ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಸಭೆ: ರಾಜತಾಂತ್ರಿಕ ಪರಿಹಾರ, ಸುರಕ್ಷಿತ ಸಮುದ್ರ ಮಾರ್ಗಕ್ಕೆ ಭಾರತ ಪುನರುಚ್ಚಾರ

ನವದೆಹಲಿ: ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಶುಕ್ರವಾರ ನವದೆಹಲಿಗೆ ಆಗಮಿಸಿದ್ದಾರೆ. ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಉಭಯ ನಾಯಕರ ನಡುವೆ ನಡೆಯುತ್ತಿರುವ ಎರಡನೇ ಭೇಟಿ ಇದಾಗಿದ್ದು, ವ್ಯಾಪಾರ ಹಾಗೂ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು … Continued

‘ಡೂಮ್ಸ್‌ಡೇ ವಿಮಾನʼದಲ್ಲಿ ರಷ್ಯಾ ಅಧ್ಯಕ್ಷ ಪುತಿನ್ ಭಾರತ ಪ್ರವಾಸ : ಇದು ‘ಆಕಾಶದ ಅರಮನೆ’ ; ಚಿನ್ನ ಲೇಪಿತ ವಸ್ತುಗಳು-ಹೈ ಸೆಕ್ಯುರಿಟಿ…..

 ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಉನ್ನತ ಮಟ್ಟದ ನಿಯೋಗದ ಜೊತೆ ನವದೆಹಲಿಗೆ ಆಗಮಿಸಿದ್ದಾರೆ. ಮೂರು ದಿನಗಳ ಈ ಭೇಟಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ಇಂಧನ ಸಹಕಾರದ ವಿಸ್ತರಣೆಯ ಕುರಿತು ಸುದೀರ್ಘ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ 2-3 ದಿನ ಮಳೆ ಸಾಧ್ಯತೆ ; ಗಣೇಶ ಹಬ್ಬಕ್ಕೂ ಮಳೆಯಾಗುವ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ  ಗಣೇಶ ಚತುರ್ಥಿ ಹಬ್ಬಕ್ಕೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುಮನ್ಸೂಚನೆ ನೀಡಿದೆ.  ಸೆಪ್ಟೆಂಬರ್ 12 ಮತ್ತು 13 ರಂದು ಮಲೆನಾಡು ಹಾಗೂ ಉತ್ತರ ಒಳನಾಡಿನ 10 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ … Continued

ಉದ್ದೇಶಿತ ಶಿರಸಿ-ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಡಬಲ್ ಟ್ರ್ಯಾಕ್’ ನಿರ್ಮಾಣ ಮಾಡಲು ಪ್ರಧಾನಿಗೆ ಮನವಿ

ಶಿರಸಿ: ಉದ್ದೇಶಿತ ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ಹುಬ್ಬಳ್ಳಿ ರೈಲ್ವೆ ಯೋಜನೆಯನ್ನು ಸರಕು ಸಾಗಣೆ (ಗೂಡ್ಸ್) ರೈಲುಗಳ ಸಂಚಾರಕ್ಕೂ ಅನುಕೂಲವಾಗುವಂತೆ ಡಬಲ್ ಟ್ರ್ಯಾಕ್ ಯೋಜನೆಯನ್ನಾಗಿ ರೂಪಿಸಿ ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ‘ಶಿರಸಿ ಮುಖ್ಯ ನಾಲಾ (ರಾಜಕಾಲುವೆ) ಹಾಗೂ ನಗರಾಭಿವೃದ್ಧಿ ಹೋರಾಟ ಸಮಿತಿ’ಯು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. ಶುಕ್ರವಾರ ಶಿರಸಿಯ … Continued

ವಿಡಿಯೋ | ಜಾಕೆಟ್ ಕಳಚಿ 100 ಕೆ.ಜಿ. ತೂಕವನ್ನು 20 ಬಾರಿ ಬೆಂಚ್‌ಪ್ರೆಸ್ ಮಾಡಿದ ಮಂಗೋಲಿಯಾ ಅಧ್ಯಕ್ಷ

ಮಂಗೋಲಿಯಾದ ಅಧ್ಯಕ್ಷ ಉಖ್ನಾಗೀನ್ ಖುರೆಲ್ಸುಖ್ ಅವರು ಸೇನಾ ಘಟಕಕ್ಕೆ ಭೇಟಿ ನೀಡಿದ ವೇಳೆ 100 ಕೆ.ಜಿ. ತೂಕವನ್ನು 20 ಬಾರಿ ಬೆಂಚ್‌ಪ್ರೆಸ್ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ 58 ವರ್ಷದ ಮಾಜಿ ಸೇನಾ ಅಧಿಕಾರಿ ಖುರೆಲ್ಸುಖ್ ತಮ್ಮ ಕೋಟ್‌ ಅನ್ನು ತೆಗೆದು ಬೆಂಚ್ ಮೇಲೆ ಮಲಗಿ, 100 … Continued

ಸೆ.12ರಂದು ಚಂದಾವರ ಹನುಮಂತ ದೇವಸ್ಥಾನದಲ್ಲಿ ರಾಮತಾರಕ ಮಂತ್ರ ಪಠಣ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಸೆಪ್ಟೆಂಬರ್ 12ರಂದು ರಾಮತಾರಕ ಮಂತ್ರ ಪಠಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 12ರಂದು ಬೆಳಿಗ್ಗೆ 8:30ರಿಂದ 9:30ರವರೆಗೆ ಸಾಮೂಹಿಕ ರಾಮತಾರಕ ಮಂತ್ರ ಪಠಣ ನಡೆಯಲಿದ್ದು, ಬಳಿಕ ಬೆಳಿಗ್ಗೆ 9:30ಕ್ಕೆ ಸಂಕಲ್ಪ ಹಾಗೂ ಯಜ್ಞ ಆರಂಭವಾಗಲಿದೆ. ಮಧ್ಯಾಹ್ನ 12:30ಕ್ಕೆ … Continued

ವಿಡಿಯೋ | ಅದೆಂಥ ಕೌಶಲ್ಯ-ನಿಖರತೆ : ಕೆಲವೇ ಸೆಕೆಂಡುಗಳಲ್ಲಿ ಕೈಮೇಲೆ ಅತ್ಯುತ್ತಮ ವಿನ್ಯಾಸದ ಮೆಹಂದಿ ಬಿಡಿಸುವ ಯಂತ್ರ ..!

ತಂತ್ರಜ್ಞಾನದ ವೇಗದ ಬೆಳವಣಿಗೆ ಜನರು ಕೆಲಸ ಮಾಡುವ ವಿಧಾನವನ್ನೇ ಬದಲಾಯಿಸುತ್ತಿದೆ. ಒಮ್ಮೆ ಮನುಷ್ಯರಿಗೆ ಮಾತ್ರ ಸಾಧ್ಯವೆಂದು ಪರಿಗಣಿಸಲಾಗಿದ್ದ ಅನೇಕ ಕಾರ್ಯಗಳನ್ನು ಈಗ ಯಂತ್ರಗಳೇ ನಿರ್ವಹಿಸುತ್ತಿವೆ. ಗ್ರಾಹಕ ಸೇವೆಯಿಂದ ಹಿಡಿದು ಉತ್ಪಾದನಾ ಕ್ಷೇತ್ರದವರೆಗೆ ಪುನರಾವರ್ತಿತ ಕೆಲಸಗಳನ್ನು ತಂತ್ರಜ್ಞಾನ ವಹಿಸಿಕೊಳ್ಳುತ್ತಿರುವ ನಡುವೆಯೇ, ಮೆಹಂದಿ ವಿನ್ಯಾಸಗಳನ್ನು ಬಿಡಿಸುವ ಯಂತ್ರದ ವೈರಲ್ ವಿಡಿಯೊ ಹೊಸ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರ … Continued

ಇಂಟರ್ನೆಟ್ ಇಲ್ದಿದ್ರೂ ಯುಪಿಐನಲ್ಲಿ ಈಗ ಹಣ ಪೇಯ್ಮೆಂಟ್‌ ಮಾಡ್ಬಹುದು : ಜಸ್ಟ್‌ ಫೋನ್ ಟ್ಯಾಪ್ ಮಾಡಿದ್ರೆ ಸಾಕು; ಅದು ಹೇಗೆ ಗೊತ್ತಾ?

ನವದೆಹಲಿ: ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಯುಪಿಐ (UPI) ಮೂಲಕ ಹಣ ಪಾವತಿ ಮಾಡುವ ವ್ಯವಸ್ಥೆಗೆ ಇದೀಗ ಹೊಸ ರೂಪ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಯುಪಿಐ ಟ್ಯಾಪ್‌ ಆಂಡ್‌ ಪೇ (‘UPI Tap and Pay) ಎಂಬ ಹೊಸ ಸೌಲಭ್ಯವನ್ನು ಪರಿಚಯಿಸಿದ್ದು, ಎನ್‌ಎಫ್‌ಸಿ (NFC) ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್‌ಫೋನ್ ಬಳಸಿ ಎನ್‌ಎಫ್‌ಸಿ ಸೌಲಭ್ಯವಿರುವ ಪಾಯಿಂಟ್ ಆಫ್ … Continued

ಪ್ಯಾಕ್ಡ್‌ ಆಹಾರದ ಪ್ಯಾಕೆಟ್ ಮುಂಭಾಗದಲ್ಲಿ ಎಚ್ಚರಿಕೆ ಲೆಬಲ್ ಹಾಕುವುದು ರಾಷ್ಟ್ರೀಯ ಹಿತಾಸಕ್ತಿ ಎಂದು ಪರಿಗಣಿಸಿ: ಸುಪ್ರೀಂಕೋರ್ಟ್

ನವದೆಹಲಿ : ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಅಂಶ ಅಧಿಕವಾಗಿರುವ ಪ್ಯಾಕೆಟ್ ಆಹಾರಗಳ ಮೇಲೆ ಮುಂಭಾಗದಲ್ಲೇ (ಫ್ರಂಟ್-ಆಫ್-ಪ್ಯಾಕ್) ಎಚ್ಚರಿಕೆ ಲೇಬಲ್‌ಗಳನ್ನು ಕಡ್ಡಾಯಗೊಳಿಸುವ ವಿಚಾರವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕ ಆರೋಗ್ಯದ ಬಗ್ಗೆ, ಅದರಲ್ಲೂ ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದಚಂದ್ರನ್ ಅವರಿದ್ದ … Continued

ದೆಹಲಿ ಬ್ರಿಕ್ಸ್ ಶೃಂಗಸಭೆಗೆ ವಿಶ್ವ ನಾಯಕರ ದಂಡು : ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಿಂದ ಚೀನಾ ಅಧ್ಯಕ್ಷರವರೆಗೆ ಯಾರೆಲ್ಲಾ ಬರ್ತಾರೆ?

ನವದೆಹಲಿ: ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜಾಗಿದೆ. ಜಗತ್ತಿನ ಹಲವು ಪ್ರಮುಖ ರಾಷ್ಟ್ರಗಳ ನಾಯಕರು ಹಾಗೂ ಉನ್ನತ ಮಟ್ಟದ ಪ್ರತಿನಿಧಿ ಮಂಡಳಿಗಳು ಗುರುವಾರ ತಡರಾತ್ರಿಯಿಂದ ಶುಕ್ರವಾರದವರೆಗೆ ದೆಹಲಿಗೆ ಆಗಮಿಸುತ್ತಿದ್ದು, ನಗರದಲ್ಲಿ ಭದ್ರತಾ ವ್ಯವಸ್ಥೆಯನ್ನು ಅಭೂತಪೂರ್ವವಾಗಿ ಬಿಗಿಗೊಳಿಸಲಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಚೀನಾ ಅಧ್ಯಕ್ಷ ಷಿ … Continued