ಟ್ರಂಪ್‌ಗೆ ಕ್ಸಿ ಟಕ್ಕರ್‌ ; ಅಮೆರಿಕದ ಸರಕುಗಳ ಮೇಲೆ ಶೇ 125% ತೆರಿಗೆ ವಿಧಿಸಿದ ಚೀನಾ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಪ್ರಾರಂಭಿಸಿದ ಸುಂಕ ಸಮರ ಮುಗಿಯುವ ಹಾಗೆ ಕಾಣುತ್ತಿಲ್ಲ. ಅದಿ ಈಗ ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಸಮರವಾಗಿ ಮಾರ್ಪಟ್ಟಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಚೀನಾದ (China) ಮೇಲೆ ವಿಧಿಸಿದ ತೆರಿಗೆಯ ಪ್ರತೀಕಾರವಾಗಿ ಈಗ ಅಮೆರಿಕದ ಸರಕುಗಳ ಮೇಲೆ ಚೀನಾ 125%ರಷ್ಟು ಸುಂಕ ವಿಧಿಸಿದೆ. … Continued

26/11 ಮುಂಬೈ ದಾಳಿ ಸಂಚುಕೋರ ತಹವ್ವೂರ್ ರಾಣಾನನ್ನು 18 ದಿನಗಳ ಎನ್‌ಐಎ ಕಸ್ಟಡಿಗೆ ಕಳುಹಿಸಿದ ನ್ಯಾಯಾಲಯ

ನವದೆಹಲಿ: ಗುರುವಾರ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ರಾಣಾನನ್ನು ನ್ಯಾಯಾಲಯವು 18 ದಿನಗಳ ರಾಷ್ಟ್ರೀಯ ತನಿಖಾ ದಳ(NIA)ದ ಕಸ್ಟಡಿಗೆ ಕಳುಹಿಸಿದೆ. ಎನ್‌ಐಎ ಗುರುವಾರ ಸಂಜೆ ರಾಣಾನನ್ನು ಔಪಚಾರಿಕವಾಗಿ ಬಂಧಿಸಿದ ನಂತರ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಿತು ಹಾಗೂ 20 ದಿನಗಳ ಕಸ್ಟಡಿಗೆ ಕೋರಿತು, ನಂತರ ಆದೇಶವನ್ನು ಕಾಯ್ದಿರಿಸಲಾಯಿತು. ವಾದಗಳನ್ನು … Continued

ಚೀನಾಕ್ಕೆ ಮತ್ತೆ ಶಾಕ್‌ ಕೊಟ್ಟ ಟ್ರಂಪ್‌ ; ಚೀನಾದ ಆಮದಿನ ಮೇಲೆ ಮತ್ತೆ ಸುಂಕ ಹೆಚ್ಚಿಸಿದ ಅಮೆರಿಕ

ವಾಷಿಂಗ್ಟನ್‌ : ಚೀನಾದ ಆಮದುಗಳ ಮೇಲಿನ ಸುಂಕವನ್ನು ಅಮೆರಿಕ ಮತ್ತೆ ಹೆಚ್ಚಿಸಿದೆ. ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಸುಂಕವನ್ನು 145%ಕ್ಕೆ ಹೆಚ್ಚಿಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಅಮೆರಿಕದ ಪ್ರಸಾರಕ ಸಿಎನ್‌ಬಿಸಿಗೆ ದೃಢಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕಾರ್ಯನಿರ್ವಾಹಕ ಆದೇಶದ ನಂತರ ಈ ಹೆಚ್ಚಳ ಸಂಭವಿಸಿದೆ. ಈ ಮೊದಲು 84%ರಷ್ಟಿದ್ದ ಸುಂಕವನ್ನು … Continued

ವೀಡಿಯೊಗಳು…| ಜೆನೆಟಿಕ್ ಎಂಜಿನಿಯರಿಂಗ್ ಮೂಲಕ 12500 ವರ್ಷಗಳ ಹಿಂದೆ ಅಳಿದುಹೋಗಿದ್ದ ಭಯಾನಕ ತೋಳಗಳನ್ನು ಮರುಸೃಷ್ಟಿಸಿದ ವಿಜ್ಞಾನಿಗಳು…!

ಒಂದು ಅದ್ಭುತ ವೈಜ್ಞಾನಿಕ ಸಾಧನೆಯಲ್ಲಿ, ವಿಜ್ಞಾನಿಗಳು ಸುಮಾರು 12,500 ವರ್ಷಗಳ ಹಿಂದೆ ಅಳಿದುಹೋಗಿದ್ದ ಭಯಾನಕ ತೋಳ(dire wolf)ದ ತಳಿಯನ್ನು ಜೆನೆಟಿಕ್ ಎಂಜಿನಿಯರಿಂಗ್ ಮೂಲಕ ವಿಜ್ಞಾನಿಗಳು ಪುನರುಜ್ಜೀವನಗೊಳಿಸಿದ್ದಾರೆ. ಈ ಗಮನಾರ್ಹ ಸಾಧನೆಯನ್ನು ಅಮೆರಿಕದ ಟೆಕ್ಸಾಸ್ ಮೂಲದ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ಕೊಲೊಸಲ್ ಬಯೋಸೈನ್ಸ್ ಸಾಧಿಸಿದೆ. ಪ್ರಾಚೀನ ಡಿಎನ್‌ಎ ಹೊರತೆಗೆಯುವಿಕೆ, ಕ್ಲೋನಿಂಗ್ ಮತ್ತು ಜೀನ್ ಸಂಪಾದನೆ ಸೇರಿದಂತೆ ಜೆನೆಟಿಕ್ … Continued

ಚೀನಾದ ಮೇಲೆ 104% ಸುಂಕ ವಿಧಿಸಿದ ಅಮೆರಿಕ ; ದೃಢಪಡಿಸಿದ ಶ್ವೇತಭವನ : ಏಪ್ರಿಲ್ 9 ರಿಂದ ಜಾರಿಗೆ

ವಾಷಿಂಗ್ಟನ್‌ : ಏಪ್ರಿಲ್ 9 ರಿಂದ ಜಾರಿಗೆ ಬರುವಂತೆ ಅಮೆರಿಕವು ಚೀನಾದ ಮೇಲೆ ಶೇ. 104 ರಷ್ಟು ಸುಂಕಗಳನ್ನು ವಿಧಿಸಿದ್ದು, ಶ್ವೇತಭವನವು ಫಾಕ್ಸ್ ಬಿಸಿನೆಸ್ ವರದಿಗಾರರಿಗೆ ದೃಢಪಡಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾಕ್ಕೆ ಅಮೆರಿಕದ ಆಮದುಗಳ ಮೇಲಿನ ಶೇ. 34 ರಷ್ಟು ಪ್ರತಿಸುಂಕವನ್ನು ಹಿಂಪಡೆಯುವಂತೆ ಒತ್ತಾಯಿಸಿ ನೀಡಿದ ಎಚ್ಚರಿಕೆ ಮತ್ತು ಒಂದು ದಿನದ ಗಡುವಿನ … Continued

26/11 ಮುಂಬೈ ದಾಳಿ ಆರೋಪಿ ತಹವ್ವೂರ್ ರಾಣಾ ಭಾರತಕ್ಕೆ ಹಸ್ತಾಂತರಿಸಲು ತಡೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಅಮೆರಿಕ ಸುಪ್ರೀಂ ಕೋರ್ಟ್

ವಾಷಿಂಗ್ಟನ್‌ : 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ರಾಣಾ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯುವಂತೆ ಕೋರಿ ಸಲ್ಲಿಸಿದ್ದ ಕೊನೆಯ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ಆತನನ್ನು ಭಾರತಕ್ಕೆ ಹಸ್ತಾಂತರಿಸುವುದು ಈಗ ಮತ್ತಷ್ಟು ಸುಲಭವಾಗಿದೆ. ಮುಂಬೈನ ಹೋಟೆಲ್‌ಗಳು, ರೈಲು ನಿಲ್ದಾಣ ಮತ್ತು ಯಹೂದಿ ಕೇಂದ್ರದ ಮೇಲೆ ಮೂರು ದಿನಗಳ ಕಾಲ … Continued

ಅಮೆರಿಕದ ರಫ್ತಿನ ಮೇಲೆ ಪ್ರತಿಸುಂಕ ವಿಧಿಸಿದ ಚೀನಾಕ್ಕೆ 50%ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿದ ಟ್ರಂಪ್‌ ; ಒಂದು ದಿನದ ಗಡುವು

ವಾಷಿಂಗ್ಟನ್‌ : ಚೀನಾದ ಆಮದುಗಳ ಮೇಲಿನ ಶೇ. 34 ರಷ್ಟು ಸುಂಕ ವಿಧಿಸಿದ್ದಕ್ಕೆ ಪ್ರತಿಯಾಗಿ ಚೀನಾ ಪ್ರತಿಸುಂಕ ವಿಧಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಶೇ. 50 ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಸೋಮವಾರ ಚೀನಾಕ್ಕೆ ಬೆದರಿಕೆ ಹಾಕಿದ್ದಾರೆ. ಇದಲ್ಲದೆ, ಅಮೆರಿಕದ ಆಮದುಗಳ ಮೇಲಿನ ಶೇ. 34 ರಷ್ಟು ಪರಸ್ಪರ ಸುಂಕ ವಿಧಿಸುವ ಘೋಷಣೆಯನ್ನು … Continued

ಭಾರತದ ರಫ್ತಿನ ಮೇಲೆ 26%ರಷ್ಟು ಪ್ರತಿ ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ : ಭಾರತದ ಯಾವ ವಲಯದ ಮೇಲೆ ಪರಿಣಾಮ…?

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ 26% ಪ್ರತಿ ಸುಂಕವನ್ನು ಘೋಷಿಸಿದ್ದಾರೆ. ಆ ಮೂಲಕ ಭಾರತಕ್ಕೆ ಪ್ರಮುಖ ವ್ಯಾಪಾರದ ಹೊಡೆತ ನೀಡಿದ್ದಾರೆ. ಅವರ ‘ವಿಮೋಚನಾ ದಿನ’ ಭಾಷಣದಲ್ಲಿ ಘೋಷಿಸಿದ ಈ ಕ್ರಮವು ಹೊಸ ವ್ಯಾಪಾರ ಅಡೆತಡೆಗಳಿಗಿಂತ ಸುಂಕದ ರಿಯಾಯಿತಿಗಳನ್ನು ನಿರೀಕ್ಷಿಸುತ್ತಿದ್ದ ಭಾರತಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ. ಏಪ್ರಿಲ್ 9 ರಿಂದ … Continued

ಅಂಗಡಿಯೊಳಗೆ ಗುಂಡಿನ ದಾಳಿ ; ಭಾರತದ ಮೂಲದ ತಂದೆ-ಮಗಳು ಸಾವು

ನವದೆಹಲಿ:  24 ವರ್ಷದ ಭಾರತೀಯ ಯುವತಿ ಮತ್ತು ಆಕೆಯ 56 ವರ್ಷದ ತಂದೆಯನ್ನು ಅಮೆರಿಕದ ವರ್ಜೀನಿಯಾದಲ್ಲಿ ಅವರು ಕೆಲಸ ಮಾಡುತ್ತಿದ್ದ ಅಂಗಡಿಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅಕೋಮಾಕ್ ಕೌಂಟಿಯಲ್ಲಿ ಅಂಗಡಿ ತೆರೆದ ಸ್ವಲ್ಪ ಸಮಯದ ನಂತರ ಗುರುವಾರ ಈ ಘಟನೆ ನಡೆದಿದೆ. ಜೋಡಿ ಕೊಲೆಗೆ ಸಂಬಂಧಿಸಿದಂತೆ ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಎಂಬಾತನನ್ನು ಪೊಲೀಸರು … Continued

‘ಭಾರತದ ಮಗಳು…ಸಾವಿರಾರು ಮೈಲು ದೂರದಲ್ಲಿದ್ದರೂ ನಮ್ಮ ಹೃದಯಕ್ಕೆ ಹತ್ತಿರವಾಗಿದ್ದೀರಿ’ : ಸುನೀತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿ ಪತ್ರ

ನವದೆಹಲಿ: ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿದ್ದು, ಈಗ ಅಲ್ಲಿಂದ ಭೂಮಿಗೆ ವಾಪಸಾಗಲು ಮಂಗಳವಾರ ಪ್ರಯಾಣ ಆರಂಭಿಸಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಪೂರ್ವಕ ಪತ್ರ ಬರೆದಿದ್ದಾರೆ. ಮಾರ್ಚ್ 18 ರಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಪತ್ರದಲ್ಲಿ, … Continued