ತಾಯಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ಮನೆಯಲ್ಲಿಯೇ ಹೆರಿಗೆ ಮಾಡಿಸಿದ 13 ವರ್ಷದ ಬಾಲಕ…!

ತನ್ನ ತಾಯಿಗೆ ಅನಿರೀಕ್ಷಿತವಾಗಿ ಹೆರಿಗೆ ನೋವು ಕಾಣಿಸಿಕೊಂಡ ನಂತರ ಹೆದರದೆ 13 ವರ್ಷದ ಬಾಲಕ ಮನೆಯಲ್ಲಿಯೇ ತಾಯಿಗೆ ಹೆರಿಗೆ ಮಾಡಿಸಿದ್ದಾನೆ…! ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, 13 ವರ್ಷದ ಬಾಲಕ ಫೋನ್ ಮೂಲಕ ವೈದ್ಯಕೀಯ ಸಿಬ್ಬಂದಿಯಿಂದ ಸರಿಯಾದ ಸೂಚನೆಗಳನ್ನು ಪಡೆದು ತಾಯಿಗೆ ಹೆರಿಗೆ ಮಾಡಲು ಸಹಾಯ ಮಾಡಿದ್ದಾನೆ. ಅಲ್ಲದೆ, ಆಸ್ಪತ್ರೆ ಆಂಬುಲೆನ್ಸ್‌ ಬರುವವರೆಗೂ … Continued

ಮ್ಯಾನ್ಮಾರ್‌ ಭೂಕಂಪ : 1600 ಕ್ಕೂ ಹೆಚ್ಚು ಜನರು ಸಾವು, 3,400 ಮಂದಿಗೆ ಗಾಯ

ನವದೆಹಲಿ: ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನ ಕೆಲವು ಭಾಗಗಳಲ್ಲಿ ಸಂಭವಿಸಿದ ಭಾರಿ ಭೂಕಂಪದಲ್ಲಿ ದಿನಕಳೆದಂತೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಶನಿವಾರ ಸಂಜೆ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಾವಿನ ಸಂಖ್ಯೆ 1,600 ಅನ್ನು ದಾಟಿದೆ, ಮ್ಯಾನ್ಮಾರ್ ಒಂದರಲ್ಲೇ 1,644 ಮಂದಿ ಸಾವಿಗೀಡಾಗಿದ್ದಾರೆ. 7.7 ತೀವ್ರತೆಯ ಭೂಕಂಪವು ಶುಕ್ರವಾರ ಮಧ್ಯಾಹ್ನ 12:50 ಕ್ಕೆ (0650 GMT) ಮ್ಯಾನ್ಮಾರ್‌ನ ಸಾಗಯಿಂಗ್‌ನ … Continued

ಮ್ಯಾನ್ಮಾರ್ ಭೂಕಂಪ : ಸಾವಿನ ಸಂಖ್ಯೆ 694ಕ್ಕೆ ಏರಿಕೆ

ನವದೆಹಲಿ: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಸಾವಿನ ಸಂಖ್ಯೆ 694ಕ್ಕೆ ಏರಿದೆ. ದೇಶದ ಎರಡನೇ ಅತಿದೊಡ್ಡ ನಗರ ಮತ್ತು ಭೂಕಂಪದ ಕೇಂದ್ರಬಿಂದುವಾಗಿರುವ ಮ್ಯಾಂಡಲೆಯಲ್ಲಿ ಬದುಕುಳಿದವರ ರಕ್ಷಣೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನಡೆಸುತ್ತಿದ್ದಾರೆ. ಮಿಲಿಟರಿ ನಾಯಕರ ಪ್ರಕಾರ ಕನಿಷ್ಠ 694 ಜನರು ಸಾವಿಗೀಡಾಗಿದ್ದಾರೆ ಹಾಗೂ 1,670 ಮಂದಿ ಗಾಯಗೊಂಡಿದ್ದಾರೆ ಎಂದು ಮ್ಯಾನ್ಮಾರ್‌ನ ಮಿಲಿಟರಿ … Continued

ಭೀಕರ ದೃಶ್ಯಗಳ ವೀಡಿಯೊಗಳು | ಮ್ಯಾನ್ಮಾರ್‌, ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ ; ಸಾವಿನ ಸಂಖ್ಯೆ 144ಕ್ಕೆ ಏರಿಕೆ,

ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪ ಹಾಗೂ 6.4 ತೀವ್ರತೆಯ ನಂತರದ ಆಘಾತ ಶುಕ್ರವಾರ ಸಂಭವಿಸಿದ್ದು, ಕನಿಷ್ಠ 144 ಜನರು ಸಾವಿಗೀಡಾಗಿದ್ದಾರೆ. ಕಟ್ಟಡಗಳು ಉರುಳಿದವು, ಸೇತುವೆಗಳು ಕುಸಿದವು. ಮತ್ತು ಐತಿಹಾಸಿಕ ರಚನೆಗಳಿಗೆ ಹಾನಿಯಾಗಿದೆ. ನೆರೆಯ ಥಾಯ್ಲೆಂಡ್‌ನಲ್ಲೂ ನಡುಕ ಸಂಭವಿಸಿದೆ, ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು 117 ಮಂದಿ ಸಿಲುಕಿದ್ದು, ಎಂಟು ಮಂದಿ ಸಾವಿಗೀಡಾಗಿದ್ದಾರೆ. … Continued

ವೀಡಿಯೊಗಳು..| ಮ್ಯಾನ್ಮಾರ್‌ ನಲ್ಲಿ 7.7 ತೀವ್ರತೆಯ ಭೂಕಂಪ ; ಬ್ಯಾಂಕಾಕಿನಲ್ಲಿ ಪ್ರಬಲ ಕಂಪನ : 20 ಸಾವು, ಹಲವರಿಗೆ ಗಾಯ

ಶುಕ್ರವಾರ ಮಧ್ಯಾಹ್ನ 12:50ಕ್ಕೆ (ಸ್ಥಳೀಯ ಕಾಲಮಾನ) ಮಧ್ಯ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಭೂಕಂಪ ಮತ್ತು 6.8ರ  ಭೂಕಂಪದ ನಂತರದ ಆಘಾತ ಸಂಭವಿಸಿದ ನಂತರ ಸುಮಾರು ಲಭ್ಯವಿರುವ ಮಾಹಿತಿ ಪ್ರಕಾರ, 20 ಜನ ಸಾವಿಗೀಡಾಗಿದ್ದಾರೆ ಹಾಗೂ 90ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಸಾಗಯಿಂಗ್ ನಗರದ ವಾಯುವ್ಯಕ್ಕೆ 16 ಕಿಮೀ ಮತ್ತು 10 … Continued

ಇಸ್ರೇಲಿ ದಾಳಿಯಲ್ಲಿ ಹಿಜ್ಬುಲ್ಲಾ ಬೆಟಾಲಿಯನ್ ಕಮಾಂಡರ್ ಅಹ್ಮದ್ ಅದ್ನಾನ್ ಸಾವು : ವೀಡಿಯೊ ಹಂಚಿಕೊಂಡ ಇಸ್ರೇಲಿ ಏರ್‌ ಫೋರ್ಸ್‌

ಇಸ್ರೇಲ್‌ ತಾನು ನಡೆಸಿದ ಬಾಯುದಾಳಿಯಲ್ಲಿ ಹಿಜ್ಬುಲ್ಲಾದ ಮಹತ್ವದ ರಾದ್ವಾನ್ ಪಡೆಯ ಬೆಟಾಲಿಯನ್ ಕಮಾಂಡರ್ ಅಹ್ಮದ್ ಅದ್ನಾನ್ ಬಜಿಜಾ ಅವರನ್ನು ಕೊಂದುಹಾಕಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ವೈಮಾನಿಕ ದಾಳಿಗಳು ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಹೋರಾಟಗಾರರ ಮತ್ತೊಂದು ಗುಂಪನ್ನು ಗುರಿಯಾಗಿಸಿಕೊಂಡಿವೆ. ಇಸ್ರೇಲಿ ವಾಯುಪಡೆಯು ಸಿರಿಯಾದ ಲಟಾಕಿಯಾ ಬಂದರು ಪ್ರದೇಶದಲ್ಲಿ ರಾತ್ರೋರಾತ್ರಿ ದಾಳಿ ನಡೆಸಿತು. ಬೃಹತ್ … Continued

ಮೈ ಜುಂ ಎನ್ನುವ ವೀಡಿಯೊ..| ಬೈಕ್‌ ಸವಾರನನ್ನು ನುಂಗಿದ ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಸೃಷ್ಟಿಯಾದ ದೊಡ್ಡ ಕುಳಿ, ಬೌನ್ಸ್‌ ಆಗಿ ಪಾರಾದ ಕಾರು…!

ಆಘಾತಕಾರಿ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಬೈಕು ಸಿಂಕ್‌ ಹೋಲ್‌ಗೆ ಕಣ್ಮರೆಯಾಗುವ ಭಯಾನಕ ದೃಶ್ಯ ಈ ವೀಡಿಯೊದಲ್ಲಿ ಸೆರೆಯಾಗಿದೆ. . ಈ ಭೀಕರ ಅಪಘಾತವು ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದ್ದು, ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ದೊಡ್ಡ ಕುಳಿ ಮೋಟಾರ್ಸೈಕ್ಲಿಸ್ಟ್‌ ಅನ್ನು ನುಂಗಿದ ಘಟನೆ ನಡೆದು 18 ಗಂಟೆಗಳ ನಂತರ ತೀವ್ರವಾಗಿ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. … Continued

ಆಮದಾಗುವ ಕಾರುಗಳ ಮೇಲೆ 25% ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಅಮೆರಿಕದಲ್ಲಿ ತಯಾರಾಗದ ಆಟೋ ಮೊಬೈಲ್‌ ಆಮದುಗಳ ಮೇಲೆ 25% ಸುಂಕವನ್ನು ಘೋಷಿಸಿದ್ದಾರೆ. ಸುಂಕವು ಏಪ್ರಿಲ್ 2 ರಿಂದ ಜಾರಿಗೆ ಬರಲಿದೆ. ಇತ್ತೀಚಿನ ಕ್ರಮವು ವಿದೇಶಿ ನಿರ್ಮಿತ ಕಾರುಗಳು ಮತ್ತು ಲಘು ಟ್ರಕ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. “ಅಮೆರಿಕದಲ್ಲಿ ತಯಾರಾಗದ ಎಲ್ಲಾ ಕಾರುಗಳ ಮೇಲೆ 25% … Continued

ವೀಡಿಯೊ..| ವಿಶ್ವದ ಅತ್ಯಂತ ಆಳವಾದ ಗುಹೆ ವೆರಿಯೊವ್ಕಿನಾದಲ್ಲಿ 30 ಕುತುಬ್ ಮಿನಾರ್‌ ಗಳು ಹಿಡಿಯುತ್ತವೆ…! ಆಳವೆಷ್ಟು ಗೊತ್ತೆ..?

ಭೂಮಿಯ ರಚನೆಯ ಆರಂಭದಿಂದಲೂ ಗುಹೆಗಳು ನಾಗರಿಕತೆಯ ಭಾಗವಾಗಿದೆ. ಆಯಕಟ್ಟಿನ ಪ್ರಾಮುಖ್ಯತೆಯಿಂದ ಹಲವು ಹಳ್ಳಿಗಳಲ್ಲಿ ಜನರು ಇದನ್ನು ವಾಸಿಸುವ ಉದ್ದೇಶಗಳಿಗಾಗಿ ಬಳಸುತ್ತಾರೆ. ಆದರೆ ಒಂದು ಗುಹೆ ಹೆಚ್ಚೆಂದರೆ ಎಷ್ಟು ಆಳವಾಗಿರಬಹುದು ಮತ್ತು ಈ ಭೂಮಿಯ ಮೇಲಿನ ಅತ್ಯಂತ ಆಳವಾದ ಗುಹೆ ಯಾವುದು ಎಂದು ಎಂದಾದರೂ ಯೋಚಿಸಿದ್ದೀರಾ ..? ಜಗತ್ತಿನ ಅತ್ಯಂತ ಆಳವಾದ ಗುಹೆ ಅಬ್ಖಾಜಿಯಾ ಪ್ರದೇಶದ ಪರ್ವತ … Continued

ವೀಡಿಯೊ | ಅಮೆಜಾನ್ ಮಳೆಕಾಡಿನಲ್ಲಿ ವಿಶ್ವದ ಅತಿದೊಡ್ಡ ಅನಕೊಂಡ ಹೆಬ್ಬಾವನ್ನು ಪತ್ತೆ ಮಾಡಿದ ಸಂಶೋಧಕರ ತಂಡ: ಇದರ ಉದ್ದ ಎಷ್ಟೆಂದರೆ….

ಅಮೆಜಾನ್ ಕಾಡನ್ನು ಅನ್ವೇಷಿಸುವ ಸಂಶೋಧಕರ ತಂಡವು ಅದ್ಭುತ ಆವಿಷ್ಕಾರವನ್ನು ಮಾಡಿದೆ. ಈ ಅನ್ವೇಷಕರ ತಂಡವು ದಕ್ಷಿಣ ಅಮೆರಿಕದ ಈಕ್ವೆಡಾರ್‌ನ ದಟ್ಟವಾದ ಮಳೆಕಾಡಿನಲ್ಲಿ ಹೊಸ ಜಾತಿಯ ದೈತ್ಯ ಅನಕೊಂಡ ಹಾವನ್ನು ಪತ್ತೆ ಮಾಡಿದ್ದಾರೆ. ನ್ಯಾಷನಲ್ ಜಿಯಾಗ್ರಫಿಕ್ ಅನ್ವೇಷಣೆ ವೇಳೆ ವಿಜ್ಞಾನಿಗಳು ಈ ಹೊಸ ಅನಕೊಂಡ ಜಾತಿ ಹಾವನ್ನು ಪತ್ತೆ ಮಾಡಿದ್ದಾರೆ. ಪ್ರೊಫೆಸರ್ ಬ್ರಿಯಾನ್ ಫ್ರೈ ನೇತೃತ್ವದ ತಂಡವು … Continued