ಸೆಪ್ಟೆಂಬರ್ ತಿಂಗಳಲ್ಲಿ ವಿಪರೀತ ಮಳೆ ; ಪ್ರವಾಹ, ಭೂ ಕುಸಿತಗಳು ಸಂಭವಿಸುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ನವದೆಹಲಿ : ದೇಶದ ಹಲವು ಭಾಗಗಳಲ್ಲಿ ಈಗಾಗಲೇ ಭಾರೀ ಮಳೆಯಿಂದಾಗಿ ಹಲವಾರು ವಿಪತ್ತುಗಳು ಸಂಭವಿಸಿದ್ದು, ಸೆಪ್ಟೆಂಬರ್‌ ತಿಂಗಳಲ್ಲಿಯೂ ಭಾರತದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಭಾರೀ ಮಳೆಯಿಂದಾಗಿ ಪ್ರವಾಹ, ಭೂಕುಸಿತದಂತಹ ಅವಘಡಗಳು ಹಲವೆಡೆ ಸಂಭವಿಸಲಿವೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸರಾಸರಿಯಾಗಿ 167.9 … Continued

ವೀಡಿಯೊಗಳು..| ‘ಡ್ರ್ಯಾಗನ್ – ಆನೆ ಒಟ್ಟಿಗೆ ಬರುವುದು, ಸ್ನೇಹಿತರಾಗುವುದು ಅತ್ಯಗತ್ಯ’: ಭಾರತ-ಚೀನಾ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಕ್ಸಿ

ನವದೆಹಲಿ: ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಭಾರತ ಮತ್ತು ಚೀನಾ “ಒಟ್ಟಿಗೆ ಬರುವುದು” ಮತ್ತು “ಸ್ನೇಹಿತರಾಗುವುದು” ಅಗತ್ಯ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾನುವಾರ ಒತ್ತಿ ಹೇಳಿದ್ದಾರೆ. ಭಾರತವು ನವದೆಹಲಿ-ಬೀಜಿಂಗ್ ಸಂಬಂಧಗಳನ್ನು “ದೀರ್ಘಕಾಲೀನ ದೃಷ್ಟಿಕೋನ” ದಿಂದ ನಿಭಾಯಿಸಬೇಕೆಂದು ಚೀನಾ ಅಧ್ಯಕ್ಷ ಕ್ಸಿ ಕರೆ … Continued

50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರ ಬಳಸಿ ಪಾಕಿಸ್ತಾನ ಮಂಡಿಯೂರುವಂತೆ ಮಾಡಿದೆವು; ಆಪರೇಶನ್‌ ಸಿಂಧೂರ ಬಗ್ಗೆ ಭಾರತದ ವಾಯುಪಡೆಯ ಉಪಮುಖ್ಯಸ್ಥ

ನವದೆಹಲಿ : ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಮಂಡಿಯೂರುವಂತೆ ಮಾಡಲು ಮತ್ತು ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡಲುಸಮಯದಲ್ಲಿ ಭಾರತೀಯ ವಾಯುಪಡೆ (ಐಎಎಫ್) 50 ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿತು ಎಂದು ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ನರ್ಮದೇಶ್ವರ ತಿವಾರಿ ಶನಿವಾರ ಹೇಳಿದ್ದಾರೆ. ಎನ್‌ಡಿಟಿವಿ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಏರ್ ಮಾರ್ಷಲ್ ನರ್ಮದೇಶ್ವರ … Continued

7 ವರ್ಷಗಳ ನಂತರ ಚೀನಾಕ್ಕೆ ಬಂದಿಳಿದ ಪ್ರಧಾನಿ ಮೋದಿ, ನಾಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ

ಬೀಜಿಂಗ್‌; ರಷ್ಯಾದ ತೈಲ ಖರೀದಿಗೆ ಹೆಚ್ಚುವರಿ ಶೇ. 25 ‘ದಂಡ’ ಸೇರಿದಂತೆ ಭಾರತದ ಮೇಲೆ ಟ್ರಂಪ್ ವಿಧಿಸಿದ ಶೇ. 50 ರಷ್ಟು ಸುಂಕಗಳು ಭಾರತವು ರಷ್ಯಾ ಹಾಗೂ ಚೀನಾಕ್ಕೆ ಹತ್ತಿರವಾಗುವಂತೆ ಮಾಡಿದೆ ಎಂದು ಪರಿಗಣಿಸಲಾಗಿದೆ. ತಮ್ಮ ಕೊನೆಯ ಭೇಟಿಯ ಏಳು ವರ್ಷಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೀನಾಕ್ಕೆ ಬಂದಿಳಿದರು, ಇದು ಭಾನುವಾರದಿಂದ ಎರಡು … Continued

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ್ದಕ್ಕೆ ಭಾರತದ ಸರಕುಗಳ ಮೇಲೆ 50% ಸುಂಕ: ಜೆಫರೀಸ್

ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಕಂಪನಿ ಜೆಫರೀಸ್ ವರದಿಯ ಪ್ರಕಾರ, ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ ಕಾರಣ ಅಮೆರಿಕ ಭಾರತದ ಮೇಲೆ ಶೇ. 50 ರಷ್ಟು ಹೆಚ್ಚಿನ ಸುಂಕಗಳನ್ನು ವಿಧಿಸಿದೆ. ಟ್ರಂಪ್ ಅವರ “ವೈಯಕ್ತಿಕ ದ್ವೇಷ”ದ “ಪರಿಣಾಮ”ವಾಗಿದೆ. ಮತ್ತು ದಕ್ಷಿಣ ಏಷ್ಯಾದ ಎರಡು … Continued

ಟ್ರಂಪ್ ಸುಂಕಗಳ ಮಧ್ಯೆಯೂ 2038ರ ವೇಳೆಗೆ ಭಾರತವು ವಿಶ್ವದ 2ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಬಹುದು ಎಂದ ಇವೈ ವರದಿ

ನವದೆಹಲಿ : ಭಾರತವು ವಿಶ್ವದ ಐದು ದೊಡ್ಡ ಆರ್ಥಿಕತೆಗಳಲ್ಲಿ ಅತ್ಯಂತ ಕ್ರಿಯಾಶೀಲ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ, ಭಾರತದ ಆರ್ಥಿಕತೆಯು ಮುಂದಿನ ದಶಕದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸುವ ಹಾದಿಯಲ್ಲಿದೆ ಎಂದು ಇವೈ (EY) ಎಕಾನಮಿ ವಾಚ್ ವರದಿ ಬುಧವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿವೆ. ಖರೀದಿ-ಶಕ್ತಿ-ಸಮಾನತೆ (purchasing power parity (PPP)) ವಿಷಯದಲ್ಲಿ, ಭಾರತದ ಒಟ್ಟು … Continued

ವೀಡಿಯೊ…| “ನ್ಯೂಕ್ ಇಂಡಿಯಾ”, “ಕಿಲ್‌ ಡೊನಾಲ್ಡ್‌ ಟ್ರಂಪ್”: ಮಿನ್ನಿಯಾಪೋಲಿಸ್ ಶೂಟರ್‌ ಬಂದೂಕಿನಲ್ಲಿ ಭಯಾನಕ ಸಂದೇಶಗಳು…!

ಅಮೆರಿಕದ ಮಿನ್ನಿಯಾಪೋಲಿಸ್ ನಗರದಲ್ಲಿ ಚರ್ಚ್ ಸೇವೆಯಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳ ಮೇಲೆ ಬುಧವಾರ ಗುಂಡು ಹಾರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಕೊಂದ ಶೂಟರ್, ತನ್ನ ಬಂದೂಕುಗಳ ಮೇಲೆ ” ಕಿಲ್‌ ಡೊನಾಲ್ಡ್ ಟ್ರಂಪ್ (kill Donald Trump) ” ಮತ್ತು “ನ್ಯೂಕ್ ಇಂಡಿಯಾ (“nuke India)” ಎಂದು ಬರೆದಿರುವುದನ್ನು ಈಗ ಅಳಿಸಲಾಗಿರುವ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊ ತೋರಿಸಿದೆ. … Continued

ಭಾರತದ ಮೇಲೆ ಹೆಚ್ಚುವರಿ ಸುಂಕ : ಅಮೆರಿಕ ಅಧ್ಯಕ್ಷರ 4 ಫೋನ್‌ ಕಾಲ್‌ ರಿಸೀವ್‌ ಮಾಡಲು ನಿರಾಕರಿಸಿದ ಪ್ರಧಾನಿ ಮೋದಿ: ವರದಿ

ವಾಷಿಂಗ್ಟನ್: ಇತ್ತೀಚಿನ ವಾರಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಲ್ಕು ಕರೆಗಳನ್ನು ಸ್ವೀಕರಿಸಲು ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ಮೂಲಗಳನ್ನು ಉಲ್ಲೇಖಿಸಿ ಜರ್ಮನ್ ಪತ್ರಿಕೆ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ಜೈಟಂಗ್ (ಎಫ್‌ಎಝಡ್) ಪತ್ರಿಕೆ ವರದಿ ಮಾಡಿದೆ. ಇದು “ಅವರು [ಮೋದಿ] ಅಸಮಾಧಾನಗೊಂಡಿದ್ದು, ಮೋದಿ ಟ್ರಂಪ್‌ ಕರೆ ಸ್ವೀಕರಿಸದೇ ಇರುವುದು ಟ್ರಂಪ್‌ಗೆ ನೀಡಿದ ಎಚ್ಚರಿಕೆ … Continued

ಕ್ಷೌರಿಕ ಅಂಗಡಿಯಲ್ಲಿ ಭಿಕ್ಷುಕನಂತೆ ನಟಿಸಿ, ಅಲ್ಲಿನ ಕೂದಲಿನ ಮೂಲಕ ಪಾಕಿಸ್ತಾನದ ಪರಮಾಣು ರಹಸ್ಯ ಬಯಲಿಗೆ ಎಳೆದಿದ್ದ ಭಾರತದ ಅಜಿತ ದೋವಲ್…!

ನವದೆಹಲಿ: ಹರಿದ ಶಾಲು, ಧೂಳಿನ ಬೀದಿಗಳು ಮತ್ತು ಯಾರೂ ಗಮನ ಹರಿಸದ ಭಿಕ್ಷಕುನಂತಹ ವ್ಯಕ್ತಿ. ಇದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್, 1980 ರ ದಶಕದಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಗಮನಿಸದೆ ವಾಸಿಸುತ್ತಿದ್ದ ಪರಿ. ಪಾಕಿಸ್ತಾನದಲ್ಲಿ ನಡೆದಿರುವ ಗುಪ್ತಚರ ಕಾರ್ಯಾಚರಣೆಗಳಲ್ಲಿ ವೇಷ ಮರೆಸಿಕೊಂಡು ಭಿಕ್ಷುಕನಂತ ವೇಷ ಧರಿಸಿಕೊಂಡು ಶತ್ರು ದೇಶದ ಎದೆಯಲ್ಲಿ ನಡುಕ ಸೃಷ್ಟಿಸಿದವರು. … Continued

ಭಾರತದ ಸರಕುಗಳ ಮೇಲೆ ಮೇಲೆ ಶೇ.50 ರಷ್ಟು ಸುಂಕ ನಾಳೆಯಿಂದ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ನವದೆಹಲಿ: ಭೌಗೋಳಿಕ ರಾಜಕೀಯ ಒತ್ತಡಗಳ ನೆರಳಿನಲ್ಲಿ ಭಾರತದ ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದ ನಂತರ, ಆಗಸ್ಟ್‌ 27ರಿಂದ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ಜಾರಿಗೆ ತರಲು ಅಮೆರಿಕ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ಕರಡು ಸೂಚನೆ ಹೊರಡಿಸಿದೆ. ಭಾರತದಿಂದ ಆಮದು ಮಾಡಿಕೊಳ್ಳುವ … Continued