ಸಂಭಾಲ್‌ ನಲ್ಲಿ ಪೊಲೀಸರ ಕ್ರಮ ಹೊಗಳಿದ ಪತ್ನಿಗೆ ‘ತ್ರಿವಳಿ ತಲಾಖ್’ ನೀಡಿದ ಗಂಡ…!

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ನಿರ್ವಹಿಸುವಲ್ಲಿ ಪೊಲೀಸರ ಪಾತ್ರವನ್ನು ಶ್ಲಾಘಿಸಿದ ನಂತರ ಪತಿ ತನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಮೊರಾದಾಬಾದಿನ 36 ವರ್ಷದ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಸಂಭಾಲ್‌ನಲ್ಲಿ ನಡೆದ ಹಿಂಸಾಚಾರದ ವೀಡಿಯೊಗಳನ್ನು ನೋಡದಂತೆ ಪತಿ ತನಗೆ ಎಚ್ಚರಿಕೆ ನೀಡಿದ್ದಾನೆ … Continued

ಇನ್‌ಸ್ಟಾಗ್ರಾಂನಲ್ಲಿ ಅರಳಿದ ಪ್ರೀತಿ…ಫೋನ್‌ ನಲ್ಲಿ ಮದುವೆ ನಿಶ್ಚಯ…ದಿಬ್ಬಣ ಸಮೇತ ಮದುವೆ ಸ್ಥಳಕ್ಕೆ ಹೋದ ಮದುಮಗ…ವಧು ನಾಪತ್ತೆ….!

ಚಂಡೀಗಡ: ಮೂರು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದ ಮನ್‌ಪ್ರೀತ್ ಕೌರ್ ಎಂಬ ಮಹಿಳೆಯನ್ನು ಮದುವೆಯಾಗಲು ಜಲಂಧರ ಮೂಲದ ದೀಪಕಕುಮಾರ(24) ದುಬೈನಿಂದ ಕಳೆದ ತಿಂಗಳು ಭಾರತಕ್ಕೆ ವಾಪಸಾಗಿದ್ದ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದು, ಆಕೆ ವಿವಾಹಕ್ಕಾಗಿ ಬುಕ್ ಮಾಡಲಾಗಿದೆ ಎಂದು ಹೇಳಿದ ಕಲ್ಯಾಣ ಮಂಟಪಕ್ಕೆ ಮದುಮಗ ದಿಬ್ಬಣದೊಂದಿಗೆ ಬಂದರೆ ಅಲ್ಲಿ ಆ ಹೆಸರಿನ ಕಲ್ಯಾಣ ಮಂಟಪವೇ … Continued

ಯಾರೋ ಹೇಳಿದಾಕ್ಷಣ ವಿಜೇಯೆಂದ್ರ ಬದಲಾವಣೆ ಮಾಡಲು ಆಗದು : ರಾಧಾಮೋಹನ ಅಗರ್ವಾಲ್

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಣ ರಾಜಕೀಯ ಕಂಡುಬಂದಿಲ್ಲ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸದ್ಯಕ್ಕೆ ಬದಲಾವಣೆ ಮಾಡುವ ಯಾವುದೇ ವಿಚಾರ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನದಾಸ ಅಗರ್ವಾಲ್ ಹೇಳಿದ್ದಾರೆ. ಶನಿವಾರ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದ ಬಳಿಕ ಮಾಧ್ಯಮಗಳ ಜತೆ … Continued

ವೀಡಿಯೊ..| ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಬೆಚ್ಚಿ ಬಿದ್ದ ಪಕ್ಷಿಗಳು ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಉತ್ತರ ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದರ ಕ್ಷಣವನ್ನು ಸೆರೆಹಿಡಿದ ತುಣುಕನ್ನು ಅಮೆರಿಕದ ಮೀನು ಮತ್ತು ವನ್ಯಜೀವಿ ಸರ್ವಿಸ್‌ ಬಿಡುಗಡೆ ಮಾಡಿದೆ. ಸ್ಯಾಕ್ರಮೆಂಟೊ ನ್ಯಾಷನಲ್ ವೈಲ್ಡ್‌ಲೈಫ್ ರೆಫ್ಯೂಜ್ ಕಾಂಪ್ಲೆಕ್ಸ್‌ನಲ್ಲಿರುವ ಪಕ್ಷಿಗಳು ಮತ್ತು ಸ್ಯಾಕ್ರಮೆಂಟೊ ಕಣಿವೆಯ ಸುತ್ತಮುತ್ತಲಿನ ಪ್ರದೇಶಗಳು ನಡುಕಕ್ಕೆ ಹೇಗೆ ಪ್ರತಿಕ್ರಿಯಿಸಿದವು ಎಂಬುದನ್ನು ವೀಡಿಯೊ ತೋರಿಸುತ್ತದೆ. ಪ್ರಬಲ ಭೂಕಂಪವು ಗುರುವಾರ (ಡಿಸೆಂಬರ್ 5) ಉತ್ತರ … Continued

ವೀಡಿಯೊ..| ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಕೋಚಿಂಗ್ ಸೆಂಟರ್ ಸಂಸ್ಥಾಪಕ ; ವ್ಯಾಪಕ ಆಕ್ರೋಶ

ಆಂಧ್ರಪ್ರದೇಶದಲ್ಲಿ ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರೊಬ್ಬರು ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಕೆಲ ತಿಂಗಳ ಹಿಂದಿನ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೋಚಿಂಗ್ ಇನ್‌ಸ್ಟಿಟ್ಯೂಟ್ ‘ಇಂಡಿಯನ್ ಆರ್ಮಿ ಕಾಲಿಂಗ್’ ಸಂಸ್ಥಾಪಕ ಬಸವ ವೆಂಕಟ ರಮಣ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಥಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವಿದ್ಯಾರ್ಥಿಯು ಅಳುವುದು ಮತ್ತು ತನ್ನನ್ನು ತಾನು ರಕ್ಷಿಸಿಕೊಳ್ಳಲು ಒದ್ದಾಡುತ್ತಿರುವುದನ್ನು … Continued

ಮಹಾರಾಷ್ಟ್ರ ವಿಧಾನಸಭೆ ಪ್ರಮಾಣ ವಚನ ಸಮಾರಂಭಕ್ಕೆ ಗೈರಾದ ವಿಪಕ್ಷಗಳ ಶಾಸಕರು….

ಮುಂಬೈ: ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನೂತನ ಚುನಾಯಿತ ಶಾಸಕರು ಇಂದು, ಶನಿವಾರ(ಡಿಸೆಂಬರ್‌ 7) ನಡೆದ ಮಹಾರಾಷ್ಟ್ರ ವಿಧಾನಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಾಕ್‌ಔಟ್ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ದುರ್ಬಳಕೆಯಿಂದ ಆಡಳಿತಾರೂಢ ಮಹಾಯುತಿ ಒಕ್ಕೂಟದ ಗೆಲುವು ಸಾಧಿಸಿದೆ ಎಂದು ಆರೋಪಿಸಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದಾರೆ. ಆದಾಗ್ಯೂ, ವಿಪಕ್ಷಗಳ … Continued

ಬಾಬರಿ ಮಸೀದಿ ಧ್ವಂಸದ ಕುರಿತು ಉದ್ಧವ್ ಠಾಕ್ರೆ ಆಪ್ತನ ಹೇಳಿಕೆ ನಂತರ ಎಂವಿಎ ಮೈತ್ರಿ ತೊರೆಯಲು ಸಮಾಜವಾದಿ ಪಕ್ಷದ ನಿರ್ಧಾರ

ಮುಂಬೈ: ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಅವರ ಆಪ್ತರೊಬ್ಬರ ವಿವಾದಾತ್ಮಕ ಹೇಳಿಕೆಯ ನಂತರ ಸಮಾಜವಾದಿ ಪಕ್ಷವು ಮಹಾರಾಷ್ಟ್ರದಲ್ಲಿ ವಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ (ಎಂವಿಎ)ಯಿಂದ ಹೊರಬರಲು ನಿರ್ಧರಿಸಿದೆ. ಬಾಬರಿ ಮಸೀದಿ ಧ್ವಂಸದ 32 ನೇ ವಾರ್ಷಿಕೋತ್ಸವದಂದು, ಶಿವಸೇನೆಯ (ಯುಬಿಟಿ) ನಾಯಕ ಮಿಲಿಂದ್ ನಾರ್ವೇಕರ್ ಅವರು ಎಕ್ಸ್‌ನಲ್ಲಿ ಮಸೀದಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. … Continued

ಉತ್ತರ ಪ್ರದೇಶದ ಒಂದು ಮಸೀದಿ-4 ಅಂಗಡಿಗಳುಳ್ಳ ಜಾಗದ ವಿವಾದ : ಇದಕ್ಕೂ ಪಾಕಿಸ್ತಾನಕ್ಕೂ ಇದೆ ಸಂಬಂಧ…! ಏನದು ಗೊತ್ತಾ..?

ಮುಜಾಫರ್‌ ನಗರ: ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್‌ ನಗರ ಜಿಲ್ಲೆಯ ಆಸ್ತಿಯೊಂದು ಈಗ ವಿವಾದದ ಕೇಂದ್ರಬಿಂದುವಾಗಿದ್ದು, ಇದು ಪಾಕಿಸ್ತಾನದ ಪ್ರಥಮ ಪ್ರಧಾನಿಯ ಕುಟುಂಬಕ್ಕೂ ಕನೆಕ್ಷನ್‌ ಹೊಂದಿದೆ….! ಮುಜಾಫರ್‌ನಗರ ರೈಲು ನಿಲ್ದಾಣದ ಬಳಿ ಇರುವ ಮಸೀದಿ ಮತ್ತು ನಾಲ್ಕು ಅಂಗಡಿಗಳನ್ನು ಹೊಂದಿರುವ ಈ ಪ್ರಶ್ನಾರ್ಹ ಆಸ್ತಿಯನ್ನು ಇತ್ತೀಚೆಗೆ ತನಿಖೆ ನಡೆಸಿದ ನಂತರ “ಶತ್ರು ಆಸ್ತಿ” ಎಂದು ಘೋಷಿಸಲಾಗಿದೆ. … Continued

ಗಿನ್ನೆಸ್‌ ದಾಖಲೆಗೆ ಸೇರಿದ ವಿಶ್ವದ ಅತ್ಯಂತ ಹಿರಿಯ ನವ ವಿವಾಹಿತರು..! ಇವರಿಬ್ಬರ ಒಟ್ಟು ವಯಸ್ಸು 200 ವರ್ಷಗಳಿಗೂ ಹೆಚ್ಚು…!!

ಅಮೆರಿಕದ 100 ವರ್ಷದ ಅಜ್ಜ ಮತ್ತು 102 ವರ್ಷದ ಅಜ್ಜಿ ಇತ್ತೀಚೆಗೆ ಅಮೆರಿಕದಲ್ಲಿ ಮದುವೆಯಾಗಿದ್ದಾರೆ. ಇದು ಈಗ ಗಿನ್ನೆಸ್ ವಿಶ್ವ ದಾಖಲೆಗೆ ಸೇರಿದೆ. ಶತಾಯುಷಿ ದಂಪತಿ – ಬರ್ನಿ ಲಿಟ್‌ಮ್ಯಾನ್ ಮತ್ತು ಮರ್ಜೋರಿ ಫಿಟರ್‌ಮ್ಯಾನ್ – ಈಗ ಅವರಿಬ್ಬರ ಒಟ್ಟು ವಯಸ್ಸು 202 ವರ್ಷ ಮತ್ತು 271 ದಿನಗಳಾಗಿವೆ. ವಿಶ್ವದ ಅತ್ಯಂತ ಹಿರಿಯ ನವವಿವಾಹಿತರು ಎಂಬ … Continued

ಕರ್ನಾಟಕದಲ್ಲಿ ಹೊಸದಾಗಿ 3 ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರದ ಸಮ್ಮತಿ

ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ 85 ಕೇಂದ್ರೀಯ ವಿದ್ಯಾಲಯಗಳು ಮತ್ತು 28 ಹೊಸ ನವೋದಯ ವಿದ್ಯಾಲಯಗಳನ್ನು ತೆರೆಯುವುದಾಗಿ ಪ್ರಕಟಿಸಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು, ಕರ್ನಾಟಕದಲ್ಲಿ ಮೂರು ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಾಗುತ್ತದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದಲ್ಲಿ 13 ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲಾಗುತ್ತದೆ. 28 ಹೊಸ ನವೋದಯ ವಿದ್ಯಾಲಯಗಳನ್ನು ತೆರೆಯುವುದಾಗಿ ಪ್ರಕಟಿಸಲಾಗುತ್ತದೆ, … Continued