ವೀಡಿಯೊಗಳು..| ಸಿರಿಯಾದೊಳಗೆ ನುಗ್ಗಿ 3 ತಾಸಿನಲ್ಲೇ ನೆಲದೊಳಗಿದ್ದ ಕ್ಷಿಪಣಿ ಸ್ಥಾವರ ನಾಶ ಮಾಡಿದ 120 ಇಸ್ರೇಲಿ ಕಮಾಂಡೊಗಳು..! ಇದು ಸಾಧ್ಯವಾಗಿದ್ದು ಹೇಗೆ..?

ನವದೆಹಲಿ: 120 ಇಸ್ರೇಲಿ ಕಮಾಂಡೋಗಳು ಸಿರಿಯಾದಲ್ಲಿ ಭೂಗತವಾಗಿದ್ದ ಇರಾನ್ ಅನುದಾನಿತ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ ಅತ್ಯಂತ ಉನ್ನತ ಕಾರ್ಯಾಚರಣೆಯ ವಿವರಗಳನ್ನು ಇಸ್ರೇಲಿ ಏರ್ ಫೋರ್ಸ್ (IAF) ಗುರುವಾರ ಬಹಿರಂಗಪಡಿಸಿದೆ. “ಆಪರೇಷನ್ ಮೆನಿ ವೇಸ್” ಎಂಬ ಕೋಡ್‌ವರ್ಡ್‌ಹೆಸರಿನ ಕಾರ್ಯಾಚರಣೆಯನ್ನು 2024 ರ ಸೆಪ್ಟೆಂಬರ್ 8 ರಂದು ನಡೆಸಲಾಯಿತು ಎಂದು ಅದು ಹೇಳಿದೆ. … Continued

ವೀಕ್ಷಿಸಿ..| ಕುಡಿದು ಅಮಲೇರಿ ನಡೆಯಲಾಗದ ಮಾಲೀಕನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದ ಗೂಳಿ ; ವೀಡಿಯೊ ಭಾರಿ ವೈರಲ್‌

2024 ರ ವರ್ಷದ ಮುಕ್ತಾಯ ಹಾಗೂ 2025 ಅನ್ನು ಸ್ವಾಗತಿಸುವ ಸಂಭ್ರಮಾಚರಣೆಯು ಅನಿರೀಕ್ಷಿತ ಮತ್ತು ಅಸಾಮಾನ್ಯ ಘಟನೆಗಳಿಂದ ತುಂಬಿತ್ತು, ತೆಲಂಗಾಣದ ಮದ್ಯದಂಗಡಿಯಲ್ಲಿ ದರೋಡೆಯ ಮಧ್ಯೆ ಪಾನಮತ್ತನಾಗಿ ಅಂಗಡಿಯಲ್ಲೇ ಮಲಗಿ ನಿದ್ದೆಹೋದ ನಂತರ ಸಿಕ್ಕಿಬಿದ್ದ ಕಳ್ಳನಿಂದ ಹಿಡಿದು ಮಹಾರಾಷ್ಟ್ರದ ರೇವದಂಡ ಬೀಚ್‌ನಲ್ಲಿ ಮರಳಿನಲ್ಲಿ ಸಿಲುಕಿದ್ದ ಫೆರಾರಿಯನ್ನು ಎತ್ತಿನ ಗಾಡಿಯೊಂದು ಎಳೆದು ಹೊತರುವವರೆಗೆ ಅನೇಕ ವಾಸ್ತವವಿಕ ಘಟನೆಗಳು ಕಾಲ್ಪನಿಕಕ್ಕಿಂತ … Continued

ಈ ಕೋಟ್ಯಧಿಪತಿಗಳು ಹಳೆಯ ಕಾರು ಓಡಿಸುತ್ತಾರೆ, ಹಳೆಯ ಬಟ್ಟೆಗಳನ್ನು ಧರಿಸುತ್ತಾರೆ…! ಯಾಕೆಂದರೆ…

ಸಾಮಾನ್ಯ ಗ್ರಹಿಕೆಗೆ ವಿರುದ್ಧವಾಗಿ, ಹೆಚ್ಚುತ್ತಿರುವ ಮಿಲಿಯನೇರ್‌ಗಳು ಅತಿರಂಜಿತ ಜೀವನಶೈಲಿಯನ್ನು ತಿರಸ್ಕರಿಸುತ್ತಿದ್ದಾರೆ ಮತ್ತು ‘ಮಿತವ್ಯಯದ’ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಾರ್ವರ್ಡ್ ಪದವೀಧರರು ಮತ್ತು ವೈಯಕ್ತಿಕ ಹಣಕಾಸು ಬ್ಲಾಗರ್, ಬಹು-ಮಿಲಿಯನ್-ಡಾಲರ್ ನಿವ್ವಳ ಮೌಲ್ಯದ ಸಂಪತ್ತಿನ ವಾಣಿಜ್ಯೋದ್ಯಮಿ ಶಾಂಗ್ ಸಾವೆದ್ರಾ, ಈ ಮಿತವ್ಯಯದ ಜೀವನಶೈಲಿಯನ್ನು ಅನುಸರಿಸುತ್ತಾರೆ. ಫಾರ್ಚೂನ್ ಪ್ರಕಾರ, ಸಾವೇದ್ರಾ ಮತ್ತು ಅವರ ಪತಿ ಲಾಸ್ ಏಂಜಲೀಸ್‌ನಲ್ಲಿ ನಾಲ್ಕು ಮಲಗುವ … Continued

ಕೋವಿಡ್ ಸಾಂಕ್ರಾಮಿಕದ 5 ವರ್ಷಗಳ ನಂತರ ಚೀನಾದಲ್ಲಿ ನಿಗೂಢ ವೈರಸ್ ನಿಂದ ಉಸಿರಾಟದ ತೊಂದರೆಯ ರೋಗ ಉಲ್ಬಣ…!

ನವದೆಹಲಿ: ಕೋವಿಡ್‌-19 (COVID-19) ಸಾಂಕ್ರಾಮಿಕ ರೋಗವು ಪ್ರಾರಂಭವಾದ ಐದು ವರ್ಷಗಳ ನಂತರ, ಚೀನಾ ಈಗ ಉಸಿರಾಟದ ತೊಂದರೆಗೆ ಕಾರಣವಾಗುವ ಹ್ಯುಮನ್‌ ಮೆಟಾಪ್ನ್ಯೂಮೋ ವೈರಸ್ (human metapneumovirus) ವಿರುದ್ಧ ಹೋರಾಡುತ್ತಿದೆ. ಡಚ್ ಸಂಶೋಧಕರು 2001 ರಲ್ಲಿ ಮೊದಲ ಬಾರಿಗೆ ಇದನ್ನು ಗುರುತಿಸಿದ್ದಾರೆ, ಈ ಎಚ್‌ಎಂಪಿವಿ (hMPV) ಇಂದ ಬರುವ ಈ ರೋಗವು ವಿಶೇಷವಾಗಿ ಚಳಿಗಾಲದ ಅವಧಿಯಲ್ಲಿ ಚೀನಾದಲ್ಲಿ … Continued

ಜೈಲಿನಲ್ಲಿರುವ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸರಿಗೆ ಜಾಮೀನು ನಿರಾಕರಿಸಿದ ಬಾಂಗ್ಲಾದೇಶ ಕೋರ್ಟ್‌

ಢಾಕಾ: ಕಳೆದ ವರ್ಷದ ನವೆಂಬರ್ 25ರಂದು ಬಾಂಗ್ಲಾದೇಶದಲ್ಲಿದ್ದ ಬಂಧಿಸಲ್ಪಟ್ಟಿದ್ದ ಮಾಜಿ ಇಸ್ಕಾನ್ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯವು ಗುರುವಾರ ಜಾಮೀನನ್ನು ತಿರಸ್ಕರಿಸಿದೆ. ಢಾಕಾದಿಂದ ಚಟ್ಟೋಗ್ರಾಮ್‌ಗೆ ತೆರಳಿದ್ದ ಸುಪ್ರೀಂ ಕೋರ್ಟ್‌ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಎಂ.ಡಿ. ಸೈಫುಲ್ ಇಸ್ಲಾಂ ಸುಮಾರು 30 … Continued

ರಷ್ಯಾಕ್ಕೆ ಹೋಗುತ್ತಿದ್ದ ಅಜರ್‌ ಬೈಜಾನ್ ಏರ್‌ ಲೈನ್ಸ್ ವಿಮಾನ ಪತನ ; 38 ಮಂದಿ ಸಾವು | ವಿಮಾನ ನೆಲಕ್ಕೆ ಅಪ್ಪಳಿಸಿದ ಕ್ಷಣದ ದೃಶ್ಯ ವೀಡಿಯೊದಲ್ಲಿ ಸೆರೆ

ಬುಧವಾರ ಕಝಾಕಿಸ್ತಾನ್‌ನ ಅಕ್ಟೌ ಪ್ರದೇಶದ ಬಳಿ ರಷ್ಯಾಕ್ಕೆ ತೆರಳುತ್ತಿದ್ದ ಅಜರ್‌ಬೈಜಾನಿ ವಿಮಾನ ಪತನಗೊಂಡಿದ್ದು, 38 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ಭಯಾನಕ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿನ ದೃಶ್ಯಗಳು ತೋರಿಸಿವೆ. ರಷ್ಯಾದ ಸುದ್ದಿ ಸಂಸ್ಥೆ ಇಂಟರ್‌ಫ್ಯಾಕ್ಸ್ ಪ್ರಕಾರ, ಅಜೆರ್ಬೈಜಾನಿ ಅಧಿಕಾರಿಗಳನ್ನು ಭೇಟಿಯಾದ ನಂತರ ಉಪ ಪ್ರಧಾನಿ ಮಂತ್ರಿ ಕನತ್ ಬೊಜುಂಬಾವ್ ಸಾವಿನ ಸಂಖ್ಯೆಯನ್ನು … Continued

ಅಫ್ಘಾನಿಸ್ತಾನದ ಮೇಲೆ ಪಾಕ್‌ ಸೇನೆಯ ವಾಯುದಾಳಿ ; 15 ಜನರು ಸಾವು, ಪ್ರತೀಕಾರದ ಪ್ರತಿಜ್ಞೆ ಮಾಡಿದ ತಾಲಿಬಾನ್

ಕಾಬೂಲ್ : ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದ ಬರ್ಮಾಲ್ ಜಿಲ್ಲೆಯ ಮೇಲೆ ಪಾಕಿಸ್ತಾನ ಸರಣಿ ವೈಮಾನಿಕ ದಾಳಿ (Pakistani Airstrike) ನಡೆಸಿದ್ದು, ಕನಿಷ್ಠ 15 ಜನರು ಸಾವಿಗೀಡಾಗಿದ್ದಾರೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ. ಡಿ. 24 ರ ರಾತ್ರಿ ಪಾಕಿಸ್ತಾನ ಸೇನೆ ಲಮನ್ ಸೇರಿದಂತೆ ಏಳು ಗ್ರಾಮಗಳನ್ನು ಗುರಿಯಾಗಿಸಿ ಭೀಕರ ದಾಳಿ ನಡೆದಿದೆ ಎಂದು … Continued

37 ಜನರನ್ನು ಕೊಂದು ತಿನ್ನಲಾಗಿತ್ತು ಎಂದ ಇಂಗ್ಲೆಂಡಿನ 4000 ವರ್ಷಗಳ ಹಳೆಯ ಹತ್ಯಾಕಾಂಡದ ಹೊಸ ಸಂಶೋಧನೆ..!

ನೈಋತ್ಯ ಇಂಗ್ಲೆಂಡ್‌ನಲ್ಲಿ 4,000 ವರ್ಷಗಳಷ್ಟು ಹಳೆಯದಾದ ಹತ್ಯಾಕಾಂಡವು ಸಂಭವನೀಯ ನರಮಾಂಸ ಭಕ್ಷಣೆಗೆ ಸಂಬಂಧಿಸಿದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.ಚಾರ್ಟರ್‌ಹೌಸ್ ವಾರೆನ್ ಫಾರ್ಮ್‌ನಲ್ಲಿ 50-ಅಡಿ ಆಳದ ಶಾಫ್ಟ್‌ನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ ಕನಿಷ್ಠ 37 ವ್ಯಕ್ತಿಗಳ ಛಿದ್ರಗೊಂಡ ಎಲುಬುಗಳು, ತಲೆಬುರುಡೆಗಳು ಮತ್ತು ಸ್ಲೈಸಿಂಗ್ ತುಂಡುಗಳು ಪತ್ತೆಯಾಗಿತ್ತು. ಹಬ್ಬದ ಸಮಯದಲ್ಲಿ ತಿನ್ನಬಹುದೆಂದು ಇವರನ್ನು ಹತ್ಯೆಗೈಯಲಾಗಿದೆ ಎಂದು … Continued

ವೀಡಿಯೊ : 9/11 ದಾಳಿ ಹೋಲುವ ರೀತಿಯಲ್ಲಿ ಉಕ್ರೇನ್‌ ನಿಂದ ಡ್ರೋಣ್‌ ದಾಳಿ ; ಹಾನಿಗೊಳಗಾದ ರಷ್ಯಾದ ಕಟ್ಟಡಗಳು

ಉಕ್ರೇನಿಯನ್ ಡ್ರೋನ್‌ಗಳು ರಷ್ಯಾದಲ್ಲಿನ ಬಹುಮಹಡಿ ಕಟ್ಟಡಗಳ ಮೇಲೆ ದಾಳಿ ನಡೆಸಿವೆ. ಇದು 2001 ರಲ್ಲಿ ಅಮೆರಿಕದ ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳನ್ನು ವಿಮಾನಗಳು ಢಿಕ್ಕಿ ಹೊಡೆಸಿದ 9/11 ದಾಳಿಯ ಹೋಲಿಕೆಯಂತೆ ಕಾಣುತ್ತದೆ. X ನಲ್ಲಿ ಹಂಚಿಕೊಳ್ಳಲಾದ ಪರಿಶೀಲಿಸದ ವೀಡಿಯೊಗಳಲ್ಲಿ, ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 500 ಮೈಲಿಗಳು (800 ಕಿಮೀ) ನಗರವಾದ ಕಜಾನ್‌ನಲ್ಲಿರುವ ಎರಡು … Continued

ನಂಬಲಾಗದ ವೀಡಿಯೊ ; ಸತ್ತ ಮೊಸಳೆಯನ್ನು ತಿನ್ನುವ ಶಾರ್ಕ್‌

ಹಸಿದ ಶಾರ್ಕ್ ಸತ್ತ ಮೊಸಳೆಯನ್ನು ತಿನ್ನುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ಘಟನೆ ಡಿಸೆಂಬರ್ 13 ರಂದು ಆಸ್ಟ್ರೇಲಿಯಾದ ನ್ಹುಲುನ್‌ಬುಯ್‌ನಲ್ಲಿರುವ ಟೌನ್ ಬೀಚ್‌ನಲ್ಲಿ ನಡೆದಿದೆ. ಆಲಿಸ್ ಬೆಡ್‌ವೆಲ್ ಎಂಬವರು ಅಸಾಮಾನ್ಯ ಘಟನೆಯ ವೀಡಿಯೊ ಹಂಚಿಕೊಂಡಿದ್ದಾರೆ. ಬೆನ್ನು ಅಡಿಗೆ ಮಾಡಿ ಮಲಗಿ ತಲೆಯು ನೀರಿನಲ್ಲಿರುವ ಸ್ಥಿತಿಯಲ್ಲಿ ಮೊಸಳೆ ಇರುವಾಗ ವೀಡಿಯೊ ಪ್ರಾರಂಭವಾಗುತ್ತದೆ. ಶೀಘ್ರದಲ್ಲೇ, ದೊಡ್ಡ ಶಾರ್ಕ್ ನಿಧಾನವಾಗಿ … Continued