ಮಗುವಾಗಿದ್ದಾಗ ತನ್ನ ಅಪಹರಣ ಮಾಡಿದ್ದ ಆರೋಪಿಗಳಿಗೆ 17 ವರ್ಷಗಳ ನಂತರ ಶಿಕ್ಷೆ ಕೊಡಿಸಿದ ವಕೀಲ…!

ಆಗ್ರಾ: ಅದೃಷ್ಟದ ಕುತೂಹಲಕಾರಿ ತಿರುವಿನಲ್ಲಿ, ತಾನು ಏಳು ವರ್ಷದವನಿದ್ದಾಗ ತನ್ನನ್ನು ಅಪಹರಿಸಿದ್ದ ದರೋಡೆಕೋರರಿಗೆ ಈಗ ವಕೀಲನಾದ ಅದೇ ಹುಡುಗ 17 ವರ್ಷಗಳ ನಂತರ ಶಿಕ್ಷೆ ಕೊಡಿಸಿದ ವಿದ್ಯಮಾನ ಉತ್ತರ ಪ್ರದೇಶದಲ್ಲಿ ನಡೆದಿದೆ..! ಉತ್ತರ ಪ್ರದೇಶದ ಆಗ್ರಾದ ಖೀರಗಢ ಪಟ್ಟಣದಲ್ಲಿ ಏಳು ವರ್ಷದ ಬಾಲಕನನ್ನು ಆತನ ತಂದೆ ಮತ್ತು ಚಿಕ್ಕಪ್ಪ ಪಟ್ಟದ ಔಷಧದ ಅಂಗಡಿಯಿಂದ ದರೋಡೆಕೋರರು ಅಪಹರಿಸಿದ್ದರು. … Continued

ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ವಿಶೇಷ ತನಿಖಾ ತಂಡ

ಹೈದರಾಬಾದ್: ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದ ಆರೋಪದ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದ ಅವ್ಯವಹಾರದ ತನಿಖೆಗಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಉಂಡವಳ್ಳಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, “ಇನ್‌ಸ್ಪೆಕ್ಟರ್ ಜನರಲ್ ಅಥವಾ ಅದಕ್ಕಿಂತ ಉನ್ನತ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಲಾಗುವುದು. ಇದು ಈ ಬಗ್ಗೆ ತನಿಖೆ … Continued

ಪ್ರಧಾನಿ ಮೋದಿ ಭೇಟಿ ವೇಳೆ 297 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ಅಮೆರಿಕವು 297 ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ಈ ಪುರಾತನ ವಸ್ತುಗಳನ್ನು ದೇಶದಿಂದ ಕಳ್ಳ ಸಾಗಣೆಯ ಮೂಲಕ ದೇಶದ ಹೊರಕ್ಕೆ ಸಾಗಿಸಲಾಗಿತ್ತು. ಮತ್ತು ನಂತರ ಅವುಗಳನ್ನು ವಶಪಡಿಸಿಕೊಳ್ಳಲಾಯಿತು. ಸಾಂಸ್ಕೃತಿಕ ಆಸ್ತಿಯ ಕಳ್ಳಸಾಗಣೆಯು ದೀರ್ಘಕಾಲದ ಸಮಸ್ಯೆಯಾಗಿದ್ದು, ಇದು ಇತಿಹಾಸದುದ್ದಕ್ಕೂ ಅನೇಕ ಸಂಸ್ಕೃತಿಗಳು ಮತ್ತು ದೇಶಗಳ ಮೇಲೆ ಪರಿಣಾಮ ಬೀರಿದೆ … Continued

ವೀಡಿಯೊ…| ಎಕ್ಸ್‌ಪ್ರೆಸ್‌ ರೈಲಿನೊಳಗೆ ಹಾವು ಪ್ರತ್ಯಕ್ಷ…! ತಮ್ಮ ಸೀಟು ಬಿಟ್ಟು ಓಡಿದ ಪ್ರಯಾಣಿಕರು…!!

ಜಬಲ್‌ಪುರ (ಮಧ್ಯಪ್ರದೇಶ): ರೈಲಿನ ಮೇಲಿನ ಬರ್ತ್‌ನ ಕಬ್ಬಿಣದ ಸಲಾಕೆಯ ಸುತ್ತಲೂ ಉದ್ದವಾದ ಹಾವು ಸುತ್ತಿರುವುದನ್ನು ನೋಡಿದ ಪ್ರಯಾಣಿಕರು ಬೆಚ್ಚಿಬಿದ್ದ ಘಟನೆ ಜಬಲ್‌ಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಭಾನುವಾರ ಇದರ ವೀಡಿಯೊ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಜಬಲ್‌ಪುರದಿಂದ ಮುಂಬೈಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಹಾವು … Continued

8 ಹೈಕೋರ್ಟ್ ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರದ ಅಧಿಸೂಚನೆ

ನವದೆಹಲಿ: ವಿವಿಧ ಎಂಟು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗೆ ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಕಾನೂನು ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಮನಮೋಹನ ಅವರನ್ನು ದೆಹಲಿ ಹೈಕೋರ್ಟ್‌ನ … Continued

ಪ್ರತ್ಯೇಕ ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಸ್ಫೋಟಕಗಳು, ಗ್ಯಾಸ್ ಸಿಲಿಂಡರ್ ಪತ್ತೆ…!

ನವದೆಹಲಿ: ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಸ್ಫೋಟಿಸಲು ರೈಲು ಹಳಿಗಳ ಬಳಿ ಸ್ಫೋಟಕ ಇರಿಸಿದ್ದ ಆತಂಕಕಾರಿ ಘಟನೆ ಮಧ್ಯಪ್ರದೇಶದ ಬುರ್ಹಾನ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಎಂದು ವರದಿಯಾಗಿದೆ. ರೈಲು ಹಳಿಗಳ ಬಳಿ 10ಕ್ಕೂ ಹೆಚ್ಚು ಸ್ಫೋಟಕಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆಯ ವಿಶೇಷ ರೈಲು ಬುಧವಾರ ಜಮ್ಮು ಮತ್ತು ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳುತ್ತಿದ್ದಾಗ ಸಗ್ಫಾಟ ರೈಲು … Continued

ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲಿಸಿದ 3 ಮುಸ್ಲಿಂ ಸಂಘಟನೆಗಳು

ನವದೆಹಲಿ: ಜಂಟಿ  ಸಂಸದೀಯ ಸಮಿತಿ( JPC)ಯ ಸಭೆಯಲ್ಲಿ ಮೂರು ಮುಸ್ಲಿಂ ಸಂಘಟನೆಗಳು ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿವೆ. ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್, ಆರ್‌ಎಸ್‌ಎಸ್-ಸಂಯೋಜಿತ ರಾಷ್ಟ್ರೀಯ ಮುಸ್ಲಿಂ ಮಂಚ್ ಮತ್ತು ಎನ್‌ಜಿಒ ಭಾರತ ಬಿಜೆಪಿ ಶಾಸಕ ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿಯ ಮುಂದೆ ಹಾಜರಾದವು. ನಂತರ ಪಾಸ್ಮಂಡ ಮುಸ್ಲಿಂ ಸಂಘಟನೆಯು ಮಸೂದೆಗೆ ವ್ಯಾಪಕ ಬೆಂಬಲ … Continued

ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ; 11 ದಿನಗಳ ಪ್ರಾಯಶ್ಚಿತಕ್ಕೆ ಮುಂದಾದ ಆಂಧ್ರ ಡಿಸಿಎಂ ಪವನ ಕಲ್ಯಾಣ

 ಅಮರಾವತಿ: ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿದ್ದಕ್ಕಾಗಿ ವೆಂಕಟೇಶ್ವರ ದೇವರಿಗೆ ಪ್ರಾಯಶ್ಚಿತ್ತ ಮಾಡಲು 11 ದಿನಗಳ ಕಠಿಣ ವ್ರತ ಕೈಗೊಳ್ಳುವುದಾಗಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ ಕಲ್ಯಾಣ ಶನಿವಾರ ಹೇಳಿದ್ದಾರೆ. ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರದಿಂದ ವ್ರತ ಆರಂಭಿಸುವುದಾಗಿ ನಟ-ರಾಜಕಾರಣಿ ಪವನ ಕಲ್ಯಾಣ ತಿಳಿಸಿದ್ದಾರೆ. “11 ದಿನಗಳ … Continued

ವೀಡಿಯೊ..| ಕಾರು ಡಿಕ್ಕಿ ಹೊಡೆದ ರಭಸಕ್ಕೆ ಎಲಿವೇಟೆಡ್ ರಸ್ತೆಯಿಂದ ಪಿಲ್ಲರ್‌ ಗೆ ಹಾರಿಬಿದ್ದ ಮಹಿಳೆ…!

ನವದೆಹಲಿ: ನೋಯ್ಡಾದ ಎಲಿವೇಟೆಡ್ ರಸ್ತೆಯಲ್ಲಿ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ಎಗರಿ ಬಿದ್ದು ಫ್ಲೈಓವರ್‌ನ ಪಿಲ್ಲರ್‌ಗಳ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಅವರು ಗಂಭೀರ ಗಾಯಗಳಿಂದ ಪಾರಾಗಿದ್ದಾರೆ. ಅವರು ಫ್ಲೈಓವರ್‌ ಕೆಳಗೆ ಬಿದ್ದಿದ್ದರೆ ಅವರ ಪ್ರಾಣಕ್ಕೆ ಅಪಾಯವಾಗುವ ಎಲ್ಲ ಸಾಧ್ಯತೆಗಳಿದ್ದವು. ಮಹಿಳೆಯನ್ನು ಪಿಲ್ಲರ್‌ಗಳ ನಡುವಿನಿಂದ ರಕ್ಷಣೆ ಮಾಡುವ … Continued

ವಾಯುಸೇನೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರಪ್ರೀತ್ ಸಿಂಗ್ ನೇಮಕ

ನವದೆಹಲಿ : ವಾಯುಪಡೆಯ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರಪ್ರೀತ್ ಸಿಂಗ್ ಅವರು ನೇಮಕಗೊಂಡಿದ್ದು, ಸೆ. 30 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅಮರಪ್ರೀತ್ ಸಿಂಗ್ ಅವರು ಅಕ್ಟೋಬರ್ 27, 1964 ರಂದು ಜನಿಸಿದರು. ಅವರನ್ನು ಡಿಸೆಂಬರ್ 1984 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಸ್ಟ್ರೀಮ್‌ಗೆ ನಿಯೋಜಿಸಲಾಗಿತ್ತು. ವಿವಿಧ ಕಮಾಂಡ್, ಸಿಬ್ಬಂದಿ, ಸೂಚನಾ ಮತ್ತು ವಿದೇಶಿ ನೇಮಕಾತಿಗಳಲ್ಲಿ … Continued