ಖರ್ಗೆ, ರಾಹುಲ್ ಗಾಂಧಿಗೆ 100 ಕೋಟಿ ರೂ. ಮಾನನಷ್ಟ ನೋಟಿಸ್ ಕಳುಹಿಸಿದ ಬಿಜೆಪಿ ನಾಯಕ ವಿನೋದ ತಾವ್ಡೆ

ನವದೆಹಲಿ: ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ ತಾವ್ಡೆ ಅವರು ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮೂವರು ಹಿರಿಯ ಕಾಂಗ್ರೆಸ್ ನಾಯಕರಿಗೆ 100 ಕೋಟಿ ರೂಪಾಯಿ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. . ಬುಧವಾರದ ಚುನಾವಣೆಗೆ ಮುನ್ನ ವೋಟಿಗಾಗಿ … Continued

ವೀಡಿಯೊ..| ಮರದ ಕೊಂಬೆಯಲ್ಲಿ ನೇತಾಡುತ್ತಿದ್ದ ಹಾವನ್ನು ನೀರಿನಿಂದ ಜಿಗಿದು ಕಚ್ಚಿ ಹಿಡಿದು ಮೀನು ; ಮತ್ತೊಂದು ಮೀನಿನ ಎಂಟ್ರಿ : ಮುಂದೇನಾಯ್ತು…ಅಚ್ಚರಿ !

ಪ್ರತಿಯೊಂದು ಜೀವಿಗೂ ಪ್ರಕೃತಿ ವಿಶೇಷತೆಯನ್ನು ನೀಡಿದೆ. ಇದರಿಂದಾಗಿಯೇ ಪ್ರತಿಯೊಂದು ಜೀವಿಯು ಇನ್ನೊಂದಕ್ಕಿಂತ ಭಿನ್ನವಾಗಿ ಕಾಣುತ್ತದೆ. ಒಂದು ಪ್ರಾಣಿಗೆ ಬೇಟೆಗಾರನಾಗಿ ಪರಿಣಮಿಸುವ ಪ್ರಾಣಿ ಮತ್ತೊಂದು ಪ್ರಾಣಿಯ ಬೇಟೆಗೆ ತಾನೇ ಬಲಿಯಾಗುತ್ತದೆ. ಇದು ಪ್ರಕೃತಿಯ ನಿಯಮವಾಗಿದೆ. ಇದರಲ್ಲಿ ಕೇವಲ ಬಲಶಾಲಿ ಮಾತ್ರವಾದರೆ ಸಾಲದು. ಬಲದ ಜೊತೆಗೆ ಬುದ್ಧಿವಂತಿಕೆಯೂ ಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಅದರ ಮೂಲಕ … Continued

ತಮಾಷೆಗೆ ಕೆನ್ನೆಗೆ ಹೊಡೆದದ್ದು 3 ವರ್ಷದ ಪುಟ್ಟ ಬಾಲಕಿಯ ಪ್ರಾಣವನ್ನೇ ತೆಗೆಯಿತು ; ನಂತರ ಆತ ಮಾಡಿದ್ದೇನು..?

ಮುಂಬೈ : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 38 ವರ್ಷದ ವ್ಯಕ್ತಿಯೊಬ್ಬ ತನ್ನ 3 ವರ್ಷದ ಪುಟ್ಟ ಸೊಸೆಗೆ ಕೊನ್ನೆಗೆ ಹೊಡೆದ ನಂತರ ಆಕೆ ಸಾವಿಗೀಡಾಗಿದ್ದು, ನಂತರ ಆಕೆಯ ದೇಹವನ್ನು ಸುಡಲು ಯತ್ನಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಥಾಣೆ ಜಿಲ್ಲೆಯ ಉಲ್ಹಾಸ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನವೆಂಬರ್ 18 ರಂದು ಮಗು ನಾಪತ್ತೆಯಾದ … Continued

ಗಯಾನಾದಲ್ಲಿ ‘ರಾಮ ಭಜನೆ’ಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ; ಭಜನೆಗೆ ತಾಳ ಬಾರಿಸಿದ ವೀಡಿಯೊ ವೈರಲ್ | ವೀಕ್ಷಿಸಿ

ಕೆರಿಬಿಯನ್ ರಾಷ್ಟ್ರಕ್ಕೆ ಎರಡು ದಿನಗಳ ಐತಿಹಾಸಿಕ ಭೇಟಿಯ ಭಾಗವಾಗಿ ಗುರುವಾರ ಗಯಾನಾದ ಜಾರ್ಜ್‌ಟೌನ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮ ಭಜನೆಯಲ್ಲಿ ಪಾಲ್ಗೊಂಡರು. ಅಪರೂಪದ ಮತ್ತು ಹೃದಯಸ್ಪರ್ಶಿ ಕ್ಷಣದಲ್ಲಿ, ಪ್ರಧಾನಮಂತ್ರಿಯವರು ರಾಮ ಭಜನೆಗೆ  ತಾಳ (ಭಾರತೀಯ ಸಾಂಪ್ರದಾಯಿಕ ಸಂಗೀತ ವಾದ್ಯ) ಬಾರಿಸುವ ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಜನರ … Continued

ಅಮೆರಿಕದಲ್ಲಿ ಜನ್ಮದಿನಾಚರಣೆ ಸಂಭ್ರಮಾಚರಣೆ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಭಾರತೀಯ ವಿದ್ಯಾರ್ಥಿ ಸಾವು

ಭಾರತದ 23 ವರ್ಷದ ವಿದ್ಯಾರ್ಥಿಯೊಬ್ಬ ಅಮೆರಿಕದಲ್ಲಿ ತನ್ನ ಜನ್ಮದಿನ ಆಚರಣೆ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಸಾವಿಗೀಡಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ನವೆಂಬರ್ 13 ರಂದು ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಆರ್ಯನ್ ರೆಡ್ಡಿ ಜಾರ್ಜಿಯಾದ ಅಟ್ಲಾಂಟಾದಲ್ಲಿರುವ ಮನೆಯಲ್ಲಿ ಸ್ನೇಹಿತರೊಂದಿಗೆ ತಮ್ಮ ಜನ್ಮದಿನ ಸಂಬ್ರಮಾಚಾರಣೆಯಲ್ಲಿದ್ದಾಗ ಈ ಘಟನೆ ನಡೆದಿದೆ. ಜನ್ಮದಿನದ ಆಚರಣೆಯ ಸಮಯದಲ್ಲಿ, … Continued

10 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ರಾಯ್ಪುರ: ಛತ್ತೀಸ್‌ಗಡದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 10 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಸುಕ್ಮಾ ಜಿಲ್ಲೆಯಲ್ಲಿ ಈ ಎನ್‌ಕೌಂಟರ್‌ ನಡೆದಿದ್ದು, ಈ ವೇಳೆ ಹತ ನಕ್ಸಲರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ನಕ್ಸಲೀಯರು ಒಡಿಶಾ ಮೂಲಕ ಛತ್ತೀಸ್‌ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಕಾರ್ಯಾಚರಣೆ ಆರಂಭಿಸಿದೆ. ಇಂದು, ಶುಕ್ರವಾರ ಬೆಳ್ಳಂ ಬೆಳಗ್ಗೆ … Continued

ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಭಾರೀ ಕುಸಿತ: 2.19 ಲಕ್ಷ ಕೋಟಿ ರೂ.ಗಳಷ್ಟು ನಷ್ಟ…!

ನವದೆಹಲಿ : ಪಟ್ಟಿ ಮಾಡಲಾದ ಎಲ್ಲಾ ಹತ್ತು ಅದಾನಿ ಸಮೂಹ ಸಂಸ್ಥೆಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು ಗುರುವಾರ 2.19 ಲಕ್ಷ ಕೋಟಿ ರೂ.ಗಳಷ್ಟು ಕುಸಿದಿದೆ. ಇದು ಅದಾನಿ ಸಮೂಹ ಸಂಸ್ಥೆಗಳು ಅಮೆರಿಕದ ಜನವರಿ 2023ರಲ್ಲಿ ಹಿಂಡೆನ್‌ಬರ್ಗ್ ವರದಿ ಪ್ರಕಟವಾದ ನಂತರ ಕಳೆದುಕೊಂಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. . ಸೌರ ವಿದ್ಯುತ್ ಒಪ್ಪಂದಗಳಿಗೆ ಅನುಕೂಲಕರವಾದ ಷರತ್ತುಗಳಿಗೆ ಬದಲಾಗಿ … Continued

ಸೆಪ್ಟೆಂಬರಿನಲ್ಲಿ 1 ಕೋಟಿ ಗ್ರಾಹಕರನ್ನು ಕಳೆದುಕೊಂಡ ಜಿಯೋ, ಏರ್‌ ಟೆಲ್, ವೊಡಾಫೋನ್ ಐಡಿಯಾ ; ಆದ್ರೆ ಬಿ ಎಸ್‌ ಎನ್‌ ಎಲ್‌ ಚಂದಾದಾರರು ಹೆಚ್ಚಳ…!

ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸೆಪ್ಟೆಂಬರ್‌ನಲ್ಲಿ ಒಂದು ಕೋಟಿಗೂ ಹೆಚ್ಚು ವೈರ್‌ಲೆಸ್ ಚಂದಾದಾರರನ್ನು ಕಳೆದುಕೊಂಡಿವೆ, ಇದೇವೇಳೆ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಸುಮಾರು 8.5 ಲಕ್ಷ ಮೊಬೈಲ್ ಬಳಕೆದಾರರನ್ನು ಹೆಚ್ಚಿಸಿಕೊಂಡು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ಟ್ರಾಯ್‌ (TRAI) ಬಿಡುಗಡೆ ಮಾಡಿದ … Continued

ವೀಡಿಯೊ..| : ಉಗ್ರರ ದಾಳಿಯಲ್ಲಿ ಸತ್ತ ತನ್ನ ಸೈನಿಕರ ಶವಗಳನ್ನು ಕತ್ತೆಗಳ ಮೇಲೆ ಸಾಗಾಟ ಮಾಡಿ ಅಗೌರವ ತೋರಿದ ಪಾಕಿಸ್ತಾನದ ಆಡಳಿತ…!

ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದ ಸೈನಿಕರನ್ನು ಪಾಕಿಸ್ತಾನದ ಆಡಳಿತವು ವಾಹನಗಳ ಬದಲಿಗೆ ಕತ್ತೆಗಳ ಮೇಲೆ ಸಾಗಿಸುತ್ತಿದೆ. ಪಾಕಿಸ್ತಾನಿ ಸೇನೆಯ ಉನ್ನತ ಕಮಾಂಡರ್‌ಗಳನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ವೀಡಿಯೊಗಳು ಹೊರಹೊಮ್ಮಿದ ನಂತರವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಪಾಕಿಸ್ತಾನ ಸೇನೆಯ 100 ಕ್ಕೂ ಹೆಚ್ಚು ಸೈನಿಕರು ಭಯೋತ್ಪಾದಕ … Continued

ಅಮೆರಿಕದ ಲಂಚದ ಆರೋಪ ಆಧಾರರಹಿತ ಎಂದ ತಿರಸ್ಕರಿಸಿದ ಅದಾನಿ ಗ್ರೂಪ್‌ : ಕಾನೂನು ಕ್ರಮದ ಪರಿಶೀಲನೆ

ನವದೆಹಲಿ; ತನ್ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಇತರ ಪ್ರಮುಖ ಕಾರ್ಯನಿರ್ವಾಹಕರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಮಾಡಿದ ಲಂಚ ಮತ್ತು ಭದ್ರತಾ ವಂಚನೆಯ ಆರೋಪಗಳನ್ನು ಅದಾನಿ ಗ್ರೂಪ್ ಬಲವಾಗಿ ನಿರಾಕರಿಸಿದೆ. ಆರೋಪಗಳನ್ನು “ಆಧಾರರಹಿತ” ಎಂದು ತಳ್ಳಿಹಾಕಿದೆ ಮತ್ತು ಇದು ಸಮಗ್ರತೆ ಮತ್ತು ಅನುಸರಣೆಯ ಅತ್ಯುನ್ನತ ಮಾನದಂಡಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ. ಆರೋಪಗಳ ಬಗ್ಗೆ ಸಾಧ್ಯವಿರುವ ಎಲ್ಲಾ … Continued