ವೀಡಿಯೊ..| ಸ್ವಾಗತಿಸಲು ಬಂದ ಐಎಎಸ್‌ ಅಧಿಕಾರಿ ತಲೆ ಮೇಲೆ ಹೂ ಕುಂಡ ಇಟ್ಟು ವಿಚಿತ್ರವಾಗಿ ವರ್ತಿಸಿ ಮತ್ತೊಮ್ಮೆ ಸುದ್ದಿಯಾದ ಬಿಹಾರ ಸಿಎಂ..!

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ತಮ್ಮ ವಿಚಿತ್ರ ವರ್ತನೆಯಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಪಾಟ್ನಾದ ಕೃಷಿ ಭವನದಲ್ಲಿ ನಡೆದ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ವೇದಿಕೆಯನ್ನು ತಲುಪಿದ ತಕ್ಷಣ, ಬಿಹಾರ ಸರ್ಕಾರದ ಕ್ಯಾಬಿನೆಟ್ ತಲೆ ಮೇಲೆ ಹೂ ಕುಂಡ ಇಟ್ಟಿರುವ ಘಟನೆಯ ವೀಡಿಯೊ ಈಗ ಸಾಕಷ್ಟು ಚರೆಗೆ ಗ್ರಾಸವಾಗಿದೆ. ಅವರು ವೇದಿಕೆಗೆ ಬರುತ್ತಿದ್ದಂತೆಯೇ ಹೆಚ್ಚುವರಿ … Continued

ವೀಡಿಯೊ…| ಒಡಿಶಾದ ಸಮುದ್ರದಲ್ಲಿ ಮಗುಚಿದ ದೋಣಿ ; ಅದರಲ್ಲಿದ್ದ ಕ್ರಿಕೆಟಿಗ ಸೌರವ ಗಂಗೂಲಿ ಸಹೋದರ, ಅತ್ತಿಗೆ ಸ್ವಲ್ಪದರಲ್ಲೇ ಪಾರು

ಪುರಿ: ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಸಹೋದರ ಸ್ನೇಹಶಿಶ್ ಗಂಗೂಲಿ ಮತ್ತು ಅವರ ಪತ್ನಿ ಅರ್ಪಿತಾ ಇದ್ದ ಸ್ಪೀಡ್‌ ಬೋಟ್‌ ಒಡಿಶಾದ ಸಮುದ್ರದಲ್ಲಿ ಭಾನುವಾರ ಮಗುಚಿ ಬಿದ್ದಿದೆ. ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದು, ಅವರನ್ನು ರಕ್ಷಣಾ ಗಾರ್ಡ್‌ಗಳು ರಕ್ಷಿಸಿದ್ದಾರೆ. ಪುರಿಯಲ್ಲಿ ರಜೆಯಲ್ಲಿದ್ದ ಗಂಗೂಲಿ ದಂಪತಿ ಕಡಲತೀರದಲ್ಲಿ ಆನಂದಿಸುತ್ತಿದ್ದಾಗ ಈ ಘಟನೆ … Continued

ಬೆಚ್ಚಿಬೀಳಿಸುವ ವೀಡಿಯೊ…| ಮಲಗಿದ್ದ ವ್ಯಕ್ತಿಯ ಮೈಮೇಲೆ ಹರಿದಹೋದ ಬೃಹತ್‌ ಕಾಳಿಂಗ ಸರ್ಪ; ಆದ್ರೂ ಆತ ಶಾಂತವಾಗಿ ಮಲಗಿದ್ದ…!

ಡೆಹ್ರಡೂನ್‍: ಹಾವೆಂದರೆ ಸಾಕು ಎಲ್ಲರೂ ಬೆಚ್ಚಿಬೀಳುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಮೇಲೆ ಬೃಹತ್‌ ಕಾಳಿಂಗ ಸರ್ಪ ಹರಿದು ಹೋದರೂ ತಲೆಕೆಡಿಸಿಕೊಳ್ಳದೆ ಶಾಂತವಾಗಿ ಮಲಗಿರುವ ವೀಡಿಯೊವೊಂದು ವೈರಲ್‌ ಆಗಿದೆ. ಹಾಸಿಗೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬ ಎಚ್ಚರದಲ್ಲಿದ್ದಾಗಲೇ ಆತನ ಮೈಮೇಲೆ ಕಾಳಿಂಗ ಸರ್ಪ (King Cobra) ತೆವಳಿಕೊಂಡು ಹೋಗಿದೆ. ಮೈ ಮೇಲೆ ಹಾವು ಹರಿಯುತ್ತಿರುವುದು ಆತನಿಗೆ ಗೊತ್ತಿದ್ದರೂ … Continued

ಪಾಕಿಸ್ತಾನಕ್ಕೆ ಭಾರತದ ಹೆದರಿಕೆ ; ಚೀನಾ ಜೊತೆ ಸೇರಿ ಪರಮಾಣು ಶಸ್ತ್ರಾಸ್ತ್ರಗಳ ಆಧುನೀಕರಣ : ಅಮೆರಿಕ ಗುಪ್ತಚರ ವರದಿ

ನವದೆಹಲಿ: ಪಾಕಿಸ್ತಾನವು ಭಾರತವನ್ನು “ಅಸ್ತಿತ್ವಕ್ಕೆ ಬೆದರಿಕೆ” ಎಂದು ಪರಿಗಣಿಸುತ್ತದೆ, ಆದರೆ ಭಾರತವು ಚೀನಾವನ್ನು ತನ್ನ “ಪ್ರಾಥಮಿಕ ಎದುರಾಳಿ” ಪರಿಗಣಿಸುತ್ತದೆ ಹಾಗೂ ಪಾಕಿಸ್ತಾನವನ್ನು ನಿರ್ವಹಿಸಬೇಕಾದ “ಭದ್ರತಾ ಸಮಸ್ಯೆ” ಎಂದು ಪರಿಗಣಿಸುತ್ತದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ 2025 ರ ತನ್ನ ವಿಶ್ವಾದ್ಯಂತ ಬೆದರಿಕೆ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ. 2025ರ ಮೇ 25ರಂದು ಬಿಡುಗಡೆಯಾದ ಅಮೆರಿಕ ಡಿಫೆನ್ಸ್ … Continued

ಮದುಮಗನನ್ನು ಮದುವೆ ಮಂಟಪದಿಂದಲೇ ಅಪಹರಿಸಿದ ನೃತ್ಯಗಾರರ ತಂಡ…!

ಮದುವೆಯೊಂದರಲ್ಲಿ ಸಾಂಪ್ರದಾಯಿಕ ಸಂಭ್ರಮಾಚರಣೆಗೆಂದು ಕರೆಸಿದ್ದ ನೃತ್ಯ ತಂಡವು ವರನನ್ನು ಮಂಟಪದಿಂದಲೇ ಅಪಹರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸ್ಥಳದಲ್ಲಿದ್ದ ಜನರ ಪ್ರಕಾರ, “ಲೌಂಡಾ ನಾಚ್ ಪಾರ್ಟಿ” – ಸಾಮಾನ್ಯವಾಗಿ ಮದುವೆಗಳಿಗೆ ನೇಮಿಸಿಕೊಳ್ಳುವ ಸಾಂಪ್ರದಾಯಿಕ ನೃತ್ಯ ತಂಡವಾಗಿದ್ದು, ಈ ನೃತ್ಯ … Continued

ಲಾಲು ಕುಟುಂಬದಲ್ಲಿ ಬಿರುಗಾಳಿ ; ಹಿರಿಯ ಮಗನನ್ನು ಆರ್‌ ಜೆಡಿ ಪಕ್ಷ, ಕುಟುಂಬದಿಂದ ಹೊರಹಾಕಿದ ಲಾಲು ಪ್ರಸಾದ ಯಾದವ್‌…!

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸ್ಥಾಪಕ ಹಾಗೂ ವರಿಷ್ಠ ನೇತಾರ ಲಾಲು ಪ್ರಸಾದ ಯಾದವ್ ಭಾನುವಾರ ತಮ್ಮ ಹಿರಿಯ ಪುತ್ರ ತೇಜಪ್ರತಾಪ ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಅಲ್ಲದೆ, ತೇಜಪ್ರತಾಪ ಅವರನ್ನು ಕುಟುಂಬದಿಂದಲೂ ಹೊರಹಾಕಿದ್ದಾರೆ. ತೇಜಪ್ರತಾಪ ಅವರ “ಬೇಜವಾಬ್ದಾರಿಯುತ ನಡವಳಿಕೆ” ಮತ್ತು ಅವರು ಕುಟುಂಬದ ಮೌಲ್ಯಗಳು ಮತ್ತು ಸಾರ್ವಜನಿಕ ಸಭ್ಯತೆಯಿಂದ … Continued

ಪಹಲ್ಗಾಮ್ ದಾಳಿ : ಪ್ರವಾಸಿಗರು ಹೋರಾಡಬೇಕಿತ್ತು, ಮಹಿಳೆಯರು ‘ವೀರತ್ವʼ ತೋರಬೇಕಿತ್ತು ; ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

ಚಂಡೀಗಢ : ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಎಂದು ರಾಜ್ಯಸಭಾ ಸಂಸದ ರಾಮಚಂದರ ಜಂಗ್ರಾ ಶನಿವಾರ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ದಾಳಿಯಲ್ಲಿ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರಲ್ಲಿ “ಸ್ಫೂರ್ತಿಯ ಕೊರತೆ ಇತ್ತು” ಮತ್ತು ಅವರು ‘ವೀರಾಂಗನೆ'(ಯೋಧ ಮಹಿಳೆಯರು)ಯರಂತೆ ವರ್ತಿಸಬೇಕಾಗಿತ್ತು ಎಂದು ಅವರು … Continued

4 ರಾಜ್ಯಗಳ ವಿಧಾನಸಭಾ ಉಪಚುನಾವಣೆ ಘೋಷಣೆ

ನವದೆಹಲಿ: ಗುಜರಾತ್, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ. ಐದು ಕ್ಷೇತ್ರಗಳಿಗೆ ಜೂನ್ 19 ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಜೂನ್ 23 ರಂದು ನಡೆಯಲಿದೆ. ಗುಜರಾತಿನ ಕಾಡಿ (ಮೀಸಲು ಸ್ಥಾನ) ಮತ್ತು ವಿಸಾವದರ್ ಕ್ಷೇತ್ರಗಳು , ಕೇರಳದ ನಿಲಂಬೂರ್ … Continued

ಜಪಾನ್‌ ಹಿಂದಿಕ್ಕಿ ಭಾರತ ಈಗ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕತೆಯ ದೇಶ : ನೀತಿ ಆಯೋಗದ ಸಿಇಒ

ನವದೆಹಲಿ: ಜಾಗತಿಕ ಆರ್ಥಿಕ ಶ್ರೇಯಾಂಕದಲ್ಲಿ ಭಾರತವು ಒಂದು ಸ್ಥಾನ ಮೇಲೇರಿದೆ. ಭಾರತ ಈಗ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಶನಿವಾರ ಹೇಳಿದ್ದಾರೆ. ದೇಶದ ಜಿಡಿಪಿ $4 ಟ್ರಿಲಿಯನ್ ಗಡಿಯನ್ನು ತಲುಪಿದೆ, ಈಗ ಭಾರತವು ಅಮೆರಿಕ, ಚೀನಾ ಮತ್ತು ಜರ್ಮನಿಗಿಂತ ಹಿಂದಿದೆ. ನೀತಿ ಚಿಂತಕರ … Continued

ಒಂದೇ ದಿನದಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳು ಮಾರಾಟ ; ಗಿನ್ನೆಸ್ ವಿಶ್ವ ದಾಖಲೆ ಸ್ಥಾಪಿಸಿದ ಎಲ್‌ ಐಸಿ ; 24 ತಾಸಿನಲ್ಲಿ ಮಾಡಿದ ಪಾಲಿಸಿಗಳು ಎಷ್ಟೆಂದರೆ..

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (LIC) ಒಂದೇ ದಿನದಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ಸಾಧನೆಯನ್ನು ಜನವರಿ 20, 2025 ರಂದು ಎಲ್‌ಐಸಿ (LIC)ಯ ಯ ಏಜೆನ್ಸಿ ನೆಟ್‌ವರ್ಕ್ 24 ಗಂಟೆಗಳ ಒಳಗೆ ದಾಖಲೆಯ 5,88,107 ಪಾಲಿಸಿಗಳನ್ನು ಬಿಡುಗಡೆ ಮಾಡಿತು. ಶನಿವಾರ … Continued