ರಾಜಸ್ಥಾನ ಸಿಎಂ ಅಶೋಕ ಗೆಹ್ಲೋಟ್ ಆಪ್ತ ಬಿಜೆಪಿಗೆ ಸೇರ್ಪಡೆ

ಜೈಪುರ: ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸೂರಸಾಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಪ್ತ ಹಾಗೂ ಜೋಧಪುರ ಮಾಜಿ ಮೇಯರ್ ರಾಮೇಶ್ವರ್ ದಧಿಚ್ ಅವರು ಗುರುವಾರ ನಾಮಪತ್ರ ಹಿಂಪಡೆದಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ನ ಮಾಜಿ ಜಿಲ್ಲಾಧ್ಯಕ್ಷ ವಿನೋದ ಶರ್ಮಾ ಕೂಡ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು. … Continued

ವೊಡಾಫೋನ್‌ ಐಡಿಯಾಗೆ ₹ 1,128 ಕೋಟಿ ಮರುಪಾವತಿಸಲು ಬಾಂಬೆ ಹೈಕೋರ್ಟ್‌ ಆದೇಶ

ಮುಂಬೈ: 2016-17ರ ಮೌಲ್ಯಮಾಪನ ವರ್ಷಕ್ಕೆ ಮೂಲ ಮತ್ತು ಮುಂಗಡ ತೆರಿಗೆಯಲ್ಲಿ ಕಡಿತಗೊಳಿಸಿದ ₹1,100 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ವೊಡಾಫೋನ್ ಐಡಿಯಾ ಲಿಮಿಟೆಡ್‌ಗೆ (ವಿಐ ಲಿಮಿಟೆಡ್) ಮರುಪಾವತಿಸುವಂತೆ ಬಾಂಬೆ ಹೈಕೋರ್ಟ್ ಆದಾಯ ತೆರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಕೆ.ಆರ್.ಶ್ರೀರಾಮ ಮತ್ತು ಡಾ.ನೀಲಾ ಗೋಖಲೆ ಅವರಿದ್ದ ಪೀಠವು ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಂಬಂಧಿಸಿದ … Continued

ಕ್ರಿಕೆಟ್ ವಿಶ್ವಕಪ್ 2023 : ಶ್ರೀಲಂಕಾ ವಿರುದ್ಧ ಗೆಲುವಿನಿಂದ ನ್ಯೂಜಿಲೆಂಡಿಗೆ ಹೆಚ್ಚಿದ ಸೆಮಿಫೈನಲ್‌ ಅವಕಾಶ, ಪಾಕಿಸ್ತಾನಕ್ಕೆ ಇದು ಸಾಧ್ಯವಿದೆಯೇ..? ಲೆಕ್ಕಾಚಾರ ಹೀಗಿದೆ….

ಬೆಂಗಳೂರು: ಗುರುವಾರ ನಡೆದ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಐದು ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 2023 ರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ ಪ್ರವೇಶದ ಓಟದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡೂ ತಂಡಗಳು ಭಾರಿ ಕಠಿಣ ಸವಾಲು ನೀಡಿದೆ. ನ್ಯೂಜಿಲೆಂಡ್ ಈಗ 9 ಪಂದ್ಯಗಳಿಂದ 10 ಅಂಕಗಳನ್ನು +0.743 ರ ನಿವ್ವಳ ರನ್ ರೇಟ್‌ ಹೊಂದಿದೆ. … Continued

ವೀಡಿಯೊ…: : ಚುನಾವಣಾ ಪ್ರಚಾರದ ವಾಹನದಿಂದ ಕೆಳಗೆ ಬೀಳುತ್ತಿದ್ದ ತೆಲಂಗಾಣ ಸಚಿವ ಕೆಟಿಆರ್ ; ರಕ್ಷಿಸಿದ ಗನ್‌ಮ್ಯಾನ್‌

ಹೈದರಾಬಾದ್ : ಬಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಅವರು ಗುರುವಾರ ಆರ್ಮೂರ್‌ನಲ್ಲಿ ರೋಡ್‌ಶೋ ವೇಳೆ ತಮ್ಮ ಪ್ರಚಾರ ವಾಹನದಿಂದ ಮುಕ್ಕುರಿಸಿ ಬಿದ್ದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಪ್ರಚಾರ ವಾಹನದ ಚಾಲಕ ಥಟ್ಟನೆ ಬ್ರೇಕ್ ಹಾಕಿದ್ದರಿಂದ ವಾಹನದ ಮೇಲೆ ಹಾಕಿದ್ದ ರೇಲಿಂಗ್ ಕೆಳಕ್ಕೆ ಜಾರಿ ನಿಂತಿದ್ದ ಸಚಿವರು ಮತ್ತು ಇತರರನ್ನು ಕೆಳಕ್ಕೆ … Continued

ಭಾರತದ ನೌಕಾಪಡೆಯ 8 ಮಾಜಿ ಯೋಧರಿಗೆ ಕತಾರ್ ನ್ಯಾಯಾಲಯ ವಿಧಿಸಿರುವ ಮರಣದಂಡನೆ ಶಿಕ್ಷೆ ವಿರುದ್ಧ ಭಾರತದ ಮೇಲ್ಮನವಿ

ನವದೆಹಲಿ: ಕಳೆದ ತಿಂಗಳು ಕತಾರ್ ನ್ಯಾಯಾಲಯವು ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಿದ್ದರ ವಿರುದ್ಧ ಸರ್ಕಾರವು ಮೇಲ್ಮನವಿ ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ತಿಳಿಸಿದೆ. ಅಕ್ಟೋಬರ್‌ನಲ್ಲಿ, ಕತಾರ್‌ನ ನ್ಯಾಯಾಲಯವು ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಗೆ ಮರಣದಂಡನೆ ವಿಧಿಸಿತು, ಅವರು ಕತಾರಿನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನದಲ್ಲಿದ್ದರು. “ತೀರ್ಪು ಗೌಪ್ಯವಾಗಿದೆ. ನಮ್ಮ … Continued

ಜಾತಿ ಆಧಾರಿತ ಮೀಸಲಾತಿ ಶೇ.65ಕ್ಕೆ ಹೆಚ್ಚಿಸುವ ಮಸೂದೆಗೆ ಬಿಹಾರ ವಿಧಾನಸಭೆ ಅಂಗೀಕಾರ

ಪಾಟ್ನಾ : ಬಿಹಾರದಲ್ಲಿ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸುವ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಗುರುವಾರ (ನವೆಂಬರ್‌ 9) ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕೋಟಾಗಳನ್ನು ಹೆಚ್ಚಿಸುವ ಪ್ರಸ್ತಾವನೆಗೆ ಬಿಹಾರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ. ನಿತೀಶಕುಮಾರ ಅವರ ಅನುಪಸ್ಥಿತಿಯಲ್ಲಿ … Continued

ವಿಶ್ವಕಪ್ 2023 : ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ದಾಖಲೆ ಬರೆದ ಶ್ರೀಲಂಕಾ ತಂಡದ 9ನೇ ಕ್ರಮಾಂಕದ ಬ್ಯಾಟರ್‌

ಬೆಂಗಳೂರು : ನವೆಂಬರ್ 9, ಗುರುವಾರದಂದು ತಮ್ಮ ವಿಶ್ವಕಪ್ 2023 ರ ಸೆಮಿಫೈನಲ್ ಅರ್ಹತೆ ಪಡೆಯುವ ಅವಕಾಶ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್‌ ತಂಡವು ನ್ಯೂಜಿಲೆಂಡ್ ಶ್ರೀಲಂಕಾವನ್ನು ಕೇವಲ 171 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಶ್ರೀಲಂಕಾ ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದು, ಆದರೆ ಸಮಾಧಾನದ ಗೆಲುವನ್ನು ಬಯಸುತ್ತಿದೆ. ಆದಾಗ್ಯೂ, ಬೆಂಗಳೂರಿನ … Continued

ಸಂಸದರು-ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚಿಸಬೇಕು: ಸುಪ್ರೀಂ ಕೋರ್ಟ್‌ ನಿರ್ದೇಶನ

ನವದೆಹಲಿ: ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಚಾರಣೆಗೆ ವಿಶೇಷ ಪೀಠ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನಗಳನ್ನು ನೀಡಿದೆ. ಶಾಸಕರು ಹಾಗೂ ಸಂಸದರ ವಿರುದ್ಧ ಐದು ಸಾವಿರಕ್ಕೂ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಂತಹ ಪ್ರಕರಣಗಳಲ್ಲಿ ‘ಅಪರೂಪದ ಹಾಗೂ ಬಲವಾದ ಕಾರಣಗಳು ಇಲ್ಲದಿದ್ದರೆ ವಿಶೇಷ ನ್ಯಾಯಾಲಯಗಳು ವಿಚಾರಣೆಯನ್ನು ಮುಂದೂಡಬಾರದು’ ಎಂದು … Continued

ರಿಲಯನ್ಸ್ ಜಿಯೋದಿಂದ ಪ್ರಿಪೇಯ್ಡ್ ಗ್ರಾಹಕರಿಗೆ ದೀಪಾವಳಿ ಧಮಾಕಾ ಆಫರ್ ; ಸ್ವಿಗ್ಗಿ ಸಬ್ ಸ್ಕ್ರಿಪ್ಷನ್ ಜತೆಗೆ ಕ್ಯಾಶ್ ಬ್ಯಾಕ್…!

ಮುಂಬೈ : ಇದೇ ಮೊದಲ ಬಾರಿಗೆ ಎಂಬಂತೆ ಪ್ರಿಪೇಯ್ಡ್ ಪ್ಲಾನ್ ಒಂದನ್ನು ರಿಲಯನ್ಸ್ ಜಿಯೋ ಘೋಷಣೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಈ ಯೋಜನೆ ಬಂದಿದ್ದು, ಈ ಪ್ರಿಪೇಯ್ಡ್ ಪ್ಲಾನ್ ಸ್ವಿಗ್ಗಿ ಒನ್ ಲೈಟ್ ಚಂದಾದಾರಿಕೆಯ ಜತೆಗೆ ಬಂದಿದೆ. ಇದು ಜಿಯೋ ಪ್ರಿಪೇಯ್ಡ್ 866 ರೂಪಾಯಿಯ ಪ್ಲಾನ್ ಆಗಿದೆ. ಇಷ್ಟು ಮೊತ್ತಕ್ಕೆ ಬಳಕೆದಾರರು ರೀಚಾರ್ಜ್ … Continued

ತಮಿಳುನಾಡಿನಲ್ಲಿ ಭಾರೀ ಮಳೆ: ನೀಲಗಿರಿಯಲ್ಲಿ ಭೂಕುಸಿತ ; 5 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ

ಚೆನ್ನೈ: ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ತೀವ್ರಗೊಂಡಿದ್ದು, ಕೊಯಮತ್ತೂರು, ತಿರುಪ್ಪೂರ್, ಮಧುರೈ, ಥೇಣಿ, ದಿನಿಡಿಗಲ್ ಸೇರಿದಂತೆ ಐದು ಜಿಲ್ಲೆಗಳು ಮತ್ತು ನೀಲಗಿರಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನೀಲಗಿರಿ ಜಿಲ್ಲೆಯ ಕೋಟಗಿರಿ-ಮೆಟ್ಟುಪಾಳ್ಯಂ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳನ್ನು ಈಗ ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ. ಏತನ್ಮಧ್ಯೆ, ಭಾರೀ ಮಳೆಯಿಂದಾಗಿ ಕಲ್ಲರ್ ಮತ್ತು … Continued