ಉನ್ನತ ನಾಯಕರ ಸಾವು, ಸಾರ್ವಜನಿಕವಾಗಿ ಕಾಣಿಸದ ಸುಪ್ರೀಂ ಲೀಡರ್ : ಹಾಗಾದ್ರೆ ಈಗ ಇರಾನ್ ಮುನ್ನಡೆಸುತ್ತಿರೋದು ಯಾರು?

ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಆರಂಭವಾಗಿ ಮೂರು ವಾರಗಳು ಕಳೆದಿವೆ. ಆದರೆ ಈಗ ಇರಾನ್ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಕೇವಲ ಯುದ್ಧರಂಗದ ಕ್ಷಿಪಣಿಗಳಲ್ಲ, ಬದಲಾಗಿ ದೇಶದ ‘ಅಧಿಕಾರ ಕೇಂದ್ರ’ ಯಾರ ಬಳಿಯಿದೆ ಎಂಬುದು. ಇರಾನಿನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಮತ್ತು ಅವರ ನಂತರದ ಪ್ರಭಾವಿ ನಾಯಕ ಅಲಿ ಲಾರಿಜಾನಿ ಅವರ … Continued

ಮಾಲ್ಡೀವ್ಸ್‌ನಲ್ಲಿ ಸ್ಪೀಡ್‌ ಬೋಟ್ ಮಗುಚಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾಗೆ ಗಾಯ

ನವದೆಹಲಿ:ಮಾಲ್ಡೀವ್ಸ್‌ನಲ್ಲಿ ಶುಕ್ರವಾರ ನಡೆದ ವೇಗದ ದೋಣಿ (Speedboat) ಅಪಘಾತದಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಯಾಣಿಸುತ್ತಿದ್ದ ದೋಣಿ ಸಮುದ್ರದಲ್ಲಿ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸಿಂಘಾನಿಯಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಅವರು ಮುಂಬೈಗೆ ಮರಳಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ. “ದುರದೃಷ್ಟವಶಾತ್ ನಡೆದ … Continued

ಟೆಂಪೋ, ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ; ಒಂದೇ ಕುಟುಂಬದ ಐವರು ಸೇರಿ ಎಂಟು ಜನರು ಸಾವು

ಸೇಲಂ :  ತಮಿಳುನಾಡಿನ ಸೇಲಂ ರಾಷ್ಟ್ರೀಯ ಹೆದ್ದಾರಿಯ ಉತ್ತಮಚೋಳಪುರಂ ಸಮೀಪದ ಅರಿಯನೂರು ಬಳಿ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ (TNSTC) ಬಸ್ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನರು ಸಾವಿಗೀಡಾಗಿದ್ದಾರೆ. 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ಬಸ್ ಕೊಯಮತ್ತೂರಿನಿಂದ ಸೇಲಂಗೆ ಪ್ರಯಾಣಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್, … Continued

ಇರಾನ್‌ ಯುದ್ಧ : ಪ್ರೀಮಿಯಂ ದರ್ಜೆಯ ಪೆಟ್ರೋಲ್ ದರ ಹೆಚ್ಚಳ

ನವದೆಹಲಿ: ದೇಶಾದ್ಯಂತ ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸುಮಾರು 2 ರಿಂದ 2.3 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಆದರೆ ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಏರಿಕೆ ಮಾಡಲಾಗಿಲ್ಲ. ಆಯ್ದ ನಗರಗಳ ಡೀಲರ್‌ಗಳ ಮಾಹಿತಿಯ ಪ್ರಕಾರ, ಇಂಡಿಯನ್ ಆಯಿಲ್‌ನ XP95 ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನ ಪವರ್ (Power) ನಂತಹ ಹೈ-ಆಕ್ಟೇನ್ ಇಂಧನಗಳಿಗೆ ಈ … Continued

ದಾವಣಗೆರೆ ದಕ್ಷಿಣ ಕ್ಷೇತ್ರ ; ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮೊದಲೇ ನಾಮಪತ್ರ ಸಲ್ಲಿಸಿದ ಶಾಮನೂರು ಮೊಮ್ಮಗ…!

ದಾವಣಗೆರೆ: ಕರ್ನಾಟಕದಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಪೈಪೋಟಿ ಎದುರಾಗಿದೆ. ಹಲವಾರು ಆಕಾಂಕ್ಷಿಗಳು ಟಿಕೆಟಿಗಾಗಿ ಲಾಬಿ ನಡೆಸಿದ್ದು, ಕಾಂಗ್ರೆಸ್ಸಿಗೆ ಟಿಕೆಟ್‌ ನೀಡುವುದೇ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿರುವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ದಂಪತಿಯ ಪುತ್ರ … Continued

ಇರಾನ್ ದಾಳಿಯಿಂದ ಕತಾರಿನ ಎಲ್‌ಎನ್‌ಜಿ ರಫ್ತು 5 ವರ್ಷಗಳ ಕಾಲ ವ್ಯತ್ಯಯ : ಹಲವು ರಾಷ್ಟ್ರಗಳ ಮೇಲೆ ಪರಿಣಾಮ

ದೋಹಾ: ಕತಾರ್‌ ಮೇಲೆ ಇರಾನ್ ನಡೆಸಿದ ದಾಳಿಯಿಂದಾಗಿ ಕತಾರ್‌ನ ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಸಾಮರ್ಥ್ಯದ ಶೇ. 17 ರಷ್ಟು ಭಾಗ ಸ್ಥಗಿತಗೊಂಡಿದೆ. ಇದರಿಂದಾಗಿ ವಾರ್ಷಿಕವಾಗಿ ಅಂದಾಜು $20 ಬಿಲಿಯನ್ (ಸುಮಾರು ₹1.6 ಲಕ್ಷ ಕೋಟಿ) ಆದಾಯ ನಷ್ಟವಾಗಲಿದೆ ಎಂದು ‘ಕತಾರ್ ಎನರ್ಜಿ’ ಸಿಇಒ ಮತ್ತು ಇಂಧನ ವ್ಯವಹಾರಗಳ ರಾಜ್ಯ ಸಚಿವ ಸಾದ್ ಅಲ್-ಕಾಬಿ … Continued

₹10 ಸಾವಿರ ವಿತ್‌ಡ್ರಾ ಮಾಡಲು ಹೋದವನಿಗೆ ಸಿಕ್ಕಿತು ₹3 ಲಕ್ಷ ! ಇದು ಎಟಿಎಂ ಮ್ಯಾಜಿಕ್ ಅಲ್ಲ, ಬ್ಯಾಂಕ್‌ ಕೊಡಬೇಕಾದ ಪರಿಹಾರ

ಸೂರತ್: ಗುಜರಾತ್‌ನ ಸೂರತ್‌ನಲ್ಲಿ 10,000 ರೂಪಾಯಿ ವಿತ್‌ಡ್ರಾ ಮಾಡಲು ಹೋದ ಗ್ರಾಹಕನೊಬ್ಬನಿಗೆ ಎದುರಾದ ತಾಂತ್ರಿಕ ದೋಷ, ಈಗ ಬ್ಯಾಂಕ್‌ಗೆ ಅತಿ ದೊಡ್ಡ ಮೊತ್ತದ ದಂಡವಾಗಿ ಪರಿಣಮಿಸಿದೆ. ಸುಮಾರು 9 ವರ್ಷಗಳ ಸುದೀರ್ಘ ಹೋರಾಟದ ನಂತರ, ಬ್ಯಾಂಕ್ ಆಫ್ ಬರೋಡಾ (BoB) ಈಗ ಅಸಲು ಮೊತ್ತಕ್ಕಿಂತ ಸುಮಾರು 30 ಪಟ್ಟು ಹೆಚ್ಚು ಹಣವನ್ನು ಗ್ರಾಹಕನಿಗೆ ಪಾವತಿಸಬೇಕಾದ ಪರಿಸ್ಥಿತಿ … Continued

ಶಿವಮೊಗ್ಗ : ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಸಾವು

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶು ವೈದ್ಯೆಯೊಬ್ಬರು ನೀರಾನೆ (Hippopotamus) ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಎಂಬವರು ನೀರಾನೆ ದಾಳಿಯಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಡಾ. ಸಮೀಕ್ಷಾ ಅವರು ಸಫಾರಿಯಲ್ಲಿ ಪಶುವೈದ್ಯ ಅಧಿಕಾರಿಯಾಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ 10:30ರ ಸುಮಾರಿಗೆ … Continued

19 ವರ್ಷದ ಖ್ಯಾತ ಕುಸ್ತಿಪಟು ಸೇರಿ ಮೂವರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್‌

ಇರಾನ್ ಸರ್ಕಾರವು ಪ್ರತಿಭಟನಾಕಾರರ ವಿರುದ್ಧ ತನ್ನ ದಮನಕಾರಿ ನೀತಿಯನ್ನು ತೀವ್ರಗೊಳಿಸಿದ್ದು, ಸರ್ಕಾರಿ ಮಾಧ್ಯಮಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ವರದಿಯ ಪ್ರಕಾರ, ಕ್ಯೂಮ್ (Qom) ನಗರದಲ್ಲಿ 19 ವರ್ಷದ ಚಾಂಪಿಯನ್ ಕುಸ್ತಿಪಟು ಮತ್ತು ಇತರ ಇಬ್ಬರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ. ವರದಿ ಪ್ರಕಾರ, ಉದಯೋನ್ಮುಖ ಕುಸ್ತಿ ಪ್ರತಿಭೆ ಸಲೇಹ್ ಮೊಹಮ್ಮದಿ (Saleh Mohammadi), ಸಯೀದ್ ದಾವೋದಿ … Continued

ಹುಬ್ಬಳ್ಳಿ : ‘ರೀಲ್ಸ್‌’ಗಾಗಿ ಆಡಿ ಕಾರು-ಬೈಕ್ ಸ್ಟಂಟ್; ಬಿಜೆಪಿ ಮುಖಂಡನ ಮಗ ಸಾವು

ಹುಬ್ಬಳ್ಳಿ: ಕ್ರ್ಯಾಶ್ ರೀಲ್ಸ್‌ ವಿಡಿಯೋ (Reels) ಮಾಡಲು ಹೋಗಿ ಬಿಜೆಪಿ ಮುಖಂಡನ ಪುತ್ರ ಗುರುವಾರ ಮೃತಪಟ್ಟಿದ್ದಾನೆ. ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಷ ಸಂಗಳದ (15) ಮೃತ ಬಾಲಕ ಎಂದು ಗುರುತಿಸಲಾಗಿದೆ. ಯುಗಾದಿ ಹಬ್ಬದ ರಜೆಗಾಗಿ ಹುಬ್ಬಳ್ಳಿಯ (Hubballi news) ಮನೆಗೆ ಬಂದಿದ್ದ ನಮೀಷ ಗುರುವಾರ ಸಂಜೆ ತನ್ನ ಸ್ನೇಹಿತನ ಜೊತೆ ಸೇರಿ ಶೇಜವಾಡ್ಕರ ಪ್ಲಾಟ್‌ಗೆ … Continued