ವೀಡಿಯೊ | ರೈಲಿನಲ್ಲಿ ಮೊಬೈಲ್ ಲಾಂಚರಿನಿಂದ ಅಗ್ನಿ ಪ್ರೈಮ್ ಕ್ಷಿಪಣಿ ಹಾರಿಸಿದ ಭಾರತ ; ಇದರಿಂದ 2000 ಕಿಮೀ ದೂರದ ಟಾರ್ಗೆಟ್‌ ನಾಶ ಸಾಧ್ಯ

ನವದೆಹಲಿ : ಭಾರತವು ರೈಲು ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಮಧ್ಯಂತರ ಶ್ರೇಣಿಯ ಅಗ್ನಿ-ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಪ್ರಕಟಿಸಿದ್ದಾರೆ. X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ರಕ್ಷಣಾ ಸಚಿವರು, ಮುಂದಿನ ಪೀಳಿಗೆಯ ಕ್ಷಿಪಣಿಯು 2000 ಕಿ.ಮೀ. ವ್ಯಾಪ್ತಿಯನ್ನು ಕ್ರಮಿಸಲು ವಿನ್ಯಾಸಗೊಳಿಸಲಾಗಿದೆ ಮತ್ತು ಈ ಕ್ಷಿಪಣಿಯು … Continued

ವೀಡಿಯೊ..| ಏಷ್ಯಾಕಪ್ 2025 : ಭಾರತದ ವಿರುದ್ಧದ ಪಂದ್ಯದಲ್ಲಿ ಕೈ ಸನ್ನೆ ಮಾಡಿ ಭಾರತದ ಸೈನಿಕರು-ಅಭಿಮಾನಿಗಳನ್ನು ಹೀಯಾಳಿಸಿದ ಪಾಕ್‌ ವೇಗಿ

ದಿನ ಕಳೆದಂತೆ ಭಾರತದ ವಿರುದ್ಧ ಸ್ಪರ್ಧಿಸುವುದು ಪಾಕಿಸ್ತಾನಕ್ಕೆ ಕಷ್ಟಸಾಧ್ಯವಾಗುತ್ತಿದ್ದಂತೆಯೇ ಮೈದಾನದಲ್ಲಿ ಅದರ ಆಟಗಾರರ ನಡವಳಿಕೆಯ ಮಟ್ಟವೂ ಕುಸಿಯುತ್ತಿದೆ. ಭಾನುವಾರ ನಡೆದ ಏಷ್ಯಾ ಕಪ್ 2025 ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಮತ್ತೊಮ್ಮೆ ಸೋತಿತು. ವಿಕೆಟ್‌ಗಳನ್ನು ಪಡೆಯಲು ಹೆಣಗಾಡಿದ ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್, ಬೌಂಡರಿ ಹಗ್ಗದ ಬಳಿ ಭಾರತದ ಅಭಿಮಾನಿಗಳ ಜೊತೆ ಸಂವಹನ … Continued

ಸೆ.30ರೊಳಗೆ ಎಸ್‌ ಐ ಆರ್ ಜಾರಿಗೆ ಸಿದ್ಧರಾಗಿ : ಎಲ್ಲ ರಾಜ್ಯಗಳ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ

ನವದೆಹಲಿ: ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಆರಂಭಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಭಾರತದ ಚುನಾವಣಾ ಆಯೋಗ (ECI)ವು ಎಲ್ಲಾ ರಾಜ್ಯ ಚುನಾವಣಾಧಿಕಾರಿಗಳಿಗೆ ಸೆಪ್ಟೆಂಬರ್ 30ರೊಳಗೆ ಸಿದ್ಧತೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ. ಈ ತಿಂಗಳ ಆರಂಭದಲ್ಲಿ ನವದೆಹಲಿಯಲ್ಲಿ ನಡೆದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ (Chief Electoral Officers) … Continued

ವೀಡಿಯೊಗಳು…| ಭಾರತದ ಹಲವೆಡೆ ಆಕಾಶವನ್ನೇ ಬೆಳಗಿದ ಅಪರೂಪದ ಉಲ್ಕಾಪಾತ | ಈ ಅದ್ಭುತ-ಅಪರೂಪದ ದೃಶ್ಯ ವೀಕ್ಷಿಸಿ

ನವದೆಹಲಿ: ಶುಕ್ರವಾರ ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರಗಾಂವ್‌ ಮೇಲಿನ ರಾತ್ರಿ ಆಕಾಶವು ಅದ್ಭುತವಾದ ಆಕಾಶ ಘಟನೆಯೊಂದಿಗೆ ಗಮನ ಸೆಳೆದಿದೆ. ಯಾಕೆಂದರೆ ಪ್ರಕಾಶಮಾನವಾದ ಉಲ್ಕೆಯು ದಿಗಂತವನ್ನು ಕೆಲಕಾಲ ಬೆಳಗಿಸಿದೆ. ದೆಹಲಿಯ ದೊಡ್ಡ ಭಾಗಗಳಲ್ಲಿ ಗೋಚರಿಸುತ್ತಿದ್ದ ಈ ಉಲ್ಕಾಶಿಲೆಯು ಆಗಸದಲ್ಲಿ ತನ್ನ ಉರಿಯುತ್ತಿರುವ ಬೆಂಕಿ ಮತ್ತು ನಂತರದ ವಿಘಟನೆಯಿಂದಾಗಿ ನೋಡುಗರನ್ನು ಆಕರ್ಷಿಸಿತು. ಬಾಹ್ಯಾಕಾಶದಿಂದ ಕೆಳಗೆ ಬಂದ ಉರಿಯುತ್ತಿರುವ … Continued

ವೀಡಿಯೊ..| ಜೈಶ್ ಒಪ್ಪಿಕೊಂಡ 2 ದಿನಗಳ ನಂತ್ರ ಭಾರತದ ದಾಳಿಯಲ್ಲಿ ತನ್ನ ಭಯೋತ್ಪಾದಕ ಶಿಬಿರವೂ ನಾಶವಾಗಿದೆ ಎಂದು ಒಪ್ಪಿಕೊಂಡ ಲಷ್ಕರ್ ಸಂಘಟನೆ..!

ಇಸ್ಲಾಮಾಬಾದ್: ಬಹಾವಲ್ಪುರ ಶಿಬಿರದ ಜೊತೆ ಜೆಇಎಂ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನ ಪಾಕಿಸ್ತಾನದ ಸಂಪರ್ಕದ ಬಗ್ಗೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಬಹಿರಂಗಪಡಿಸಿದ ಕೆಲವೇ ದಿನಗಳ ನಂತರ ಮತ್ತೊಂದು ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್‌ ಮತ್ತೊಂದು ಬಾಂಬ್‌ ಸಿಡಿಸಿದ್ದಾನೆ. ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದಲ್ಲಿರುವ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಪ್ರಧಾನ ಕಚೇರಿಯನ್ನು … Continued

ವೀಡಿಯೊ..| ಭಾರತದ ದಾಳಿಯಲ್ಲಿ ಸತ್ತ ಭಯೋತ್ಪಾದಕರಿಗೆ ಗೌರವ ಸೂಚಿಸಲು ಆದೇಶಿಸಿದ್ದ ಪಾಕ್‌ ಸೇನಾ ಮುಖ್ಯಸ್ಥ ; ಜೆಇಎಂ ಪ್ರಮುಖನ ಹೇಳಿಕೆಯಿಂದ ಪಾಕಿಸ್ತಾನದ ಸುಳ್ಳಾಟ ಬಯಲು…!

ಭಾರತದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಬಹಾವಲ್ಪುರದ ತನ್ನ ಶಿಬಿರದಲ್ಲಿ ಸಂಭವಿಸಿದ ಹಾನಿಯನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಒಪ್ಪಿಕೊಂಡ ಕೆಲವು ದಿನಗಳ ನಂತರ, ಅದೇ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ನ ಮತ್ತೊಂದು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಅದರಲ್ಲಿ ಆತ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಭಾರತದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ … Continued

ಟಿ20 ಏಷ್ಯಾ ಕಪ್ ಕ್ರಿಕೆಟ್‌ ; ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ರಾಷ್ಟ್ರಗೀತೆ ಬದಲು ಬೇರೆ ಮ್ಯುಸಿಕ್‌ ಪ್ಲೇ ಮಾಡಿ ಪ್ರಮಾದ

ದುಬೈ: ಭಾನುವಾರ ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಏಷ್ಯಾ ಕಪ್ ಕ್ರಿಕೆಟ್‌ 2025 ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಗಳ ಕುರಿತು ದೊಡ್ಡ ವಿವಾದ ಉಂಟಾಯಿತು. ಆಯೋಜಕರು ಪಾಕಿಸ್ತಾನ ರಾಷ್ಟ್ರಗೀತೆಯ ಬದಲಿಗೆ ತಪ್ಪಾಗಿ ಬೇರೆ ಹಾಡನ್ನು ಪ್ಲೇ ಮಾಡಿದರು. ಈ ಘಟನೆಯು ಪಾಕಿಸ್ತಾನ ಕ್ರಿಕೆಟಿಗರನ್ನು ಗೊಂದಲಕ್ಕೀಡು ಮಾಡಿತು. ಆದಾಗ್ಯೂ, ತಪ್ಪನ್ನು ತಕ್ಷಣವೇ ಸರಿಪಡಿಸಲಾಯಿತು ಮತ್ತು ಸರಿಯಾದ … Continued

ಟಿ20 ಏಶಿಯಾ ಕಪ್‌ 2025 ; ಪಾಕಿಸ್ತಾನದ ವಿರುದ್ಧ ಭಾರತಕ್ಕೆ 7 ವಿಕೆಟ್‌ ಗಳ ಭರ್ಜರಿ ಜಯ

ದುಬೈ: ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ಗ್ರೂಪ್ ಎ ಪಂದ್ಯದಲ್ಲಿ ಇನ್ನೂ 25 ಎಸೆತಗಳು ಬಾಕಿ ಇರುವಾಗಲೇ ಭಾರತವು ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿತು. ಭಾರತದ ಆರಂಭಿಕ ಆಟಗಾರರಾದ ಶುಭಮನ್ ಗಿಲ್ 10 ರನ್ ಗಳಿಸಿ ಸ್ಟಂಪ್ಡ್ ಆದ ನಂತರ ಕೇವಲ 13 ಎಸೆತಗಳಲ್ಲಿ ನಾಲ್ಕು ಬೌಂಡರಿ … Continued

ಅಮೆರಿಕ : ಪತ್ನಿ-ಮಗನ ಮುಂದೆ ಕರ್ನಾಟಕ ಮೂಲದ ವ್ಯಕ್ತಿಯ ಬೆನ್ನಟ್ಟಿ ಶಿರಚ್ಛೇದ ಮಾಡಿದ ವ್ಯಕ್ತಿ…!

ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಮೋಟೆಲ್‌ನಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬನ ಶಿರಚ್ಛೇದನ ಮಾಡಲಾಗಿದೆ. ಡೌನ್‌ಟೌನ್‌ನ ಪೂರ್ವದಲ್ಲಿರುವ ಸ್ಯಾಮ್ಯುಯೆಲ್ ಬೌಲೆವಾರ್ಡ್‌ನಲ್ಲಿರುವ ಡೌನ್‌ಟೌನ್ ಸೂಟ್ಸ್ ಮೋಟೆಲ್ ಅನ್ನು ನಿರ್ವಹಿಸುತ್ತಿದ್ದ ಐವತ್ತು ವರ್ಷದ ಚಂದ್ರ ನಾಗಮಲ್ಲಯ್ಯನ ಅವರ ಮೇಲೆ, ಹಿಂಸಾತ್ಮಕ ಅಪರಾಧ ಇತಿಹಾಸ ಹೊಂದಿರುವ ಮತ್ತು ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ 37 ವರ್ಷದ ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಪದೇ ಪದೇ ಮಚ್ಚಿನಿಂದ … Continued

ಹಾಕಿ | 8 ವರ್ಷಗಳ ನಂತರ ಏಷ್ಯಾ ಕಪ್ ಪ್ರಶಸ್ತಿ ಗೆದ್ದ ಭಾರತ; ವಿಶ್ವಕಪ್‌ ಗೆ ಅರ್ಹತೆ

ನವದೆಹಲಿ: ಸೆಪ್ಟೆಂಬರ್ 7 ರ ಭಾನುವಾರ ರಾಜಗಿರ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೊರಿಯಾ ವಿರುದ್ಧ 4-1 ಅಂತರದ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತನ್ನ 8 ವರ್ಷಗಳ ನಂತರ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಭಾರತದ ಪರವಾಗಿ ದಿಲ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಗಳಿಸಿದರೆ, ಸುಖಜೀತ್ ಸಿಂಗ್ ಮೊದಲ ನಿಮಿಷದಲ್ಲೇ ಗೋಲು ಗಳಿಸಿದರು ಮತ್ತು … Continued