₹32 ಕೋಟಿ ಸಾಲ…ಕಂಪನಿ ಸ್ವಾಧೀನಕ್ಕೆ ಸಂಚು…ಎಂ.ಡಿ. ಹತ್ಯೆಗೆ ಸುಪಾರಿ…ಗುಂಡಿನ ದಾಳಿ ; ಕೋ-ಚೇರ್ಮನ್ ಸೇರಿ 7 ಜನರ ಬಂಧನ

ವಸಾಯಿ (ಮಹಾರಾಷ್ಟ್ರ) : ಮಹಾರಾಷ್ಟ್ರದ ಕೈಗಾರಿಕೋದ್ಯಮಿ ಹಾಗೂ ಜಿಎಸ್‌ಎಂ ಫಾಯಿಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮೋಹನ ಸಿಂಗ್ ಪರಮಾರ್ ಅವರ ಮೇಲಿನ ಗುಂಡಿನ ದಾಳಿಯ ಹಿಂದಿನ ಸಂಚಿನ ಬೆಚ್ಚಿಬೀಳಿಸುವ ಸಂಗತಿಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನ್ನ ಸುಮಾರು ₹32 ಕೋಟಿ ಹಣಕಾಸಿನ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲು ಹಾಗೂ ಕಂಪನಿಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಉದ್ದೇಶದಿಂದ … Continued

ತನ್ನ ಪತಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾನೆಂದು ನಂಬಿಸಿದ್ದ ಪತ್ನಿ ; 2 ವರ್ಷಗಳ ಬಳಿಕ ಕಾಂಕ್ರೀಟ್ ನೆಲದಡಿ ಸಿಕ್ತು ಆತನ ಅಸ್ಥಿಪಂಜರ !

ಜಾಮನಗರ: ಕೆಲಸದ ನಿಮಿತ್ತ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಎಂದು ಕುಟುಂಬಸ್ಥರನ್ನು ನಂಬಿಸಲಾಗಿದ್ದ ವ್ಯಕ್ತಿಯೊಬ್ಬರನ್ನು, ವಾಸ್ತವದಲ್ಲಿ ಸುಮಾರು ಎರಡು ವರ್ಷಗಳ ಹಿಂದೆಯೇ ಹತ್ಯೆ ಮಾಡಲಾಗಿದ್ದು, ಅವರ ಮೃತದೇಹವನ್ನು 12 ಅಡಿ ಆಳದಲ್ಲಿ ಕಾಂಕ್ರೀಟ್ ನೆಲದಡಿ ಹೂತುಹಾಕಲಾಗಿತ್ತು ಎಂಬ ಆಘಾತಕಾರಿ ಸಂಗತಿ ಗುಜರಾತಿನ ಜಾಮನಗರದಲ್ಲಿ ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಬಯಲಾದ ಈ ಪ್ರಕರಣ ಬಾಲಿವುಡ್‌ನ ಜನಪ್ರಿಯ ಥ್ರಿಲ್ಲರ್ ಸಿನಿಮಾ ‘ದೃಶ್ಯಂ’ … Continued

ಶಿರಸಿ : ಮಳೆ ಅಬ್ಬರಕ್ಕೆ ಹಲವೆಡೆ ಹೊಳೆಯಂತಾದ ರಸ್ತೆಗಳು, ಬಡಾವಣೆಗಳು ಜಲಾವೃತ

ಶಿರಸಿ; ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಶಿರಸಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳ ಮೇಲೆ ನೀರು ನಿಂತಿರುವುದರಿಂದ ವಾಹನ ಸಂಚಾರ ನಿಧಾನಗೊಂಡಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವ ಕಾರಣ ನಿವಾಸಿಗಳು … Continued

‘ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು’ : ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದ 15 ವರ್ಷದ ಬಾಲಕಿಯ ಕ್ಷಮೆಯಾಚನೆ

ನವದೆಹಲಿ: ಜುಲೈ 23ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ (Cockroach Janta Party – CJP) ಆಯೋಜಿಸಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ 15 ವರ್ಷದ ಬಾಲಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾಳೆ. ಆಕೆಯ ಕ್ಷಮೆಯಾಚನೆ ವಿಡಿಯೊ ಶುಕ್ರವಾರ … Continued

150 ವರ್ಷಗಳ ನಂತರ ಗ್ರಂಥಾಲಯಕ್ಕೆ ವಾಪಸ್ ಬಂದ ಅಪರೂಪದ ಪುಸ್ತಕ ; ಈಗ ಅದರ ದಂಡದ ಮೊತ್ತವೇ ₹19 ಲಕ್ಷ…!

ಗ್ರಂಥಾಲಯದಿಂದ ಓದಲು ಕೊಂಡೊಯ್ದಿದ್ದ 1858ರಲ್ಲಿ ಪ್ರಕಟವಾದ ಅಪರೂಪದ ಪುಸ್ತಕವನ್ನು ಸುಮಾರು 150 ವರ್ಷಗಳ ಬಳಿಕ ಅದೇ ಗ್ರಂಥಾಲಯಕ್ಕೆ ವಾಪಸ್‌ ತಂದುಕೊಟ್ಟಿರುವ ಅಪರೂಪದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಗ್ರೀಕ್ ಪ್ರಾಚೀನ ಅವಶೇಷಗಳ ಕುರಿತ ‘Antiquities of Athens’ ಎಂಬ ಈ ಐತಿಹಾಸಿಕ ಪುಸ್ತಕವು ಆಸ್ಟ್ರೇಲಿಯಾದ ಕಿಯಾಮಾ ಸಾರ್ವಜನಿಕ ಗ್ರಂಥಾಲಯಕ್ಕೆ ಸುದೀರ್ಘ ಅವಧಿಯ ಬಳಿಕ ವಾಪಸ್ ಬಂದಿದೆ. ಪುಸ್ತಕವನ್ನು … Continued

ವಿಡಿಯೋ | ಮಧ್ಯರಾತ್ರಿ ಬಾತ್‌ರೂಮಿಗೆ ಹೋದಾಗ 7 ಅಡಿ ಉದ್ದದ ಮೊಸಳೆ ಕಂಡು ಬೆಚ್ಚಿಬಿದ್ದ ವ್ಯಕ್ತಿ…!

ಆನಂದ್ (ಗುಜರಾತ್) : ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಕುಟುಂಬವೊಂದು ತಮ್ಮ ಮನೆಯ ಸ್ನಾನಗೃಹದಲ್ಲಿ ಏಳು ಅಡಿ ಉದ್ದದ ಮೊಸಳೆಯನ್ನು ಕಂಡು ಬೆಚ್ಚಿಬಿದ್ದ ಘಟನೆ ಈ ವಾರದ ಆರಂಭದಲ್ಲಿ ನಡೆದಿದೆ. ಮನೆಯ ಮಾಲೀಕ ಬಾಲಭಾಯಿ ಚೌಹಾಣ ಅವರು ಮಧ್ಯರಾತ್ರಿ ವೇಳೆ ಮನೆಯ ಹೊರಭಾಗದಲ್ಲಿ ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದ ಕಾರಣ ಎಚ್ಚರಗೊಂಡರು. ನಾಯಿಗಳು ಏಕೆ ಬೊಗಳುತ್ತಿವೆ ಎಂಬುದನ್ನು ಪರಿಶೀಲಿಸಲು … Continued

ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ

ನವದೆಹಲಿ : ಇರಾನ್ ಯುದ್ಧ ಹಾಗೂ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದ ಕಳೆದ ಕೆಲವು ತಿಂಗಳುಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ದರಗಳನ್ನು ಕೇಂದ್ರ ಸರ್ಕಾರ ಶನಿವಾರ ಭಾರಿ ಇಳಿಕೆ ಮಾಡಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹202 ಇಳಿಕೆ ಮಾಡಲಾಗಿದೆ. ಕೋಲ್ಕತ್ತಾದಲ್ಲಿ ₹209 ಕಡಿತಗೊಳಿಸಲಾಗಿದೆ. … Continued

ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ; ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸಾಧ್ಯತೆ !

ನವದೆಹಲಿ: ದೇಶದ ನೈಋತ್ಯ ಮುಂಗಾರು ಆಗಸ್ಟ್ ಮೊದಲಾರ್ಧದಲ್ಲಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಕಳೆದ ಕೆಲವು ವಾರಗಳಿಂದ ದೇಶದ ಹಲವು ಭಾಗಗಳಲ್ಲಿ ಮಳೆ ಕೊರತೆ ಕಂಡುಬಂದಿದ್ದರೂ, ಮುಂಗಾರು ಮತ್ತೆ ಚುರುಕುಗೊಂಡಿರುವುದರಿಂದ ಪರಿಸ್ಥಿತಿ ವೇಗವಾಗಿ ಸುಧಾರಿಸುತ್ತಿದೆ. ಇದರ ಪರಿಣಾಮವಾಗಿ ದಕ್ಷಿಣ ಭಾರತ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ … Continued