ಐಪಿಎಲ್‌ 2025 ಮೆಗಾ ಹರಾಜು : 1.1 ಕೋಟಿ ರೂ.ಗೆ ಐಪಿಎಲ್ ನಲ್ಲೇ ಅತ್ಯಂತ ಕಿರಿಯ 13 ವರ್ಷದ ಆಟಗಾರನ ಖರೀದಿಸಿದ ರಾಜಸ್ಥಾನ ರಾಯಲ್ಸ್‌..!

ನವದೆಹಲಿ : 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 Auction) ಟೂರ್ನಿಯ ಎರಡನೇ ದಿನದ ಮೆಗಾ ಹರಾಜಿನಲ್ಲಿ 13ರ ವಯಸ್ಸಿನ ಹುಡುಗ ವೈಭವ ಸೂರ್ಯವಂಶಿ ದಾಖಲೆ ಬರೆದಿದ್ದು, ಸೋಮವಾರ ನಡೆದಿದ್ದ ಮೆಗಾ ಹರಾಜಿನಲ್ಲಿ ಅವರನ್ನು ರಾಜಸ್ಥಾನ ರಾಯಲ್ಸ್‌ ತಂಡ 1.10 ಕೋಟಿ ರೂ.ಗಳಿಗೆ ಖರೀದಿಸಿದೆ. ಆ ಮೂಲಕ 13 ವರ್ಷದ ಕ್ರಿಕೆಟಿಗ ವೈಭವ ಸೂರ್ಯವಂಶಿ … Continued

ಮಹಾರಾಷ್ಟ್ರ ಚುನಾವಣೆಯಲ್ಲಿ ಉದ್ಧವ ಠಾಕ್ರೆ ಮುಖ ಉಳಿಸಲು ರಾಜ ಠಾಕ್ರೆ ಪಕ್ಷದಿಂದ ಪರೋಕ್ಷ ಸಹಾಯ ; ಅದು ಆಗಿದ್ದು ಹೇಗೆ..?

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಭಾರಿ ಜಯ ಗಳಿಸಿದೆ. ವಿಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಬಹಳ ಕಡಿಮೆ ಸ್ಥಾನಗಳಿಗೆ ಕುಸಿದಿದೆ. ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಕೇವಲ 20 ಸ್ಥಾನಗಳನ್ನು ಮಾತ್ರ ಗಳಿಸಿದೆ. ಅದರಲ್ಲಿಯೂ ಇಷ್ಟು ಸ್ಥಾನ ಗಳಿಸಲು ಸೋದರಸಂಬಂಧಿ ರಾಜ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ … Continued

ಅತಿ ದೊಡ್ಡ ಪ್ರಮಾಣದ ಮಾದಕ ವಸ್ತು ವಶ : ಅಂಡಮಾನ್‌ ನಲ್ಲಿ 5 ಟನ್ ಮಾದಕ ವಸ್ತು ವಶಪಡಿಸಿಕೊಂಡ ಭಾರತೀಯ ಕೋಸ್ಟ್ ಗಾರ್ಡ್

ನವದೆಹಲಿ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಬಂಗಾಳ ಕೊಲ್ಲಿ ಸಮುದ್ರ ಪ್ರದೇಶದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಸೋಮವಾರ ಮೀನುಗಾರಿಕಾ ದೋಣಿಯಿಂದ ಐದು ಟನ್ ಡ್ರಗ್ಸ್ ವಶಪಡಿಸಿಕೊಂಡಿದೆ. ಇದು ಅದರ ಅತಿದೊಡ್ಡ ಮಾದಕ ದ್ರವ್ಯ ದಂಧೆಗಳಲ್ಲಿ ಒಂದಾಗಿರಬಹುದು ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ. “ಭಾರತೀಯ ಕೋಸ್ಟ್ ಗಾರ್ಡ್ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕಾ ದೋಣಿಯಿಂದ … Continued

ಸಂಭಾಲ್ ಹಿಂಸಾಚಾರ | 4 ಸಾವು, ಶಾಲೆಗಳು ಬಂದ್‌, ಇಂಟರ್ನೆಟ್‌ ಸ್ಥಗಿತ ; ಎಫ್‌ಐಆರ್ ನಲ್ಲಿ ಸಮಾಜವಾದಿ ಪಕ್ಷದ ಸಂಸದನ ಹೆಸರು

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಭಾನುವಾರ ಮಸೀದಿಯೊಂದರ ಸಮೀಕ್ಷೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಹಾಗೂ 29 ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಕನಿಷ್ಠ 25 ಜನರನ್ನು ಬಂಧಿಸಲಾಗಿದದ್ದು, 400 ಜನರ ವಿರುದ್ಧ ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಂಭಾಲ್‌ನ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಮತ್ತು ಅವರ ಪಕ್ಷದ ಸಹೋದ್ಯೋಗಿ ಇಕ್ಬಾಲ್ … Continued

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ; ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನಾ ಪಟೋಲೆ ರಾಜೀನಾಮೆ

ಮುಂಬೈ: ಶನಿವಾರ ಪ್ರಕಟವಾದ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ವಿಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಅಘಾಡಿ ಭಾರೀ ಸೋಲು ಕಂಡ ನಂತರ ಮಹಾರಾಷ್ಟ್ರದಲ್ಲಿ ವಿಪಕ್ಷಗಳ ವಲಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿದ್ದ 103 ಸ್ಥಾನಗಳಲ್ಲಿ ಕೇವಲ 16 ಸ್ಥಾನಗಳನ್ನು ಗೆದ್ದ ನಂತರ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. … Continued

ವೀಡಿಯೊ..| ಕುದುರೆ ಮೇಲೆ ಮೆರವಣಿಗೆಯಲ್ಲಿ ಹೊರಟಿದ್ದ ವರನ ಕೊರಳಲ್ಲಿದ್ದ ನೋಟಿನ ಹಾರ ಕದ್ದೊಯ್ದ ಮಿನಿಟ್ರಕ್‌ ಚಾಲಕ ; ಸಿನಿಮೀಯ ರೀತಿ ಬೆನ್ನಟ್ಟಿ ಹಿಡಿದ ಮದುಮಗ..!

ಸಿನೆಮಾದಲ್ಲಿ ಮಾತ್ರ ಕಾಣಬಹುದಾದ ದೃಶ್ಯದಂತೆ  ಉತ್ತರ ಪ್ರದೇಶದ ಮೀರತ್‌ನಿಂದ ವರದಿಯಾದ ಘಟನೆಯೊಂದರಲ್ಲಿ ಕುದುರೆ ಮೇಲೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ವರನೊಬ್ಬನಿಗೆ ಹಾಕಿದ್ದ ನೋಟುಗಳ ಮಾಲೆಯನ್ನು ದೋಚಿರುವ ಘಟನೆ ವರದಿಯಾಗಿದ್ದು, ನಂತರ ಮಿನಿಟ್ರಕ್‌ನಲ್ಲಿ ಸಾಗುತ್ತಿದ್ದ ಕಳ್ಳನನ್ನು ವರನೇ ಬೆನ್ನಟ್ಟಿ ಹಿಡಿದಿದ್ದಾನೆ…! ಇದರಿಂದ ಮದುವೆ ಮೆರವಣಿಗೆಯಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು. ಉತ್ತರ ಪ್ರದೇಶದ ಮೀರತ್‌ನಲ್ಲಿ ವರನಿಗೆ ಹಾಕಿದ್ದ ನೋಟುಗಳ … Continued

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ; ವಕ್ಫ್ (ತಿದ್ದುಪಡಿ) ಮಸೂದೆಗೆ ಸರ್ಕಾರದ ಆದ್ಯತೆ ; ಮಣಿಪುರ ಬಿಕ್ಕಟ್ಟು ಪ್ರಸ್ತಾಪಕ್ಕೆ ವಿಪಕ್ಷಗಳ ಚಿಂತನೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ (ನವೆಂಬರ್‌ 25) ಆರಂಭವಾಗಿದ್ದು, ಮೂರು ಪ್ರಮುಖ ಮಸೂದೆಗಳನ್ನು ನಿಗದಿಪಡಿಸಲಾಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಬೃಹತ್ ವಿಜಯದ ನೆರಳಿನಲ್ಲೇ ಈ ಅಧಿವೇಶನವು ನಡೆಯುತ್ತಿದೆ. ಅಧಿವೇಶನದಲ್ಲಿ ವಕ್ಫ್ ಕಾಯ್ದೆ (ತಿದ್ದುಪಡಿ) ಮಸೂದೆ ಸೇರಿದಂತೆ ಹಲವು ವಿಧೇಯಕಗಳ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ. ಅಲ್ಲದೆ, ಮಣಿಪುರದ ಹಿಂಸಾಚಾರ, ಉತ್ತರ ಭಾರತದಲ್ಲಿ … Continued

ವೀಡಿಯೊ..| ಓಲಾ ಸರ್ವೀಸ್‌ ಕೇಂದ್ರ ಕೊಟ್ಟ ಬಿಲ್‌ ನೋಡಿ ಶೋ ರೂಂ ಮುಂದೆಯೇ ಓಲಾ ಇ-ಸ್ಕೂಟರ್‌ ಅನ್ನು ಸುತ್ತಿಗೆಯಿಂದ ಒಡೆದು ಹಾಕಿದ ಗ್ರಾಹಕ…!

ಕೋಪಗೊಂಡ ಓಲಾ ಎಲೆಕ್ಟ್ರಿಕ್ ಗ್ರಾಹಕರೊಬ್ಬರು ಕಂಪನಿಯ ಶೋರೂಂ ಮುಂದೆಯೇ ಸುತ್ತಿಗೆಯಿಂದ ಬಡಿದು ತನ್ನ ಓಲಾ ಸ್ಕೂಟರ್ ಅನ್ನು ಒಡೆದು ಹಾಕಿದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಹನವನ್ನು ಖರೀದಿಸಿದ ಕೇವಲ ಒಂದು ತಿಂಗಳ ನಂತರ ಸೇವಾ ಕೇಂದ್ರವು ನೀಡಿದ 90,000 ರೂ.ಗಳ ಬೃಹತ್ ಬಿಲ್‌ ನೋಡಿ ಹತಾಶೆಯಿಂದ ವ್ಯಕ್ತಿಯ ಆಕ್ರೋಶವು ಸ್ಪೋಟಗೊಂಡಿದೆ ಎಂದು … Continued

ವೀಡಿಯೊ..| ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ ; ಸಾವಿನ ದವಡೆಯಿಂದ ಕ್ಷಣಾರ್ಧದಲ್ಲಿ ಪಾರು ಮಾಡಿದ ಪೊಲೀಸರು…

ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದ ಮಹಿಳೆಯೊಬ್ಬರನ್ನು ಅಲ್ಲಿದ್ದ ರೈಲ್ವೆ ಪೊಲೀಸರು ಸಾವಿನ ದವಡೆಯಿಂದ ಪಾರು ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದಿದೆ. ರೈಲಿನಿಂದ ಬಿದ್ದ ಮಹಿಳೆಯನ್ನು ತಕ್ಷಣವೇ ರೈಲ್ವೇ ಪೋಲೀಸರು ರಕ್ಷಿಸಿದ್ದರಿಂದ ಅವರು ಪ್ರಾನಾಪಾಯದಿಂದ ಪಾರಾಗಿದ್ದಾರೆ. ರೈಲು ಚಲಿಸುತ್ತಿದ್ದಾಗ ಮಹಿಳೆಯು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಬಿದ್ದಳು, ಅರೆಕ್ಷಣದಲ್ಲಿ ಅಲ್ಲಿದ್ದ … Continued

ಐಪಿಎಲ್(IPL) 2025 ಹರಾಜು: ವಿವಿಧ ತಂಡಗಳಿಗೆ ಮಾರಾಟವಾದ ಆಟಗಾರರ ಪಟ್ಟಿ ; ಹರಾಜು ಬೆಲೆ

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಐಪಿಎಲ್ 2025 ಹರಾಜು ಭಾನುವಾರ ಆರಂಭವಾಗಿದ್ದು, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಭಾನುವಾರ (ನವೆಂಬರ್ 24) ಈ ಇಬ್ಬರು ಆಟಗಾರರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ದಾಖಲೆ ಸ್ಥಾಪಿಸಿದ್ದಾರೆ. ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ಜೋಡಿಯನ್ನು ಪ್ರಾಂಚೈಸಿಗಳಾದ ಎಲ್‌ಸಿಜಿ ಮತ್ತು ಪಂಜಾಬ್ ಕಿಂಗ್ಸ್ … Continued