ತನ್ನದೇ ವಿಶ್ವ ದಾಖಲೆ ಮುರಿದ ಅಯೋಧ್ಯೆ : ದೀಪಾವಳಿ ಮುನ್ನಾದಿನ ಏಕಕಾಲದಲ್ಲಿ ಬೆಳಗಿದ 22 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆ ದೀಪಗಳು

ಅಯೋಧ್ಯೆ: ದೀಪಾವಳಿ ಆಚರಣೆಯ ಅಂಗವಾಗಿ 22,23, 000 ದೀಪಗಳನ್ನು (ಮಣ್ಣಿನ ಹಣಣೆ ದೀಪಗಳು) ಬೆಳಗಿಸಿದ ನಂತರ ಅಯೋಧ್ಯೆಯಲ್ಲಿ ದೀಪಾಳಿಯ ದೀಪೋತ್ಸವವು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ವಿಶ್ವದಾಖಲೆ ಮಾಡಿದೆ. ದೀಪೋತ್ಸವದ ಸಮಯದಲ್ಲಿ, ರಾಮ್ ಕಿ ಪೈರಿಯಲ್ಲಿ 24 ಲಕ್ಷ ‘ದಿಯಾಗಳು’ (ಮಣ್ಣಿನ ದೀಪಗಳು) ಬೆಳಗಿವೆ. ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭೂತಪೂರ್ವ ಸಂಖ್ಯೆಯ ದೀಪಗಳನ್ನು ಬೆಳಗಿಸುವ … Continued

ಕ್ರಿಕೆಟ್ ವಿಶ್ವಕಪ್ 2023 : ಸೆಮಿಫೈನಲ್‌ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್‌ ಎದುರಾಳಿ

ನವದೆಹಲಿ: ಈಗ ದೃಢೀಕರಿಸಲ್ಪಟ್ಟಿದೆ..! ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಗುರುವಾರ ಈಡನ್‌ ಗಾರ್ಡನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇಂಗ್ಲೆಂಡ್ ವಿರುದ್ಧ 6.4 ಓವರ್‌ಗಳಲ್ಲಿ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ವಿಫಲವಾದ ನಂತರ ಬಾಬರ್ ಅಜಮ್ … Continued

ಉದ್ಯೋಗಕ್ಕಾಗಿ ಭೂ ಹಗರಣ: ಲಾಲು ಕುಟುಂಬದ ಆಪ್ತನನ್ನು ಬಂಧಿಸಿದ ಇ.ಡಿ.

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪುತ್ರ ತೇಜಸ್ವಿ ಯಾದವ್ ಅವರ ಸಹಚರನನ್ನು ಬಂಧಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ (ನವೆಂಬರ್ 11) ತಿಳಿಸಿವೆ. ‘ಸಹವರ್ತಿ’ ಅಮಿತ್ ಕತ್ಯಾಲ್ ಅವರನ್ನು ಶುಕ್ರವಾರ ಕೇಂದ್ರೀಯ … Continued

ಸೂರತ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : ಓರ್ವ ಸಾವು, ಹಲವರಿಗೆ ಗಾಯ

ಸೂರತ್ : ಗುಜರಾತ್‌ನ ಸೂರತ್ ರೈಲು ನಿಲ್ದಾಣದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ದೀಪಾವಳಿಗೆ ತಮ್ಮ ಊರುಗಳಿಗೆ ತೆರಳುವ ಅಪಾರ ಸಂಖ್ಯೆಯ ಜನರು ವಿವಿಧ ರಾಜ್ಯಗಳಿಗೆ ತೆರಳಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ರೈಲು ಹತ್ತುವಾಗ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಹಲವರು ಪ್ರಜ್ಞೆ ತಪ್ಪಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ … Continued

ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಬಸ್ -ಓಮ್ನಿಬಸ್ ಮಧ್ಯೆ ಡಿಕ್ಕಿ ; ಐವರು ಸಾವು, 60 ಮಂದಿಗೆ ಗಾಯ

ಚೆನ್ನೈ: ಮುಂಜಾನೆ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ತಮಿಳುನಾಡು ಸರ್ಕಾರಿ ಬಸ್ ಮತ್ತು ಓಮ್ನಿಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಸಾವಿಗೀಡಾಗಿದ್ದು, ಸುಮಾರು 60 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಓರ್ವ ಮಹಿಳೆ ಸೇರಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಗುಡುವಂಚೇರಿಯ ರಿತಿಕಾ (32), ವಾಣಿಯಂಬಾಡಿಯ ಮೊಹಮ್ಮದ್ ಫಿರೋಜ್ (37), ಎಸ್‌ಇಟಿಸಿ ಬಸ್ ಚಾಲಕ ಕೆ.ಎಲುಮಲೈ (47) … Continued

ಹಿರಿಯ ನಟ ಚಂದ್ರಮೋಹನ ನಿಧನ

ಹೈದರಾಬಾದ್: ತೆಲುಗು ಇಂಡಸ್ಟ್ರಿಯ ಪ್ರವರ್ತಕ ಎಂದೇ ಬಿಂಬಿತವಾಗಿರುವ ಚಂದ್ರ ಮೋಹನ ಶನಿವಾರ, ನವೆಂಬರ್ 11 ರಂದು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಅವರು ಪತ್ನಿ ಜಲಂಧರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವಯೋಸಹಜ ಸಮಸ್ಯೆಗಳಿಂದಾಗಿ ಅವರು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು … Continued

ಪ್ರಧಾನಿ ಮೋದಿ ಒಳಗೊಂಡ ‘ಅಬಂಡನ್ಸ್ ಇನ್ ಮಿಲೆಟ್ಸ್’ ಹಾಡು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನ

ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಒಳಗೊಂಡಿರುವ ‘ಅಬಂಡೆನ್ಸ್ ಇನ್ ಮಿಲೆಟ್ಸ್’ ಎಂಬ ಹಾಡನ್ನು ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ’ ಅಡಿಯಲ್ಲಿ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ಫಾಲು (ಫಲ್ಗುಣಿ ಶಾ) ಮತ್ತು ಗೌರವ್ ಷಾ ಅವರ ಹಾಡು ಈ ವರ್ಷದ ಮಾರ್ಚ್‌ನಲ್ಲಿ ಜಾಗತಿಕ ರಾಗಿ (ಶ್ರೀ ಅನ್ನ) ಸಮ್ಮೇಳನವನ್ನು ಉದ್ಘಾಟಿಸುವಾಗ ಪ್ರಧಾನಿ ಮಾಡಿದ ಭಾಷಣದ ಭಾಗಗಳನ್ನು … Continued

ಅನೇಕ ಕಾಂಗ್ರೆಸ್ ನಾಯಕರು ಭಗವಾನ್ ರಾಮ, ‘ಹಿಂದೂ’ ಎಂಬ ಪದವನ್ನು ದ್ವೇಷಿಸುತ್ತಾರೆ ; ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ

ನವದೆಹಲಿ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ ಕೃಷ್ಣಂ ಅವರು ಶುಕ್ರವಾರ ತಮ್ಮ ಪಕ್ಷದಲ್ಲಿ ಶ್ರೀರಾಮನನ್ನು ಮತ್ತು ‘ಹಿಂದೂ’ ಪದವನ್ನು ದ್ವೇಷಿಸುವ ಅನೇಕ ನಾಯಕರು ಇದ್ದಾರೆ ಎಂದು ಹೇಳಿದ್ದಾರೆ. “ಕಾಂಗ್ರೆಸ್‌ನಲ್ಲಿ ರಾಮನನ್ನು ದ್ವೇಷಿಸುವ ಕೆಲವು ನಾಯಕರಿದ್ದಾರೆ ಎಂದು ನನಗೆ ಅನಿಸಿದೆ, ಈ ನಾಯಕರೂ ಹಿಂದೂ ಪದವನ್ನು ದ್ವೇಷಿಸುತ್ತಾರೆ, ಅವರು ಹಿಂದೂ ಧಾರ್ಮಿಕ ಗುರುಗಳನ್ನು ಅವಮಾನಿಸಲು ಬಯಸುತ್ತಾರೆ, ಪಕ್ಷದಲ್ಲಿ … Continued

‘ಹಿಂದೂಗಳು ಸಹಿಷ್ಣುಗಳು…ಅವರ ಜೀವನ ವಿಧಾನದಿಂದ ನಾವು ಕಲಿತಿದ್ದೇವೆ, ಭಗವಾನ್ ರಾಮ ನಮ್ಮ ಸಂಸ್ಕೃತಿ-ನಾಗರಿಕತೆಯ ಭಾಗ : ಜಾವೇದ್ ಅಖ್ತರ್

ಮುಂಬೈ :   ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಹಿಂದೂ ಸಂಸ್ಕೃತಿಯನ್ನು ಹೊಗಳಿದ್ದಾರೆ ಮತ್ತು ಅವರು ಹಿಂದೂಗಳು ಯಾವಾಗಲೂ ಸಹಿಷ್ಣುಗಳು ಎಂದು ಹೇಳಿದ್ದಾರೆ. ಮುಂಬೈನಲ್ಲಿ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ. ಠಾಕ್ರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹಿಂದೂ ಧರ್ಮದ ಸಾಂಸ್ಕೃತಿಕ ಮಹತ್ವವನ್ನು ಒತ್ತಿ ಹೇಳಿದ ಅವರು, … Continued

ಅಂಚೆ ಇಲಾಖೆಯಲ್ಲಿ 1899 ಹುದ್ದೆಗಳ ನೇಮಕ: 10, 12ನೇ ತರಗತಿ, ಪದವೀಧರರು ಅರ್ಜಿ ಸಲ್ಲಿಸಬಹುದು..

ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್‌, ಎಂಟಿಎಸ್‌ ಸೇರಿದಂತೆ ಒಟ್ಟು 1899 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ … Continued