ವೀಡಿಯೊ..| ಡೆಲಿವರಿ ಬಾಯ್ ಆಕಸ್ಮಿಕವಾಗಿ ಬೇರೆ ಮನೆ ಬೆಲ್ ಒತ್ತಿದ್ದಕ್ಕೆ ಗಲಾಟೆ ; ಮಾರಾಮಾರಿ

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ, ಡೆಲಿವರಿ ಬಾಯ್ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ನಡುವೆ ರಣಾಂಗಣ ಸೃಷ್ಟಿಯಾದ ಘಟನೆ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದದಲ್ಲಿ ನಡೆದಿದೆ ಎಂದು ಪರಸ್ಪರ ಪಂಚ್, ಕಿಕ್ ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಫುಡ್ ಡೆಲಿವರಿ … Continued

ಗಂಗೋತ್ರಿ ಧಾಮಕ್ಕೆ ಹಿಂದೂಯೇತರರಿಗೆ ಪ್ರವೇಶ ಬೇಡ ; ಸಮಿತಿಯ ನಿರ್ಧಾರ

ಉತ್ತರಾಖಂಡದ ಪವಿತ್ರ ಯಾತ್ರಾಸ್ಥಳವಾದ ಗಂಗೋತ್ರಿ ಧಾಮಕ್ಕೆ ಇನ್ನು ಮುಂದೆ ಹಿಂದೂಯೇತರರಿಗೆ ಪ್ರವೇಷ ನಿಷೇಧಿಸಬೇಕು ಎಂದು  ಶ್ರೀ ಗಂಗೋತ್ರಿ ದೇವಾಲಯ ಸಮಿತಿಯು ಭಾನುವಾರ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡಿದೆ. ಈ ನಿರ್ಬಂಧವು ಕೇವಲ ಗಂಗೋತ್ರಿ ಧಾಮಕ್ಕೆ ಮಾತ್ರ ಸೀಮಿತವಾಗಿರದೆ, ಗಂಗಾ ಮಾತೆಯ ಚಳಿಗಾಲದ ಆವಾಸ ಸ್ಥಾನವೆಂದು ಕರೆಯಲ್ಪಡುವ ಮುಖ್ಬಾ ಗ್ರಾಮಕ್ಕೂ ಅನ್ವಯಿಸಲಿದೆ ಎಂದು ಸಮಿತಿ ತಿಳಿಸಿದೆ. … Continued

77ನೇ ಗಣರಾಜ್ಯೋತ್ಸವದ ಸಂಭ್ರಮದ ನಡುವೆ ಮನಗೆದ್ದ ಶ್ವಾನದ ದೇಶಪ್ರೇಮ : ವೀಡಿಯೊ ವೈರಲ್

ನವದೆಹಲಿ: ಭಾರತವು ಸೋಮವಾರ ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಿದೆ. ಈ ಸಂಭ್ರಮದ ನಡುವೆಯೇ, ಶ್ವಾನವೊಂದರ ಅಪೂರ್ವ ದೇಶಭಕ್ತಿಯ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೋಟ್ಯಂತರ ಭಾರತೀಯರ ಮನಗೆದ್ದಿದೆ. ಸುಮಾರು 25 ಸೆಕೆಂಡುಗಳ ಈ ವೀಡಿಯೊದಲ್ಲಿ, ನಿಷ್ಠಾವಂತ ಲ್ಯಾಬ್ರಡಾರ್ ಶ್ವಾನವೊಂದು ಸಾಲಾಗಿ ಇಟ್ಟಿರುವ ವಿವಿಧ ದೇಶಗಳ ನಕ್ಷೆಗಳ ಮಧ್ಯೆ ನಡೆದುಕೊಂಡು ಹೋಗುತ್ತದೆ. … Continued

88ನೇ ವಯಸ್ಸಿನಲ್ಲೂ ಪ್ರತಿನಿತ್ಯ ಚಂಡಿಗಢದ ಬೀದಿಗಳನ್ನು ಸ್ವಚ್ಛಗೊಳಿಸುವ ನಿವೃತ್ತ ಡಿಐಜಿಗೆ ಒಲಿದ ಪದ್ಮಶ್ರೀ

ಚಂಡೀಗಢ: ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ ಪಂಜಾಬ್ ಪೊಲೀಸ್ ಇಲಾಖೆಯ 80 ವರ್ಷದ ನಿವೃತ್ತ ಡಿಐಜಿ, ಐಪಿಎಸ್‌ ಇಂದರ್ಜಿತ್ ಸಿಂಗ್ ಸಿಧು ಅವರಿಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ಘೋಷಿಸಿದೆ. ಗಣರಾಜ್ಯೋತ್ಸವದ ಮುನ್ನಾದಿನವಾದ ಭಾನುವಾರ ಪ್ರಕಟವಾದ ಪಟ್ಟಿಯಲ್ಲಿ ಇವರ ಹೆಸರು ಪ್ರಮುಖವಾಗಿ ಗಮನ ಸೆಳೆದಿದೆ.  ಇಂದರ್ಜಿತ್ ಸಿಂಗ್ ಸಿಧು ಅವರು 1963ರಲ್ಲಿ … Continued

ಭಾರತಕ್ಕೆ ತನ್ನ ಅಧ್ಯಕ್ಷರ ಅಚ್ಚರಿಯ ಭೇಟಿ ನಂತ್ರ ಪಾಕಿಸ್ತಾನ ಏರ್‌ಪೋರ್ಟ್ ಒಪ್ಪಂದದಿಂದ ಹಿಂದೆ ಸರಿದ ಯುಎಇ

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ಅನಿರೀಕ್ಷಿತ ಭಾರತ ಭೇಟಿಯು ದಕ್ಷಿಣ ಏಷ್ಯಾದ ಭೌಗೋಳಿಕ ರಾಜಕೀಯ ಸಮೀಕರಣಗಳ ಮೇಲೆ ಭಾರಿ ಪರಿಣಾಮ ಬೀರಿದ್ದು, ಇದು ಪಾಕಿಸ್ತಾನಕ್ಕೆ ಪರೋಕ್ಷ ಹಿನ್ನಡೆಯಾಗಿ ಪರಿಣಮಿಸಿದೆ. ಶೇಖ್ ನಹ್ಯಾನ್ ಅವರ ಮೂರು ಗಂಟೆಗಳ ಭಾರತ ಭೇಟಿಯ ನಂತರ, ಅಬುಧಾಬಿ ಸರ್ಕಾರವು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಅಂತಾರಾಷ್ಟ್ರೀಯ … Continued

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾಗ ಕುಸಿದು ಬಿದ್ದ ಸಚಿವ ರಾಮಚಂದ್ರನ್

ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಸಚಿವ ಕಡನ್ನಪಲ್ಲಿ ರಾಮಚಂದ್ರನ್ ಅವರು ಭಾಷಣ ಮಾಡುತ್ತಿದ್ದಾಗಲೇ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ. ಕಣ್ಣೂರಿನ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಸಚಿವರು ಉದ್ಘಾಟನಾ ಭಾಷಣ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರಿಗೆ ತಲೆಸುತ್ತು ಕಾಣಿಸಿಕೊಂಡಿದ್ದು, ವೇದಿಕೆಯ ಮೇಲೆಯೇ ಕುಸಿದು ಬಿದ್ದರು. ತಕ್ಷಣವೇ … Continued

ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪಂದ : ಭಾರತದಲ್ಲಿ ಅಗ್ಗವಾಗಲಿವೆ ಬಿಎಂಡಬ್ಲ್ಯು, ಬೆಂಜ್ ಕಾರುಗಳು ; ವರದಿ

ನವದೆಹಲಿ : ಭಾರತ ಮತ್ತು ಐರೋಪ್ಯ ಒಕ್ಕೂಟದ (EU) ನಡುವೆ ಬಹುನಿರೀಕ್ಷಿತ ‘ಮುಕ್ತ ವ್ಯಾಪಾರ ಒಪ್ಪಂದ’ (FTA) ಅಂತಿಮ ಹಂತಕ್ಕೆ ತಲುಪಿದೆ. ಈ ಐತಿಹಾಸಿಕ ಒಪ್ಪಂದದ ಭಾಗವಾಗಿ, ಯುರೋಪ್‌ನಿಂದ ಆಮದು ಮಾಡಿಕೊಳ್ಳುವ ಐಷಾರಾಮಿ ಕಾರುಗಳ ಮೇಲಿನ ಆಮದು ಸುಂಕವನ್ನು (Import Tariff) ಕೇಂದ್ರ ಸರ್ಕಾರವು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ವಿದೇಶದಿಂದ … Continued

ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಆರೋಪ; ‘ಧುರಂಧರ್’ ನಟನ ಬಂಧನ

ಮುಂಬೈ: ಮದುವೆಯಾಗುವುದಾಗಿ ನಂಬಿಸಿ ಕಳೆದ ಹತ್ತು ವರ್ಷಗಳಿಂದ ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಲಿವುಡ್ ನಟ ನದೀಮ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ‘ಧುರಂಧರ್’ ನಲ್ಲಿ ನಟಿಸಿದ್ದ ನದೀಮ್ ಖಾನ್ ಅವರನ್ನು ಜನವರಿ 22 ರಂದು ಬಂಧಿಸಲಾಗಿದ್ದು, ಸದ್ಯ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ … Continued

ಸೇಡಿನ ಪರಮಾವಧಿ: ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ (HIV) ಇಂಜೆಕ್ಷನ್ ನೀಡಿದ ಮಹಿಳೆ….!

ಕರ್ನೂಲ್ : ಸಂಚು ರೂಪಿಸಿ ತನ್ನ ಮಾಜಿ ಪ್ರಿಯಕರನ ಪತ್ನಿಯಾಗಿರುವ ವೈದ್ಯೆಯೊಬ್ಬರಿಗೆ ಎಚ್‌ಐವಿ (HIV) ಸೋಂಕಿತ ಇಂಜೆಕ್ಷನ್ ನೀಡಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಜನವರಿ 24 ರಂದು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕರ್ನೂಲ್ ನಿವಾಸಿ ಬಿ. ಬೋಯ ವಸುಂಧರಾ (34), ಅದೋನಿಯ ಖಾಸಗಿ … Continued

ತನ್ನ ಮೇಲೆ ದಾಳಿ ಮಾಡಿದ ಚಿರತೆ ಜೊತೆ ವೀರಾವೇಶದಿಂದ ಹೋರಾಡಿ ಕೊಂದು ಹಾಕಿದ ವ್ಯಕ್ತಿ…!

ಕಟಕ್: ಕತ್ತಲ ರಾತ್ರಿ, ಸುತ್ತಲೂ ನಿಶ್ಯಬ್ದ. ಆ ಫಾರ್ಮ್‌ಹೌಸ್‌ನಲ್ಲಿ ಇದ್ದಕ್ಕಿದ್ದಂತೆ ನಾಯಿಗಳ ಮೌನ ಮುರಿದು ಬೊಗಳುವ ಶಬ್ದ ಕೇಳಿಸಿತು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಸಾಕ್ಷಾತ್ ‘ಸಾವೇ’ ಎದುರಿಗೆ ಬಂದು ನಿಂತಿತ್ತು! ಅದು ಹಸಿದ ಚಿರತೆಯ ರೂಪದಲ್ಲಿತ್ತು. ಇದು ಒಡಿಶಾದ ಕಟಕ್ ಜಿಲ್ಲೆಯ ನರಸಿಂಹಪುರ ಅರಣ್ಯ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಎದೆನಡುಗಿಸುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ … Continued