ಪತಿಯ ಸಹೋದರಿಯನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ವಿಚ್ಛೇದನ ಪಡೆದ ಮಹಿಳೆ…!

ಸಾಮಾನ್ಯವಾಗಿ ದಂಪತಿಗಳು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದಾಗ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಅಥವಾ ಪರಸ್ಪರ ಭಿನ್ನಾಭಿಪ್ರಾಯಗಳ ಕಾರಣ ನೀಡುತ್ತಾರೆ. ಆದರೆ, ಮಧ್ಯಪ್ರದೇಶದ ಮಹಿಳೆಯೊಬ್ಬಳು ವಿಚ್ಛೇದನ ಪಡೆಯಲು ತನ್ನ ಪತಿಯ ಸ್ವಂತ ಅಕ್ಕನನ್ನೇ ಆತನ ಎರಡನೇ ಪತ್ನಿ ಎಂದು ಬಿಂಬಿಸಿ ನ್ಯಾಯಾಲಯವನ್ನೇ ದಿಕ್ಕು ತಪ್ಪಿಸಿರುವ ವಿದ್ಯಮಾನ ನಡೆದಿದೆ ಎಂದು ವರದಿಯಾಗಿದೆ. ಈ ವಿಚಿತ್ರ ಪ್ರಕರಣವು ಈಗ ಮಧ್ಯಪ್ರದೇಶ … Continued

ಕೆಬಿಸಿಯಲ್ಲಿ 50 ಲಕ್ಷ ರೂ. ಗೆದ್ದಿದ್ದ ಮಹಿಳಾ ಅಧಿಕಾರಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್

ಶಿಯೋಪುರ: ಖ್ಯಾತ ಟಿವಿ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ ಪತಿ’ (KBC)ಯಲ್ಲಿ 50 ಲಕ್ಷ ರೂಪಾಯಿ ಗೆದ್ದು ದೇಶಾದ್ಯಂತ ಸುದ್ದಿಯಾಗಿದ್ದ ಮಹಿಳಾ ತಹಶೀಲ್ದಾರ ಅಮಿತಾ ಸಿಂಗ್ ತೋಮರ್ ಅವರನ್ನು ಇದೀಗ 2.5 ಕೋಟಿ ರೂಪಾಯಿಗಳ ಪ್ರವಾಹ ಪರಿಹಾರ ಹಗರಣದ ಆರೋಪದ ಮೇಲೆ ಬಂಧಿಸಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಪೊಲೀಸರು  ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.  2021ರಲ್ಲಿ ಶಿಯೋಪುರ ಜಿಲ್ಲೆಯ … Continued

10ನೇ ತರಗತಿಯ ವಿದ್ಯಾರ್ಥಿಗೆ 30 ಸೆಕೆಂಡುಗಳಲ್ಲಿ 27 ಬಾರಿ ಇರಿದ ಅಪ್ರಾಪ್ತರು…!

ಭೋಪಾಲ : ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿರುವ ಸ್ನೂಕರ್ ಕ್ಲಬ್‌ನಲ್ಲಿ 10 ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ 30 ಸೆಕೆಂಡುಗಳಲ್ಲಿ 27 ಬಾರಿ ಇರಿದ ಘಟನೆ ನಡೆದಿದೆ. ಇನ್ನೂ ಹೆಚ್ಚು ಆಘಾತಕಾರಿ ಎಂಬಂತೆ, ಆರೋಪಿಗಳೇ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಕ್ಲಬ್‌ಗೆ ಪ್ರವೇಶಿಸುವುದನ್ನು ತೋರಿಸುತ್ತದೆ, ಕೆಲವೇ ಕ್ಷಣಗಳಲ್ಲಿ, ಅವರು 10 … Continued

ಪತ್ನಿಗೆ ಗರ್ಭಪಾತ ; ದೈವ ಪ್ರಸನ್ನಗೊಳಿಸಲು ನೆರೆಮನೆಯವರ ತಲೆ ಕತ್ತರಿಸಿದ ವ್ಯಕ್ತಿ…!

ಭೋಪಾಲ್: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ ಧಾರ್ಮಿಕ ಆಚರಣೆಯೊಂದರಲ್ಲಿ 21 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ನೆರೆಹೊರೆಯವರ ಶಿರಚ್ಛೇದ ಮಾಡಿದ ಘಟನೆ ನಡೆದಿದೆ ಎಂದುವರದಿಯಾಗಿದೆ. ರಕ್ಷಣೆಗೆ ಬಂದ ಮತ್ತಿಬ್ಬರ ಮೇಲೆಯೂ ಹಲ್ಲೆ ನಡೆಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಆರೋಪಿಯನ್ನು ಛತ್ರಪತಿ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಗಳು ಈ ಹತ್ಯೆಗಳಿಗೆ ‘ಮಾಟಮಂತ್ರ’ಕ್ಕೆ … Continued

ಜೇನುನೊಣಗಳ ದಾಳಿಯಿಂದ 20 ಮಕ್ಕಳ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಅಂಗನವಾಡಿ ಅಡುಗೆಯವಳು…!

ನೀಮುಚ್ : ಪ್ರೀತಿ ಮತ್ತು ಸಾಹಸದ ಪರಾಕಾಷ್ಠೆಯೆಂಬಂತೆ, ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ಸುಮಾರು 20 ಮಕ್ಕಳ ಪ್ರಾಣ ಉಳಿಸಲು ಅಂಗನವಾಡಿ ಅಡುಗೆಯವರೊಬ್ಬರು ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಮಡಾವಡ ಪಂಚಾಯತ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ, ಹಠಾತ್ತನೆ ಜೇನುನೊಣಗಳ ಗುಂಪು ದಾಳಿ ಮಾಡಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಡುಗೆಯವರಾದ … Continued

ಅಪ್ರತಿಮ ನಿಷ್ಠೆ | ಆಹಾರ-ನೀರು ತ್ಯಜಿಸಿ ಕೊನೆಯವರೆಗೂ ಮಾಲೀಕನ ಶವ ಬಿಟ್ಟು ಕದಲದ ನಾಯಿ : ದೇಹ ಹಿಂಬಾಲಿಸಿ 4 ಕಿಮೀ ಓಟ !

ಶಿವಪುರಿ (ಮಧ್ಯಪ್ರದೇಶ): ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ನಿಷ್ಠಾವಂತ ಎಂಬ ಮಾತಿಗೆ ಸಾಕ್ಷಿಯಾದ ಮನಕಲಕುವ ಘಟನೆಯೊಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ತನ್ನ ಯಜಮಾನ ಮೃತಪಟ್ಟಿದ್ದರೂ, ಆತನನ್ನು ಬಿಟ್ಟಿರಲಾರದೆ ಶ್ವಾನವೊಂದು ತೋರಿದ ಪ್ರೀತಿ ಮತ್ತು ನಿಷ್ಠೆ ಈಗ ಸಾವಿರಾರು ಜನರ ಕಣ್ಣಿನಲ್ಲಿ ನೀರು ತರಿಸಿದೆ. ಶಿವಪುರಿ ಜಿಲ್ಲೆಯ ಬಡೋರಾ ಗ್ರಾಮದ ನಿವಾಸಿ ಜಗದೀಶ ಪ್ರಜಾಪತಿ (40) ಎಂಬುವವರು … Continued

ನರ್ಮದಾ ನದಿ ತೀರದಲ್ಲಿ 200ಕ್ಕೂ ಹೆಚ್ಚು ಗಿಳಿಗಳ ಸಾವು

ಖರ್ಗ್ವಾನ್: ಮಧ್ಯಪ್ರದೇಶದ ಖರ್ಗ್ವಾನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನೂರಾರು ಗಿಳಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆರಂಭದಲ್ಲಿ ಇದು ಹಕ್ಕಿ ಜ್ವರದ (Bird Flu) ಆತಂಕ ಮೂಡಿಸಿತ್ತಾದರೂ, ಮರಣೋತ್ತರ ಪರೀಕ್ಷೆಯ ವರದಿಯು ಹಕ್ಕಿ ಜ್ವರದ ಸಾಧ್ಯತೆಯನ್ನು ತಳ್ಳಿಹಾಕಿದೆ. ಜಿಲ್ಲಾ ವನ್ಯಜೀವಿ ವಾರ್ಡನ್ ಟೋನಿ ಶರ್ಮಾ ಅವರ ಪ್ರಕಾರ, ಕೆಲವು … Continued

₹500 ದೋಚಲು ವ್ಯಕ್ತಿಯ ಕಾಲನ್ನು ರೈಲಿನ ಕೆಳಗಿಟ್ಟು ಕತ್ತರಿಸಿದ ದರೋಡೆಕೋರರು…! ತುಂಡಾದ ಕಾಲನ್ನು ಅಲ್ಲೇ ಬಿಟ್ಟು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು…!!

ಉಜ್ಜಯಿನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ನಾಲ್ವರು ದುಷ್ಕರ್ಮಿಗಳು ಒಬ್ಬ ಕಾರ್ಮಿಕನಿಂದ ಕೇವಲ ₹500 ದೋಚಲು ಆತನ ಕಾಲನ್ನು ರೈಲ್ವೆ ಹಳಿಯ ಮೇಲೆ ಇಟ್ಟು ರೈಲಿಗೆ ಸಿಲುಕಿಸಿ ಕತ್ತರಿಸಿದ್ದಾರೆ. ಬಳಿಕ ಆತನ ಕಾಲನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕೊಂಡೊಯ್ಯಲು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬುಧವಾರ … Continued

ಒಂದು ಕ್ಷಣಕ್ಕೆ 2,817 ಕೋಟಿ ರೂ.ಗಳಷ್ಟು ಶ್ರೀಮಂತನಾದ ವಕೀಲ ; ಆದರೆ ನಂತರ ಆಗಿದ್ದು….

ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಧಮ್ನೋಡ್‌ನಲ್ಲಿ, ನಂಬಲಾಗದ ವಿದ್ಯಮಾನವೊಂದು ನಡೆದಿದೆ. ವಕೀಲರು ಹಾಗೂ ಆ ಪ್ರದೇಶದಲ್ಲಿ ಖಾಸಗಿ ಶಾಲೆಯನ್ನು ನಡೆಸುತ್ತಿರುವ ವಿನೋದ್ ಡೊಂಗ್ಲೆ ಎಂಬವರು ಎಂದಿನಂತೆ ತಮ್ಮ ಡಿಮ್ಯಾಟ್ ಖಾತೆ ತೆರೆದಾಗ ಅವರಿಗೆ ಅಚ್ಚರಿ ಕಾದಿತ್ತು. ಯಾಕೆಂದರೆ ಅವರ ಬ್ಯಾಂಕ್‌ ಖಾತೆಯಲ್ಲಿ ಬ್ಯಾಲೆನ್ಸ್ 2,817 ಕೋಟಿ ರೂ.ಗಳಿವೆ ಎಂದು ಅದು ತೋರಿಸಿತು. ಇದನ್ನು ನೋಡಿ ಅವರು … Continued

ನಿವೃತ್ತ ಎಂಜಿನಿಯರ್‌ ನ ಐಷಾರಾಮಿ ಸಾಮ್ರಾಜ್ಯ : ಪತ್ತೆಯಾಯ್ತು ಕೇಜಿ ಗಟ್ಟಲೆ ಚಿನ್ನ-ಬೆಳ್ಳಿ, ಐಷಾರಾಮಿ ಕಾರುಗಳು, 17 ಟನ್ ಜೇನುತುಪ್ಪ…!

ಭೋಪಾಲ (ಮಧ್ಯಪ್ರದೇಶ): ಭೋಪಾಲ ನಗರದಲ್ಲಿ ಲೋಕೋಪಯೋಗಿ ಇಲಾಖೆಯ (PWD) ನಿವೃತ್ತ ಮುಖ್ಯ ಇಂಜಿನಿಯರ್ ಜಿ.ಪಿ. ಮೆಹ್ರಾ ಅವರ ನಿವಾಸ ಮತ್ತು ಆಸ್ತಿಗಳ ಮೇಲೆ ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಲೋಕಾಯುಕ್ತ ನಡೆಸಿದ ದಾಳಿಯ ನಂತರ ಅಲ್ಲಿ ಪತ್ತೆಯಾದ ಸಂಪತ್ತು ನೋಡಿ ಲೋಕಾಯುಕ್ತವೇ ಬೆಚ್ಚಿಬಿದ್ದಿದೆ…! ಹೆಚ್ಚಿನ ಆಸ್ತಿಗಳ ತನಿಖೆಯು, ಮಧ್ಯಪ್ರದೇಶದ ರಾಜ್ಯದಲ್ಲಿ ಇತ್ತೀಚಿನ ವರ್ಷಗಳ ಅತ್ಯಂತ ಸಂಚಲನ ಮೂಡಿಸಿದ  … Continued