ನ್ಯೂಜಿಲೆಂಡಿನ ಅತ್ಯಂತ ಕಿರಿಯ ಸಂಸದೆ ಸಂಸತ್ತಿನಲ್ಲಿ ಪ್ರದರ್ಶಿಸಿದ ಸ್ಥಳೀಯ ‘ಯುದ್ಧದ ಕೂಗು’ ವೀಡಿಯೊ ಭಾರೀ ವೈರಲ್

ನ್ಯೂಜಿಲೆಂಡ್‌ ಸಂಸತ್ತಿನ ಅತ್ಯಂತ ಕಿರಿಯ ಸಂಸದೆಯ ಭಾಷಣದ ವೈಖರಿ ಭಾರೀ ವೈರಲ್ ಆಗುತ್ತಿದೆ. 170 ವರ್ಷಗಳ ನ್ಯೂಜಿಲೆಂಡ್‌ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ಕಿರಿಯ ಸಂಸದೆಯಾಗಿರುವ 21 ವರ್ಷದ ಹನಾ-ರವ್ಹಿತಿ ಮೈಪಿ-ಕ್ಲಾರ್ಕ್ (Hana-Rawhiti Maipi-Clarke) ಅವರ ವೀಡಿಯೊದಲ್ಲಿ ಅವರು ಭಾಷಣ ಮಾಡಿದ ರೀತಿ ಎಲ್ಲರ ಗಮನ ಸೆಳೆದಿದೆ. ಮೈಪಿ ಕ್ಲಾರ್ಕ್ ಅವರು ಹೌರಾಕಿ-ವೈಕಾಟೊ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿರಿಯ … Continued

ಗೂಗಲ್‌ ಮೀಟ್‌ ಮೂಲಕ ಕೇವಲ 2 ನಿಮಿಷದಲ್ಲಿ ಎಲ್ಲ ನೌಕರರನ್ನೂ ಕೆಲಸದಿಂದ ತೆಗೆದುಹಾಕಿದ ಕಂಪನಿ…!

ನೂತನ ವರ್ಷದ ಮೊದಲ ವಾರದಲ್ಲಿಯೇ ಕಂಪನಿಯೊಂದು ಎರಡು ನಿಮಿಷದಲ್ಲಿಯೇ  ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾವನ್ನು ಪ್ರಾರಂಭಿಸಿದೆ. ಅಮೆರಿಕದ ಟೆಕ್ ಸ್ಟಾರ್ಟ್‌ಅಪ್ ಕಂಪನಿ ಫ್ರಂಟ್‌ಡೆಸ್ಕ್ ಮಂಗಳವಾರ ತನ್ನ 200 ನೌಕರರನ್ನು ಎರಡು ನಿಮಿಷಗಳ ಗೂಗಲ್‌ ಮೀಟ್‌ ಕರೆಯ ಮೂಲಕ ವಜಾ ಮಾಡಿದೆ ಎಂದು ವರದಿಯಾಗಿದೆ. ಈ ಮೂಲಕ 2024 ರಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಮೊದಲ ಟೆಕ್ ಸ್ಟಾರ್ಟ್ಅಪ್ … Continued

ಇರಾನಿನ ಸಮಾರಂಭದಲ್ಲಿ 100ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಅವಳಿ ಸ್ಫೋಟದ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

ಇರಾನ್‌ನಲ್ಲಿ ನಡೆದ ಎರಡು ಸೋಟದಲ್ಲಿ ಕನಿಷ್ಠ 100ಕ್ಕೂ ಹೆಚ್ಚು ಜನರು ಸಾವಿಗೀಡಾದ ಘಟನೆಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಗುರುವಾರ ಹೊತ್ತುಕೊಂಡಿದೆ. 2020 ರಲ್ಲಿ ಅಮೆರಿಕದ ಡ್ರೋನ್‌ನಿಂದ ಕೊಲ್ಲಲ್ಪಟ್ಟ ಕಮಾಂಡರ್ ಖಾಸೆಮ್ ಸೊಲೈಮಾನಿಯನ್ನು ಸ್ಮರಣಾರ್ಥ ಇರಾನ್‌ನ ಕೆರ್ಮನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಬಾಂಬ್‌ಗಳು ಅನುಕ್ರಮವಾಗಿ ಸ್ಫೋಟಗೊಂಡವು. ಸುದ್ದಿ ಸಂಸ್ಥೆ ರಾಯಿಟರ್ಸ್‌ನ ವರದಿಯ ಪ್ರಕಾರ, ಇಸ್ಲಾಮಿಕ್ … Continued

‘ನಿಜಕ್ಕೂ, ಭಾರತ ಪ್ರಮುಖ ಶಕ್ತಿ…’: ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಆರ್ಥಿಕ ಬೆಳವಣಿಗೆ, ವಿದೇಶಾಂಗ ನೀತಿ ಶ್ಲಾಘಿಸಿದ ಚೀನಾದ ಸರ್ಕಾರಿ ಮಾಧ್ಯಮ

ನವದೆಹಲಿ: ನಾಲ್ಕು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಭಾರತದ ದೇಶೀ ಮತ್ತು ವಿದೇಶಿ ಪರಿಸ್ಥಿತಿಯು ಮಹತ್ತರವಾಗಿ ಬದಲಾಗಿದೆ. ಭಾರತವು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಆಡಳಿತದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆದಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್‌ನಲ್ಲಿ ಪ್ರಕಟವಾದ ಲೇಖನ ಹೇಳಿದೆ. ಫುಡಾನ್ ವಿಶ್ವವಿದ್ಯಾನಿಲಯದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರದ ನಿರ್ದೇಶಕ ಜಾಂಗ್ ಜಿಯಾಡಾಂಗ್ … Continued

16ರ ಬಾಲಕಿ ಮೇಲೆ ʼ ವರ್ಚ್ಯುವಲ್‌ ಗ್ಯಾಂಗ್‌ ರೇಪ್‌ʼ ; ಪೊಲೀಸರಿಂದ ತನಿಖೆ : ಏನಿದು ಈ ವಿಚಿತ್ರ ಪ್ರಕರಣ…?

ಲಂಡನ್‌: ಆನ್‌ಲೈನ್‌ ಗೇಮ್‌ಗಳು ಗೀಳಾಗಿ ಪರಿಣಮಿಸಿ ಯುವಕ, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಅಂತರ್ಜಾಲದ ಹೊಸ ಅವತಾರವಾದ ಮೆಟಾವರ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ವರ್ಚುವಲ್‌ನಲ್ಲಿ ಗ್ಯಾಂಗ್‌ರೇಪ್‌ ನಡೆದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ವರ್ಚ್ಯುವಲ್‌ ನಲ್ಲಿ ನಡೆದ ಈ ಘಟನೆಯಿಂದ ಬಾಲಕಿ ಮೇಲೆ ದೈಹಿಕವಾಗಿ ಯಾವುದೇ ಅಪಾಯವಾಗದೇ ಇದ್ದರೂ, ದೈಹಿಕವಾಗಿ ಅತ್ಯಾಚಾರಕ್ಕೊಳಗಾದ ಬಾಲಕಿಯರಷ್ಟೇ ಈಕೆ … Continued

ವೀಡಿಯೊಗಳು…| ವಿಮಾನ ನಿಲ್ದಾಣದ ರನ್‌ ವೇಯಲ್ಲಿ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿ ಉರಿದ 379 ಜನರಿದ್ದ ಜಪಾನಿನ ವಿಮಾನ

ಟೋಕಿಯೊ : ಜಪಾನ್ ಏರ್‌ಲೈನ್ಸ್ ವಿಮಾನವು ಮಂಗಳವಾರ ಟೋಕಿಯೊದ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಕೋಸ್ಟ್ ಗಾರ್ಡ್ ಏರ್‌ಕ್ರಾಫ್ಟ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ದೂರದರ್ಶನ ವರದಿಗಳು ತಿಳಿಸಿವೆ. ಬ್ರಾಡ್‌ಕಾಸ್ಟರ್ ಎನ್‌ ಎಚ್‌ ಕೆ (NHK)ಯಲ್ಲಿನ ಚಿತ್ರಗಳು ವಿಮಾನವು ರನ್‌ವೇ ಉದ್ದಕ್ಕೂ ಚಲಿಸುತ್ತಿರುವುದನ್ನು ತೋರಿಸಿದೆ, ಮೊದಲು ಕಿತ್ತಳೆ ಜ್ವಾಲೆಯ ಸ್ಫೋಟವು ಅದರ ಹಿಂಭಾಗದಿಂದ … Continued

ವೀಡಿಯೊಗಳು…| ಒಂದೇ ದಿನ 155 ಬಾರಿ ಕಂಪಿಸಿದ ಭೂಮಿ : ಹೊಸ ವರ್ಷದ ಮೊದಲ ದಿನವೇ ಬೆಚ್ಚಿಬಿದ್ದ ಜಪಾನ್‌, 48 ಸಾವು, 1 ಲಕ್ಷ ಜನರ ಸ್ಥಳಾಂತರ

2024 ರ ಹೊಸ ವರ್ಷದ ಮೊದಲ ದಿನದಂದು ಜಪಾನ್‌ನಲ್ಲಿ ಪ್ರಬಲವಾದ ಸರಣಿ ಭೂಕಂಪಗಳ ನಂತರ ಕನಿಷ್ಠ 48 ಜನರು ಸಾವಿಗೀಡಾಗಿದ್ದಾರೆ ಹಾಗೂ 32 ಸಾವಿರಕ್ಕೂ ಅಧಿಕ ಮಂದಿ ಕಂಪನದಿಂದ ಸಂತ್ರಸ್ತರಾಗಿದ್ದಾರೆ ಎಂದು ವರದಿಯಾಗಿದೆ. ಸೋಮವಾರದಿಂದ, ದ್ವೀಪ ರಾಷ್ಟ್ರವಾದ ಜಪಾನ್‌ನಲ್ಲಿ 155 ಭೂಕಂಪಗಗಳು ಸಂಭವಿಸಿವೆ, ಇದರಲ್ಲಿ ಆರಂಭಿಕ ಭೂಕಫಮನ 7.6 ತೀವ್ರತೆಯಲ್ಲಿತ್ತು ಮತ್ತು ಇನ್ನೊಂದು 6 ಕ್ಕಿಂತ … Continued

ವೀಡಿಯೊಗಳು…| ಸರಣಿ ಭೂಕಂಪಗಳಿಂದ ತತ್ತರಿಸಿದ ಜಪಾನ್, 5 ಅಡಿ ಎತ್ತರದ ಸುನಾಮಿ ಅಲೆಗಳು, ರಷ್ಯಾ, ಕೊರಿಯಾದಲ್ಲೂ ಎಚ್ಚರಿಕೆ

ಸೋಮವಾರ ಜಪಾನಿನಲ್ಲಿ ಪ್ರಬಲ ಸರಣಿ ಭೂಕಂಪಗಳು ಸಂಭವಿಸಿದ್ದು, ಅಧಿಕಾರಿಗಳು ಸುನಾಮಿ ಮುನ್ನೆಚ್ಚರಿಕೆಗಳನ್ನು ನೀಡಿದ್ದಾರೆ.ಹಾಗೂ ಜಪಾನಿನ ವಾಯುವ್ಯ ಕರಾವಳಿಯಲ್ಲಿರುವ ಜನರಿಗೆ ಸ್ಥಳಾಂತರಿಸಲು ಸಲಹೆಗಳನ್ನು ನೀಡಲು ಅಧಿಕಾರಿಗಳನ್ನು ಪ್ರೇರೇಪಿಸಿತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಪ್ರಕಾರ, ಭೂಕಂಪವು ಇಶಿಕಾವಾ ಮತ್ತು ಹತ್ತಿರದ ಪ್ರಾಂತ್ಯಗಳಲ್ಲಿ ಸಂಭವಿಸಿದೆ, ಅವುಗಳಲ್ಲಿ ಒಂದರ ಪ್ರಾಥಮಿಕ ತೀವ್ರತೆ 7.6 ರಷ್ಟಿದೆ … Continued

ಏಕದಿನ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಬ್ಯಾಟರ್‌ ಡೇವಿಡ್ ವಾರ್ನರ್

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್ ಸೋಮವಾರ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಗೂ ವಿದಾಯ ಹೇಳಿದ್ದಾರೆ. ಆದರೆ ಅಗತ್ಯವಿದ್ದರೆ 2025 ರ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ. 37 ವರ್ಷ ವಯಸ್ಸಿನ ವಾರ್ನರ್‌ ಅವರಿಗೆ ಜ.3ರಿಂದ ಪಾಕಿಸ್ತಾನ ವಿರುದ್ಧ ಸಿಡ್ನಿಯಲ್ಲಿ ನಡೆಯುವ ಪಂದ್ಯವು ವೃತ್ತಿ ಜೀವನದ ಕೊನೆಯ ಟೆಸ್ಟ್ … Continued

ಭಾರತದ ಮೂಲದ ದಂಪತಿ, ಹದಿಹರೆಯದ ಮಗಳು ಅಮೆರಿಕದ ಮ್ಯಾಸಚೂಸೆಟ್ಸ್‌ನ ಲಕ್ಸುರಿ ಮನೆಯಲ್ಲಿ ಶವವಾಗಿ ಪತ್ತೆ

ನವದೆಹಲಿ : ಭಾರತೀಯ ಮೂಲದ ಶ್ರೀಮಂತ ದಂಪತಿ ಮತ್ತು ಅವರ ಹದಿಹರೆಯದ ಮಗಳು ಅಮೆರಿಕದ ಮ್ಯಾಸಚೂಸೆಟ್ಸ್‌ನ ಅತ್ಯಂತ ಲಕ್ಸುರಿ ಎನ್‌ಕ್ಲೇವ್‌ನಲ್ಲಿರುವ ಅವರ ಭವನದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಾಕೇಶ ಕಮಲ್ (57), ಅವರ ಪತ್ನಿ ಟೀನಾ (54) ಮತ್ತು ಅವರ 18 ವರ್ಷದ ಮಗಳು ಅರಿಯಾನಾ ಗುರುವಾರ ಸಂಜೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ನಾರ್ಫೋಕ್ ಜಿಲ್ಲಾ ಅಟಾರ್ನಿ … Continued