ಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ

ಭೂಪಾಲ್‌: ಮುಂದಿನ ತಿಂಗಳು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 88 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ ನಂತರ, ಶುಕ್ರವಾರ ರಾಜ್ಯದ ಹಲವು ಸ್ಥಳಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಪಕ್ಷದ ಕಾರ್ಯಕರ್ತರು ಕೆಲವು ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದರ ವಿರುದ್ಧ ಮತ್ತು ಕೆಲವರಿಗೆ ಟಿಕೆಟ್ ನಿರಾಕರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುರ್ಹಾನ್‌ಪುರ, ಶಾಜಾಪುರ ಜಿಲ್ಲೆಯ ಶುಜಾಲ್‌ಪುರ, ನರ್ಮದಾಪುರಂ … Continued

ವೀಡಿಯೊ.. | ಗಗನಯಾನ​ದ ಪರೀಕ್ಷಾ ಹಾರಾಟ ಯಶಸ್ವಿ : ಸಮುದ್ರದಲ್ಲಿ ಇಳಿದ ಸಿಬ್ಬಂದಿ ʼಎಸ್ಕೇಪ್ ಮಾಡ್ಯೂಲ್ ʼ

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾತ್ರೆಯ ಮೊದಲ ಹೆಗ್ಗುರುತಾಗಿ ಶ್ರೀಹರಿಕೋಟಾದಿಂದ ಇಸ್ರೋ ತನ್ನ ಮೊದಲ ಮಾನವ ಬಾಹ್ಯಾಕಾಶ ಯಾನ ‘ಗಗನಯಾನʼಕ್ಕಾಗಿ ಮಾನವರಹಿತ ಪರೀಕ್ಷಾ ಹಾರಾಟವನ್ನು ಇಂದು, ಶನಿವಾರ ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶ ವಾಹನದ ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯ ದಕ್ಷತೆಯನ್ನು ಪರೀಕ್ಷಿಸಲು ಈ ʼಫ್ಲೈಟ್ ಅಬಾರ್ಟ್ʼ ಪರೀಕ್ಷೆಯನ್ನು ನಡೆಸಲಾಯಿತು, ತುರ್ತು ಸಂದರ್ಭದಲ್ಲಿ ಗಗನಯಾತ್ರಿಗಳು ವಾಹನದಿಂದ ಹೊರಹೋಗಬೇಕಾದ ಸಂದರ್ಭದಲ್ಲಿ … Continued

ರಾಜಸ್ಥಾನ ವಿಧಾನಸಭೆ ಚುನಾವಣೆ : ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ; ಬಿಜೆಪಿ-ಕಾಂಗ್ರಸ್ಸಿನಲ್ಲಿ ಯಾರಿಗೆ ಸಿಗಲಿದೆ ಬಹುಮತ..?

ಮುಂದಿನ ತಿಂಗಳು ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಈ ಬಾರಿ ಅಧಿಕಾರಕ್ಕೆ ಬರಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ರಾಜಸ್ಥಾನದ 200 ವಿಧಾಸಭಾ ಸ್ಥಾನಗಳಲ್ಲಿ ಬಿಜೆಪಿ ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ 73 ಸ್ಥಾನಗಳಿಗೆ ಹೋಲಿಸಿದರೆ ಈ ಬಾರಿ 125 ಸ್ಥಾನಗಳನ್ನು ಗೆಲ್ಲಬಹುದು ಎಂದು … Continued

“ಭಾರತವು ನಂಬಲಾಗದಷ್ಟು ಕಷ್ಟಕರವನ್ನಾಗಿ ಮಾಡಿದೆ…”: ರಾಜತಾಂತ್ರಿಕ ಗದ್ದಲದ ನಡುವೆ ಕೆನಡಾ ಪ್ರಧಾನಿ ಟ್ರುಡೊ

ಒಟ್ಟಾವಾ: ಕೆನಡಾದ ರಾಜತಾಂತ್ರಿಕರ ಮೇಲೆ ಭಾರತ ಸರ್ಕಾರದ ದಬ್ಬಾಳಿಕೆಯು ಎರಡೂ ದೇಶಗಳಲ್ಲಿನ ಲಕ್ಷಾಂತರ ಜನರಿಗೆ ಸಾಮಾನ್ಯ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಶುಕ್ರವಾರ ಹೇಳಿದ್ದಾರೆ. ಏಕಪಕ್ಷೀಯವಾಗಿ ತಮ್ಮ ರಾಜತಾಂತ್ರಿಕ ಸಿಬ್ಬಂದಿ ಹಿಂತೆಗೆದುಕೊಳ್ಳುವಂತೆ ಭಾರತದ ಸೂಚನೆಯ ನಂತರ 41 ರಾಜತಾಂತ್ರಿಕರನ್ನು ಹಿಂಪಡೆದಿರುವುದಾಗಿ ಕೆನಡಾ ಹೇಳಿದ ಒಂದು ದಿನದ ನಂತರ ಟ್ರೂಡೊ ಮಾತನಾಡಿದ್ದಾರೆ. ಕೆನಡಾದಲ್ಲಿ ಜೂನ್‌ನಲ್ಲಿ … Continued

ವಿಶ್ವಕಪ್ 2023: ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಿದ ಆಸ್ಟ್ರೇಲಿಯಾ

ಬೆಂಗಳೂರು : ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ 62 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಕಳೆದ ವಾರ ಅಹಮದಾಬಾದ್‌ನಲ್ಲಿ ಭಾರತದ ವಿರುದ್ಧ ಸೋತ ನಂತರ ನಡೆಯುತ್ತಿರುವ ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಪಾಕಿಸ್ತಾನವು ಸತತ … Continued

ಅರಬ್ಬಿ ಸಮುದ್ರದಲ್ಲಿ ಅಬ್ಬರಿಸಲಿದೆ ‘ತೇಜ್’ ಚಂಡಮಾರುತ : ಇದರಿಂದ ಭಾರತಕ್ಕೇನು ತೊಂದರೆ ?

ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಈ ವರ್ಷದ 2ನೇ ಚಂಡ ಮಾರುತ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ಶುರುವಾಗಿರುವ ಈ ಚಂಡಮಾರುತಕ್ಕೆ ‘ತೇಜ್’ ಎಂದು ಹೆಸರಿಡಲಾಗಿದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಈ ಚಂಡಮಾರುತ ಸೃಷ್ಟಿಯಾಗಿದೆ. … Continued

ಸೂಪರ್‌ ಶ್ವಾನ…: ಐದನೇ ಮಹಡಿಯಿಂದ ಕೆಳಕ್ಕೆ ಜಿಗಿದ ನಾಯಿ ; ಮುಂದೇನಾಯ್ತು ನೋಡಿ

ಮನುಷ್ಯ ಎತ್ತರದ ಕಟ್ಟಡದ ಮೇಲಿನಿಂದ ವಿವಿಧ ಸಾಹಸಗಳನ್ನು ಮಾಡುವುದನ್ನು ನೀವೆಲ್ಲಾ ನೋಡಿರ್ತಿರಾ. ಆದ್ರೆ ಅದೇ ರೀತಿ ನಾಯಿಯೊಂದು ಸಾಹಸವನ್ನು ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಆ ವೀಡಿಯೊ ಸಾಕಷ್ಟು ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣ X ನಲ್ಲಿ ಕಪ್ಪು ಬಣ್ಣದ ಬೀದಿ ನಾಯಿಯೊಂದು ಬಹುಮಹಡಿ ಕಟ್ಟಡದಿಂದ ಜಿಗಿಯುವ ಸಣ್ಣ ವೀಡಿಯೊ ಕ್ಲಿಪ್‌ ಈಗ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ … Continued

ದರ್ಶನ್ ಹೀರಾನಂದಾನಿಗೆ ಅಫಿಡವಿಟ್ ಸಹಿ ಹಾಕುವಂತೆ ಪಿಎಂಒ ಒತ್ತಡ : ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಎರಡು ಪುಟಗಳ ಪತ್ರಿಕಾ ಪ್ರಕಟಣೆಯಲ್ಲಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಸ್ಫೋಟಕ ಅಫಿಡವಿಟ್‌ಗೆ ಉತ್ತರಿಸಿದ್ದಾರೆ. ಪ್ರಧಾನಿ ಕಾರ್ಯಾಲಯವು ಈಗ “ಮಾಧ್ಯಮಗಳಿಗೆ ಸೋರಿಕೆಯಾದ” ಪತ್ರಕ್ಕೆ ಸಹಿ ಹಾಕುವಂತೆ ಹಿರಾನಂದಾನಿ ಅವರನ್ನು ಒತ್ತಾಯಿಸಿದೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ, ಮಹುವಾ ಮೊಯಿತ್ರಾ ಅವರು ಸಂಸತ್ತಿನ ನೈತಿಕ ಸಮಿತಿ … Continued

ವಿಶ್ವಕಪ್‌ : ಕೊಹ್ಲಿ 48ನೇ ಶತಕ, ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಏಳು ವಿಕೆಟ್‌ಗಳ ಭರ್ಜರಿ ಜಯ

ಪುಣೆ: ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಓಟ ಅಡೆತಡೆಯಿಲ್ಲದೆ ಮುಂದುವರಿದಿದೆ. ಗುರುವಾರ ರಾತ್ರಿ ಪುಣೆಯ ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತದ ತಂಡವು ಬಾಂಗ್ಲಾದೇಶದ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿದೆ. ಬಾಂಗ್ಲಾದೇಶದ ಎಂಟು ವಿಕೆಟ್‌ಗೆ 256 ರನ್‌ಗಳಿಗೆ ಉತ್ತರವಾಗಿ ಭಾರತವು 41.3 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 261 ರನ್ ಗಳಿಸಿ ಗೆಲುವಿನ … Continued