ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನಡೆ : ಹುಬ್ಬಳ್ಳಿ ಗಲಭೆ ಸೇರಿ 43 ಪ್ರಕರಣ ಹಿಂಪಡೆದ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು : ಹುಬ್ಬಳ್ಳಿ ಗಲಭೆ ಪ್ರಕರಣ (Hubballi Riot) ಸೇರಿದಂತೆ 43 ಕ್ರಿಮಿನಲ್‌ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಕರ್ನಾಟಕ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ (Karnataka High Court) ರದ್ದುಗೊಳಿಸಿದೆ. ಕೇಂದ್ರ ಮತ್ತು ರಾಜ್ಯ ಸಚಿವರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ … Continued

ವೀಡಿಯೊಗಳು..| ಸ್ವಿಟ್ಜರ್‌ಲ್ಯಾಂಡ್‌ : ರಣಭೀಕರ ಭೂ ಕುಸಿತಕ್ಕೆ ಸುಂದರ ಹಳ್ಳಿಯೇ ನಾಶ ; ವೀಕ್ಷಿಸಿ

ರಮಣೀಯ ಸ್ಥಳಗಳು ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ವಿಟ್ಜರ್‌ಲ್ಯಾಂಡ್‌ ನಲ್ಲಿ ಹಿಮಚ್ಛಾದಿತ ಗುಡ್ಡವೊಂದು ಕುಸಿದ ನಂತರ ಬ್ಲಾಟೆನ್ ಎಂಬ ಗ್ರಾಮವೇ ಬಹುತೇಕ ನಾಶವಾಗಿದೆ. ಬಿರ್ಚ್ ಹಿಮನದಿ ಶಿಥಿಲಗೊಳ್ಳುತ್ತಿದೆ ಎಂಬ ಭಯದಿಂದಾಗಿ ಕೆಲವು ದಿನಗಳ ಹಿಂದೆ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದ್ದರೂ, ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ ಮತ್ತು ಅನೇಕ ಮನೆಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಬ್ಲಾಟೆನ್‌ನ ಮೇಯರ್ ಮ್ಯಾಥಿಯಸ್ ಬೆಲ್‌ವಾಲ್ಡ್ ಅವರು, … Continued

ವೀಡಿಯೊಗಳು | ಲಾಹೋರ್‌ ರ‍್ಯಾಲಿಯಲ್ಲಿ ಪಹಲ್ಗಾಮ್‌ ದಾಳಿ ಸಂಚುಕೋರ ಸೈಫುಲ್ಲಾ ಕಸೂರಿ ಪ್ರತ್ಯಕ್ಷ : ಉಗ್ರ ಹಫೀಜ್ ಸಯೀದ್ ಪುತ್ರ ಸಹ ಭಾಗಿ

ಲಾಹೋರ್:26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಯ ಯೋಜನೆ ರೂಪಿಸಿದ್ದ ಲಷ್ಕರ್-ಎ-ತೈಬಾ (ಎಲ್‌ಇಟಿ)ಯ ಹಿರಿಯ ಕಮಾಂಡರ್ ಸೈಫುಲ್ಲಾ ಕಸೂರಿ, ಲಾಹೋರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ. ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದ ಪರಮಾಣು ಪರೀಕ್ಷೆಗಳ ವರ್ಷಾಚರಣೆ ಅಂಗವಾಗಿ ಪಾಕಿಸ್ತಾನ ಮರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಈ ರ್ಯಾಲಿಯನ್ನು ಆಯೋಜಿಸಿತ್ತು. ಭಾರತದಿಂದ ಗೊತ್ತುಪಡಿಸಿದ ಭಯೋತ್ಪಾದಕ ಎಂದು ಘೋಷುಸಲ್ಪಟ್ಟ, … Continued

ಬೆಳಗಾವಿಯಲ್ಲಿ ಕೊರೊನಾ ಸೋಂಕಿತ ವೃದ್ಧ ಸಾವು

ಬೆಳಗಾವಿ: ಕೊರೊನಾ ಸೋಂಕಿತ ವೃದ್ಧರೊಬ್ಬರು ಬೆಳಗಾವಿಯಲ್ಲಿ ಮೃತಪಟ್ಟಿದ್ದಾರೆ. ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧರು ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬೆಳಗಾವಿ ತಾಲೂಕಿನ ವೃದ್ಧರೊಬ್ಬರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಹೇಳಲಾಗಿದೆ. ಅವರು ಮಧುಮೇಹ, ಕಿಡ್ನಿ ತೊಂದರೆ ಸೇರಿದಂತೆ ಕೆಲವು ತೊಂದರೆಯಿಂದ ಬಳಲುತ್ತಿದ್ದರು. ನಂತರ ಅವರಿಗೆ ಕೊರೊನಾ ಲಕ್ಷಣಗಳು ಸಹ … Continued

ಐಎಸ್‌ಐ ಪರ ಬೇಹುಗಾರಿಕೆ, ಪಾಕಿಸ್ತಾನಕ್ಕೆ 7 ಬಾರಿ ಭೇಟಿ : ಸರ್ಕಾರಿ ನೌಕರನ ಬಂಧನ…

ಜೈಸಲ್ಮೇರ್‌ : ಮೇ 7-10 ರಂದು ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ದೇಶಾದ್ಯಂತ ಬೇಹುಗಾರಿಕೆ ಜಾಲಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಪಾಕಿಸ್ತಾನದ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನ ಸರ್ಕಾರಿ ನೌಕರನನ್ನು ಜೈಸಲ್ಮೇರ್‌ನಲ್ಲಿ ಬಂಧಿಸಲಾಗಿದೆ. ಬಂಧಿತ ಉದ್ಯೋಗಿಯನ್ನು ಶಕುರ್ ಖಾನ್ ಮಂಗನಿಯಾರ್ ಎಂದು ಗುರುತಿಸಲಾಗಿದ್ದು, ಆತನನ್ನು ಜೈಸಲ್ಮೇರ್‌ನಲ್ಲಿರುವ ಆತನ ಕಚೇರಿಯಲ್ಲಿ ಸಿಐಡಿ … Continued

ಅನಿರೀಕ್ಷಿತ ಬೆಳವಣಿಗೆ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಮುಖ ಹುದ್ದೆಯಿಂದ ಎಲೋನ್ ಮಸ್ಕ್ ನಿರ್ಗಮನ….!

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ತೆರಿಗೆ ನೀತಿ ಟೀಕಿಸಿದ ಒಂದು ದಿನದ ಬಳಿಕ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಉದ್ಯಮಿ ಎಲೋನ್‌ ಮಸ್ಕ್ ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಹುದ್ದೆಯಿಂದ ಕೆಳಗೆ ಇಳಿಯುವುದಾಗಿ ಪ್ರಕಟಿಸಿದ್ದಾರೆ. ಈ ಕುರಿತು ತಮ್ಮದೇ ಒಡೆತನದ ಸಾಮಾಜಿಕ ಮಾಧ್ಯಮ ‘ಎಕ್ಸ್’ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. … Continued

‘ನಾನು ಪ್ರೀತಿಯಿಂದ ಹೇಳಿದ್ದೇನೆ…ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ…ನಾನು ಕ್ಷಮೆ ಕೇಳಲ್ಲ’: ‘ತಮಿಳು-ಕನ್ನಡ’ ಹೇಳಿಕೆಗೆ ಕಮಲ ಹಾಸನ್

ತಿರುವನಂತಪುರಂ: ಕನ್ನಡ ಭಾಷೆಯ ಮೂಲದ ಬಗ್ಗೆ ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆಗಳ ಸುತ್ತಲಿನ ವಿವಾದಕ್ಕೆ ಬುಧವಾರ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ. ಹಾಗೂ ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ನಾನು “ಪ್ರೀತಿಯಿಂದ” ಹಾಗೆ ಹೇಳಿದ್ದೇನೆಯೇ ಹೊರತು ಅದರಲ್ಲಿ ಬೇರೆ ಯಾವುದೇ ಅನ್ಯ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಯಾರನ್ನೂ ನೋಯಿಸುವ ಉದ್ದೇಶವನ್ನು ನಾನು … Continued

ರೈತರಿಗೆ ಸಿಹಿ ಸುದ್ದಿ ; 14 ಬೆಳೆಗಳ ಕನಿಷ್ಠ ಬೆಂಬಲ ಹೆಚ್ಚಳಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ: ಕೃಷಿ ಮತ್ತು ಮೂಲಸೌಕರ್ಯದ ಮೇಲೆ ಪರಿಣಾಮ ಬೀರುವ ಹಲವಾರು ಮಹತ್ವದ ಕ್ರಮಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ, ಇದರಲ್ಲಿ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳಲ್ಲಿ (MSP) ಹೆಚ್ಚಳ, ರೈತರಿಗೆ ಬಡ್ಡಿ ಸಬ್ಸಿಡಿ ಯೋಜನೆಯ ಮುಂದುವರಿಕೆ ಮತ್ತು ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಾದ್ಯಂತ ಪ್ರಮುಖ ರಸ್ತೆ ಮತ್ತು ರೈಲು ಯೋಜನೆಗಳಿಗೆ ಹಸಿರು ನಿಶಾನೆ … Continued

ಇಸ್ರೇಲ್ ಸೇನೆಯಿಂದ ಹಮಾಸ್ ಗುಂಪಿನ ಗಾಜಾ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಹತ್ಯೆ : ಇಸ್ರೇಲ್ ಪ್ರಧಾನಿ ನೆತನ್ಯಾಹು

ಟೆಲ್ ಅವಿವ್ (ಇಸ್ರೇಲ್) : ಹಮಾಸ್‌ನ ಗಾಜಾ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ಅವರನ್ನು ಇಸ್ರೇಲ್ ಸೇನೆ ಹತ್ಯೆ ಮಾಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಪ್ರಕಟಿಸಿದ್ದಾರೆ. ಮೇ 14 ರಂದು ಇಸ್ರೇಲ್ ನಡೆಸಿದ ಬೃಹತ್ ವಾಯು ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಮುಹಮ್ಮದ್ ಸಿನ್ವಾರ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ವರದಿಗಳು ಬಂದವು. ಆ ಸಮಯದಲ್ಲಿ … Continued

ಇಂದು (ಮೇ 29) ಕರ್ನಾಟಕದ 6 ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ನೆಚ್ಚರಿಕೆ ; ರೆಡ್‌ ಅಲರ್ಟ್‌ ಘೋಷಣೆ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಅಂಗನವಾಡಿಗಳಿಗೆ ರಜೆ ನೀಡಲಾಗಿದೆ. ಗುರುವಾರ (ಮೇ 29) ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ , ಕೊಡಗು ಜಿಲ್ಲೆಗೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಬಿರುಗಾಳಿ ಸಹಿತ ಅತಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮೈಸೂರು, ಉಡುಪಿ, … Continued