ತನ್ನ ಮದುವೆಯಲ್ಲಿ ತಾನೇ ಪುರೋಹಿತನಾಗಿ ವೇದಮಂತ್ರ ಹೇಳಿ ವಿವಾಹದ ವಿಧಿವಿಧಾನ ನೆರವೇರಿಸಿದ ಮದುಮಗ..! ವೀಡಿಯೊ ವೈರಲ್‌

ಹರಿದ್ವಾರದ ಕುಂಜಾ ಬಹದ್ದೂರಪುರದಲ್ಲಿ ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ಸಹರಾನಪುರದ ರಾಂಪುರ ಮಣಿಹರನ್‌ ಪ್ರದೇಶದ ಮದುಮಗ ತನ್ನದೇ ವಿವಾಹದಲ್ಲಿ ವಿಧಿವಿಧಾನ ನೆರವೇರಿಸುವಾಗ ವೈದಿಕ ಮಂತ್ರಗಳನ್ನು ತಾನೇ ಪಠಿಸಿದ್ದು ಅತಿಥಿಗಳನ್ನು ವಿಸ್ಮಯಗೊಳಿಸಿದೆ. ಈ ವಿಶಿಷ್ಟ ಮತ್ತು ಸ್ಮರಣೀಯ ಕಾರ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಂಪುರ ಮಣಿಹರನ್‌ನ ವಿವೇಕಕುಮಾರ ಎಂಭವರ ಮದುವೆಯ ಮೆರವಣಿಗೆ ಹರಿದ್ವಾರವನ್ನು ತಲುಪಿದ ನಂತರ ವರನಾದ … Continued

ವೀಡಿಯೊ…| ಬೆಂಗಳೂರು : ಕಂಠಪೂರ್ತಿ ಕುಡಿದು ಬಂದು ಮದುಮಗನ ರಂಪಾಟ ; ಮದುವೆಯನ್ನೇ ರದ್ದು ಮಾಡಿದ ವಧುವಿನ ತಾಯಿ…!

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅದ್ಧೂರಿ ವಿವಾಹವೊಂದು ದಿಢೀರ್ ಸ್ಥಗಿತವಾದ ಘಟನೆ ವರದಿಯಾಗಿದ್ದು, ಅಚ್ಚರಿ ಎಂದರೆ ತಾಳಿಕಟ್ಟುವ ಕೆಲವೇ ಹೊತ್ತಿನ ಮೊದಲು ವಧು ಹಾಗೂ ವಧುವಿನ ತಾಯಿ ಮದುವೆಯನ್ನು ರದ್ದುಗೊಳಿಸಿದ್ದಾರೆ…! ಮದುವೆ ಸಮಾರಂಭದಲ್ಲಿ ವರ ಕುಡಿದು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮದುವೆಯಲ್ಲಿ ರಂಪಾಟ ಮಾಡಿದ್ದಾನೆ. ಮದುವೆ ವಿಧಿವಿಧಾನಗಳು ನಡೆಯುತ್ತಿದ್ದಾಗ ವರನ ಕಡೆಯವರು ಅನುಚಿತವಾಗಿ ವರ್ತಿಸಿ ಆರತಿ ತಾಳಿ … Continued

ಮದುವೆ ಸಂಭ್ರಮ ಕೆಲವೇ ಗಂಟೆಗಳಲ್ಲಿ ಮಾಯ : ಮೊದಲ ರಾತ್ರಿಯೇ ಮದುಮಗ ಆಸ್ಪತ್ರೆ ಸೇರಿದ…ಮದುಮಗಳು ಚಿನ್ನಾಭರಣ-ಹಣದೊಂದಿಗೆ ಪರಾರಿ…!

ಮದುವೆಯ ಸಂಭ್ರಮದ ಮೊದಲರಾತ್ರಿಯೇ ಮದುಮಗಳೇ ನವವಿವಾಹಿತನಿಗೆ ವಿಲನ್‌ ಆಗಿದ್ದು,ಪ್ರಜ್ಞಾಹೀನನಾದ ಮದುಮಗ ಆಸ್ಪತ್ರೆಗೆ ದಾಖಲಾಗಿದ್ದಾನೆ…! ಮದುಮಗನಿಗೆ ನೀಡುವ ಹಾಲಿನಲ್ಲಿ ನಿದ್ದೆ ಬರುವ ವಸ್ತು ಹಾಕಿ ಆತನ ಪ್ರಜ್ಞೆ ತಪ್ಪಿಸಿದ ವಧುವು ಲಕ್ಷಾಂತರ ರೂ.ಗಳ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಬೆಳಗಾಗುವಷ್ಟರಲ್ಲಿ ಪರಾರಿಯಾಗಿದ್ದಾಳೆ…!! ಮಧ್ಯಪ್ರದೇಶದ  ಛತ್ತರ್‌ಪುರ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. … Continued

ಇನ್‌ಸ್ಟಾಗ್ರಾಂನಲ್ಲಿ ಅರಳಿದ ಪ್ರೀತಿ…ಫೋನ್‌ ನಲ್ಲಿ ಮದುವೆ ನಿಶ್ಚಯ…ದಿಬ್ಬಣ ಸಮೇತ ಮದುವೆ ಸ್ಥಳಕ್ಕೆ ಹೋದ ಮದುಮಗ…ವಧು ನಾಪತ್ತೆ….!

ಚಂಡೀಗಡ: ಮೂರು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದ ಮನ್‌ಪ್ರೀತ್ ಕೌರ್ ಎಂಬ ಮಹಿಳೆಯನ್ನು ಮದುವೆಯಾಗಲು ಜಲಂಧರ ಮೂಲದ ದೀಪಕಕುಮಾರ(24) ದುಬೈನಿಂದ ಕಳೆದ ತಿಂಗಳು ಭಾರತಕ್ಕೆ ವಾಪಸಾಗಿದ್ದ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದು, ಆಕೆ ವಿವಾಹಕ್ಕಾಗಿ ಬುಕ್ ಮಾಡಲಾಗಿದೆ ಎಂದು ಹೇಳಿದ ಕಲ್ಯಾಣ ಮಂಟಪಕ್ಕೆ ಮದುಮಗ ದಿಬ್ಬಣದೊಂದಿಗೆ ಬಂದರೆ ಅಲ್ಲಿ ಆ ಹೆಸರಿನ ಕಲ್ಯಾಣ ಮಂಟಪವೇ … Continued

ವರನಿಗೆ ತಿಂಗಳಿಗೆ 1.20 ಲಕ್ಷ ರೂ. ಸಂಬಳವಿದ್ರೂ ಅದು ಸರ್ಕಾರಿ ನೌಕರಿ ಅಲ್ಲದ ಕಾರಣ ಮದುವೆಗೆ ಒಪ್ಪದೆ ಮಂಟಪದಿಂದ ಎದ್ದು ಹೋದ ವಧು…!

ವಧು-ವರರು ಮದುವೆ ಮಂಟಪದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ ತಾನು ನಂಬಿದಂತೆ ಮದುಮಗ ಸರ್ಕಾರಿ ನೌಕರಿಯಲ್ಲಿ ಇಲ್ಲ, ಬದಲಾಗಿ ಖಾಸಗಿ ಉದ್ಯೋಗದಲ್ಲಿದ್ದಾನೆ ಎಂದು ತಿಳಿದ ಮದುಮಗಳು ನಂತರ ಮದುವೆ ಬೇಡ ಎಂದು ಹಠ ಹಿಡಿದು ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ…! ವರನ ಕುಟುಂಬ ಪ್ರಕರಣ ಸುಖಾಂತ್ಯವಾಗಬಹುದು ಎಂದು  ನಿರೀಕ್ಷಿಸಿ … Continued

ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ವಧುವಿನ ತಂದೆ-ತಾಯಿಗೆ ಕಪಾಳಮೋಕ್ಷ ಮಾಡಿದ ವರ..! ಪೊಲೀಸರನ್ನು ಕರೆಸಿದ ವಧು…!!

ವರನೊಬ್ಬ ಕುಡಿದ ಮತ್ತಿನಲ್ಲಿ ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತಕ್ಷಣವೇ ವಧು ಪೊಲೀಸರಿಗೆ ಕರೆ ಮಾಡಿ ವರನನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾಳೆ. ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಈ ಘಟನೆ ನಡೆದಿದ್ದು, ಅಂಜಲಿ (18) ಎಂಬಾಕೆ ದಿಲೀಪ (25) ಎಂಬಾತನನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದ ವೇಳೆ ವರ ದಿಲೀಪ … Continued

ವೀಡಿಯೊ..| ವಿವಾಹದ ವೇಳೆ ಮಾರಕಾಸ್ತ್ರ ಹಿಡಿದು ಬೆದರಿಸಿ ಯುವತಿಯ ಅಪಹರಣಕ್ಕೆ ಯತ್ನ ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಭೋಪಾಲ್‌ : ಮಧ್ಯಪ್ರದೇಶದ ಅಶೋಕ ನಗರದಲ್ಲಿ ವಿವಾಹದ ವೇಳೆ ಕತ್ತಿ ಬೀಸುತ್ತ 22 ವರ್ಷದ ಯುವತಿಯೊಬ್ಬಳನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅದರ ವೀಡಿಯೊ ವೈರಲ್‌ ಆಗಿದೆ. ಯುವತಿ ಅತ್ಯಾಚಾರ ಸಂತ್ರಸ್ತೆಯಾಗಿದ್ದು, ಅವಳ ಮದುವೆ ಮತ್ತೊಬ್ಬನ ಜೊತೆ ನಡೆಯುತ್ತಿದ್ದಾಗ ಅತ್ಯಾಚಾರ ಆರೋಪಿ … Continued

ತಾಳಿ ಕಟ್ಟುವ ವೇಳೆ ಮದುವೆಗೆ ನಿರಾಕರಿಸಿದ ವಧು : ಮಂಟಪದಲ್ಲೇ ಮುರಿದು ಬಿತ್ತು ಮದುವೆ…!

ಮಂಗಳೂರು : ಕೊನೆ ಕ್ಷಣದಲ್ಲಿ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ ನಂತರ ಮದುವೆ ಮಂಟಪದಲ್ಲೇ ಮದುವೆ ಮುರಿದು ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಶುಕ್ರವಾರ (ಏಪ್ರಿಲ್‌ 26) ನಡೆದಿದೆ ಎಂದು ವರದಿಯಾಗಿದೆ. ಕೊಣಾಲು ಗ್ರಾಮದ ಕೋಲ್ಪೆಯ ಉಮೇಶ ಎಂಬವರ ವಿವಾಹವು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ಸರಸ್ವತಿ … Continued

ತಾಳಿ ಕಟ್ಟುವಾಗ ಮದುವೆ ನಿರಾಕರಿಸಿದ ಯುವತಿ

ತುಮಕೂರು : ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಭಾನುವಾರ ತಾಳಿ ಕಟ್ಟುವ ಸಮಯದಲ್ಲಿ ವಧುವು ಮದುವೆ ನಿರಾಕರಿಸಿ, ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಹೇಳಿ ಹಸಮಣೆಯಿಂದ ಎದ್ದು ಹೋದ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಯುವಕ ಮತ್ತು ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮದ ಯುವತಿ ಮದುವೆ ಭಾನುವಾರ ಕೋಳಾಲ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. … Continued