ವಿಡಿಯೊಗಳು | ಬಿಕಾನೇರ್‌ನಲ್ಲಿ ಪ್ರಳಯಸದೃಶ ಧೂಳಿನ ಬಿರುಗಾಳಿ ; ನೋಡನೋಡುತ್ತಿದ್ದಂತೆ ಹಗಲು ಕತ್ತಲಾಗಿ ಪರಿವರ್ತನೆ…!

ಬಿಕಾನೇರ್: ರಾಜಸ್ಥಾನದ ಬಿಕಾನೇರ್ ನಗರದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಧೂಳಿನ ಬಿರುಗಾಳಿಯು ಇಡೀ ನಗರವನ್ನೇ ನಡುಗಿಸಿದೆ. ದಟ್ಟವಾದ ಧೂಳಿನ ಮೋಡಗಳು ಇಡೀ ಆಕಾಶವನ್ನು ಆವರಿಸಿದ್ದರಿಂದ, ನೋಡನೋಡುತ್ತಿದ್ದಂತೆಯೇ ಹಗಲು ರಾತ್ರಿಯಂತೆ ಕಂಡುಬಂದಿದೆ. ಬೃಹತ್ ಗಾತ್ರದ ಹಳದಿ ಬಣ್ಣದ ಧೂಳಿನ ಗೋಡೆಯೊಂದು ನಗರದತ್ತ ನುಗ್ಗಿ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಳಯಸದೃಶ ವಾತಾವರಣವನ್ನು ನೆನಪಿಸುವಂತಿದ್ದವು. … Continued

ಅಮೆರಿಕದಲ್ಲಿ ತನ್ನ ಇಮೇಜ್ ಬದಲಿಸಿಕೊಳ್ಳಲು ಅಮೆರಿಕ ಮಾಜಿ ಸಂಸದನ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡ ಪಾಕಿಸ್ತಾನ…!

ಅಮೆರಿಕದಲ್ಲಿ ತನ್ನ ರಾಜತಾಂತ್ರಿಕ ಪ್ರಭಾವವನ್ನು ಬಲಪಡಿಸಲು ಮತ್ತು ತನ್ನ ಆರ್ಥಿಕ ಹಾಗೂ ವ್ಯೂಹಾತ್ಮಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪಾಕಿಸ್ತಾನ ಸರ್ಕಾರವು ಅಮೆರಿಕದ ಪ್ರಖ್ಯಾತ ಲಾಬಿಯಿಂಗ್ ಸಂಸ್ಥೆಯಾದ ‘ಅರ್ವಿನ್ ಗ್ರೇವ್ಸ್ ಸ್ಟ್ರಾಟಜಿ ಗ್ರೂಪ್’ (Ervin Graves Strategy Group) ಅನ್ನು ನೇಮಕ ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸುದ್ದಿಯಾಗಿದ್ದ ಪಾಕಿಸ್ತಾನ, ಈಗ … Continued

ದೆಹಲಿ, ಮುಂಬೈ ಸೇರಿದಂತೆ ಹಲವೆಡೆ ದಾಳಿಗೆ ಸಂಚು ; ಐಎಸ್‌ಐ-ದಾವೂದ್ ನಂಟಿದ್ದ 9 ಶಂಕಿತ ಉಗ್ರರ ಬಂಧನ

ನವದೆಹಲಿ : ದೆಹಲಿ ಪೊಲೀಸ್ ವಿಶೇಷ ಘಟಕದ (Special Cell) ಭರ್ಜರಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಮತ್ತು ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದ ಒಂಬತ್ತು ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭೀಕರ ದಾಳಿ ನಡೆಸಲು ಸಂಚು ರೂಪಿಸಿದ್ದ ಈ … Continued

ವಿಡಿಯೋ | ಸೋನಾರಪುರದಲ್ಲಿ ಮಮತಾ ಸೋದರಳಿಯ- ಟಿಎಂಸಿ ಸಂಸದ ಅಭಿಷೇಕ ಬ್ಯಾನರ್ಜಿ ಮೇಲೆ ಕಲ್ಲು, ಮೊಟ್ಟೆ ತೂರಾಟ

ಕೋಲ್ಕತ್ತಾ : ಪಶ್ಚಿಮ ಬಂಗಾಳದ ಸೌತ್ 24 ಪರಗಣ ಜಿಲ್ಲೆಯ ಸೋನಾರಪುರಕ್ಕೆ ಶನಿವಾರ ಭೇಟಿ ನೀಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ ಬ್ಯಾನರ್ಜಿ ಅವರಿಗೆ ತೀವ್ರ ಪ್ರತಿಭಟನೆಯ ಬಿಸಿ ತಟ್ಟಿದ್ದು, ಅವರ ವಿರುದ್ಧ ಭಾರಿ ಜನಾಕ್ರೋಶ ವ್ಯಕ್ತವಾಗಿದೆ. ಇತ್ತೀಚಿನ ಚುನಾವಣೋತ್ತರ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ಅಭಿಷೇಕ … Continued

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ ಆಯ್ಕೆ : ಜೂನ್ 3ಕ್ಕೆ ಸಿಎಂ ಆಗಿ ಪ್ರಮಾಣ ವಚನ

ಬೆಂಗಳೂರು: ವಿಧಾನ ಸೌಧದಲ್ಲಿ ನಡೆದ  ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಅಧಿಕೃತವಾಗಿ ನೂತನ ಸಿಎಲ್​ಪಿ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಜೂನ್ 3 ರಂದು ಡಿ.ಕೆ. ಶಿವಕುಮಾರ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನಸೌಧದಲ್ಲಿ ನಡೆದ ಈ ಉನ್ನತ … Continued

ಬೆಂಗಳೂರು ಶಾಲೆಯಲ್ಲಿ ಭಾರೀ ಅಗ್ನಿ ಅವಘಡ

ಬೆಂಗಳೂರು : ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ಸ್ಥಳೀಯ ಶಾಲಾ ಕಟ್ಟಡವೊಂದರಲ್ಲಿ ಇಂದು, ಶನಿವಾರ ಭೀಕರ ಅಗ್ನಿ ಅನಾಹುತ ಸಂಭವಿಸಿದೆ. ಇದರಿಂದಾಗಿ ‘ಕೌಸಲ್ಯ ಶಾಲೆ’ಯ (Kousalya School) ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಕಟ್ಟಡದಿಂದ ದಟ್ಟವಾದ ಹೊಗೆ ಆಕಾಶಕ್ಕೆ ಮುಟ್ಟುವಂತೆ ಹರಡಿದೆ. ಶನಿವಾರ ಬೆಳಿಗ್ಗೆ 10:15 ರ ಸುಮಾರಿಗೆ ಶಾಲೆಯ 4ನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ … Continued

ಅಂಕೋಲಾ : ಖಾಸಗಿ ಬಸ್‌ ಪಲ್ಟಿ ; ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

ಕಾರವಾರ: ಬಳ್ಳಾರಿಯಿಂದ ಗೋವಾಕ್ಕೆ ತೆರಳುತ್ತಿದ್ದ ಸೀಬರ್ಡ್ ಸಂಸ್ಥೆಯ ಖಾಸಗಿ ಸ್ಲೀಪರ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಓರ್ವ ಪ್ರಯಾಣಿಕ ಮೃತಪಟ್ಟು 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಡ್ಲೂರು ಕಂಚಿನ ಬಾಗಿಲಿನ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದೆ ಎಂದು ವರದಿಯಾಗಿದೆ. ಅಪಘಾತದ … Continued

ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ: ‘ಕೈ’ ಕೋಟೆಯಲ್ಲಿ ಎಎಪಿ ಜಯಭೇರಿ; ಸ್ಥಾನ ಸುಧಾರಿಸಿಕೊಂಡ ಬಿಜೆಪಿ

ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗಲೇ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) ಜಯಭೇರಿ ಬಾರಿಸಿದೆ. ರಾಜ್ಯದ ಪ್ರಮುಖ ಮಹಾನಗರ ಪಾಲಿಕೆಗಳು ಮತ್ತು ಮುನ್ಸಿಪಲ್ ಕೌನ್ಸಿಲ್‌ಗಳಲ್ಲಿ ಎಎಪಿ ಸ್ಪಷ್ಟ ಬಹುಮತದೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಫಲಿತಾಂಶವನ್ನು ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಗೆ … Continued

5 ತಿಂಗಳ ಸ್ಕೆಚ್‌, ಚಾಕು ಇರಿತ, ಸುಟ್ಟ ಕಾರಿನಲ್ಲಿ ಶವಗಳು : ಕುಟುಂಸ್ಥರ ಭೀಕರ ಹತ್ಯಾಕಾಂಡಕ್ಕೆ ಅಪ್ರಾಪ್ತನೇ ಮಾಸ್ಟರ್ ಮೈಂಡ್ !

ಜೈಪುರ: ಕೌಟುಂಬಿಕ ಕಲಹ, ಆಸ್ತಿ ವಿವಾದದ ಆರೋಪ, ತಿಂಗಳುಗಟ್ಟಲೆ ನಡೆಸಿದ ಮಾಸ್ಟರ್ ಪ್ಲಾನ್ ಮತ್ತು ಅಪರಾಧ ಜಗತ್ತಿನ ವೆಬ್ ಸೀರೀಸ್‌ಗಳ ಮೇಲಿದ್ದ ಅತಿಯಾದ ವ್ಯಾಮೋಹದಿಂದ ಅಪರಾಧದ ಗೀಳು ! ಅಜ್ಮೀರ್‌ನ ಮಾಜಿ ಸರಪಂಚ ರಾಮ ಸಿಂಗ್ ಚೌಧರಿ, ಅವರ ಎರಡನೇ ಪತ್ನಿ, ತಾಯಿ ಮತ್ತು ಸೋದರ ಸೊಸೆಯ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೊರಹಾಕಿರುವ … Continued

ದೀದಿ ಪಕ್ಷದಲ್ಲಿ ಬಣ ರಾಜಕೀಯದ ಸದ್ದು ; ಆಂತರಿಕ ತಲ್ಲಣದಿಂದ ದುರ್ಬಲವಾಗುತ್ತಿದೆಯೇ ಟಿಎಂಸಿ..?

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್ (TMC) ಸದ್ಯ ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹಿರಿಯ ಸಂಸದರಾದ ಕಾಕಲಿ ಘೋಷ್ ದಸ್ತಿದಾರ್ ಮತ್ತು ಕಲ್ಯಾಣ ಬ್ಯಾನರ್ಜಿ ನಡುವಿನ ಬಹಿರಂಗ ಜಗಳ ಹಾಗೂ ಅದರ ಬೆನ್ನಲ್ಲೇ ದಸ್ತಿದಾರ್ ಅವರ ಬಹಿರಂಗ ಬಂಡಾಯ, ಟಿಎಂಸಿ ಪಕ್ಷದೊಳಗಿನ ಆಂತರಿಕ ವೈರುಧ್ಯಗಳನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಈ ಪಕ್ಷದಲ್ಲಿ … Continued