ಅಯೋಧ್ಯೆ : ಮಳೆಗೆ ಗುಂಡಿ ಬಿದ್ದ ರಾಮಪಥ ; 6 ಅಧಿಕಾರಿಗಳು ಅಮಾನತು

ಅಯೋಧ್ಯೆ: ಹೊಸದಾಗಿ ನಿರ್ಮಿಸಲಾದ ರಾಮಪಥದಲ್ಲಿ ಮೊದಲನೇ ಮಳೆಗೆ ಗುಂಡಿ ಬಿದ್ದ ಹಾಗೂ ಅಯೋಧ್ಯೆ ಜಲಾವೃತಗೊಂಡ ಪ್ರಕರಣಕ್ಕೆ ಸಂಬಂಧ ಪಾಲಿಕೆಯ ಆರು ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿದೆ. ಜೂನ್ 23 ಹಾಗೂ 26ರಂದು ಸುರಿದ ಮಳೆಗೆ ರಾಮಪಥವು ಜಲಾವೃತಗೊಂಡಿತ್ತು. ಹಾಗೂ ನೀರು ಅಕ್ಕಪಕ್ಕದ ಮನೆಗಳಿಗೂ ನುಗ್ಗಿತ್ತು. ರಾಮ ಮಂದಿರಕ್ಕೆ ಸಂ‍ಪರ್ಕ ಕಲ್ಪಿಸುವ 14 ಕಿಮೀ ಉದ್ದದ … Continued

ಚೀನಾ ಗಡಿ ಬಳಿ ನದಿ ದಾಟುತ್ತಿದ್ದಾಗ ಕೊಚ್ಚಿಹೋದ ಟ್ಯಾಂಕ್‌ನಲ್ಲಿದ್ದ ಐವರು ಸೈನಿಕರು

ನವದೆಹಲಿ: ಶನಿವಾರ ಮುಂಜಾನೆ ಲೇಹ್‌ನ ದೌಲತ್ ಬೇಗ್ ಓಲ್ಡಿ ಪ್ರದೇಶದ ನೈಜ ನಿಯಂತ್ರಣ ರೇಖೆಯ ಬಳಿ ನದಿ ದಾಟುವಾಗ ಭಾರತೀಯ ಸೇನೆಯ ಟ್ಯಾಂಕ್ ಅಪಘಾತಕ್ಕೀಡಾಗಿ ಐವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟ ಐವರಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಅಥವಾ ಜೆಸಿಒ ಸೇರಿದ್ದಾರೆ. ಇಂದು, ಶನಿವಾರ (ಜೂನ್‌ 29) ಮುಂಜಾನೆ 3 ಗಂಟೆ ಸುಮಾರಿಗೆ … Continued

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ನಿಂದ 8326 ಹುದ್ದೆಗೆ ಅರ್ಜಿ ಆಹ್ವಾನ : ಎಸ್‌ ಎಸ್‌ ಎಲ್‌ ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು…

ಕೇಂದ್ರ ಸರ್ಕಾರದ ಇಲಾಖೆಗಳು, ಸಚಿವಾಲಯಗಳಿಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ (Staff Selection Commission) 8326 ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ಹಾಗೂ ಹವಾಲ್ದಾರ್‌ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 31 ರವರೆಗೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು … Continued

ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ

ನವದೆಹಲಿ: ರಾಜಭವನದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದಾಗಿ ರಾಜಭವನಕ್ಕೆ ಹೋಗಲು ಭಯವಾಗುತ್ತಿದೆ ಎಂದು ಮಹಿಳೆಯರು ತಮ್ಮ ಮುಂದೆ ದೂರು ನೀಡಿದ್ದಾರೆ ಎಂದು ಹೇಳಿದ ಒಂದು ದಿನದ ಬಳಿಕ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಶುಕ್ರವಾರ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದೇ ರೀತಿಯ ಹೇಳಿಕೆಗಳಿಗಾಗಿ … Continued

ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ರಿಚಾರ್ಜ್‌ ಪ್ಲಾನ್‌ ದರ ಹೆಚ್ಚಳ; ಇಲ್ಲಿದೆ ವಿವರ…

ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್ ನಂತರ ಭಾರತದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾದ ವೊಡಾಫೋನ್ ಐಡಿಯಾ (ವಿ) ಸಹ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರಿಚಾರ್ಜ್‌ ಪ್ಲಾನ್‌ಗಳ ಬೆಲೆ ಹೆಚ್ಚಳವನ್ನು ಪ್ರಕಟಿಸಿದೆ. ಬೆಲೆ ಏರಿಕೆಯು 11-24% ವರೆಗೆ ಹೆಚ್ಚಾಗಿದ್ದು, ಜುಲೈ 4ರಿಂದ ಜಾರಿಗೆ ಬರಲಿದೆ. ಜಿಯೊ (Jio) ಮತ್ತು ಏರ್‌ಟೆಲ್ (Airtel) ರಿಚಾರ್ಜ್‌ ಪ್ಲಾನ್‌ಗಳ … Continued

ವೀಡಿಯೊ…| 88 ವರ್ಷಗಳ ಬಳಿಕ ದೆಹಲಿಯಲ್ಲಿ ಒಂದೇ ದಿನಕ್ಕೆ ದಾಖಲೆ ಮಳೆ ; ನಲುಗಿದ ರಾಷ್ಟ್ರದ ರಾಜಧಾನಿ

ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿ ನಿನ್ನೆ ಆರಂಭವಾದ ಧಾರಾಕಾರ ಮಳೆ ಇಂದು, ಶುಕ್ರವಾರ ಬೆಳಿಗ್ಗೆ ಅನೇಕ ಕಡೆ ಜಲಾವೃತ ಮತ್ತು ತೀವ್ರ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಹವಾಮಾನ ಇಲಾಖೆಯ ಪ್ರಕಾರ, ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ 8:30 ರಿಂದ ಇಂದು, ಶುಕ್ರವಾರ ಬೆಳಿಗ್ಗೆ 8:30 ರವರೆಗೆ 228 ಮಿಮೀ ಮಳೆಯಾಗಿದೆ. ಇದು 1936ರ ಜೂನ್‌ನಲ್ಲಿ 235.5 ಮಿಮೀ ಮಳೆಯಾದ ನಂತರದಲ್ಲಿ … Continued

ಕರಾವಳಿಯಲ್ಲಿ ಭಾರೀ ಗಾಳಿ ಮಳೆ ಮುನ್ಸೂಚನೆ : ದೈತ್ಯ ಅಲೆಗಳ ಎಚ್ಚರಿಕೆ ; ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ

ಬೆಂಗಳೂರು :  ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಭಾರತೀಯ ಹವಾಮಾನ ಇಲಾಖೆ (IMD) ಜೂನ್ 29 ರವರೆಗೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್‌ ೩೦ರ ವರೆಗೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ. ಗಾಳಿಯ ವೇಗ ತಾಸಿಗೆ ಸರಾಸರಿ … Continued

ರಾಜ್ಯಸಭೆ ಕಲಾಪದಲ್ಲಿ ಪ್ರತಿಭಟನೆ ವೇಳೆ ಕುಸಿದು ಬಿದ್ದ ಕಾಂಗ್ರೆಸ್‌ ಸಂಸದೆ ; ಆಸ್ಪತ್ರೆಗೆ ದಾಖಲು

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಅವಕಾಶ ನೀಡದ ರಾಜ್ಯಸಭಾ ಚೇರ್ಮನ್‌ ನಿರ್ಧಾರದ ವಿರುದ್ಧ ಪ್ರತಿಭಟಿಸುತ್ತಿರುವಾಗ ಕಾಂಗ್ರೆಸ್ ಸದಸ್ಯರೊಬ್ಬರು ಸದನದ ಬಾವಿಯಲ್ಲಿ ಮೂರ್ಛೆ ಹೋದ ಘಟನೆ ಶುಕ್ರವಾರ (ಜೂನ್ 28)ರಂದು ರಾಜ್ಯಸಭೆಯಲ್ಲಿ ನಡೆಯಿತು. ನೆಲದ ಮೇಲೆ ಬಿದ್ದಿದ್ದ ನೇತಾಮ್‌ ಅವರನ್ನು ತಕ್ಷಣವೇ ಆಂಬುಲೆನ್ಸ್‌ ನಲ್ಲಿ ರಾಮ್‌ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಅವರ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರ್ಖಂಡ ಮಾಜಿ ಸಿಎಂ ಹೇಮಂತ ಸೊರೇನ್‌ ಗೆ ಜಾಮೀನು

ರಾಂಚಿ: ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರಿಗೆ ಜಾಮೀನು ನೀಡಿದೆ. ಸೊರೇನ್‌ ವಿರುದ್ಧ ಆಪಾದಿಸಲಾದ ಭೂ ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಮೂರ್ತಿ ರೊಂಗೋನ್ ಮುಖೋಪಾಧ್ಯಾಯ ಅವರು ಶುಕ್ರವಾರ ಸೊರೇನ್‌ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಮುಖೋಪಾಧ್ಯಾಯ ಅವರು ಸೊರೇನ್ ತನ್ನ ಚಿಕ್ಕಪ್ಪನ … Continued

ಜಿಯೊ, ಏರ್‌ಟೆಲ್‌ ಮೊಬೈಲ್ ರಿಚಾರ್ಜ್‌ ದರ ಹೆಚ್ಚಳ : ಜುಲೈ 3ರಿಂದ ಜಾರಿ; ವಿವಿಧ ಪ್ಲಾನ್‌ಗಳ ದರ ಹೆಚ್ಚಳದ ವಿವರ ಇಲ್ಲಿದೆ…

ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಗಮನಾರ್ಹ ಸುಂಕ ಹೆಚ್ಚಳವನ್ನು ಪ್ರಕಟಿಸಿದ್ದು, ಮೊಬೈಲ್ ಫೋನ್ ಬಿಲ್‌ಗಳು ಹೆಚ್ಚಾಗಲಿವೆ. ಜಿಯೋ ಗುರುವಾರ 12-25% ಹೆಚ್ಚಳ ಮಾಡುವುದಾಗಿ ಪ್ರಕಟಿಸಿತು. ನಂತರ ಶುಕ್ರವಾರ ಏರ್‌ಟೆಲ್ ಬೆಲೆ ಏರಿಕೆಯ ಘೋಷಣೆ ಮಾಡಿದೆ. ಭಾರ್ತಿ ಏರ್‌ಟೆಲ್ ಶೇ 10-21ರಷ್ಟು ಹೆಚ್ಚಿಸುವುದಾಗಿ ಹೇಳಿದೆ. ಜುಲೈ 3ರಿಂದ ಜಾರಿಗೆ ಬರುವಂತೆ ಮೊಬೈಲ್‌ ಸೇವೆಗಳ ಶುಲ್ಕವನ್ನು … Continued