ವಿಡಿಯೊ| ಹಸೀನಾ ಜೊತೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಖ್ಯಾತ ಕ್ರಿಕೆಟರ್‌ ಶಕೀಬ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ನವದೆಹಲಿ : ಬಾಂಗ್ಲಾದೇಶದ ಮಾಜಿ ಕ್ರಿಕೆಟ್ ನಾಯಕ ಹಾಗೂ ಮಾಜಿ ಅವಾಮಿ ಲೀಗ್ ಮಾಜಿ ಸಂಸದ ಶಕೀಬ್ ಅಲ್ ಹಸನ್ ಅವರ ನಿವಾಸದ ಮೇಲೆ ಬುಧವಾರ ರಾತ್ರಿ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಭಾರತದ ದೆಹಲಿಯಿಂದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಜೊತೆ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶಕೀಬ್ ಅಲ್ ಹಸನ್ ಭಾಗವಹಿಸಿದ ಕೆಲವೇ ಗಂಟೆಗಳ … Continued

“ನನ್ನನ್ನು ಕೊಲ್ಲಬಹುದು….ಜೈಲಿಗೆ ಹಾಕಬಹುದು…ಆದ್ರೂ ಬಾಂಗ್ಲಾದೇಶಕ್ಕೆ ಹೋಗ್ತೇನೆ ” : ಶೇಖ್ ಹಸೀನಾ ಘೋಷಣೆ

ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ತಾಯ್ನಾಡಿಗೆ ಮರಳುವುದಾಗಿ ಘೋಷಿಸಿದ್ದು, ಮರಳಿದ ಬಳಿಕ ಎದುರಾಗಬಹುದಾದ ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಬಂಧನ, ಜೈಲು ಶಿಕ್ಷೆ ಅಥವಾ ಜೀವಕ್ಕೆ ಅಪಾಯ ಎದುರಾದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಾಂಗ್ಲಾದೇಶ ತೊರೆದು ದೆಹಲಿಯಲ್ಲಿ ನೆಲೆಸಿರುವ ಬಳಿಕ ಬುಧವಾರ ಮೊದಲ … Continued

ಭೀಕರ ಕೊಲೆ ; 2 ತಿಂಗಳ ಸಂಚು… ಶಿಕ್ಷಕಿಗೆ 27 ಬಾರಿ ಚಾಕುವಿನಿಂದ ಇರಿದು ಕೊಂದ ಆರೋಪಿ

ಫರಿದಾಬಾದ್: ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 29 ವರ್ಷದ ಶಿಕ್ಷಕಿಯೊಬ್ಬರನ್ನು ವ್ಯಕ್ತಿಯೊಬ್ಬ 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಹಾಡಹಗಲೇ ಶಾಲಾ ಆವರಣದಲ್ಲೇ ನಡೆದ ಈ ಭೀಕರ ಕೃತ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದು, ಆತನನ್ನು … Continued

ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲದೆ 22 ವರ್ಷ ಜೈಲು; ಕೊಲೆ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: 2004ರಲ್ಲಿ ನಡೆದ ಮಹಿಳೆ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸುಮಾರು 22 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಒಡಿಶಾದ ವ್ಯಕ್ತಿಯನ್ನು, “ದುರ್ಬಲ ಹಾಗೂ ಅತ್ಯಂತ ಅವಿಶ್ವಾಸಾರ್ಹ” ಸಾಕ್ಷ್ಯಗಳ ಆಧಾರದ ಮೇಲೆ ಶಿಕ್ಷೆಗೆ ಗುರಿಪಡಿಸಲಾಗಿತ್ತು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಆತನನ್ನು ಖುಲಾಸೆಗೊಳಿಸಿದೆ. ಕೇವಲ ಅನುಮಾನದ ಆಧಾರದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ, ಪೊಲೀಸ್ ಕಸ್ಟಡಿಯಲ್ಲಿ ಥರ್ಡ್ … Continued

‘ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡುʼ ; ರಾಘವೇಂದ್ರ ಮಠದ ಹುಂಡಿಯಲ್ಲಿ ವಿಚಿತ್ರ ಪತ್ರ ಪತ್ತೆ

ಬೆಳಗಾವಿ : ರಾಮದುರ್ಗ ಪಡಕೋಟಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಕಾಣಿಕೆ ಹುಂಡಿಯಲ್ಲಿ ಪತ್ರವೊಂದು ಲಭಿಸಿದ್ದು ಅದರಲ್ಲಿ ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು ಎಂದು ಪತ್ರ ಬರೆದು ಹಾಕಿ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚಿಗೆ ಕಾಣಿಕೆ ಹುಂಡಿ ಎಣಿಕೆ ಮಾಡುವಾಗ ಈ ಪತ್ರ ಲಭಿಸಿದೆ. ಪತ್ರದಲ್ಲಿ ಶ್ರೀ ಗಣಪತಿಯೇ ನಮಃ, ರಾಘವೇಂದ್ರಾಯ ನಮಃ.. … Continued

ಪ್ರಧಾನಿ ಮೋದಿ ವಿಡಿಯೊ ವಿವಾದ: ಡೀಪ್‌ಫೇಕ್, ತಾಂತ್ರಿಕ ದೋಷಗಳಿಗೆ ಮೆಟಾ, ಜುಕರ್‌ಬರ್ಗ್ ಕ್ಷಮೆಯಾಚನೆ

ನವದೆಹಲಿ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳು (Child Sexual Abuse Material – CSAM), ಡೀಪ್‌ಫೇಕ್ (Deepfake) ವಿಷಯಗಳ ಪ್ರಸಾರ ಹಾಗೂ ಪ್ಲಾಟ್‌ಫಾರ್ಮ್‌ ನಿರ್ವಹಣೆಯಲ್ಲಿನ ದೋಷಗಳ ಕುರಿತು ಮೆಟಾ (Meta) ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ. ಪ್ರಧಾನಮಂತ್ರಿ ನರೇಂದ್ರ … Continued

ಮೋದಿ ವಿಡಿಯೊ ವಿವಾದ : 3 ದಿನದಲ್ಲಿ ಕ್ಷಮೆಯಾಚಿಸಿ, ಇಲ್ಲದಿದ್ರೆ ಕಾನೂನು ರಕ್ಷಣೆ ರದ್ದು: ಜುಕರ್‌ಬರ್ಗ್‌ಗೆ ಸಂಸದೀಯ ಸಮಿತಿಯ ಗಡುವು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜುಲೈ 23ರ ವಿಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್‌ಬರ್ಗ್ ಮೂರು ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮೆಟಾಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೊರೆಯುತ್ತಿರುವ ‘ಸೇಫ್ ಹಾರ್ಬರ್’ (Safe Harbour) ರಕ್ಷಣೆಯನ್ನು ಹಿಂತೆಗೆದುಕೊಳ್ಳುವ ಕ್ರಮ ಕೈಗೊಳ್ಳಲಾಗುವುದು … Continued

ಬಹುಭಾಷಾ ನಟ ಪ್ರದೀಪ ರಾವತ್ ನಿಧನ

ಮುಂಬೈ:  ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಖಳನಾಯಕ ಮತ್ತು ವೈವಿಧ್ಯಮಯ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಖ್ಯಾತ ನಟ ಪ್ರದೀಪ ಸಿಂಗ್ ರಾವತ್ ಅವರು ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ನಟ ಪ್ರದೀಪ ರಾವತ್ ಮಂಗಳವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಕ್ಯಾನ್ಸರ್ ಚಿಕಿತ್ಸೆ … Continued

ಯೆಮನ್ ಕರಾವಳಿ ಬಳಿ ಕೆಂಪು ಸಮುದ್ರದಲ್ಲಿ ಹಡಗಿನ ಮೇಲೆ ದಾಳಿ : ಮುಳುಗಿದ ಹಡಗು, 13 ಭಾರತೀಯರ ರಕ್ಷಣೆ

ನವದೆಹಲಿ : ಯೆಮನ್ ಕರಾವಳಿ ಸಮೀಪ ಮಂಗಳವಾರ (ಆಗಸ್ಟ್‌ 4) ಭಾರತದ ಧ್ವಜ ಹೊಂದಿದ್ದ ಎಂಎಸ್‌ವಿ ಫೈಝ್ ನೂರ್ ಓಲಿಯಾ (MSV Faize Noore Oliya) ಎಂಬ ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಪರಿಣಾಮ ಹಡಗುಮುಳುಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಹಡಗಿನಲ್ಲಿ ಒಟ್ಟು 14 ಸಿಬ್ಬಂದಿ ಇದ್ದರು. ಇವರಲ್ಲಿ … Continued