ಬೈಇಲೆಕ್ಷನ್‌ : ನಂದಿಗ್ರಾಮದಲ್ಲಿ ಶೇ.75ಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಗೆಲುವು, ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ಟಿವಿಕೆಗೆ ಮುನ್ನಡೆ

ನವದೆಹಲಿ: ಪಶ್ಚಿಮ ಬಂಗಾಳದ ಪ್ರತಿಷ್ಠೆಯ ಕಣವಾಗಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭೂತಪೂರ್ವ ಗೆಲುವು ಸಾಧಿಸಿದ್ದು, ಕ್ಷೇತ್ರವನ್ನು ತನ್ನ ಹಿಡಿತದಲ್ಲೇ ಉಳಿಸಿಕೊಂಡಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮಾಜಿ ಆಪ್ತ ಸಹಾಯಕ ಚಂದ್ರನಾಥ ರಾಥ್ ಅವರ ತಾಯಿ ಹಾಗೂ ಬಿಜೆಪಿ ಅಭ್ಯರ್ಥಿ ಹಸಿನ್ ರಾಣಿ ರಾಥ್ ಅವರು ತಮ್ಮ ಸಮೀಪದ … Continued

ಸಿಎಂಆರ್‌ಎಲ್‌–ಎಕ್ಸಾಲೋಜಿಕ್ ಪ್ರಕರಣ: ಮಾಜಿ ಸಿಎಂ ಪಿಣರಾಯಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೇರಳ ಹೈಕೋರ್ಟ್ ಆದೇಶ

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಸೇರಿದಂತೆ ಸಿಎಂಆರ್‌ಎಲ್‌–ಎಕ್ಸಾಲೋಜಿಕ್ ಪ್ರಕರಣದಲ್ಲಿ ಶಂಕಿತ ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿ ಕಾನೂನು ಪ್ರಕಾರ ತನಿಖೆ ಮುಂದುವರಿಸುವಂತೆ ರಾಜ್ಯದ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ವಿಜಿಲೆನ್ಸ್ ಆ್ಯಂಡ್ ಆ್ಯಂಟಿ ಕರಪ್ಷನ್ ಬ್ಯೂರೊ–ವಿಎಸಿಬಿ) ನಿರ್ದೇಶಕರಿಗೆ ಕೇರಳ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. … Continued

‘ಫ್ಲೈದುಬೈ’ ದುರಂತ ತಪ್ಪಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್‌ಗೆ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿ ಘೋಷಣೆ

ಟೆಲ್ ಅವೀವ್: ಇಸ್ರೇಲಿನ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನವನ್ನು ಅಪಹರಿಸಲು ನಡೆದಿತ್ತೆನ್ನಲಾದ ಯತ್ನದ ವೇಳೆ ಅಸಾಧಾರಣ ಧೈರ್ಯ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿದ ಭಾರತೀಯ ಮೂಲದ ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರಿಗೆ ಇಸ್ರೇಲ್‌ನ ಅತ್ಯುತ್ತನ ಪ್ರಶಸ್ತಿಯಾದ ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ. ಗಂಭೀರ ಗಾಯಗಳಾಗಿ ಅಪಾರ ಪ್ರಮಾಣದ ರಕ್ತಸ್ರಾವವಾಗಿದ್ದರೂ ಎದೆಗುಂದದೆ … Continued

ಭಾರತದ ಐಟಿ ಕಂಪನಿಗಳಿಗೆ ಅಮೆರಿಕದಿಂದ ಬಿಗ್ ಶಾಕ್ : ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು

ವಾಷಿಂಗ್ಟನ್: ಭಾರತೀಯ ಐಟಿ ದಿಗ್ಗಜ ಕಂಪನಿಗಳಿಗೆ ಭಾರಿ ಶಾಕ್‌ ನೀಡಿರುವ ಅಮೆರಿಕ ಸರ್ಕಾರ, ಎಚ್‌-1ಬಿ (H-1B) ವೀಸಾ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ಗ್ರೀನ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಪರ್ಮನೆಂಟ್ ಲೇಬರ್ ಸರ್ಟಿಫಿಕೇಶನ್‌ (Permanent Labour Certification Programme–PERM) ಕಾರ್ಯಕ್ರಮದಿಂದ ಹಲವು ಪ್ರಮುಖ ಕಂಪನಿಗಳನ್ನು ಅಮಾನತುಗೊಳಿಸಿದೆ. ಈ ಕಂಪನಿಗಳು ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿವೆ ಎಂಬ ಆರೋಪದ … Continued

ಎಸ್‌ಐಆರ್‌ ವಿವಾದ: ಚುನಾವಣಾ ಆಯೋಗದ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಮೂರ್ತಿಗಳಿಂದ ಬಹಿರಂಗ ಪತ್ರ

ನವದೆಹಲಿ : ಚುನಾವಣಾ ಆಯೋಗ, ನ್ಯಾಯಾಂಗ ಸೇರಿದಂತೆ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಉದ್ದೇಶದ ನಿರಂತರ ಅಭಿಯಾನದ ಬಗ್ಗೆ ಸುಪ್ರೀಂ ಕೋರ್ಟ್‌ ಹಾಗೂ ವಿವಿಧ ಹೈಕೋರ್ಟ್‌ಗಳ ಮಾಜಿ ನ್ಯಾಯಮೂರ್ತಿಗಳು ಸೇರಿದಂತೆ 42 ಮಂದಿ ಮಾಜಿ ನ್ಯಾಯಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗುರುವಾರ ಬಿಡುಗಡೆ ಮಾಡಿರುವ ಬಹಿರಂಗ ಪತ್ರದಲ್ಲಿ, ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲದೆ ‘ಮತ ಕಳ್ಳತನ’ದಂತಹ … Continued

ಬೆಳಿಗ್ಗೆ 2:30ಕ್ಕೆ ಸ್ನೇಹಿತನಿಗೆ ಸಂದೇಶ, 45 ನಿಮಿಷ ಸಿಪಿಆರ್‌ʼ… : ನಾನಾ ಪಾಟೇಕರ್ ಅಂತಿಮ ಕ್ಷಣಗಳು…

ನಟ ನಾನಾ ಪಾಟೇಕರ್ ಅವರ ಸಾವಿಗೆ ಮುನ್ನದ ಕೊನೆಯ ಕೆಲವು ಗಂಟೆಗಳ ವಿವರಗಳು ಇದೀಗ ಬೆಳಕಿಗೆ ಬಂದಿವೆ. ಅಕ್ಟೋಬರ್ 8ರ ಗುರುವಾರ ತಡರಾತ್ರಿ ಅವರು ಎದೆನೋವಿನ ಬಗ್ಗೆ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದು, ಬಳಿಕ ಅವರ ಆರೋಗ್ಯ ಸ್ಥಿತಿ ವೇಗವಾಗಿ ಹದಗೆಟ್ಟಿದ್ದಾಗಿ ವರದಿಗಳು ತಿಳಿಸಿವೆ. ಗೋವಾದ ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸಾಲ್ಕರ್ ಅವರ … Continued

ನಾವೆಲ್ಲರೂ ಒಂದ ದಿನ ಹೋಗಲೇಬೇಕು, ನಾಳೆ ನಾನು ಇರುತ್ತೇನೆಯೋ ಇಲ್ಲವೋ ಗೊತ್ತಿಲ್ಲ’: ನಿಧನಕ್ಕೆ 4 ದಿನ ಮುನ್ನ ನಾನಾ ಪಾಟೇಕರ್ ಮಾತು

ಪಣಜಿ (ಗೋವಾ): ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ನಾಲ್ಕು ದಿನಗಳ ಮುನ್ನವೇ ಅವರು ಜೀವನದ ಅನಿಶ್ಚಿತತೆ ಮತ್ತು ಮರಣದ ಅನಿವಾರ್ಯತೆಯ ಬಗ್ಗೆ ಮಾತನಾಡಿದ್ದ ಮಾತುಗಳು ಇದೀಗ ವ್ಯಾಪಕ ಗಮನ ಸೆಳೆದಿವೆ. ವರದಿ ಪ್ರಕಾರ, ಗೋವಾದಲ್ಲಿ ನಡೆದ ‘ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್’ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಪಾಟೇಕರ್, ಮಾಜಿ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ … Continued

ಖ್ಯಾತ ನಟ ನಾನಾ ಪಾಟೇಕರ್‌ ನಿಧನ

ಪಣಜಿ:  ಖ್ಯಾತ ನಟ ನಾನಾ ಪಾಟೇಕರ್ ಅವರು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ನಾನಾ ಪಾಟೇಕರ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ … Continued

17 ಸಾವಿರ ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಹೊಡೆದ ಮಿಂಚು ; ವಿಮಾನದ ಮೂಗಿಗೆ ಹಾನಿ

ಲಕ್ನೋ : ಪಾಟ್ನಾದಿಂದ ಲಕ್ನೋಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಬುಧವಾರ ಪ್ರತಿಕೂಲ ಹವಾಮಾನದ ನಡುವೆಯೇ ಸುಮಾರು 17,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಮಿಂಚಿನ ಹೊಡೆತಕ್ಕೆ ಸಿಲುಕಿದ್ದು, ವಿಮಾನದ ಮುಂಭಾಗಕ್ಕೆ ಹಾನಿಯಾಗಿದೆ. ಆದರೆ ಪೈಲಟ್ ಸಮಯಪ್ರಜ್ಞೆ ಮತ್ತು ಕೌಶಲ್ಯದಿಂದ ವಿಮಾನವನ್ನು ಸುರಕ್ಷಿತವಾಗಿ ಲಕ್ನೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಿದ್ದು, ವಿಮಾನದಲ್ಲಿದ್ದ 104 ಪ್ರಯಾಣಿಕರು ಸುರಕ್ಷಿತವಾಗಿ … Continued

ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಆಯೋಜಿಸಿದ್ದ ಇಂಡಿಯಾ ಮೈತ್ರಿಕೂಟದ ಔತಣಕೂಟಕ್ಕೆ ಅಖಿಲೇಶ ಗೈರು: ಇದು ಬಿರುಕಿನ ಸೂಚನೆಯೇ?

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆಯೋಜಿಸಿದ್ದ ಇಂಡಿಯಾ (INDIA) ಮೈತ್ರಿಕೂಟದ ನಾಯಕರ ಮಧ್ಯಾಹ್ನದ ಔತಣಕೂಟದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಪ್ರತಿನಿಧಿಗಳು ಭಾಗವಹಿಸದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಈ ಗೈರುಹಾಜರಿಗೆ ಆಹ್ವಾನ ನೀಡಲು ವಿಳಂಬವಾಗಿದ್ದೇ ಕಾರಣ ಎಂದು ಸ್ಪಷ್ಟಪಡಿಸಿದೆ. ಆದರೆ ರಾಹುಲ್ ಗಾಂಧಿ ನಡೆಸುತ್ತಿರುವ ಅನಿರೀಕ್ಷಿತ ಪ್ರತಿಭಟನೆಗಳ ಕುರಿತು ಮೈತ್ರಿಕೂಟದ ಮಿತ್ರಪಕ್ಷಗಳ … Continued