿಕದ ನೇತೃತ್ವದ ದಾಳಿಗಳಿಗೆ “ಪ್ರತ್ಯುತ್ತರವಾಗಿ ಇರಾನ್‌,  ಯುಎಇ, ಬಹ್ರೇನ್, ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕ ನೆಲೆಗಳ … Continued

ಅದೃಷ್ಟ ಅಂದ್ರೆ ಇದಪ್ಪ..: ಅಬುಧಾಬಿ ಬಿಗ್ ಟಿಕೆಟ್ ಲಾಟರಿಯಲ್ಲಿ ₹49 ಕೋಟಿ ಬಹುಮಾನ ಗೆದ್ದ ಉಡುಪಿ ಯುವಕ…!

ಉಡುಪಿ: ಕರ್ನಾಟಕದ ಕರಾವಳಿಯ ಯುವಕನೊಬ್ಬನಿಗೆ ರಾತ್ರೋರಾತ್ರಿ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ಯುಎಇಯ ಪ್ರತಿಷ್ಠಿತ ‘ಬಿಗ್ ಟಿಕೆಟ್’ (Big Ticket) ಲಕ್ಕಿ ಡ್ರಾನಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಮಟ್ಟು ನಿವಾಸಿ ಶಂತನು ಶೆಟ್ಟಿಗಾರ್ ಅವರು ಬರೋಬ್ಬರಿ 20 ಮಿಲಿಯನ್ ದಿರ್ಹಾಮ್ (ಅಂದಾಜು 49 ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದಾರೆ. ಪ್ರಸ್ತುತ ಓಮನ್‌ನ ರಿಟೇಲ್ ವಲಯದಲ್ಲಿ … Continued

ಭಾರತಕ್ಕೆ ತನ್ನ ಅಧ್ಯಕ್ಷರ ಅಚ್ಚರಿಯ ಭೇಟಿ ನಂತ್ರ ಪಾಕಿಸ್ತಾನ ಏರ್‌ಪೋರ್ಟ್ ಒಪ್ಪಂದದಿಂದ ಹಿಂದೆ ಸರಿದ ಯುಎಇ

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಅನಿರೀಕ್ಷಿತ ಭಾರತ ಭೇಟಿಯು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ಸಮೀಕರಣಗಳ ಮೇಲೆ ಭಾರಿ ಪರಿಣಾಮ ಬೀರಿದ್ದು, ಇದು ಪಾಕಿಸ್ತಾನಕ್ಕೆ ಪರೋಕ್ಷ ಹಿನ್ನಡೆಯಾಗಿ ಪರಿಣಮಿಸಿದೆ. ಶೇಖ್ ನಹ್ಯಾನ್ ಅವರ ಮೂರು ಗಂಟೆಗಳ ಭಾರತ ಭೇಟಿಯ ನಂತರ, ಅಬುಧಾಬಿ ಸರ್ಕಾರವು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಅಂತಾರಾಷ್ಟ್ರೀಯ … Continued

ದೆಹಲಿಗೆ ಯುಎಇ ಅಧ್ಯಕ್ಷರ 3 ತಾಸಿನ ಭೇಟಿ: ಪ್ರೋಟೋಕಾಲ್ ಬದಿಗಿಟ್ಟು ‘ಏರ್‌ಪೋರ್ಟಿಗೇ ಹೋಗಿ ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ (UAE) ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರ (ಜನವರಿ ೧೯) ದೆಹಲಿಗೆ ಭೇಟಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ ನಹ್ಯಾನ್ ಅವರನ್ನು ಆತ್ಮೀಯವಾಗಿ … Continued

ದುಬೈನಲ್ಲಿ 35 ಕೋಟಿ ರೂ. ಜಾಕ್‌ ಪಾಟ್ ಗೆದ್ದ ಭಾರತೀಯ ವ್ಯಕ್ತಿ…!

ಖಲೀಜ್ ಟೈಮ್ಸ್‌ನ ವರದಿಯ ಪ್ರಕಾರ, ಸೆಪ್ಟೆಂಬರ್ 3 ರಂದು ನಡೆದ ಅಬುಧಾಬಿ ಬಿಗ್ ಟಿಕೆಟ್ ಸರಣಿ 278 ಡ್ರಾದಲ್ಲಿ ದುಬೈನಲ್ಲಿ ವಾಸಿಸುವ ಭಾರತೀಯ ವಲಸಿಗ 15 ಮಿಲಿಯನ್ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಮ್‌ಗಳ (ಸುಮಾರು 35 ಕೋಟಿ ರೂ.) ಜಾಕ್‌ಪಾಟ್‌ ಬಹುಮಾನ ಗೆದ್ದಿದ್ದಾರೆ. ಈ ದೊಡ್ಡ ಮೊತ್ತದ ಬಹುಮಾನ ಗೆದ್ದಿರುವವರು ದುಬೈ ಡ್ರೈಡಾಕ್ಸ್‌ನಲ್ಲಿರುವ ಭಾರತೀಯ ವಲಸಿಗ … Continued

ಅಮೆರಿಕ ವಾಯು ನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ ; ವಾಯ ಪ್ರದೇಶ ಮುಚ್ಚಿದ ಕತಾರ್, ಯುಎಇ, ಬಹ್ರೇನ್

ಇರಾನ್‌ ಪ್ರತೀಕಾರದ ದಾಳಿಯಲ್ಲಿ ಕತಾರ್‌ ಹಾಗೂ ಇರಾಕಿನಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ದಾಳಿ ಮಾಡಿದ ನಂತರ ಕತಾರ್, ಯುಎಇ ಮತ್ತು ಬಹ್ರೇನ್ ಮೇಲಿನ ವಾಯುಪ್ರದೇಶವನ್ನು ಹಠಾತ್ತನೆ ಮುಚ್ಚಲಾಗಿದೆ. ಹೀಗಾಗಿ ಸೋಮವಾರ ರಾತ್ರಿ ಹಲವಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವು ವ್ಯತ್ಯಯಗೊಂಡವು. ಇರಾನ್ ತನ್ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ … Continued

ಅದೃಷ್ಟ ಅಂದ್ರೆ ಇದಪ್ಪ…| ಬಹ್ರೇನ್‌ ನಲ್ಲಿ ಬರೋಬ್ಬರಿ 71 ಕೋಟಿ ರೂ. ಲಾಟರಿ ಗೆದ್ದ ಕೇರಳದ ವ್ಯಕ್ತಿ…!

ಬಹ್ರೇನ್‌ : ಜೀವನವನ್ನೇ ಬದಲಾಯಿಸುವ ವಿದ್ಯಮಾನವೊಂದರಲ್ಲಿ, ಕೇರಳ ಮೂಲದ ಬಹ್ರೇನ್ ನಲ್ಲಿ ಆಂಬ್ಯುಲೆನ್ಸ್ ನರ್ಸ್ ಆಗಿ ಕೆಲಸ ಮಾಡುತ್ತಿರುವ ಮನು ಮೋಹನನ್ ಎಂಬವರು ಬಿಗ್ ಟಿಕೆಟ್ ಲಾಟರಿಯಲ್ಲಿ 30 ಮಿಲಿಯನ್ (ಸುಮಾರು ₹71 ಕೋಟಿ) ಜಾಕ್‌ಪಾಟ್‌ ಹಣವನ್ನು ಗೆದ್ದಿದ್ದಾರೆ….! ಈ ಮೂಲಕ ಅವರ ಅದೃಷ್ಟದ ಬಾಗಿಲು ತೆರೆದಿದೆ. ವರ್ಷಗಳ ಆರ್ಥಿಕ ಸಂಕಷ್ಟದ ನಂತರ ಅವರು ಈಗ … Continued

ವೀಡಿಯೊಗಳು..| ದುಬೈನಲ್ಲಿ 1.5 ವರ್ಷಕ್ಕೆ ಬೀಳುವಷ್ಟು ಮಳೆ ಒಂದೇ ದಿನ ಸುರಿಯಿತು…! ಜನಜೀವನ ಅಸ್ತವ್ಯಸ್ತ; ರಸ್ತೆಗಳು ಜಲಾವೃತ, ವಿಮಾನಗಳ ಹಾರಾಟ ರದ್ದು

ದುಬೈ : ದುಬೈ ಸೇರಿದಂತೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ನ ಹಲವೆಡೆ ದಿಢೀರನೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ಥವಾಗಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ದುಬೈನಲ್ಲಿ ಕಳೆದ 24 ಗಂಟೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಮಂಗಳವಾರ ಏಕಾಏಕಿ ಮಳೆಯಾಗಿದ್ದು ಒಂದೂವರೆ ವರ್ಷದಲ್ಲಿ ಸುರಿಯಬೇಕಿದ್ದ ಮಳೆ ಒಂದೇ ದಿನದಲ್ಲಿ ಸುರಿದಿದೆ. ಚಂಡಮಾರುತದ ಪರಿಣಾಮ ಈ ಮಳೆಯಾಗಿದೆ ಎಂದು … Continued

ವೀಡಿಯೊಗಳು…| ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದ ಮೋದಿ : ‘ಯುಎಇ 140 ಕೋಟಿ ಭಾರತೀಯರ ಹೃದಯ ಗೆದ್ದಿದೆ’ ಎಂದ ಭಾರತದ ಪ್ರಧಾನಿ

ಅಬುಧಾಬಿ : ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ) ಅಬುಧಾಬಿಯಲ್ಲಿ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಸೊಸೈಟಿ ನಿರ್ಮಿಸಿರುವ ವಿಸ್ತಾರವಾದ ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ಪ್ರಧಾನಿ ಮೋದಿ ಕೂಡ ಅರ್ಚಕರೊಂದಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಉದ್ಘಾಟನೆಯ ನಂತರ, ಪ್ರಧಾನಿ ಮೋದಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೆ … Continued