ವೀಡಿಯೊಗಳು | ‘ನಿಮಗೆ ನಾಚಿಕೆಯಾಗಬೇಕು, ಸಾಮೂಹಿಕ ಕೊಲೆಗಾರ’: ವಾಷಿಂಗ್ಟನ್‌ನಲ್ಲಿ ಅಸಿಮ್ ಮುನೀರ್ ಗೆ ಪ್ರತಿಭಟನೆಯ ಬಿಸಿ-ವೀಕ್ಷಿಸಿ

ಪಾಕಿಸ್ತಾನಿ ಜನರಲ್ ಸೈಯದ್ ಅಸಿಮ್ ಮುನೀರ್ ವಾಷಿಂಗ್ಟನ್‌ನಲ್ಲಿದ್ದಾಗ ಅವರನ್ನು ನಿಂದಿಸಲಾಯಿತು. ಕೆಲವು ಪಾಕಿಸ್ತಾನಿ ಪ್ರತಿಭಟನಾಕಾರರು ಮತ್ತು ಪಾಕಿಸ್ತಾನಿ ಮೂಲದ ಜನರು ಮುನೀರ್ ಅವರ ಹೋಟೆಲ್ ಹೊರಗೆ ಜಮಾಯಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನೀರ್ ಹೋಟೆಲ್‌ನಿಂದ ಹೊರಬರುವಾಗ ಪ್ರತಿಭಟನಾಕಾರರು – “ಪಾಕಿಸ್ತಾನಿಯೋಂ ಕೆ ಕಾತಿಲ್,” “ನೀವು ಹೇಡಿ,” ಮತ್ತು “ನಿಮಗೆ ನಾಚಿಕೆಯಾಗಬೇಕು” – ಎಂಬ ಘೋಷಣೆಗಳನ್ನು … Continued

ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆ ಜಗಳ : ಒಂದೇ ದಿನ 2,91,682.26 ಕೋಟಿ ರೂ. ಸಂಪತ್ತು ಕಳೆದುಕೊಂಡ ಎಲೋನ್‌ ಮಸ್ಕ್‌..! ಟೆಸ್ಲಾ ಕಂಪನಿಗೆ ಇನ್ನೂ ಹಾನಿ

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಉದ್ವಿಗ್ನತೆ ಹೆಚ್ಚಾದ ನಂತರ ಮಸ್ಕ್ ಅವರ ವೈಯಕ್ತಿಕ ಸಂಪತ್ತು $34 ಬಿಲಿಯನ್‌(2,91,682.26 ಕೋಟಿ ರೂ.ಗಳು)ನಷ್ಟು ಕರಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಈ ಕುಸಿತವು ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವನ್ನು $334.5 ಬಿಲಿಯನ್‌ಗೆ ಇಳಿಸಿತು – ಇದು ಸೂಚ್ಯಂಕದಲ್ಲಿ ಇದುವರೆಗೆ … Continued

ಜಾಗತಿಕ ಟೆಕ್ ದೈತ್ಯ ಇಂಟೆಲ್ ಕಂಪನಿ ಸಿಟಿಒ, ಎಐ (AI) ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್ ಕಟ್ಟಿ ನೇಮಕ

ಬೆಳಗಾವಿ: ಜಾಗತಿಕ ಟೆಕ್ ದೈತ್ಯ ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಇಂಟೆಲ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ (CTO) ಹಾಗೂ ಆ ಕಂಪನಿಯ ಕೃತಕ ಬುದ್ಧಿಮತ್ತೆ (AI) ವಿಭಾದ ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್ ಕಟ್ಟಿ ಅವರು ನೇಮಕವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಂಟೆಲ್‌ (Intel)ಕಂಪನಿಯ ಸಿಇಒ ಲಿಪ್ ಬೂ ಟಾನ್ ಅವರು … Continued

‘ನಗದು..ವಿಮಾನ..ಗುಡ್‌ ಬೈ..! ಅಕ್ರಮ ವಲಸಿಗರು ‘ಅಮೆರಿಕ ತೊರೆಯಲು’ ಸ್ಟೈಫಂಡ್, ವಿಮಾನ ಟಿಕೆಟಿಗೆ ಹಣದ ಆಫರ್‌ ನೀಡಿದ ಟ್ರಂಪ್‌…!

 ವಾಷಿಂಗ್ಟನ್‌ : ತಮ್ಮ ತೀವ್ರವಾದ ವಲಸೆ ನಿಗ್ರಹ ಕ್ರಮದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅಕ್ರಮ ವಲಸಿಗರನ್ನು ದೇಶದಿಂದ ಗಡೀಪಾರು ಮಾಡಲು ವಿಭಿನ್ನ ವಿಧಾನವನ್ನು ಅನುಸರಿಸಲು ನಿರ್ಧರಿಸಿದ್ದಾರೆ. ದೇಶದಲ್ಲಿರುವ ದಾಖಲೆ ಇಲ್ಲದ ಜನರು ತಮ್ಮನ್ನು ತಾವೇ ಸ್ವಯಂ ಗಡೀಪಾರು ಮಾಡಿಕೊಳ್ಳುವುದನ್ನು ಉತ್ತೇಜಿಸಲು ಅವರಿಗೆ ಸ್ಟೈಪೆಂಡ್‌ನಿಂದ ಹಿಡಿದು ವಿಮಾನ ಟಿಕೆಟ್‌ಗಳ ವರೆಗೆ ಹಣಕಾಸಿನ ನೆರವನ್ನು … Continued

ಟ್ರಂಪ್ ಸುಂಕ ಆದೇಶಕ್ಕೂ ಮುನ್ನ ಭಾರತದಿಂದ ಅಮೆರಿಕಕ್ಕೆ 600 ಟನ್ ಐಫೋನ್‌ಗಳನ್ನು ಏರ್‌ಲಿಫ್ಟ್ ಮಾಡಿದ ಆಪಲ್…!

ನವದೆಹಲಿ: ಆಪಲ್‌ನ ಭಾರತದ ಪ್ರಮುಖ ಪೂರೈಕೆದಾರರಾದ ಫಾಕ್ಸ್‌ಕಾನ್ ಮತ್ತು ಟಾಟಾ ಈ ಮಾರ್ಚ್‌ ತಿಂಗಳಲ್ಲಿ ಸುಮಾರು $2 ಬಿಲಿಯನ್ (ಶತಕೋಟಿ) ಮೌಲ್ಯದ ಐಫೋನ್‌ಗಳನ್ನು ಅಮೆರಿಕಕ್ಕೆ ರವಾನಿಸಿವೆ. ಇದು ಸಾರ್ವಕಾಲಿಕ ಗರಿಷ್ಠವಾಗಿದೆ, ಏಕೆಂದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂಬರುವ ಸುಂಕಗಳನ್ನು ತಪ್ಪಿಸಲು ಅಮೆರಿಕದ ಕಂಪನಿಯು ಐಫೋನ್‌ಗಳನ್ನು ವಿಮಾನದಲ್ಲಿ ಸಾಗಿಸಿತು ಎಂದು ಕಸ್ಟಮ್ಸ್ ಡೇಟಾ ತೋರಿಸುತ್ತದೆ. ಟ್ರಂಪ್ … Continued

ಅಮೆರಿಕ-ಚೀನಾ ವ್ಯಾಪಾರ ಯುದ್ಧ ಉಲ್ಬಣ; ಬೋಯಿಂಗ್ ಜೆಟ್ ವಿಮಾನಗಳ ವಿತರಣೆ ತೆಗೆದುಕೊಳ್ಳದಂತೆ ತನ್ನ ಕಂಪನಿಗಳಿಗೆ ಚೀನಾ ಸೂಚನೆ

ಬೀಜಿಂಗ್: ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಅಮೆರಿಕದ ವಾಯುಯಾನ ದೈತ್ಯ ಬೋಯಿಂಗ್‌ ಕಂಪನಿಗಳು ಜೆಟ್‌ಗಳನ್ನು ವಿತರಣೆ ಮಾಡಿದ್ದನ್ನು ತೆಗೆದುಕೊಳ್ಳದಂತೆ ಚೀನಾ ತನ್ನ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ ಎಂದು ಮಂಗಳವಾರ ವರದಿಯೊಂದು ತಿಳಿಸಿದೆ. ಜನವರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಅಮೆರಿಕ ಹಾಗೂ ಚೀನಾ ಪ್ರತಿ … Continued

ಅಮೆರಿಕದ ಅಧ್ಯಕ್ಷ ಟ್ರಂಪ್‌ ಹತ್ಯೆ ಮಾಡಲು ಪೋಷಕರನ್ನೇ ಕೊಂದ 17 ವರ್ಷದ ವಿದ್ಯಾರ್ಥಿ…!

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇರೆಗೆ ವಿಸ್ಕಾನ್ಸಿನ್‌ನ 17 ವರ್ಷದ ನಿಕಿತಾ ಕಾಸಾಪ್ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಿ ಸರ್ಕಾರವನ್ನು ಉರುಳಿಸುವ ಸಲುವಾಗಿ ತನ್ನ ಪೋಷಕರನ್ನೇ ಕೊಂದಿದ್ದಾನೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. … Continued

ಟ್ರಂಪ್‌ಗೆ ಕ್ಸಿ ಟಕ್ಕರ್‌ ; ಅಮೆರಿಕದ ಸರಕುಗಳ ಮೇಲೆ ಶೇ 125% ತೆರಿಗೆ ವಿಧಿಸಿದ ಚೀನಾ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಪ್ರಾರಂಭಿಸಿದ ಸುಂಕ ಸಮರ ಮುಗಿಯುವ ಹಾಗೆ ಕಾಣುತ್ತಿಲ್ಲ. ಅದಿ ಈಗ ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಸಮರವಾಗಿ ಮಾರ್ಪಟ್ಟಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಚೀನಾದ (China) ಮೇಲೆ ವಿಧಿಸಿದ ತೆರಿಗೆಯ ಪ್ರತೀಕಾರವಾಗಿ ಈಗ ಅಮೆರಿಕದ ಸರಕುಗಳ ಮೇಲೆ ಚೀನಾ 125%ರಷ್ಟು ಸುಂಕ ವಿಧಿಸಿದೆ. … Continued

26/11 ಮುಂಬೈ ದಾಳಿ ಸಂಚುಕೋರ ತಹವ್ವೂರ್ ರಾಣಾನನ್ನು 18 ದಿನಗಳ ಎನ್‌ಐಎ ಕಸ್ಟಡಿಗೆ ಕಳುಹಿಸಿದ ನ್ಯಾಯಾಲಯ

ನವದೆಹಲಿ: ಗುರುವಾರ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ರಾಣಾನನ್ನು ನ್ಯಾಯಾಲಯವು 18 ದಿನಗಳ ರಾಷ್ಟ್ರೀಯ ತನಿಖಾ ದಳ(NIA)ದ ಕಸ್ಟಡಿಗೆ ಕಳುಹಿಸಿದೆ. ಎನ್‌ಐಎ ಗುರುವಾರ ಸಂಜೆ ರಾಣಾನನ್ನು ಔಪಚಾರಿಕವಾಗಿ ಬಂಧಿಸಿದ ನಂತರ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಿತು ಹಾಗೂ 20 ದಿನಗಳ ಕಸ್ಟಡಿಗೆ ಕೋರಿತು, ನಂತರ ಆದೇಶವನ್ನು ಕಾಯ್ದಿರಿಸಲಾಯಿತು. ವಾದಗಳನ್ನು … Continued

ಚೀನಾಕ್ಕೆ ಮತ್ತೆ ಶಾಕ್‌ ಕೊಟ್ಟ ಟ್ರಂಪ್‌ ; ಚೀನಾದ ಆಮದಿನ ಮೇಲೆ ಮತ್ತೆ ಸುಂಕ ಹೆಚ್ಚಿಸಿದ ಅಮೆರಿಕ

ವಾಷಿಂಗ್ಟನ್‌ : ಚೀನಾದ ಆಮದುಗಳ ಮೇಲಿನ ಸುಂಕವನ್ನು ಅಮೆರಿಕ ಮತ್ತೆ ಹೆಚ್ಚಿಸಿದೆ. ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕವು ಸುಂಕವನ್ನು 145%ಕ್ಕೆ ಹೆಚ್ಚಿಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಅಮೆರಿಕದ ಪ್ರಸಾರಕ ಸಿಎನ್‌ಬಿಸಿಗೆ ದೃಢಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕಾರ್ಯನಿರ್ವಾಹಕ ಆದೇಶದ ನಂತರ ಈ ಹೆಚ್ಚಳ ಸಂಭವಿಸಿದೆ. ಈ ಮೊದಲು 84%ರಷ್ಟಿದ್ದ ಸುಂಕವನ್ನು … Continued