ಪಾರ್ಶ್ವವಾಯು ಪೀಡಿತ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲು 350 ಕಿಮೀ ಸೈಕಲ್‌ ರಿಕ್ಷಾ ತುಳಿದು ಕರೆದೊಯ್ದ 75ರ ವೃದ್ಧ

 ಕಟಕ್: ಪ್ರೀತಿ ಎಂದರೆ ಕೇವಲ ಮಾತುಗಳಲ್ಲ, ಅದು ಅಚಲವಾದ ನಂಬಿಕೆ ಮತ್ತು ತ್ಯಾಗ ಎಂಬದಕ್ಕೆ ಒಡಿಶಾದ ಸಂಬಲಪುರದ 75 ವರ್ಷದ ವೃದ್ಧ ಬಾಬು ಲೋಹರ್ ಸಾಕ್ಷಿಯಾಗಿದ್ದಾರೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತನ್ನ 70 ವರ್ಷದ ಪತ್ನಿ ಜ್ಯೋತಿ ಅವರನ್ನು ಗುಣಪಡಿಸಲು, ಹಣದ ಕೊರತೆಯ ನಡುವೆಯೂ ದೃತಿಗೆಡದ ಈ ವೃದ್ಧ ಪತಿಯ ಸಾಹಸಗಾಥೆ ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಸಂಬಲಪುರ … Continued

ಶುಭಾಂಶು ಶುಕ್ಲಾಗೆ ಭಾರತದ ಅತ್ಯುನ್ನತ ಶಾಂತಿಕಾಲದ ಅಶೋಕ ಚಕ್ರ ಶೌರ್ಯ ಪ್ರಶಸ್ತಿ; 70 ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ

ನವದೆಹಲಿ: ಗಣರಾಜ್ಯೋತ್ಸವದ ಮುನ್ನಾದಿನವಾದ ಭಾನುವಾರ (ಇ.೨೫, ೨೦೨೬), ರಾಷ್ಟ್ರಪತಿ ಮುರ್ಮು 70 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ಅನುಮೋದಿಸಿದರು. ಇವುಗಳಲ್ಲಿ ಮೂರು ಕೀರ್ತಿ ಚಕ್ರಗಳು, 13 ಶೌರ್ಯ ಚಕ್ರಗಳು, ಒಂದು ಮರಣೋತ್ತರ ಪ್ರಶಸ್ತಿ, ಒಂದು ಸೇನಾ ಪದಕ (ಶೌರ್ಯ) ಮತ್ತು 44 ಸೇನಾ ಪದಕಗಳು (ಶೌರ್ಯ) ಸೇರಿವೆ. ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು … Continued

ನಟ ಧರ್ಮೇಂದ್ರ- ಪದ್ಮವಿಭೂಷಣ, ಶತಾವಧಾನಿ ಆರ್‌.ಗಣೇಶ-ಪದ್ಮಭೂಷಣ ; 131 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ-ಸಂಪೂರ್ಣ ಪಟ್ಟಿ

ನವದೆಹಲಿ: ಕೇಂದ್ರವು ಭಾನುವಾರ 2026 ರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ 131 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷುಸಲಾಗಿದೆ. ಈ ಪಟ್ಟಿಯಲ್ಲಿ ಸಾರ್ವಜನಿಕ ಜೀವನ, ಕಲೆ, ಸಿನಿಮಾ, ಸಾಹಿತ್ಯ, ಕ್ರೀಡೆ ಮತ್ತು ಸಾರ್ವಜನಿಕ ವ್ಯವಹಾರಗಳ ಹಲವಾರು ಪ್ರಮುಖ ಹೆಸರುಗಳು ಸೇರಿವೆ, ಈ ವರ್ಷ ಐದು ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 … Continued

ಆಪರೇಷನ್ ಸಿಂಧೂರ ವೇಳೆ ಭಾರತದ ವಾಯುಪಡೆ ಪ್ರಾಬಲ್ಯಕ್ಕೆ ಹೆದರಿ ಕದನ ವಿರಾಮಕ್ಕೆ ಗೋಗರೆದ ಪಾಕಿಸ್ತಾನ ; ಸ್ವಿಸ್ ವರದಿ

ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ನಾಲ್ಕು ದಿನಗಳ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯು ಪಾಕಿಸ್ತಾನವನ್ನು ಅಸಹಾಯಕ ಸ್ಥಿತಿಗೆ ತಳ್ಳಿ ಕದನ ವಿರಾಮಕ್ಕೆ ಒಪ್ಪುವಂತೆ ಮಾಡಿದೆ ಎಂದು ಯುರೋಪಿಯನ್ ಮಿಲಿಟರಿ ವಿಶ್ಲೇಷಣಾ ವರದಿಯೊಂದು ಹೇಳಿದೆ. ಸ್ವಿಟ್ಜರ್ಲೆಂಡ್‌ನ ಪುಲ್ಲಿಯಲ್ಲಿರುವ ‘ಸೆಂಟರ್ ಡಿ ಹಿಸ್ಟೋಯಿರ್ ಎಟ್ ಡಿ ಪ್ರಾಸ್ಪೆಕ್ಟಿವ್ ಮಿಲಿಟೈರ್ಸ್’ … Continued

ಕರ್ನಾಟಕದ ಮೂವರು ಸೇರಿ 45 ಸಾಧಕರಿಗೆ ಪದ್ಮ ಪ್ರಶಸ್ತಿ 2026 ಪ್ರಕಟ; ಪಟ್ಟಿ ಇಲ್ಲಿದೆ….

ನವದೆಹಲಿ :  ಗಣರಾಜ್ಯೋತ್ಸವದ ಮುನ್ನ ದಿನವಾದ ಜನವರಿ 25ರಂದು ಕೇಂದ್ರ ಸರ್ಕಾರ 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ (Padma Awards 2026) ಪ್ರಕಟಿಸಿದೆ. ಕರ್ನಾಟಕದ ಮಂಡ್ಯದ ಅಂಕೇಗೌಡ, ಬೆಂಗಳೂರಿನ ಸಮಾಜ ಸೇವಕಿ ಎಸ್‌.ಜಿ. ಸುಶೀಲಮ್ಮ, ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿಯ ವೈದ್ಯ ಡಾ ಸುರೇಶ ಹನಗವಾಡಿ ಹಾಗೂ ಸೇರಿದಂತೆ ದೇಶದ 45 ಜನರಿಗೆ ಪದ್ಮಶ್ರೀ ಪ್ರಶಸ್ತಿ … Continued

ವಿಮಾ ಕಂಪನಿಗಳು, ನಬಾರ್ಡ್, ಆರ್‌ ಬಿಐ ನೌಕರರ ವೇತನ-ಪಿಂಚಣಿ ಪರಿಷ್ಕರಣೆಗೆ ಕೇಂದ್ರದಿಂದ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (PSGICs) ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ನೌಕರರ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಿದೆ. ಇದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ನಬಾರ್ಡ್‌ನ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಗೂ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಕೇಂದ್ರ ಹಣಕಾಸು ಸಚಿವಾಲಯದ … Continued

ಛತ್ತೀಸಗಢ: ರಾತ್ರೋರಾತ್ರಿ 60 ಅಡಿ ಉದ್ದ, 30 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದ ಕಳ್ಳರು…!

ರಾಯ್ಪುರ: ಚೋರರ ತಂಡವೊಂದು ಬರೋಬ್ಬರಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ತುಂಡು ತುಂಡಾಗಿ ಕತ್ತರಿಸಿ ಕದ್ದೊಯ್ದಿರುವ ವಿಲಕ್ಷಣ ಘಟನೆ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. ಕೊರ್ಬಾ ಜಿಲ್ಲಾ ಕೇಂದ್ರದ ದೋಧಿಪಾರಾ ಪ್ರದೇಶದಲ್ಲಿ ಹಸ್ದಿಯೋ ಕಾಲುವೆಯ ಮೇಲೆ ಈ ಬೃಹತ್ ಕಬ್ಬಿಣದ ಸೇತುವೆಯನ್ನು ನಿರ್ಮಿಸಲಾಗಿತ್ತು. ಸುಮಾರು 30 ಟನ್ ತೂಕದ ಈ ಸೇತುವೆಯನ್ನು ಸ್ಕ್ರ್ಯಾಪ್ ಮಾಫಿಯಾ … Continued

ತೆಲಂಗಾಣದಲ್ಲಿ ವಿಷಪೂರಿತ ಇಂಜೆಕ್ಷನ್ ನೀಡಿ ಬೀದಿ ನಾಯಿಗಳ ಹತ್ಯೆ ; ಸಾವಿನ ಸಂಖ್ಯೆ 900ಕ್ಕೆ ಏರಿಕೆ

ಹೈದರಾಬಾದ್: ತೆಲಂಗಾಣದಲ್ಲಿ ಬೀದಿ ನಾಯಿಗಳ ಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಜಗತಿಯಾಲ ಜಿಲ್ಲೆಯಲ್ಲಿ ಸುಮಾರು 300 ನಾಯಿಗಳನ್ನು ಕೊಲ್ಲಲಾಗಿದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ತಿಂಗಳು ಹತರಾದ ನಾಯಿಗಳ ಸಂಖ್ಯೆ 900ಕ್ಕೆ ಏರಿದೆ ಎಂದು ಹೇಳಲಾಗಿದೆ. ಜಗತಿಯಾಲ ಜಿಲ್ಲೆಯ ಪೆಗಡಪಲ್ಲಿ ಗ್ರಾಮದಲ್ಲಿ ಜನವರಿ 22 ರಂದು ಸುಮಾರು 300 ಬೀದಿ ನಾಯಿಗಳಿಗೆ … Continued

ತಾಯಿಯ ಕೈಯಲ್ಲಿದ್ದ 20 ದಿನದ ಶಿಶುವನ್ನು ಹೊತ್ತೊಯ್ದು ಬಾವಿಗೆ ಎಸೆದ ಮಂಗ ; ಮಗುವನ್ನು ಕಾಪಾಡಿದ ಡೈಪರ್‌…!

ರಾಯ್ಪುರ: ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯ ಸೆವ್ನಿ ಗ್ರಾಮದಲ್ಲಿ ಮೈಮನ ಜುಂ ಎನಿಸುವ ಘಟನೆಯೊಂದು ನಡೆದಿದೆ. ಮಂಗವೊಂದು ತಾಯಿಯ ಮಡಿಲಲ್ಲಿದ್ದ 20 ದಿನದ ಹಸುಗೂಸನ್ನು ಹೊತ್ತೊಯ್ದು ಬಾವಿಗೆ ಎಸೆದಿತ್ತು,  ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ನರ್ಸ್ ಒಬ್ಬರ ಸಮಯೋಚಿತ ಚಿಕಿತ್ಸೆಯಿಂದ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ.  ಬುಧವಾರ ಸುನೀತಾ ರಾಥೋಡ ಎಂಬ ಮಹಿಳೆ ತಮ್ಮ 20 ದಿನದ ಹೆಣ್ಣು … Continued

ಭಾರತದ ಮೇಲಿನ ಶೇ. 25ರಷ್ಟು ಹೆಚ್ಚುವರಿ ಸುಂಕ ಹಿಂಪಡೆಯುವ ಸುಳಿವು ನೀಡಿದ ಅಮೆರಿಕ

ದಾವೋಸ್: ರಷ್ಯಾ ಕಚ್ಚಾ ತೈಲ ಖರೀದಿಯ ಹಿನ್ನೆಲೆಯಲ್ಲಿ ಭಾರತದ ಮೇಲೆ ವಿಧಿಸಲಾಗಿದ್ದ ಶೇ. 25ರಷ್ಟು ಹೆಚ್ಚುವರಿ ಆಮದು ಸುಂಕವನ್ನು ಅಮೆರಿಕ ಸರ್ಕಾರ ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆ ಇದೆ. ಅಮೆರಿಕದ ಖಜಾನೆ ಕಾರ್ಯದರ್ಶಿ (Treasury Secretary) ಸ್ಕಾಟ್ ಬೆಸೆಂಟ್ ಅವರು ಈ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (WEF) … Continued