ಎರಡನೇ ಅಲೆಯೋ.. ಏರಿಳಿತವೋ..?: ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣದಿಂದ ಹೆಚ್ಚಿದ ಆತಂಕ

ಮುಂಬೈ: ಕಳೆದ ಕೆಲವು ದಿನಗಳಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಕೊವಿಡ್‌-19 ಪ್ರಕರಣಗಳ ಉಲ್ಬಣವು “ಮೊದಲ ಅಲೆಯ ಏರಿಳಿತ” ಅಲ್ಲ, ಆದರೆ “ಭಯಾನಕ ಎರಡನೇ ತರಂಗ” ಎಂದು ಆರೋಗ್ಯದ ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ನ್ಯೂಸ್ ಚಾನೆಲ್ ಎನ್‌ಡಿಟಿವಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೆಇಎಂ ಆಸ್ಪತ್ರೆಯ ಡೀನ್ ಹೇಮಂತ್ ದೇಶಮುಖ್, ಪ್ರಕರಣದ ಸಂಖ್ಯೆಗಳು … Continued

ಕೊವಿಡ್‌ ಲಸಿಕೆ ವ್ಯರ್ಥ ಮಾಡಿದ ರಾಜ್ಯಗಳಿಗೆ ಪ್ರಧಾನಿ ಮೋದಿ ತರಾಟೆ

ನವದೆಹಲಿ: ಕೊರೋನಾ ಲಸಿಕೆ ವ್ಯರ್ಥಮಾಡುತ್ತಿರುವ ರಾಜ್ಯಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆ ಮಿತಿಮೀರಿ ವ್ಯರ್ಥವಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಸಭೆ ನಡೆಸಿದ … Continued

ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ: 23 ಸಾವಿರ ದಾಟಿದ ದೈನಂದಿನ ಪ್ರಕರಣಗಳ ಸಂಖ್ಯೆ…!!

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಕಳೆದ 24 ತಾಸಿನಲ್ಲಿ 23,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ..! ಬುಧವಾರ 23,179 ಪ್ರಕರಗಳು ದಾಖಲಾಗಿವೆ ಹಾಗೂ ಒಟ್ಟು 84 ಜನರು ಮೃಪಟ್ಟಿದ್ದಾರೆ. ಇದು ಈ ವರ್ಷದ ಅತಿ ಹೆಚ್ಚು ಸಂಖ್ಯೆಯ ದೈನಂದಿನ ಪ್ರಕರಣಗಳಾಗಿವೆ. ಮಂಗಳವಾರ, ರಾಜ್ಯವು 17,864 ಪ್ರಕರಣಗಳು ದಾಖಲಾಗಿದ್ದವು. , ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳು ಈಗ … Continued

ಸಾಮಾಜಿಕ ಜಾಲತಾಣ “ಕೂʼನಲ್ಲಿನ ಚೀನಾದ ಪಾಲು ಖರೀದಿಗೆ ಮುಂದಾದ ಕ್ರಿಕೆಟಿಗ ಜಾವಗಲ್‌ ಶ್ರೀನಾಥ

ಬೆಂಗಳೂರು: ಸಾಮಾಜಿಕ ಜಾಲತಾಣ “ಕೂʼ ನ ಮೂಲಸಂಸ್ಥೆ ಬಾಂಬಿನೆಟ್‌ ಟೆಕ್ನಾಲಜೀಸ್‌ನಲ್ಲಿ ಚೀನಾದ ಹೂಡಿಕೆದಾರ ಶುನ್‌ವೇ ಕ್ಯಾಪಿಟಲ್‌ ಪಾಲನ್ನು ಭಾರತದ ಟೆಕ್‌ ಸಿಇಒಗಳು ಹಾಗೂ ಹಿರಿಯ ಕ್ರಿಕೆಟಿಗ ಜಾವಗಲ್‌ ಶ್ರೀನಾಥ ಖರೀದಿಸಲು ಉತ್ಸುಕರಾಗಿದ್ದಾರೆ. ಕಳೆದ ತಿಂಗಳು ಭಾರತ ಸರ್ಕಾರ ಮತ್ತು ಟ್ವಿಟರ್ ನಡುವಿನ ಭಿನ್ನಾಭಿಪ್ರಾಯದ ಮಧ್ಯೆ ಬೆಳಕಿಗೆ ಬಂದ ನಂತರ ಕೂದಲ್ಲಿನ ಚೀನಾದ ಹೂಡಿಕೆ ವಿರುದ್ಧ ಧ್ವನಿ … Continued

ರಾತ್ರಿ ೧೦ರಿಂದ ಬೆಳಗ್ಗೆ ೬ಗಂಟೆ ವರೆಗೆ ದರ್ಗಾ, ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿದ ವಕ್ಫ್‌ ಮಂಡಳಿ

ಬೆಂಗಳೂರು: ರಾಜ್ಯದ ಎಲ್ಲ ಮಸೀದಿ ಹಾಗೂ ದರ್ಗಾಗಳಲ್ಲಿ ರಾತ್ರಿ ೧೦ ಗಂಟೆಯಿಂದ ಬೆಳಗಿನ ೬ ಗಂಟೆ ವರೆಗೆ ಧ್ವನಿವರ್ಧಕ ಬಳಕೆಗೆ ನಿಷೇಧ ಹೇರಿ ಕರ್ನಾಟಕ ವಕ್ಫ್‌ ಮಂಡಳಿ ಸುತ್ತೋಲೆ ಹೊರಡಿಸಿದೆ. ದ್ವನಿವರ್ಧಕಗಳನ್ನು “ಅಜಾನ್‌ʼ ಹಾಗೂ ಪ್ರಮುಖ ಪ್ರಕಟನೆಗಳಿಗಾಗಿ ಮಾತ್ರ ಬಳಕೆ ಮಾಡಬೇಕು ಎಂದು ತಿಳಿಸಿದೆ. ಧ್ವನಿವರ್ಧಕಗಳಿಂದಾಗುವ ಶಬ್ದದ ಮಟ್ಟ ಮಾನವನ ಆರೋಗ್ಯ ಹಾಗೂ ಜನರ ಸ್ವಾಸ್ಥ್ಯದ … Continued

ಕೊರೊನಾ ಎರಡನೇ ಅಲೆ ಕಾಲಘಟ್ಟದಲ್ಲಿ ನಾವು,ತಡೆಯದಿದ್ದರೆ ಮಹಾಸ್ಫೋಟವಾಗಲಿದೆ: ಪ್ರಧಾನಿ ಎಚ್ಚರಿಕೆ

ನವ ದೆಹಲಿ: ಪ್ರಧಾನಿ ಮೋದಿ ಮುಖ್ಯಮಂತ್ರಿಗಳೊಂದಿಗೆ ಬುಧವಾರ ನಡೆಸಿದ ಸಭೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಹತ್ತು ಹಲವು ಸಂಗತಿಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಕೊರೊನಾ ಎರಡನೇ ಅಲೆಗಳ ಬಗ್ಗೆ (ಕೋವಿಡ್-19 ರ) ಸೂಚನೆ ನೀಡಿದ್ದು, ಭಾರತದಲ್ಲಿ ಮಹಾರಾಷ್ಟ್ರ, ಪಂಜಾಬ್ ನಂತಹ ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಏರಿಕೆ ಕಾಣುತ್ತಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ … Continued

ಮತ್ತೆ ವಿಶ್ವದ ನಂ.1 ಶ್ರೀಮಂತನ ಪಟ್ಟ ಅಲಂಕರಿಸಿದ ಎಲೋನ್​ ಮಸ್ಕ್‌

ಸ್ಯಾನ್ ​​ ಫ್ರಾನ್ಸಿಸ್ಕೋ : ರಾತ್ರೋ ರಾತ್ರಿ ತಮ್ಮ ಕಂಪನಿ ಶೇರುಗಳ ಮೌಲು ಹೆಚ್ಚಾದ ಕಾರಣ ಮತ್ತೆ ಎಲೋನ್​ ಮಸ್ಕ್‌ ವಿಶ್ವದ ನಂ.1 ಶ್ರೀಮಂತನಾಗಿದ್ದಾನೆ. 2020ರ ಕ್ಯಾಲೆಂಡರ್ ವರ್ಷದಲ್ಲಿ ವೇಗವಾಗಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಬಹು ದಿನಗಳಿಂದ ಜಗತ್ತಿನ ನಂಬರ್ 1 ಸಿರಿವಂತ ಸ್ಥಾನದಲ್ಲಿದ್ದ ಅಮೆಜಾನ್ ಸಂಸ್ಥಾಪಕ ಜೆಫ್​ ಬೆಜೋಸ್ ಅವರನ್ನುಕೆಲವು ವಾರಗಳ ಹಿಂದೆ ಎಲೋನ್​ … Continued

ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ನಿಗೂಢ ಸಾವು: ಪೊಲೀಸರಿಂದ ಆತ್ಮಹತ್ಯೆ ಶಂಕೆ

ನವ ದೆಹಲಿ: ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ದೆಹಲಿಯ ತಮ್ಮ ನಿವಾಸದಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ದೆಹಲಿಯ ನಾರ್ತ್ ಅವೆನ್ಯೂ ನಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಮೃತಪಟಿದ್ದಾರೆ. ರಾಮ್ ಸ್ವರೂಪ್ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅವರ ಮರಣದ ಹಿನ್ನೆಲೆಯಲ್ಲಿ … Continued

ಗರ್ಭಪಾತದ ಮಿತಿ ೨೪ ವಾರಕ್ಕೆ ಹೆಚ್ಚಳ: ತಿದ್ದುಪಡಿ ಕಾಯ್ದೆ ರಾಜ್ಯಸಭೆಯಲ್ಲೂ ಅಂಗೀಕಾರ

ನವ ದೆಹಲಿ : ಗರ್ಭಪಾತದ ಮಿತಿಯನ್ನು ಈಗಿನ 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸುವಂತೆ ಕೋರಿರುವ ಗರ್ಭಾವಸ್ಥೆ ವೈದ್ಯಕೀಯ ಮುಕ್ತಾಯ ತಿದ್ದುಪಡಿ ಮಸೂದೆ 2020ಕ್ಕೆ ರಾಜ್ಯಸಭೆ ಮಂಗಳವಾರ ಅಂಗೀಕಾರ ನೀಡಿದೆ. ಸದನದಲ್ಲಿ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್, ವ್ಯಾಪಕ ಸಮಾಲೋಚನೆ ನಡೆಸಿ ಈ ಮಸೂದೆ ಸಿದ್ಧಪಡಿಸಲಾಗಿದೆ ಎಂದು … Continued

ವಿಶ್ವದ ಅತ್ಯಂತ ಕಲುಷಿತ ರಾಜಧಾನಿ: ದೆಹಲಿ ಹ್ಯಾಟ್ರಿಕ್‌ ಸಾಧನೆ !!

ವಿಶ್ವದ ಅತ್ಯಂತ ಮಲೀನ ರಾಜಧಾನಿ ಎಂದು ಸತತ ೩ನೇ ಬಾರಿ ಕುಖ್ಯಾತಿಗೆ ಪಾತ್ರವಾಗಿದೆ. ಸ್ವಿಸ್‌ನ ಐಕ್ಯೂ ಕೇರ್‌ ನಡೆಸಿದ ಸಂಶೋಧನೆಯಲ್ಲಿ ಶ್ವಾಸಕೋಶದ ಹಾನಿಕಾರಕ ವಾಯುಗಾಮಿ ಕಣಗಳ ಸಾಂದ್ರತೆಯ ಆಧಾರದ ಮೇಲೆ ವಾಯುವಿನ ಗುಣಮಟ್ಟವನ್ನು ಪಿಎಂ೨.೫ ರಂದು ಗುರುತಿಸಲಾಗಿದೆ. 106 ದೇಶಗಳಿಗೆ ದತ್ತಾಂಶವನ್ನು ಸಂಗ್ರಹಿಸಿದ ಸಂಸ್ಥೆ 2020 ರ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ, ವಿಶ್ವದ … Continued