ಕಳುವು ಮಾಡಿದ ಬೈಕ್ ಅನ್ನು ಮಾಲೀಕರಿಗೆ ಹಿಂದಿರುಗಿಸಲು 450 ಕಿಮೀ ಪ್ರಯಾಣ ಮಾಡಿದ ಕಳ್ಳ..! ಕ್ಷಮಾಪಣೆ ಪತ್ರದ ಜೊತೆಗೆ ಹಣವನ್ನೂ ಇಟ್ಟು ಹೋದ…!!

ಇತ್ತೀಚೆಗೆ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಅಪರೂಪದ ಘಟನೆಯೊಂದರಲ್ಲಿ, ತಮಿಳುನಾಡಿನ ವ್ಯಕ್ತಿಯೊಬ್ಬ ಕಳುವು ಮಾಡಿದ ಬೈಕ್‌ ಅನ್ನು ಕದ್ದ ಸ್ಥಳದಲ್ಲಿಯೇ ತಂದಿಟ್ಟಿದ್ದಲ್ಲದೆ, ಕ್ಷಮೆಯಾಚನೆಯ ಪತ್ರ ಬರೆದಿಟ್ಟು, ಅದರ ಜೊತೆಗೆ ಹಣವನ್ನೂ ಇಟ್ಟು ಹೋದ ಘಟನೆ ನಡೆದಿದೆ. ತಿತಮಿಳನಾಡಿನ ರುಪ್ಪುವನಂ ಬಳಿಯ ಡಿ ಪಲಯ್ಯೂರ್ ಎಂಬಲ್ಲಿ ಇಂತಹ ಅಪರೂಪದ ಘಟನೆ … Continued

ವೀಡಿಯೊ..| ವಿಮಾನ ಲ್ಯಾಂಡ್‌ ಆಗುತ್ತಿದ್ದಾಗ ರನ್‌ ವೇಯಲ್ಲಿ ಅಚಾನಕ್‌ ಆಗಿ ಬಂದ ಮತ್ತೊಂದು ವಿಮಾನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಿದ ಪೈಲಟ್‌…!

ಚಿಕಾಗೋ : ಮಂಗಳವಾರ ಬೆಳಿಗ್ಗೆ ಅಮೆರಿಕದ ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆಯುವುದನ್ನು ಪೈಲಟ್‌ ತನ್ನ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾನೆ. ಸೌತ್‌ವೆಸ್ಟ್ ಏರ್‌ಲೈನ್ಸ್ ಪೈಲಟ್ ಕೊನೆಯ ಕ್ಷಣದಲ್ಲಿ ವಿಮಾನದ ಲ್ಯಾಂಡಿಂಗ್ ಮಾಡುವುದನ್ನು ಕೈಬಿಟ್ಟು ಮತ್ತೆ ವಿಮಾನವನ್ನು ಹಾರಿಸಿ ಸಂಭವನೀಯ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಖಾಸಗಿ ಜೆಟ್ ಪೈಲಟ್‌ ಅನುಮತಿಯಿಲ್ಲದೆ ರನ್‌ವೇ … Continued

ವೀಡಿಯೊ…| ಮುಂಬೈನ ಮಂತ್ರಾಲಯದ 7ನೇ ಮಹಡಿಯಿಂದ ಹಾರಿದ ವ್ಯಕ್ತಿ ; ಮುಂದಾಗಿದ್ದು ಪವಾಡ…

ಮುಂಬೈ : ದಕ್ಷಿಣ ಮುಂಬೈನಲ್ಲಿರುವ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಚೇರಿಯಾದ ಮಂತ್ರಾಲಯ ಕಟ್ಟಡದಿಂದ ಜಿಗಿದು ಮಂಗಳವಾರ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಆದರೆ ಆದರೆ ಪವಾಡಸದೃಶರೀತಿಯಲ್ಲಿ ಅವರು ಸುರಕ್ಷತಾ ಬಲೆಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಘಟನೆಯ ವೀಡಿಯೊದಲ್ಲಿ ಸುರಕ್ಷತಾ ಬಲೆಯಲ್ಲಿ ಬಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವ ಮೊದಲು ಪೊಲೀಸ್ ಸಿಬ್ಬಂದಿ … Continued

ವೀಡಿಯೊ…| ಚಾಂಪಿಯನ್ಸ್ ಟ್ರೋಫಿ 2025 : ಭಾರತದ ಧ್ವಜವನ್ನು ಬೀಸಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಅಭಿಮಾನಿಯೊಬ್ಬನ ಕಾಲರ್‌ ಹಿಡಿದು ಎಳೆದಾಡಿದ್ರಾ ..?

ವೈರಲ್ ಆಗಿರುವ ವಿಡಿಯೋದಲ್ಲಿ, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಭಾರತೀಯ ಧ್ವಜವನ್ನು ಬೀಸುತ್ತಿದ್ದ ಅಭಿಮಾನಿಯೊಬ್ಬನನ್ನು ಪಾಕಿಸ್ತಾನ ಅಧಿಕಾರಿಗಳು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಘಟನೆಯ ನಿಖರತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ವೀಡಿಯೊದಲ್ಲಿ, ಇಬ್ಬರು ಅಧಿಕಾರಿಗಳು ಧ್ವಜವನ್ನು ಕಸಿದುಕೊಂಡು ಅಭಿಮಾನಿ ಕಾಲರ್‌ ಹಿಡಿದುಕೊಂಡು ಎಳೆದಾಡುತ್ತಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ತಡೆದು ಕ್ರೀಡಾಂಗಣದ ಹೊರಗೆ ಥಳಿಸಿದ್ದಾರೆ ಎಂದು ವರದಿಗಳು … Continued

ಕುಡಿದ ಅಮಲಿನಲ್ಲಿ ವಧುವಿನ ಬದಲು ಗೆಳೆಯನ ಕೊರಳಿಗೆ ಮಾಲೆ ಹಾಕಿದ ವರ…! ಕೋಪದಿಂದ ಮದುವೆ ರದ್ದುಗೊಳಿಸಿದ ವಧು…!!

ಬರೇಲಿ : ಮದ್ಯದ ಅಮಲಿನಲ್ಲಿದ್ದ ವರನೊಬ್ಬ ಮದುವೆಯ ಮಾಲೆಯನ್ನು ವಧುವಿನ ಕೊರಳಿಗೆ ಹಾಕುವ ಬದಲು ತನ್ನ ಸ್ನೇಹಿತನ ಕೊರಳಿಗೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಈ ವಿಲಕ್ಷಣ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವರ ಕುಡಿದಿದ್ದನ್ನು ಕಂಡು ಕೋಪಗೊಂಡ ವಧು, ಆತನನ್ನು ಮದುವೆಯಾಗಲು ನಿರಾಕರಿಸಿ ಮದುವೆಯನ್ನು ರದ್ದುಗೊಳಿಸಿದ್ದಾಳೆ. … Continued

ಐಐಟಿ, ಎನ್‌ಐಟಿಗೆ ಪ್ರವೇಶ ಪಡೆಯುವ ಕುರಿತು ತಂದೆ-ಮಗನ ಅಗ್ರಿಮೆಂಟ್ ಭಾರಿ ವೈರಲ್‌ ; ಆದರೆ ಅಲ್ಲೊಂದು ಟ್ವಿಸ್ಟ್…

ನವದೆಹಲಿ: ಐಐಟಿ, ಎನ್‌ಐಟಿ, ಐಐಐಟಿ ಇತ್ಯಾದಿಗಳಿಗೆ ಪ್ರವೇಶ ಪಡೆಯುವುದುಅನೇಕ ವಿದ್ಯಾರ್ಥಿಗಳ ಕನಸಾಗಿದೆ. ಹೀಗಾಗಿ ಉತ್ತಮ ಶಿಕ್ಷಣ ಮತ್ತು ಅತ್ಯುತ್ತಮ ಅಂಕ ಪಡೆಯಲು ಪೋಷಕರು ತಮ್ಮ ಮಕ್ಕಳ ಮೇಲೆ ಕೆಲವೊಮ್ಮೆ ನಿಬಂಧನೆಗಳನ್ನು ವಿಧಿಸುವುದೂ ಉಂಟು. ಇಂಥದ್ದೇ ವಿದ್ಯಮಾನದಲ್ಲಿ ದೆಹಲಿಯ ಹುಡುಗನ ಮುಂದೆ ಆತನ ತಂದೆ ವಿಭಿನ್ನವಾದ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ತಂದೆಯೊಬ್ಬರು ತಮ್ಮ ಮಗ ಐಐಟಿಗೆ ಪ್ರವೇಶ ಪಡೆದರೆ … Continued

ವೀಡಿಯೊ : ವಾಗ್ವಾದದ ನಂತರ ಬೆಂಗಳೂರಿನ ಟೋಲ್‌ ನಲ್ಲಿ ವ್ಯಕ್ತಿಯ ಶರ್ಟ್‌ ಹಿಡಿದು ಕಾರು ಚಲಾಯಿಸಿ ಎಳೆದೊಯ್ದ ಚಾಲಕ…!

ಬೆಂಗಳೂರು : ಬೆಂಗಳೂರಿನ ಟೋಲ್ ಬೂತ್‌ನಲ್ಲಿ ಓವರ್‌ಟೇಕ್ ಮಾಡುವ ವಿಚಾರದಲ್ಲಿ ತೀವ್ರ ಮಾತಿನ ಚಕಮಕಿ ನಡೆದ ನಂತರ ವ್ಯಕ್ತಿಯೊಬ್ಬನ ಶರ್ಟ್‌ ಹಿಡಿದುಕೊಂಡು ಕಾರಿನ ಚಾಲಕನೊಬ್ಬ ಸುಮಾರು 50 ಮೀಟರ್ ವರೆಗೆ ಆತನನ್ನು ಎಳೆದೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಲಮಂಗಲ ಹೆದ್ದಾರಿ ಟೋಲ್ ಬೂತ್ ನಲ್ಲಿ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಾಹನಗಳು ಟೋಲ್ ಬೂತ್ … Continued

ವೀಡಿಯೊ…| ಬೃಹತ್‌ ತಿಮಿಂಗಿಲ ತನ್ನ ಮಗನನ್ನು ನುಂಗಿದ ಭಯಾನಕ ಕ್ಷಣ ವೀಡಿಯೊ ಮಾಡುತ್ತಿದ್ದ ತಂದೆ…! ಮುಂದಾಗಿದ್ದು ಮಾತ್ರ…..ವೀಕ್ಷಿಸಿ

ಚಿಲಿಯ ಬಹಿಯಾ ಎಲ್ ಅಗುಯಿಲಾ ಎಂಬಲ್ಲಿ 24 ವರ್ಷದ ವ್ಯಕ್ತಿ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ ಬೃಹತ್‌ ಹಂಪ್‌ಬ್ಯಾಕ್ ತಿಮಿಂಗಿಲವು ಆತನನ್ನು ಹಳದಿ ಬಣ್ಣದ ದೋಣಿ ಸಮೇತವಾಗಿ ನುಂಗಿದ್ದು, ನಂತರ ಹೊರಕ್ಕೆ ಉಗುಳಿದ ಅಪರೂಪದ ಘಟನೆ ನಡೆದಿದೆ. ಚಿಲಿಯ ದಕ್ಷಿಣದ ಪ್ಯಾಟಗೋನಿಯಾ ಪ್ರದೇಶದ ಮೆಗೆಲ್ಲನ್ ಜಲಸಂಧಿಯ ಸ್ಯಾನ್ ಇಸಿಡ್ರೊ ಲೈಟ್‌ಹೌಸ್ ಬಳಿ ಶನಿವಾರ ಈ ಘಟನೆ … Continued

ವೀಡಿಯೊ…| ಮಹಿಳೆಯ ಪ್ಯಾಂಟ್‌ ಜೇಬಿನಲ್ಲಿದ್ದ ಮೊಬೈಲ್‌‌ ಸ್ಫೋಟ; ಆಸ್ಪತ್ರೆಗೆ ದಾಖಲು ; ಆಘಾತಕಾರಿ ದೃಶ್ಯ ವೈರಲ್‌

ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಸ್ಥಳೀಯ ದಿನಸಿ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಪ್ಯಾಂಟಿನ ಹಿಂದಿನ ಜೇಬಿನಲ್ಲಿದ್ದ ಸ್ಮಾರ್ಟ್‌ಫೋನ್ ಸ್ಫೋಟಗೊಂಡಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರೆಜಿಲ್‌ನ ಅನಾಪೊಲಿಸ್‌ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಆಕೆ ತನ್ನ ಪತಿಯೊಂದಿಗೆ ದಿನಸಿ ಅಂಗಡಿಗೆ ಬಂದಿದ್ದರು. ಇದ್ದಕ್ಕಿದ್ದಂತೆ, ಅವರ ಪ್ಯಾಂಟ್‌ನಿಂದ ಹೊಗೆ ಹೊರಹೊಮ್ಮಲು ಪ್ರಾರಂಭಿಸಿತು, ನಂತರ ಅವರು ಬೆನ್ನಿನ ಕೆಳಭಾಗದಿಂದ ಜ್ವಾಲೆಯು … Continued

ವೀಡಿಯೊಗಳು…| ಮದುವೆ ಮಂಟಪಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಚಿರತೆ ; ಅರಣ್ಯ ಸಿಬ್ಬಂದಿ ಮೇಲೆ ದಾಳಿ-ಗಾಯ

ಮದುವೆ ಮನೆಗೆ ಚಿರತೆಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ಲಕ್ನೋದ ಪಾರಾ ಪ್ರದೇಶದಲ್ಲಿ ನಡೆದಿದೆ. ಲಕ್ನೋ ನಗರದ ಬುದ್ಧೇಶ್ವರ ರಿಂಗ್ ರಸ್ತೆಯ ಎಂಎಂ ಲಾನ್‌ನಲ್ಲಿ ಬುಧವಾರ ರಾತ್ರಿ 11: 40 ರ ಸುಮಾರಿಗೆ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಮದುವೆಗೆ ಬಂದ ನೂರಾರು ಅತಿಥಿಗಳು ಗಾಬರಿಗೊಂಡು ಪಾರಾಗಲು ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದಾರೆ. ಚಿರತೆ ದಾಳಿಯಿಂದ … Continued