ಕಾರು ಅಪಘಾತ ; ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿಗೆ ಗಾಯ

ಮುಂಬೈ: ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿ ಅವರು ಪ್ರಯಾಣಿಸುತ್ತಿದ್ದ ಕಾರು ಮುಂಬೈನಲ್ಲಿ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಶನಿವಾರ ಮಧ್ಯಾಹ್ನ ಸನ್‌ಬರ್ನ್ ಫೆಸ್ಟಿವಲ್‌ಗೆ ತೆರಳುತ್ತಿದ್ದಾಗ, ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮದ್ಯಪಾನ ಮಾಡಿದ್ದ ಚಾಲಕನೊಬ್ಬ ಚಲಾಯಿಸುತ್ತಿದ್ದ ವಾಹನವು ನೋರಾ … Continued

2026ರ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯವಾಣಿ ; ಜಗತ್ತಿಗೆ ಕಾದಿದೆಯೇ ಕಠಿಣ ಕಾಲ…?

ಹೊಸ ವರ್ಷದ ಹೊಸ್ತಿಲಿನಲ್ಲಿರುವಾಗ ಪ್ರಖ್ಯಾತ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಾಡಾಮಸ್ (Nostradamus) 2026ರ ಬಗ್ಗೆ ನುಡಿದಿದ್ದಾರೆ ಎನ್ನಲಾದ ಭವಿಷ್ಯವಾಣಿಗಳು ಚರ್ಚೆಗೆ ಗ್ರಾಸವಾಗಿವೆ. 1503ರಲ್ಲಿ ಫ್ರಾನ್ಸ್‌ನ ಸೈಂಟ್-ರೆಮಿಯಲ್ಲಿ ಜನಿಸಿದ ಮಿಚೆಲ್ ಡಿ ನೋಸ್ಟ್ರೆಡೇಮ್ (ನಾಸ್ಟ್ರಾಡಾಮಸ್), ಒಬ್ಬ ವೈದ್ಯ ಮತ್ತು ಖಗೋಳಶಾಸ್ತ್ರಜ್ಞರಾಗಿದ್ದರು. ಇವರು ಬರೆದ ‘ಲೆಸ್ ಪ್ರೊಫೆಟೀಸ್’ (Les Prophéties) ಎಂಬ ಪುಸ್ತಕದಲ್ಲಿ ನೂರಾರು ಭವಿಷ್ಯವಾಣಿಗಳಿವೆ. ಇತಿಹಾಸಕಾರರ ಪ್ರಕಾರ, ಫ್ರೆಂಚ್ … Continued

ಕರ್ನಾಟಕದ ಹಲವೆಡೆ ತೀವ್ರ ಶೀತ ಗಾಳಿ ; ಇಂದು 7 ಜಿಲ್ಲೆಗಳಿಗೆ ಆರೆಂಜ್‌, 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶದಲ್ಲಿ ಭಾರಿ ಇಳಿಕೆಯಾಗುತ್ತಿದ್ದು, ತೀವ್ರ ಚಳಿ ಬೀಳುತ್ತಿದೆ. ಕರ್ನಾಟಕದ (Karnataka Weather) ಹಲವು ಜಿಲ್ಲೆಗಳಿಗೆ ಭಾನುವಾರ (ಡಿ.21) ತೀವ್ರ ಶೀತ ಗಾಳಿ(Cold Wave) ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 7 ಜಿಲ್ಲೆಗಳಿಗೆ ಆರೆಂಜ್‌ ಹಾಗೂ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ತೀವ್ರ ಶೀತ ಗಾಳಿ ಹಿನ್ನೆಲೆಯಲ್ಲಿ ಬೀದರ, … Continued

‘ಮೆಸ್ಸಿ ಜೊತೆ ಫೋಟೋ ತೆಗೆದರೆ 30 ಲಕ್ಷ ರೂ.’: ಆಯೋಜಕ ಸತಾದ್ರು ದತ್ತ ಕೋಲ್ಕತ್ತಾ ಮನೆ ಮೇಲೆ ದಾಳಿ

ಕೋಲ್ಕತ್ತಾ: ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲ ಮತ್ತು ಅವ್ಯವಸ್ಥೆಯ ತನಿಖೆ ಈಗ ಹೊಸ ತಿರುವು ಪಡೆದುಕೊಂಡಿದೆ. ಕೇವಲ ಜನಸಂದಣಿಯ ನಿರ್ವಹಣೆಯ ಲೋಪವಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ಭಾರೀ ಆರ್ಥಿಕ ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಶುಕ್ರವಾರ … Continued

3 ಕೋಟಿ ವಿಮಾ ಹಣಕ್ಕಾಗಿ ಹಾವು ಬಳಸಿ ತಂದೆಯನ್ನೇ ಕೊಲೆ ಮಾಡಿದ ಪುತ್ರರು ; ಇದು ಬೆಳಕಿಗೆ ಬಂದಿದ್ದೇ ರೋಚಕ

ತಿರುವಳ್ಳೂರು (ತಮಿಳುನಾಡು): ಆರಂಭದಲ್ಲಿ ಹಾವಿನ ಕಚ್ಚಿದ್ದರಿಂದ ಸಾವು ಸಂಭವಿಸಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ಕೋಲ್ಡ್‌ ಬ್ಲಡೆಡ್‌ ಮರ್ಡರ್‌ ಎಂದು ಗೊತ್ತಾದ ನಂತರ ಪೊಲೀಸರೇ ದಂಗಾಗಿದ್ದಾರೆ. ದೊಡ್ಡ ಮೊತ್ತದ ವಿಮೆ ಹಣವನ್ನು ಪಡೆಯಲು ಸ್ವಂತ ಮಕ್ಕಳೇ ತಂದೆಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪೋತತ್ತೂರುಪೆಟ್ಟೈ ಗ್ರಾಮದ ನಿವಾಸಿ, ಸರ್ಕಾರಿ ಶಾಲೆಯ ಪ್ರಯೋಗಾಲಯ … Continued

ಟಿ20 ಕ್ರಿಕೆಟ್‌ ವಿಶ್ವಕಪ್ 2026 : 15 ಸದಸ್ಯರ ಭಾರತದ ತಂಡ ಪ್ರಕಟ ; ಅಕ್ಷರ್ ಪಟೇಲ್ ಉಪನಾಯಕ

ನವದೆಹಲಿ : 2026ರ ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಗೆ ವೇದಿಕೆ ಸಿದ್ಧವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬಲಿಷ್ಠ ಟೀಂ ಇಂಡಿಯಾವನ್ನು ಇಂದು, ಶನಿವಾರ ಪ್ರಕಟಿಸಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ ಯಾದವ್ ತಂಡದ ನಾಯಕರಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕನ … Continued

ವಾಟ್ಸಾಪ್ ಬಳಕೆದಾರರೇ ಎಚ್ಚರ..: ಹೊಸ ವಂಚನೆ ತಂತ್ರದಿಂದ ನಿಮ್ಮ ಅಕೌಂಟ್‌ ಹ್ಯಾಕರ್ ಪಾಲಾಗಬಹುದು…

ವ್ಯಾಟ್ಸಾಪ್ ಬಳಕೆದಾರರಿಗೆ ವಂಚಕರಿಂದ ಈಗ ಮತ್ತೊಂದು ಸೈಬರ್‌ ವಂಚಕರ ಭಯ ಎದುರಾಗಿದೆ. “ಘೋಸ್ಟ್ ಪೇರಿಂಗ್” ಎಂಬ ಹೊಸ ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಜನಪ್ರಿಯ ಸಂದೇಶ ರವಾನೆ ಅಪ್ಲಿಕೇಶನ್ ಆದ ವಾಟ್ಸಾಪ್ (WhatsApp) ಬಳಕೆದಾರರನ್ನು ಗುರಿಯಾಗಿಸಿಕೊಂಡು ಹೊಸ ಮಾದರಿಯ ಸೈಬರ್ ದಾಳಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ‘ಘೋಸ್ಟ್ ಪೇರಿಂಗ್’ (GhostPairing) ಎಂದು ಕರೆಯಲಾಗುವ ಈ … Continued

ದೆಹಲಿ ವಿಮಾನ ನಿಲ್ದಾಣದಲ್ಲಿ ಪೈಲಟ್‌ನಿಂದ ಪ್ರಯಾಣಿಕನ ಮೇಲೆ ಹಲ್ಲೆ ಆರೋಪ ; ಡ್ಯೂಟಿಯಿಂದ ತೆಗೆದ ವಿಮಾನಯಾನ ಸಂಸ್ಥೆ

ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್ ಒಬ್ಬರು ಸ್ಪೈಸ್‌ಜೆಟ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬೋರ್ಡಿಂಗ್ ಕ್ಯೂ (ಸಾಲನ್ನು) ದಾಟಿ ಮುಂದೆ ಹೋಗಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಅಂಕಿತ್ ದಿವಾನ ಎಂಬ ಪ್ರಯಾಣಿಕ, ತಮ್ಮ ಮುಖದ ಮೇಲೆ … Continued

ರೈಲು ಡಿಕ್ಕಿ : ಎಂಟು ಆನೆಗಳು ಸಾವು ; ಹಳಿ ತಪ್ಪಿದ ರಾಜಧಾನಿ ಎಕ್ಸ್‌ಪ್ರೆಸ್‌ ನ 5 ಬೋಗಿಗಳು

ಹೋಜೈ (ಅಸ್ಸಾಂ): ಶನಿವಾರ ಮುಂಜಾನೆ ಅಸ್ಸಾಂನ ಹೋಜೈ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಸೈರಾಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವಿಗೀಡಾಗಿದ್ದು, ಒಂದು ಆನೆ ತೀವ್ರವಾಗಿ ಗಾಯಗೊಂಡಿದೆ. ಡಿಕ್ಕಿಯ ರಭಸಕ್ಕೆ ರೈಲಿನ ಐದು ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್, ಯಾವುದೇ ಪ್ರಯಾಣಿಕರಿಗೆ ಪ್ರಾಣಾಪಾಯ ಸಂಭವಿಸಿಲ್ಲ ಎಂದು … Continued

ನ್ಯಾಷನಲ್ ಹೆರಾಲ್ಡ್ ಪ್ರಕರಣ ; ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಇ.ಡಿ.

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧದ ದೂರನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಜಾರಿ ನಿರ್ದೇಶನಾಲಯ (ED) ಈಗ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಅರ್ಜಿಯು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಲೈವ್‌ … Continued