14,000 ಉದ್ಯೋಗಗಳ ಕಡಿತಕ್ಕೆ ನೋಕಿಯಾ ನಿರ್ಧಾರ

ಫಿನ್‌ಲ್ಯಾಂಡ್ ಮೂಲದ ಮೊಬೈಲ್ ಕಂಪನಿ ನೋಕಿಯಾ (Nokia) ಮಾರಾಟ ಕುಸಿತ ಮತ್ತು 5G ಸಲಕರಣೆಗಳ ಬೇಡಿಕೆಯ ನಡುವೆ 9,000 ರಿಂದ 14,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ ಎಂದು ಗುರುವಾರ ತಿಳಿಸಿದೆ. ಈ ಕಡಿತಗಳು ಕಂಪನಿಯ ಪ್ರಸ್ತುತ ಜಾಗತಿಕ 86,000 ಉದ್ಯೋಗಿಗಳ ಸುಮಾರು 16% ರಷ್ಟು ಜನರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ವಜಾಗೊಳಿಸುವಿಕೆಯು 2024 ರಲ್ಲಿ … Continued

ಗಾಜಾ ಆಸ್ಪತ್ರೆ ಮೇಲಿನ ದಾಳಿಗೂ, ನಮಗೂ ಸಂಬಂಧವಿಲ್ಲ: ಸಾಕ್ಷ್ಯ ಬಿಡುಗಡೆ ಮಾಡಿದ ಇಸ್ರೇಲ್

500 ಸಾವಿಗೆ ಕಾರಣವಾದ ಗಾಜಾದ ಅಲ್-ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ದಾಳಿಯ ಬಗ್ಗೆ ಹಮಾಸ್-ಇಸ್ರೇಲ್‌ ಪರಸ್ಪರ ಆರೋಪ-ಪ್ರತಯಾರೋ ಮಾಡುತ್ತಿರುವ ಬೆನ್ನಲ್ಲೇ, ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಾವು ಹೇಳಿರುವುದಕ್ಕೆ ಇಸ್ರೇಲ್‌ ಸಾಕ್ಷ್ಯ ತೋರಿಸಿದೆ. ಆಸ್ಪತ್ರೆಯಲ್ಲಿ ವೈಮಾನಿಕ ದಾಳಿಯಿಂದ ಸ್ಫೋಟ ಸಂಭವಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ಇಸ್ರೇಲ್, ಇಸ್ಲಾಮಿ ಜಿಹಾದ್‌ ಗುಂಪು … Continued

ವೀಟೋ ಮಾಡಿದ ಅಮೆರಿಕ : ಇಸ್ರೇಲ್-ಪ್ಯಾಲೆಸ್ತೈನ್ ಸಂಘರ್ಷದ ನಿರ್ಣಯ ಅಂಗೀಕರಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಫಲ

ವಿಶ್ವಸಂಸ್ಥೆ : ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ “ಮಾನವೀಯ ವಿರಾಮ”ಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಅಮೆರಿಕ ಬುಧವಾರ ವೀಟೋ ಮಾಡಿದೆ, ಏಕೆಂದರೆ ನಿರ್ಣಯವು ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಗೌರವಿಸುವುದಿಲ್ಲ ಎಂದು ಅಮೆರಿಕ ರಾಯಭಾರಿ ಹೇಳಿದ್ದಾರೆ. 15 ಕೌನ್ಸಿಲ್ ಸದಸ್ಯರಲ್ಲಿ ಹನ್ನೆರಡು ಸದಸ್ಯರು ಬ್ರೆಜಿಲ್ ಮಂಡಿಸಿದ ನಿರ್ಣಯದ ಪರವಾಗಿ ಮತ ಚಲಾಯಿಸಿದರು. ಆದರೆ … Continued

ಇಂಧನ ಇಲ್ಲದೆ 48 ವಿಮಾನಗಳ ಹಾರಾಟ ರದ್ದುಗೊಳಿಸಿದ ಪಾಕಿಸ್ತಾನದ ಸರ್ಕಾರಿ ವಿಮಾನಯಾನ ಸಂಸ್ಥೆ…!

ಕರಾಚಿ : ಹಣ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿದ್ದಕ್ಕೆ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಸ್ಟೇಟ್ ಆಯಿಲ್ (ಪಿಎಸ್‌ಒ) ಇಂಧನ ಪೂರೈಕೆ ಸ್ಥಗಿತಗೊಳಿಸಿದ ನಂತರ ಇಂಧನ ಕೊರತೆಯಿಂದಾಗಿ ಪಾಕಿಸ್ತಾನದ ಸರ್ಕಾರಿ ವಿಮಾನಯಾನ ಸಂಸ್ಥೆಯಾದ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (PIA) ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳು ಸೇರಿದಂತೆ 48 ವಿಮಾನಗಳನ್ನು ರದ್ದುಗೊಳಿಸಿದೆ. ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (PIA) ವಕ್ತಾರರು ಪಾಕಿಸ್ತಾನಿ … Continued

ರೋಲ್ಸ್ ರಾಯ್ಸ್ ಕಂಪನಿಯಿಂದ 2,500 ಉದ್ಯೋಗಗಳ ಕಡಿತ

ರೋಲ್ಸ್ ರಾಯ್ಸ್ ” ಕಂಪನಿ ಜಾಗತಿಕವಾಗಿ 2,500 ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ. ಜನವರಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ನಂತರ, ರೋಲ್ಸ್ ರಾಯ್ಸ್ ಅನ್ನು “ಸುಡುವ ವೇದಿಕೆ” ಎಂದು ಬಣ್ಣಿಸಿದ ತುಫಾನ್ ಎರ್ಗಿನ್‌ಬಿಲ್ಜಿಕ್ ಅವರ ಮೊದಲ ಪ್ರಮುಖ ಕ್ರಮವಾಗಿದೆ. ವಿಮಾನಗಳಿಗೆ ಇಂಜಿನ್ ತಯಾರಿಸುವ ಕಂಪನಿಯು ಡರ್ಬಿಯಲ್ಲಿದೆ. ಇದು ವಿಶ್ವದಾದ್ಯಂತ 42,000 ಜನರನ್ನು ನೇಮಿಸಿಕೊಂಡಿದೆ ಮತ್ತು ಸುಮಾರು ಅರ್ಧದಷ್ಟು … Continued

ಇಸ್ರೇಲ್-ಹಮಾಸ್ ಯುದ್ಧ : ಈವರೆಗೆ ಕನಿಷ್ಠ 15 ಪತ್ರಕರ್ತರು ಸಾವು; ವರದಿ

ಇಸ್ರೇಲ್-ಹಮಾಸ್ ಸಂಘರ್ಷದ ಆರಂಭದಿಂದಲೂ, ನೂರಾರು ಪತ್ರಕರ್ತರು, ವರದಿಗಾರರು, ಛಾಯಾಗ್ರಾಹಕರು ಮತ್ತು ವೀಡಿಯೊಗ್ರಾಫರ್‌ಗಳು ಯುದ್ಧದ ಬಗ್ಗೆ ವರದಿ ಮಾಡಲು ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ, ಅವರ ಕೆಲಸವನ್ನು ಮಾಡಲು ಅವರು ಭಾರೀ ಬೆಲೆ ತೆರಬೇಕಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಪ್ರಾರಂಭವಾದಾಗಿನಿಂದ ಕನಿಷ್ಠ 15 ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಕಮಿಟಿ ಟು ಪ್ರೊಟೆಕ್ಟ್‌ ಜರ್ನಲಿಸ್ಟ್‌ (Committee to Protect … Continued

ಈಜಿಪ್ಟ್‌ ರಾಣಿಯ ಸಮಾಧಿಯಲ್ಲಿ 5,000 ವರ್ಷಗಳಷ್ಟು ಪುರಾತನ ವೈನ್ ತುಂಬಿದ ಜಾರ್‌ಗಳು ಪತ್ತೆ….!

ಗಮನಾರ್ಹವಾದ ಹೊಸ ಆವಿಷ್ಕಾರದಲ್ಲಿ, ಪುರಾತತ್ತ್ವಜ್ಞರು 5,000 ವರ್ಷಗಳ ಹಿಂದಿನ ಈಜಿಪ್ಟಿನ ಸಮಾಧಿಯೊಳಗೆ ‘ಈಜಿಪ್ಟ್‌ನ ಮೊದಲ ಮಹಿಳಾ ಫೇರೋ’ಗೆ ಸಂಬಂಧಿಸಿದ ವೈನ್ ಜಾರ್‌ಗಳ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ವಿಯೆನ್ನಾ ವಿಶ್ವವಿದ್ಯಾನಿಲಯದ ಪುರಾತತ್ವಶಾಸ್ತ್ರಜ್ಞ ಕ್ರಿಸ್ಟಿಯಾನಾ ಕೊಹ್ಲರ್ ನೇತೃತ್ವದ ತಂಡವು ಉತ್ಖನನದ ವೇಳೆ ಇದನ್ನು ಪತ್ತೆ ಮಾಡಿದೆ. ಜರ್ಮನ್-ಆಸ್ಟ್ರಿಯನ್ ತಂಡವು ಈಜಿಪ್ಟ್‌ನ ಅಬಿಡೋಸ್‌ನ ಉಮ್ ಅಲ್-ಕ್ವಾಬ್ ನೆಕ್ರೋಪೊಲಿಸ್‌ನಲ್ಲಿರುವ ರಾಣಿ ಮೆರೆಟ್-ನೀತ್ … Continued

ವೀಡಿಯೊ…| ಸಂಗೀತ ಉತ್ಸವದಿಂದ ಅಪಹರಿಸಿದ ಒತ್ತೆಯಾಳುವಿನ ಮೊದಲ ವೀಡಿಯೊ ಬಿಡುಗಡೆ ಮಾಡಿದ ಹಮಾಸ್‌

ಪ್ರಮುಖ ಬೆಳವಣಿಗೆಯೊಂದರಲ್ಲಿ, ಹಮಾಸ್ ಗುಂಪು ಸೋಮವಾರ, ಒತ್ತೆಯಾಳುವಿನ ಮತ್ತೊಂದು ವೀಡಿಯೊವನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಯುವತಿಯೊಬ್ಬಳು ಅಜ್ಞಾತ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದನ್ನು ತೋರಿಸಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಅಕ್ಟೋಬರ್ 7 ರಂದು ಹಮಾಸ್‌ ದಾಳಿಯಲ್ಲಿ 1,300 ಕ್ಕೂ ಹೆಚ್ಚು ಇಸ್ರೇಲಿ ಜನರು ಸಾವೀಗಾಡದ ನಂತರ ಇದಕ್ಕೆ ಪ್ರತೀಕಾರವಾಗಿ ಗಾಜಾ ಮೇಲೆ ಇಸ್ರೇಲ್‌ … Continued

ತನ್ನ ಭೇಟಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿಗೆ ಗಂಟೆಗಳ ಕಾಲ ಕಾಯುವಂತೆ ಮಾಡಿದ ಸೌದಿ ಕ್ರೌನ್ ಪ್ರಿನ್ಸ್ : ವರದಿ

ವಾಷಿಂಗ್ಟನ್‌ : ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (MBS) ಅವರ ಜೊತೆ ಭೇಟಿಗಾಗಿ ಆಗಮಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರನ್ನು ಗಂಟೆಗಳ ಕಾಲ ಕಾಯುವಂತೆ ಮಾಡಲಾಯಿತು. ಅವರು ಆ ದಿನ ಭೇಟಿಯಾಗದೆ ಮರುದಿನ ಭೇಟಿ ಮಾಡಿದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇಸ್ರೇಲ್‌ನ ಮೇಲೆ ಹಮಾಸ್‌ನ ದಾಳಿಯ ವಿರುದ್ಧ … Continued

ವೀಡಿಯೊ | ಇಸ್ರೇಲಿ ಮನೆಗಳ ಮೇಲೆ ಹಮಾಸ್ ಗನ್‌ಮ್ಯಾನ್‌ ಮನಬಂದಂತೆ ಗುಂಡು ಹಾರಿಸಿದ್ದನ್ನು ತೋರಿಸಿದ ವೀಡಿಯೊ ಫೂಟೇಜ್-ನಂತರ ಆತನ ಮರಣವೇ ಅದರಲ್ಲಿ ಸೆರೆ

ಹಮಾಸ್ ಗುಂಪು ಕಳೆದ ವಾರ ತಮ್ಮ ಅನಿರೀಕ್ಷಿತವಾಗಿ ಇಸ್ರೇಲಿ ನಾಗರಿಕರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ ವೀಡಿಯೊಗಳು ಹೊರಹೊಮ್ಮಿವೆ. ರಾಕೆಟ್‌ಗಳ ಮೂಲಕ ಭೂಮಿ, ಸಮುದ್ರ ಮತ್ತು ವಾಯು ಮಾರ್ಗದ ಮೂಲಕ ಹಮಾಸ್‌ನ ತ್ರಿಕೋನ ದಾಳಿಯು ಇಸ್ರೇಲಿ ನಾಗರಿಕ ರನ್ನು ಗುರಿಯಾಗಿಸಿಕೊಂಡು ನಡೆಯಿತು. ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) ಇಸ್ರೇಲಿ ಚೆಕ್ ಪೋಸ್ಟ್‌ ಮೇಲೆ ಹೊಂಚುದಾಳಿ ನಡೆಸುತ್ತಿರುವ … Continued