ಬಿಹಾರದ ಅಂತಿಮ ಮತದಾರರ ಪಟ್ಟಿ ಬಿಡುಗಡೆ ; ಎಸ್‌ಐ ಆರ್ ನಂತರ 48 ಲಕ್ಷ ಮತದಾರರ ಹೆಸರು ಕೈಬಿಟ್ಟ ಚುನಾವಣಾ ಆಯೋಗ

ನವದೆಹಲಿ: ಚುನಾವಣಾ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯದ ನಂತರ ಬಿಹಾರದ ಚುನಾವಣೆಗೆ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು 48 ಲಕ್ಷ ಅನರ್ಹ ಮತದಾರರನ್ನು ಅಂತಿಮ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ, ಆದರೆ 21 ಲಕ್ಷ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು … Continued

ಕೊಳಕುತನ…: ಭಾರತದ ಏಷ್ಯಾ ಕಪ್ ಟ್ರೋಫಿ ತೆಗೆದುಕೊಂಡು ಹೋದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ…!

ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆದರೂ ಭಾರತದ ಕ್ರಿಕೆಟ್ ತಂಡವು ಪಾಕಿಸ್ತಾನದ ಸಚಿವರೂ ಆಗಿರುವ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ACC) ಚೇರ್ಮನ್‌ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಕಾರಣರಾದವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಮುಖ್ಯಸ್ಥರೂ ಆಗಿರುವ … Continued

ಏಷ್ಯಾ ಕಪ್ ಕ್ರಿಕೆಟ್‌ : ಪಾಕಿಸ್ತಾನದ ಸಚಿವನಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತದ ತಂಡ

ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ಬಳಿಕ, ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್ ಟ್ರೋಫಿಯನ್ನು ಪಾಕಿಸ್ತಾನದ ಸಚಿವರೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೋಹ್ಸಿನ್ ನಕ್ವಿ ಅವರಿಂದ ಸ್ವೀಕರಿಸಲು ನಿರಾಕರಿಸಿದೆ. ಬಿಸಿಸಿಐ ಈ ಬಗ್ಗೆ ನವೆಂಬರ್‌ನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ತೀವ್ರ ಆಕ್ಷೇಪ ದಾಖಲಿಸಲು ನಿರ್ಧರಿಸಿದೆ … Continued

ಕ್ರಿಕೆಟ್‌ | ತಿಲಕ್ ವರ್ಮಾ ಅಮೋಘ ಆಟ; ರೋಮಾಂಚನಕಾರಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿ ಏಷ್ಯಾ ಕಪ್ ಗೆದ್ದ ಭಾರತ

ದುಬೈ: ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ 2025ರ ಏಷ್ಯಾಕಪ್ ಚಾಂಪಿಯನ್ ಆಗಿದೆ. ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ ನೆರವಿನಿಂದ ಹಾಗೂ ಕೊನೆಯಲ್ಲಿ ಶಿವಂ ದುಬೆ ಅವರ ಬಿರುಸಿನ ಬ್ಯಾಟಿಂಗ್‌ನಿಂದ ಭಾರತವು ಪಾಕಿಸ್ತಾನದ ವಿರುದ್ಧ5 ವಿಕೆಟ್‌ಗಳಿಂದ ಜಯಗಳಿಸಿ 2025ರ ಏಷ್ಯಾಕಪ್ ಅನ್ನು ಮುಡಿಗೇರಿಸಿಕೊಂಡಿತು. ಭಾರತದ ಆರಂಭಿಕ ಬ್ಯಾಟಿಂಗ್ ಆರಂಭದಿಂದಲೇ ಆಘಾತ ಅನುಭವಿಸಿದರೂ ಸಂಕಷ್ಟದ … Continued

ಸೆಪ್ಟೆಂಬರ್ 30ರಿಂದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್ 2025 ಆರಂಭ ; ಎಲ್ಲ 8 ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ…

ನವದೆಹಲಿ:  ಸೆಪ್ಟೆಂಬರ್ 30 ರಂದು ಅಸ್ಸಾಂನ ಗುವಾಹತಿಯಲ್ಲಿ ಸಹ-ಆತಿಥೇಯ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿರುವ 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಒಟ್ಟು ಎಂಟು ತಂಡಗಳು ಪರಸ್ಪರ ಹೋರಾಡಲಿವೆ. ಆಸ್ಟ್ರೇಲಿಯಾ (7 ಬಾರಿ), ಇಂಗ್ಲೆಂಡ್ (4 ಬಾರಿ) ಮತ್ತು ನ್ಯೂಜಿಲೆಂಡ್ (1 ಬಾರಿ) – ಇದುವರೆಗೆ 50-ಓವರ್ ಮಹಿಳಾ ವಿಶ್ವ … Continued

ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ ಸಮಾವೇಶದಲ್ಲಿ ಕಾಲ್ತುಳಿತ ; 38 ಮಂದಿ ಸಾವು, 62 ಮಂದಿಗೆ ಗಾಯ

ತಮಿಳುನಾಡಿನ ಕರೂರಿನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ಹಾಗೂ ತಮಿಳು ನಟ ವಿಜಯ ನೇತೃತ್ವದ ಬೃಹತ್‌ ರಾಜಕೀಯ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸಾವಿರಾರು ಜನರು ಸಮಾವೇಶಗೊಂಡ ವೇಳೆ ನೂಕುನುಗ್ಗಲು ಸಂಭವಿಸಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿನೆಮಾದಿಂದ … Continued

ವೀಡಿಯೊಗಳು | ನಿಮ್ಮ ನಾಶವಾದ ರನ್‌ ವೇಗಳು ನಿಮಗೆ ʼವಿಜಯʼದಂತೆ ಕಾಣುತ್ತಿವೆಯೇ?”; ಪಾಕ್‌ ಪ್ರಧಾನಿ ಹೇಳಿಕೆಗೆ ಭಾರತ ವ್ಯಂಗ್ಯ

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ “ಮತ್ತೊಮ್ಮೆ ಭಯೋತ್ಪಾದನೆಯನ್ನು ವೈಭವೀಕರಿಸಿದ್ದಕ್ಕಾಗಿ” ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರದ್ದು “ಅಸಂಬದ್ಧ ನಾಟಕ” ಎಂದು ಭಾರತ ಶನಿವಾರ ಟೀಕಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತ್ಯುತ್ತರ ನೀಡುವ ಹಕ್ಕನ್ನು ಚಲಾಯಿಸುವಾಗ, ಭಾರತದ ರಾಜತಾಂತ್ರಿಕರಾದ ಪೆಟಲ್ ಗಹ್ಲೋಟ್ ಭಯೋತ್ಪಾದನೆ “ಅವರ (ಪಾಕಿಸ್ತಾನದ) ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ” ಎಂದು ಹೇಳಿದರು. ಶುಕ್ರವಾರ ನಡೆದ ವಿಶ್ವಸಂಸ್ಥೆಯ … Continued

ಗೋಕರ್ಣದ ಬೆಟ್ಟದ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾದ ಮಹಿಳೆ-ಮಕ್ಕಳನ್ನ ವಾಪಸ್ ರಷ್ಯಾಕ್ಕೆ ಕಳುಹಿಸಲು ಹೈಕೋರ್ಟ್ ಗ್ರೀನ್‌ ಸಿಗ್ನಲ್

ಬೆಂಗಳೂರು: ಜುಲೈನಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ ರಷ್ಯಾದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಿಗೆ ಅವರ ದೇಶ ರಷ್ಯಾಕ್ಕೆ ಮರಳಲು ಅನುಮತಿ ನೀಡಲು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ. ನೀನಾ ಕುಟಿನಾ ಅವರ ಮಾಜಿ ಪತಿ ಮತ್ತು ಮಕ್ಕಳ ತಂದೆ ಇಸ್ರೇಲಿ ಪ್ರಜೆ ಡ್ರೋರ್ ಶ್ಲೋಮೋ ಗೋಲ್ಡ್‌ಸ್ಟೈನ್ … Continued

33 ವರ್ಷದಿಂದ ಇದ್ದ ಪಂಜಾಬಿ ವೃದ್ಧೆ ಅಮೆರಿಕದಿಂದ ಗಡೀಪಾರು; ವಿಮಾನದಲ್ಲಿ ಹಾಸಿಗೆ ಕೊಟ್ಟಿಲ್ಲ, ಸ್ನಾನಕ್ಕೆ ಅವಕಾಶ ನೀಡಿಲ್ಲ : ವಕೀಲ

ನವದೆಹಲಿ: ಮೂರು ದಶಕಗಳಿಗೂ ಹೆಚ್ಚು ಕಾಲ ಇದ್ದ ಪಂಜಾಬಿನ 73 ವರ್ಷದ ಮಹಿಳೆಯನ್ನು ಅಮೆರಿಕದಿಂದ ಗಡೀಪಾರು ಮಾಡಲಾಗಿದೆ. ವಲಸೆ ಹಕ್ಕುಗಳ ವಕೀಲರು ಈ ಕ್ರಮವನ್ನು ಕ್ರೂರ ಮತ್ತು ಅನಗತ್ಯ ಎಂದು ಬಣ್ಣಿಸಿದ್ದಾರೆ. ಹರ್ಜಿತ್ ಕೌರ್ ಅವರನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ಐಸಿಇ) ಚಾರ್ಟರ್ಡ್ ವಿಮಾನದಲ್ಲಿ ಇರಿಸಿದ ನಂತರ ಸೆಪ್ಟೆಂಬರ್ 23 ರಂದು ದೆಹಲಿಯ … Continued

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ 15 ಆಟಗಾರರ ಭಾರತದ ಕ್ರಿಕೆಟ್‌ ತಂಡ ಪ್ರಕಟ

ನವದೆಹಲಿ : ಭಾರತದ ಪುರುಷರ ಕ್ರಿಕೆಟ್ ತಂಡವು ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ಆಡಲಿರುವ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಂದು ಗುರುವಾರ (ಸೆಪ್ಟೆಂಬರ್ 25) ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ ಅಗರ್ಕರ್ ಈ ಟೆಸ್ಟ್‌ ಸರಣಿಗೆ ಭಾರತ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ … Continued