ವಾಡಿಕೆಗಿಂತ ಒಂದು ವಾರಕ್ಕಿಂತ ಮೊದಲೇ ಕೇರಳಕ್ಕೆ ಆಗಮಿಸಿದ ನೈಋತ್ಯ ಮುಂಗಾರು ಮಳೆ…!

ನವದೆಹಲಿ: ನೈಋತ್ಯ ಮಾನ್ಸೂನ್ ಶನಿವಾರ ಕೇರಳವನ್ನು ತಲುಪಿದ್ದು, 2009 ರ ನಂತರ ಭಾರತದ ಮುಖ್ಯ ಭೂಭಾಗಕ್ಕೆ ನೈಋತ್ಯ ಮುಂಗಾರು ಮಳೆ ಇಷ್ಟು ಮೊದಲು ಆಗಮಿಸಿರುವುದು ಇದೇ ಮೊದಲು ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. 2009 ರಲ್ಲಿ, ಮಾನ್ಸೂನ್ ಮೇ 23 ರಂದು ಕೇರಳಕ್ಕೆ ಆಗಮಿಸಿತ್ತು, 1975 ರಿಂದ ಲಭ್ಯವಿರುವ ದತ್ತಾಂಶವು ಮಾನ್ಸೂನ್ 1990 … Continued

ಬಹುಭಾಷಾ ನಟ ಮುಕುಲ್‌ ದೇವ ನಿಧನ

ಮುಂಬೈ : ಸನ್‌ ಆಫ್‌ ಸರ್ದಾರ್‌ ಸಿನೆಮಾ ಖ್ಯಾತಿಯ ಬಹುಭಾಷಾ ನಟ ಮುಕುಲ್ ದೇವ್ (54) ನಿಧನರಾಗಿದ್ದಾರೆ. ಮುಕುಲ್‌ ಅವರ ಸಾವಿನ ಸುದ್ದಿಯನ್ನು ಅವರ ಸಹೋದರ ರಾಹುಲ್‌ ದೇವ್‌ (Rahul Dev) ಖಚಿತ ಪಡಿಸಿದ್ದಾರೆ ಹಿಂದಿ, ಪಂಜಾಬಿ ಸೇರಿದಂತೆ ವಿವಿಧ ಭಾಷೆಗಳ ಸಿನೆಮಾಗಳು ಚಲನಚಿತ್ರಗಳು ಮತ್ತು ಕಿರುತೆರೆಯಲ್ಲಿ ನಟಿಸಿದ್ದ ಅವರು, ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು … Continued

ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ ; ಶುಭಮನ್ ಗಿಲ್ ನೂತನ ನಾಯಕ

ಮುಂಬೈ : ಭಾರತದ 37ನೇ ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ಅವರನ್ನು ನೇಮಕ ಮಾಡಲಾಗಿದೆ. ಮೇ 24 ರ ಶನಿವಾರ ಮುಂಬೈನಲ್ಲಿ ನಡೆದ ಹಿರಿಯ ಆಯ್ಕೆ ಸಮಿತಿ ಸಭೆಯಲ್ಲಿ ಬಿಸಿಸಿಐ ಈ ನಿರ್ಧಾರವನ್ನು ದೃಢಪಡಿಸಿದೆ. ಜೂನ್ 20 ರಂದು ಹೆಡಿಂಗ್ಲಿಯಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ 5-ಟೆಸ್ಟ್ ಸರಣಿಗೆ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲು ಅಜಿತ … Continued

ಸಿಇಟಿ ಫಲಿತಾಂಶ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ ರಾಜ್ಯಕ್ಕೆ ಪ್ರಥಮ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್​ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಿಇಟಿ ಫಲಿತಾಂಶ (CET Result) ಇಂದು (ಮೇ 24) ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಶನಿವಾರ ಮಧ್ಯಾಹ್ನ 2 ಗಂಟೆ ನಂತರ … Continued

ದೆಹಲಿಯಲ್ಲಿ 23 ಕೋವಿಡ್-19 ಪ್ರಕರಣಗಳು ವರದಿ; ಹೆದರುವ ಅಗತ್ಯ ಇಲ್ಲ ; ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 23 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ದೆಹಲಿ ಸರ್ಕಾರವು ಎಲ್ಲಾ ಆಸ್ಪತ್ರೆಗಳು ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಮತ್ತು ಲಸಿಕೆಗಳು ಲಭ್ಯವಿರುವಂತೆ ನೋಡಿಕೊಂಡು ಸಜ್ಜಾಗಿರುವಂತೆ ಸಲಹೆ ನೀಡಿದೆ. ಸುಮಾರು ಮೂರು ವರ್ಷಗಳ ನಂತರ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದೆ. ಗುರುವಾರದವರೆಗೆ 23 ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗಿವೆ ಮತ್ತು ರೋಗಿಗಳು ದೆಹಲಿಯ ನಿವಾಸಿಗಳೇ … Continued

ತಿರುಪತಿ ದೇವಸ್ಥಾನದ ಆವರಣದಲ್ಲಿ ನಮಾಜ್ ; ಭುಗಿಲೆದ್ದ ವಿವಾದ

ಹೈದರಾಬಾದ್: ಗುರುವಾರ ತಿರುಪತಿಯ ತಿರುಮಲದ ದೇವಸ್ಥಾನದ ಆವರಣದ ಬಳಿ ತಿರುಮಲ ಕಲ್ಯಾಣ ಮಂಟಪದ ಸಮೀಪ ವ್ಯಕ್ತಿಯೊಬ್ಬ ಹಜರತ್ ಕ್ಯಾಪ್ ಧರಿಸಿ ನಮಾಜ್ ಮಾಡಿರುವ ವೀಡಿಯೊ ವೈರಲ್‌ ಆದ ನಂತರ ವಿವಾದ ಭುಗಿಲೆದ್ದಿದೆ. ಈ ಘಟನೆ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದಲ್ಲಿ ಆ ವ್ಯಕ್ತಿ ಹಜರತ್ ಕ್ಯಾಪ್ ಧರಿಸಿ ನಮಾಜ್ ಮಾಡುತ್ತಿರುವುದನ್ನು ತೋರಿಸಲಾಗಿದೆ. ಸ್ಥಳದಲ್ಲಿ … Continued

ವೀಡಿಯೊ | ನೀವು ನಮ್ಮ ನೀರು ನಿಲ್ಲಿಸಿದ್ರೆ ನಾವು ನಿಮ್ಮ…; ಉಗ್ರ ಹಫೀಜ್ ಸಯೀದ್ ಧಾಟಿಯಲ್ಲೇ ಭಾರತಕ್ಕೆ ಪಾಕಿಸ್ತಾನ ಮಿಲಿಟರಿ ವಕ್ತಾರನ ಬೆದರಿಕೆ !

ಪಾಕಿಸ್ತಾನಿ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಇತ್ತೀಚೆಗೆ ಭಾರತದ ವಿರುದ್ಧ ದ್ವೇಷ ತುಂಬಿದ ಭಾವನೆಗಳನ್ನು ಹೊರಹಾಕಿದ್ದಾರೆ, ಇದು ಹಿಂದೆ ಜಾಗತಿಕ ಭಯೋತ್ಪಾದಕ ಹಫೀಜ್ ಸಯೀದ್ ವ್ಯಕ್ತಪಡಿಸಿದಂತೆಯೇ ಇದೆ ಎಂಬುದು ಹಲವರ ಅಭಿಪ್ರಾಯವಾಗಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ವರದಿಯಾಗಿರುವ ಹಫೀಜ್ ಸಯೀದ್, ಭಾರತ ಮತ್ತು … Continued

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಇಂಡಿಗೋ ವಿಮಾನವು ಅದರ ವಾಯುಪ್ರದೇಶ ಬಳಸಲು ಮಾಡಿದ ಮನವಿ ತಿರಸ್ಕರಿಸಿದ ಪಾಕಿಸ್ತಾನ

 ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ ಹಾರುತ್ತಿದ್ದ ಇಂಡಿಗೋ ವಿಮಾನವು, ಆಕಾಶದಲ್ಲಿ ತೀವ್ರ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ತುತ್ತಾದ ನಂತರ ಪ್ರಕ್ಷುಬ್ಧತೆ ತಪ್ಪಿಸಲು ಪಾಕಿಸ್ತಾನದ ವಾಯುಪ್ರದೇಶವನ್ನು ಸ್ವಲ್ಪ ಸಮಯ ಪ್ರವೇಶಿಸಲು ಅನುಮತಿ ಕೋರಿತ್ತು, ಆದರೆ ಪಾಕಿಸ್ತಾನದ ಲಾಹೋರ್ ವಾಯು ಸಂಚಾರ ನಿಯಂತ್ರಣವು ತುರ್ತು ಸಂದರ್ಭದ ಈ ಮನವಿಯನ್ನು ತಿರಸ್ಕರಿಸಿದೆ ಎಂದು ಪಿಟಿಐ ಗುರುವಾರ ವರದಿ ಮಾಡಿದೆ. 6E … Continued

ಪಾಕಿಸ್ತಾನದ ಪರ ಬೇಹುಗಾರಿಕೆ, ಸೂಕ್ಷ್ಮ ಮಾಹಿತಿ ಹಂಚಿಕೆ ಆರೋಪದ ಮೇಲೆ ವ್ಯಕ್ತಿಯ ಬಂಧನ

ನವದೆಹಲಿ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ(ಉತ್ತರ ಪ್ರದೇಶ ಎಟಿಎಸ್)ವು ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವಾರಾಣಸಿಯ ವ್ಯಕ್ತಿಯನ್ನು ಬಂಧಿಸಿದೆ. ತುಫೈಲ್ ಎಂದು ಗುರುತಿಸಲಾದ ಆರೋಪಿಯು ಭಾರತದ ಬಗ್ಗೆ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದನೆಂದು ವರದಿಯಾಗಿದೆ. ವಾರಾಣಸಿಯ ನಿವಾಸಿ ತುಫೈಲ್ ಹಲವಾರು ಪಾಕಿಸ್ತಾನಿ ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದ … Continued

ವಕ್ಫ್ ತಿದ್ದುಪಡಿ ಕಾಯಿದೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯಿದೆ- 2025ಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಮಧ್ಯಂತರ ಪರಿಹಾರದ ಕುರಿತು ತನ್ನ ಆದೇಶ ಕಾಯ್ದಿರಿಸುವ ಮೊದಲು ಮೂರು ದಿನಗಳ ಕಾಲ ಎಲ್ಲ ಪಕ್ಷಕಾರರ … Continued