‘ಇಸ್ಲಾಂಪುರ’ ಈಗ ‘ಕೃಷ್ಣ ನಗರ’, ರೆಹಮಾನ್‌ ಗಲ್ಲಿ ಈಗ ʼರಾಮ್‌ʼ ಗಲ್ಲಿ : ಪಾಕಿಸ್ತಾನವು ಲಾಹೋರ್‌ ಬೀದಿಗಳ ಹೆಸರು ಯಾಕೆ ಬದಲಾಯಿಸುತ್ತಿದೆ ?

ಲಾಹೋರ್: ಭಾರತ-ಪಾಕಿಸ್ತಾನ ವಿಭಜನೆಯಾಗಿ ಸುಮಾರು ಎಂಟು ದಶಕಗಳೇ ಕಳೆಯುತ್ತಾ ಬಂದಿದೆ. ಆದರೆ ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಲಾಹೋರ್‌ನ ಬೀದಿಗಳು ಇಸ್ಲಾಮೀಕರಣದಿಂದ ಈಗ ಪುನಃ ಹಳೆಯ ಇತಿಹಾಸಕ್ಕೆ ಮರಳುತ್ತಿವೆ. ಲಾಹೋರಿನ ಬೀದಿಗಳಿಗೆ ವಿಭಜನೆಯ ನಂತರ ಬದಲಾಯಿಸಲಾಗಿದ್ದ ಮುಸ್ಲಿಂ ಧಾರ್ಮಿಕ ಹೆಸರುಗಳನ್ನು ಕೈಬಿಟ್ಟು, ಪಾಕಿಸ್ತಾನ ವಿಭಜನೆಗೂ ಮುನ್ನ ಇದ್ದ ಮೂಲ ಹಿಂದೂ, ಸಿಖ್, ಜೈನ್ ಹಾಗೂ ಬ್ರಿಟಿಷ್ … Continued

ಮತ್ತೆ ಯುದ್ಧ ಭೀತಿ..? ಸೌದಿ ಅರೇಬಿಯಾಕ್ಕೆ 8,000 ಸೈನಿಕರು, ಯುದ್ಧ ವಿಮಾನಗಳನ್ನು ರವಾನಿಸಿದ ಪಾಕಿಸ್ತಾನ

ಇಸ್ಲಾಮಾಬಾದ್: ಇರಾನ್ ಯುದ್ಧದಲ್ಲಿ ಸಂಧಾನಕಾರನ ಪಾತ್ರ ವಹಿಸುತ್ತಿರುವ ಬೆನ್ನಲ್ಲೇ, ಪಾಕಿಸ್ತಾನವು ಸೌದಿ ಅರೇಬಿಯಾದ ಜೊತೆ ಸೇನಾ ಸಹಕಾರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಸೆಪ್ಟೆಂಬರ್ 2025 ರಲ್ಲಿ ಮಾಡಿಕೊಂಡ ಪರಸ್ಪರ ರಕ್ಷಣಾ ಒಪ್ಪಂದದ ಅನ್ವಯ, ಪಾಕಿಸ್ತಾನವು ಸೌದಿ ಅರೇಬಿಯಾಗೆ ಬರೋಬ್ಬರಿ 8,000 ಸೈನಿಕರು, ಪೂರ್ಣ ಪ್ರಮಾಣದ ಫೈಟರ್ ಜೆಟ್ ಸ್ಕ್ವಾಡ್ರನ್ ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ರವಾನಿಸಿದೆ ಎಂದು … Continued

ಹಾರ್ಮುಜ್ ಜಲಸಂಧಿ ನಿಯಂತ್ರಣಕ್ಕೆ ಇರಾನ್‌ನಿಂದ ಹೊಸ ಪ್ರಾಧಿಕಾರ ರಚನೆ

ತೆಹ್ರಾನ್: ಅಮೆರಿಕ ಜೊತೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜಾಗತಿಕವಾಗಿ ಅತ್ಯಂತ ಪ್ರಮುಖ ಎನಿಸಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಬಂದ್ ಮಾಡಿದೆ. ಇದರ ಬೆನ್ನಲ್ಲೇ ಜಲಸಂಧಿಯ ಉಸ್ತುವಾರಿಗಾಗಿ ಇರಾನ್‌ನ ಉನ್ನತ ಭದ್ರತಾ ಮಂಡಳಿಯು ಹೊಸ ಅಧಿಕೃತ ಸಂಸ್ಥೆಯೊಂದನ್ನು ರಚಿಸಿರುವುದಾಗಿ ಪ್ರಕಟಿಸಿದೆ. ಅಷ್ಟೇ ಅಲ್ಲದೆ, ಈ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳು ಇನ್ನು ಮುಂದೆ ಕಡ್ಡಾಯವಾಗಿ ಟೋಲ್ (ಸುಂಕ) … Continued

ಹುಡುಗಿಯ ಮೌನವೇ ಮದುವೆಗೆ ಒಪ್ಪಿಗೆ ; ಅಫ್ಘಾನಿಸ್ತಾನದಲ್ಲಿ ಬಾಲ್ಯ ವಿವಾಹಕ್ಕೆ ಹೊಸ ಕಾನೂನು ಜಾರಿಗೆ ತಂದ ತಾಲಿಬಾನ್‌ !

ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಅವರ ಅನುಮೋದನೆ ನಂತರ ಅಫ್ಘಾನಿಸ್ತಾನದಲ್ಲಿ ನೂತನ ಕೌಟುಂಬಿಕ ಕಾನೂನು ನಿಯಂತ್ರಣವನ್ನು ಜಾರಿಗೆ ತರಲಾಗಿದೆ. ಇಸ್ಲಾಮಿಕ್ ಕಾನೂನಿನ ತನ್ನದೇ ಆದ ವ್ಯಾಖ್ಯಾನದಡಿಯಲ್ಲಿ ವಿವಾಹ, ವಿಚ್ಛೇದನ ಮತ್ತು ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡ “ದಂಪತಿಗಳ ನಡುವಿನ ಪ್ರತ್ಯೇಕತೆಯ ತತ್ವಗಳು” (Principles of Separation Between Spouses) ಎಂಬ 31 ವಿಧಿಗಳ … Continued

ವಿಡಿಯೋ | ಆಕಾಶದಲ್ಲೇ ಡಿಕ್ಕಿ ಹೊಡೆದುಕೊಂಡ ಅಮೆರಿಕ ಯುದ್ಧ ವಿಮಾನಗಳು ; ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಮೌಂಟೇನ್ ಹೋಮ್ (ಅಮೆರಿಕ): ಅಮೆರಿಕದ ಇದಾಹೊದಲ್ಲಿ ಭಾನುವಾರ ನಡೆದ ವೈಮಾನಿಕ ಪ್ರದರ್ಶನ (ಏರ್ ಶೋ)ದ ವೇಳೆ ಅಮೆರಿಕ ನೌಕಾಪಡೆಯ ಎರಡು ಅತ್ಯಾಧುನಿಕ ಯುದ್ಧ ವಿಮಾನಗಳು ಹಾರಾಟದ ಮಧ್ಯೆಯೇ ಪರಸ್ಪರ ಢಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿ ಧ್ವಸಂಗೊಂಡಿವೆ. ಆದರೆ, ವಿಮಾನಗಳು ನೆಲಕ್ಕೆ ಅಪ್ಪಳಿಸುವ ಕೆಲವೇ ಕ್ಷಣಗಳ ಮುನ್ನ ಅವುಗಳಲ್ಲಿದ್ದ ಎಲ್ಲಾ ನಾಲ್ಕು ಸಿಬ್ಬಂದಿ ಯಶಸ್ವಿಯಾಗಿ ಎಜೆಕ್ಟ್ (ಹೊರಕ್ಕೆ … Continued

ವಿಡಿಯೋ..| ಬಾಂಗ್ಲಾದೇಶದಲ್ಲಿ ‘ ಡೊನಾಲ್ಡ್ ಟ್ರಂಪ್’ ಹೋಲುವ ʼಕೋಣದ್ದೇ ಹವಾ: ನೋಡಲು ಮುಗಿಬಿದ್ದ ಜನ !

ಬಾಂಗ್ಲಾದೇಶದಲ್ಲಿ ಎರಡು ಅಪರೂಪದ ಅಲ್ಬಿನೋ (ಬಿಳಿ/ಗುಲಾಬಿ ಚರ್ಮದ) ಕೋಣಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಈ ಎಮ್ಮೆಗಳು ವಿಶ್ವದ ಇಬ್ಬರು ಪ್ರಮುಖ ರಾಜಕೀಯ ನಾಯಕರನ್ನು ಹೋಲುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ‘ದಿ ಇಂಡಿಪೆಂಡೆಂಟ್’ ವರದಿ ಪ್ರಕಾರ, ಬಾಂಗ್ಲಾದೇಶದ ರಾಜಧಾನಿ ಢಾಕಾ ಸಮೀಪದ ನಾರಾಯಣಗಂಜ್‌ನ ಫಾರ್ಮ್‌ವೊಂದರಲ್ಲಿರುವ 700 ಕೆಜಿ ತೂಕದ ಗುಲಾಬಿ ಚರ್ಮದ … Continued

ಬರ್ಮುಡಾ ಟ್ರಯಾಂಗಲ್ ರಹಸ್ಯ ಭೇದಿಸಿದ ವಿಜ್ಞಾನಿಗಳು : ದ್ವೀಪದ ತಳಭಾಗದಲ್ಲಿದೆ ಬೆರಗಾಗುವ ಭೌಗೋಳಿಕ ವಿಸ್ಮಯ !

ವಾಷಿಂಗ್ಟನ್: ಕೆಲ ದಶಕಗಳಿಂದ ಭೂವಿಜ್ಞಾನಿಗಳನ್ನು ಕಾಡುತ್ತಿದ್ದ ಅಟ್ಲಾಂಟಿಕ್ ಸಾಗರದ ಅತಿದೊಡ್ಡ ನಿಗೂಢ ಪ್ರಶ್ನೆಯೊಂದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. 3 ಕೋಟಿ ವರ್ಷಗಳ ಹಿಂದೆಯೇ ಜ್ವಾಲಾಮುಖಿಗಳು ಶಾಂತವಾಗಿದ್ದರೂ ಸಹ, ಬರ್ಮುಡಾ ದ್ವೀಪವು ಸಮುದ್ರದ ತಳಕ್ಕಿಂತ ಇಷ್ಟು ಎತ್ತರದಲ್ಲಿ ಹೇಗೆ ಸ್ಥಿರವಾಗಿ ನಿಂತಿದೆ ಎಂಬ ಕುತೂಹಲಕ್ಕೆ ಅಮೆರಿಕದ ವಿಜ್ಞಾನಿಗಳ ತಂಡ ಈಗ ಉತ್ತರ ಕಂಡುಕೊಂಡಿದೆ. ಸಾಮಾನ್ಯವಾಗಿ ಹವಾಯಿಯಂತಹ ದ್ವೀಪಗಳು … Continued

ವಿಡಿಯೋ: ಅಧ್ಯಾತ್ಮದತ್ತ ರೋಬೋಟ್ : ದಕ್ಷಿಣ ಕೊರಿಯಾ ಬೌದ್ಧ ದೇವಾಲಯದಲ್ಲಿ ಮಾನವರಂತೆ ಸನ್ಯಾಸ ದೀಕ್ಷೆ ಪಡೆದ ರೋಬೋಟ್ !!

ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (AI) ಅಬ್ಬರ ಜೋರಾಗಿರುವ ಬೆನ್ನಲ್ಲೇ, ಈಗ ಆಧ್ಯಾತ್ಮದ ಹಾದಿಯಲ್ಲೂ ರೋಬೋಟ್‌ಗಳು ಹೆಜ್ಜೆ ಇಡುತ್ತಿವೆ. ಸಾಮಾನ್ಯವಾಗಿ ಕಾರ್ಖಾನೆ ಅಥವಾ ಕಚೇರಿಗಳಲ್ಲಿ ಕೆಲಸ ಮಾಡುವ ಮಾನವರೂಪಿ (Humanoid) ರೋಬೋಟ್‌ಗಳನ್ನು ನಾವು ನೋಡಿದ್ದೇವೆ. ಆದರೆ, ದಕ್ಷಿಣ ಕೊರಿಯಾದಲ್ಲಿ ಇದೇ ಮೊದಲ ಬಾರಿಗೆ ರೋಬೋಟ್‌ವೊಂದು ‘ಅಧ್ಯಾತ್ಮ’ದ ಹಾದಿ ಹಿಡಿದಿದೆ!  ಹೌದು, ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿರುವ ಸುಪ್ರಸಿದ್ಧ … Continued

ಅಮೆರಿಕ ವಿರುದ್ಧದ ಯುದ್ಧದಲ್ಲಿ ಇರಾನ್‌ ಬಲಪಡಿಸಲು ರಷ್ಯಾದಿಂದ ರಹಸ್ಯವಾಗಿ ಘಾತಕ ತಂತ್ರಜ್ಞಾನದ ನೆರವು…!

ಮಾಸ್ಕೋ: ಇರಾನ್ ವಿರುದ್ಧದ ಅಮೆರಿಕದ ಸೇನಾ ತಂತ್ರಗಳು ನಿರೀಕ್ಷಿತ ಯಶಸ್ಸು ಕಾಣದಿರಲು ರಷ್ಯಾದ ಅತ್ಯಾಧುನಿಕ ತಂತ್ರಜ್ಞಾನವೇ ಕಾರಣ ಎಂದುವರದಿಯೊಂದು ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ರಷ್ಯಾ ಈಗ ‘ಜಾಮ್’ ಮಾಡಲು ಅಸಾಧ್ಯವಾದ (Unjammable) ಅತ್ಯಾಧುನಿಕ ಡ್ರೋನ್‌ಗಳನ್ನು ಇರಾನ್‌ಗೆ ಒದಗಿಸಲು ಮುಂದಾಗಿದೆ ಎಂದು ಆ ವರದಿ ತಿಳಿಸಿದೆ. ರಷ್ಯಾದ ಸೇನಾ ಗುಪ್ತಚರ ಸಂಸ್ಥೆಯಾದ ‘ಜಿಆರ್‌ಯು’ (GRU) … Continued

ವಿಕೃತಿಯ ಪರಮಾವಧಿ: ಮಾಜಿ ಪ್ರೇಯಸಿಯ ಹೆಸರಲ್ಲಿ ನಕಲಿ ಟಿಂಡರ್ ಖಾತೆ ತೆರೆದು ‘ಅತ್ಯಾಚಾರ’ಕ್ಕೆ ಆಹ್ವಾನಿಸಿದ್ದ ವ್ಯಕ್ತಿ; ಮನೆಗೆ ಬಂದ 18 ಅಪರಿಚಿತರು..!

ತನ್ನ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಮಾಜಿ ಪ್ರೇಯಸಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಹೆಸರಿನಲ್ಲೇ ನಕಲಿ ಡೇಟಿಂಗ್ ಪ್ರೊಫೈಲ್ ಸೃಷ್ಟಿಸಿ, ಆಕೆಗೆ ದೈಹಿಕ ಹಾಗೂ ಮಾನಸಿಕ ಹಾನಿ ಉಂಟುಮಾಡಲು ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬ ಈಗ ಅಪರಾಧಿ ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಗ್ರೇಟರ್ ಮ್ಯಾಂಚೆಸ್ಟರ್‌ನ ಚೀಡಲ್ ನಿವಾಸಿ ಅಸದ್ ಹುಸೇನ್ (36) ಎಂಬಾತನೇ ಈ ಕೃತ್ಯ ಎಸಗಿದ … Continued