ಹಾರ್ಮುಜ್ ಜಲಸಂಧಿಯಲ್ಲಿ ಸ್ಫೋಟಕ ಇರಿಸುವ ಇರಾನ್ ಬೋಟ್‌ ಕಂಡರೆ ಹೊಡೆದುರುಳಿಸಿ: ಅಮೆರಿಕ ನೌಕಾಪಡೆಗೆ ಟ್ರಂಪ್ ಆದೇಶ

ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್ ಸ್ಫೋಟಕಗಳನ್ನು (Mines) ಅಳವಡಿಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಅಂತಹ ಕೃತ್ಯದಲ್ಲಿ ತೊಡಗಿರುವ ಯಾವುದೇ ಇರಾನಿ ಬೋಟ್‌ಗಳನ್ನು ಕಂಡ ಕೂಡಲೇ ‘ಹೊಡೆದುರುಳಿಸಲು’ (Shoot and Kill) ಅಮೆರಿಕ ನೌಕಾಪಡೆಗೆ ಗುರುವಾರ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಸಾಮಾಜಿಕ ಮಾಧ್ಯಮದಲ್ಲಿ … Continued

ವೇಗದ ಬೋಟ್, ಮಾಸ್ಕ್‌ ಧರಿಸಿ ರೈಫಲ್ ಹಿಡಿದ ಸೈನಿಕರು…: ಭಾರತಕ್ಕೆ ಬರುತ್ತಿದ್ದ ಹಡಗು ವಶಕ್ಕೆ ಪಡೆದ ವಿಡಿಯೋ ಹಂಚಿಕೊಂಡ ಇರಾನ್ ಸೈನಿಕರು

ತೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬುಧವಾರ ಹಾರ್ಮುಜ್ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ ಎಂಎಸ್‌ಸಿ (MSC) ಫ್ರಾನ್ಸೆಸ್ಕಾ ಮತ್ತು ಎಪಾಮಿನೋಂಡಾಸ್ ಎಂಬ ಎರಡು ಬೃಹತ್ ಸರಕು ಹಡಗುಗಳನ್ನು ತಡೆಹಿಡಿದ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಹಡಗುಗಳು ಹಾರ್ಮುಜ್‌ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಅಲ್ಲಿನ ಸರ್ಕಾರಿ … Continued

ವಿಡಿಯೋ…| ಸರ್ಕಸ್ ಪ್ರದರ್ಶನ ವೇಳೆ ಸೇಫ್ಟಿ ನೆಟ್ ದಾಟಿ ಪ್ರೇಕ್ಷಕರತ್ತ ನುಗ್ಗಿದ ಹುಲಿ

ದಕ್ಷಿಣ ರಷ್ಯಾದ ರೋಸ್ಟೋವ್-ಆನ್-ಡಾನ್ ನಗರದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಸೇಫ್ಟಿ ನೆಟ್ ಕುಸಿದುಬಿದ್ದ ನಂತರ ಹುಲಿಯೊಂದು ಪ್ರೇಕ್ಷಕರತ್ತ ನುಗ್ಗಿದ ಆಘಾತಕಾರಿ ಘಟನೆ ಕಳೆದ ಭಾನುವಾರ ನಡೆದಿದೆ. ‘ದ ಮಾಸ್ಕೋ ಟೈಮ್ಸ್’ ವರದಿಯ ಪ್ರಕಾರ, ಮೂರು ಹುಲಿಗಳು ಮತ್ತು ಇಬ್ಬರು ತರಬೇತುದಾರರಿದ್ದ ಪ್ರದರ್ಶನದ ವೇಳೆ ಈ ಅವಘಡ ಸಂಭವಿಸಿದೆ. ಪ್ರಾಣಿಗಳು ಮತ್ತು ಪ್ರೇಕ್ಷಕರ ನಡುವೆ ಇದ್ದ … Continued

ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದ ಇರಾನ್‌

ತೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ವಿಸ್ತರಿಸಿದ ಬೆನ್ನಲ್ಲೇ, ಇರಾನ್‌ನ ಅರೆಸೇನಾ ಪಡೆ ‘ರೆವಲ್ಯೂಷನರಿ ಗಾರ್ಡ್’ ಬುಧವಾರ ಹಾರ್ಮುಜ್ ಜಲಸಂಧಿಯಲ್ಲಿ ಮೂರು ವಿದೇಶಿ ಹಡಗುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಬೆಳವಣಿಗೆಯು ಪಶ್ಚಿಮ ಏಷ್ಯಾದಲ್ಲಿ ಮತ್ತೊಮ್ಮೆ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಇರಾನ್ ಸರ್ಕಾರಿ ಸ್ವಾಮ್ಯದ ದೂರದರ್ಶನದ … Continued

ಇರಾನ್ ಜೊತೆಗಿನ ಕದನ ವಿರಾಮ ಅವಧಿ ವಿಸ್ತರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್/ಇಸ್ಲಾಮಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿದ್ದು, ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದಾರೆ. ಮಂಗಳವಾರ ಅಂತ್ಯಗೊಳ್ಳಬೇಕಿದ್ದ ಈ ಕದನ ವಿರಾಮವು, ಪಾಕಿಸ್ತಾನದ ಮನವಿಯ ಮೇರೆಗೆ ವಿಸ್ತರಣೆಯಾಗಿದೆ. ಕೆಲವೇ ಗಂಟೆಗಳ ಹಿಂದೆ ಇರಾನ್ ಮೇಲೆ ಬೃಹತ್ ದಾಳಿಯ ಎಚ್ಚರಿಕೆ ನೀಡಿದ್ದ ಟ್ರಂಪ್, ನಂತರ ದಿಢೀರ್ ನಿರ್ಧಾರ ಬದಲಿಸಿ ಕದನ ವಿರಾಮ ವಿಸ್ತರಿಸಿದ್ದಾರೆ. … Continued

ಆಪಲ್ ಸಂಸ್ಥೆಯಲ್ಲಿ ನಾಯಕತ್ವ ಬದಲಾವಣೆ: ಕೆಳಗಿಳಿದ ಟಿಮ್ ಕುಕ್ ; ನೂತನ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ

ತಂತ್ರಜ್ಞಾನ ಲೋಕದ ದೈತ್ಯ ಸಂಸ್ಥೆ ‘ಆಪಲ್’ (Apple) ತನ್ನ ನಾಯಕತ್ವದಲ್ಲಿ ಐತಿಹಾಸಿಕ ಬದಲಾವಣೆಯನ್ನು ಪ್ರಕಟಿಸಿದೆ. ಕಳೆದ 15 ವರ್ಷಗಳಿಂದ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಟಿಮ್ ಕುಕ್ ಅವರು ಸಿಇಒ (CEO) ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಅವರ ಜಾಗಕ್ಕೆ ಆಪಲ್‌ನ ಹಿರಿಯ ಅಧಿಕಾರಿ ಜಾನ್ ಟೆರ್ನಸ್ (John Ternus) ಅವರು ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO)ಯಾಗಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ … Continued

ಅಮೆರಿಕ ವಶಕ್ಕೆ ಪಡೆದ ಇರಾನ್ ಹಡಗಿನಲ್ಲಿ ಚೀನಾದ ‘ಕ್ಷಿಪಣಿ ತಯಾರಿಕೆ ರಾಸಾಯನಿಕ’? ನಿಕ್ಕಿ ಹ್ಯಾಲೆ ಸ್ಫೋಟಕ ಆರೋಪ

ವಾಷಿಂಗ್ಟನ್: ಇರಾನ್ ಮೇಲಿನ ನೌಕಾ ದಿಗ್ಬಂಧನದ ನಡುವೆ ಇತ್ತೀಚೆಗೆ ಅಮೆರಿಕ ವಶಪಡಿಸಿಕೊಂಡ ಹಡಗು ಚೀನಾದಿಂದ ಇರಾನ್‌ಗೆ ಕ್ಷಿಪಣಿ ತಯಾರಿಕೆಗೆ ಬೇಕಾದ ರಾಸಾಯನಿಕಗಳನ್ನು ಸಾಗಿಸುತ್ತಿತ್ತು ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಆರೋಪಿಸಿದ್ದಾರೆ. ಈ ಕುರಿತು ಎಕ್ಸ್ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ವಶಪಡಿಸಿಕೊಂಡ ಹಡಗು ಚೀನಾದಿಂದ ಇರಾನ್‌ಗೆ … Continued

ಇರಾನ್ ಧ್ವಜದ ಹಡಗಿನ ಮೇಲೆ ಗುಂಡು ಹಾರಿಸಿ ವಶಕ್ಕೆ ಪಡೆದ ಅಮೆರಿಕ ಪಡೆ : ದೃಶ್ಯ ವಿಡಿಯೋದಲ್ಲಿ ಸೆರೆ

ವಾಷಿಂಗ್ಟನ್/ದುಬೈ: ಉತ್ತರ ಅರಬ್ಬಿ ಸಮುದ್ರದಲ್ಲಿ ಇರಾನ್ ಧ್ವಜದ ಸರಕು ಹಡಗನ್ನು ಅಮೆರಿಕದ ಪಡೆಗಳು ತಮ್ಮ ನಿಯಂತ್ರಣಕ್ಕೆ ಪಡೆದಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ದೃಢಪಡಿಸಿದೆ. ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ಮೀರಿ ಇರಾನ್‌ನ ಪೋರ್ಟ್‌ ಅಬ್ಬಾಸ್ ಬಂದರಿನತ್ತ ಸಾಗುತ್ತಿದ್ದ ‘M/V ಟೌಸ್ಕಾ’ (M/V Touska) ಎಂಬ ಬೃಹತ್ ಹಡಗನ್ನು ಅಮೆರಿಕದ ಕ್ಷಿಪಣಿ ವಿಧ್ವಂಸಕ ನೌಕೆ … Continued

ಹತ್ಯೆಯಾಗಿ 7 ವಾರ ಕಳೆದ್ರೂ ನಡೆಯದ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ ; ಇರಾನ್ ಆಡಳಿತಕ್ಕೆ ಕಾಡುತ್ತಿರುವ ಭೀತಿ ಯಾವುದು?

ತೆಹ್ರಾನ್: ಇರಾನ್‌ನ ಸಾಂಸ್ಕೃತಿಕ ಮತ್ತು ರಾಜಕೀಯ ಸಂಪ್ರದಾಯಗಳಿಗೆ ತದ್ವಿರುದ್ಧವಾದ ಬೆಳವಣಿಗೆಯೊಂದರಲ್ಲಿ, ದೇಶದ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರ ಇನ್ನೂ ನಡೆದಿಲ್ಲ. 86 ವರ್ಷದ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿ ಏಳು ವಾರಗಳೇ ಕಳೆದಿದ್ದರೂ, ಇರಾನಿನ ಆಡಳಿತವು ಅವರ ಸಮಾಧಿ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ. … Continued

ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕಕ್ಕೆ ಅಪಾಯಕಾರಿಯೇ? ಅಮೆರಿಕದ ವರದಿ ಎಚ್ಚರಿಕೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಪಾಕಿಸ್ತಾನ ಮತ್ತು ಅದರ ನಾಯಕರೊಂದಿಗೆ, ವಿಶೇಷವಾಗಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರ ಜೊತೆ ಅಮೆರಿಕದ ಸ್ನೇಹ ವೃದ್ಧಿಸಿದೆ. ಫೆಬ್ರವರಿ 28 ರಿಂದ ಸಂಘರ್ಷದಲ್ಲಿ ತೊಡಗಿರುವ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ಮಾಡಿಸಿದ್ದಕ್ಕಾಗಿ ಟ್ರಂಪ್ ಅವರು ಮುನೀರ್ ಅವರನ್ನು ‘ಫೆಂಟಾಸ್ಟಿಕ್ … Continued