ʼಇಂದು ನಿಮ್ಮ ಕೆಲಸದ ಕೊನೆಯ ದಿನʼ : ಬೆಳಿಗ್ಗೆ 6ಕ್ಕೆ ಬಂದ ಇ-ಮೇಲ್‌ನಿಂದ ಒರಾಕಲ್‌ ಉದ್ಯೋಗಿಗಳಿಗೆ ಶಾಕ್

ನವದೆಹಲಿ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ಲೌಡ್‌ ಮೂಲಸೌಕರ್ಯಕ್ಕೆ ಭಾರಿ ಪ್ರಮಾಣದಲ್ಲಿ ಹೂಡಿಕೆ ನಡೆಯುತ್ತಿರುವ ಬೆನ್ನಲ್ಲೇ, ಒರಾಕಲ್‌ (Oracle) ಕಂಪನಿಯಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ನಡೆದಿದೆ. ಕೆಲ ಒರಾಕಲ್‌ ಉದ್ಯೋಗಿಗಳಿಗೆ ಬೆಳಗ್ಗೆ ಸುಮಾರು 6 ಗಂಟೆಗೆ ಬಂದ ಇ-ಮೇಲ್‌ ಅವರ ಕೆಲಸದ ಕೊನೆಯ ದಿನವನ್ನು ನಿರೀಕ್ಷೆಗೂ ಮುನ್ನ ತಿಳಿಸಿದೆ. “ನಿಮ್ಮ … Continued

ಯುಪಿಐನಲ್ಲಿ ₹2,000ಕ್ಕಿಂತ ಹೆಚ್ಚಿನ ಹಣ ಪಾವತಿಗೆ ಶೇ. 0.4ರಷ್ಟು ಶುಲ್ಕ ; ಇದು ಯಾರಿಗೆ ಅನ್ವಯ, ಯಾರಿಗೆ ಎಂದಿನಂತೆ ಫ್ರೀ?

ನವದೆಹಲಿ: ಯುಪಿಐ ಮೂಲಕ ಅಂಗಡಿ, ವ್ಯಾಪಾರಿ ಅಥವಾ ಇತರೆ ಸಂಸ್ಥೆಗಳಿಗೆ ₹2,000ಕ್ಕಿಂತ ಹೆಚ್ಚಿನ ಮೊತ್ತವನ್ನು  ಪಾವತಿಸಿದರೆ ಶೇ.0.4ರಷ್ಟು ಶುಲ್ಕ (Merchant Discount Rate-MDR) ವಿಧಿಸಲಾಗುತ್ತದೆ. ಆದರೆ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹಣ ಕಳುಹಿಸಿದರೆ ಯಾವುದೇ ಶುಲ್ಕ ಇರುವುದಿಲ್ಲ. ಕಳುಹಿಸುವ ಹಣದ ಮೊತ್ತ ಎಷ್ಟೇ ಇದ್ದರೂ ಈ ಪಾವತಿ ಉಚಿತವಾಗಿರಲಿದೆ.   ಇದು ಆಯ್ದ ವ್ಯಾಪಾರಿಗಳಿಗೆ ಮಾತ್ರ … Continued

ಒಪ್ಪಂದವಿದ್ರೂ ಕೈಕೊಟ್ಟ ಪಾಕಿಸ್ತಾನ ; ಹೌತಿಗಳ ವಿರುದ್ಧ ಹೋರಾಟಕ್ಕೆ ಇಸ್ರೇಲ್‌ ಸಹಾಯ ಕೋರಿದ ಸೌದಿ ಅರೇಬಿಯಾ : ವರದಿ

ರಿಯಾದ್: ಯೆಮನ್ ಗಡಿಭಾಗದಲ್ಲಿ ಹೌತಿ (Ansar Allah)ಗಳ ದಾಳಿಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಇಸ್ರೇಲ್‌ನಿಂದ ಗುಪ್ತಚರ ಮಾಹಿತಿ (Intelligence) ನೆರವು ಕೋರಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಈ ಸಂಪರ್ಕವು ನೇರವಾಗಿ ನಡೆಯದೆ ಅಮೆರಿಕದ ಸೆಂಟ್ರಲ್ ಕಮಾಂಡ್‌ (US Central Command) ಮೂಲಕ ನಡೆದಿರುವುದಾಗಿ ತಿಳಿದುಬಂದಿದೆ. ಕಳೆದ ವಾರ ಹೌತಿ ಉಗ್ರಗಾಮಿಗಳು ಯೆಮೆನ್‌ನ … Continued

ಶಿರಸಿ : ಕೆರೆಗೆ ಈಜಲು ಹೋದಾಗ ನೀರು ಪಾಲು

ಶಿರಸಿ : ಗಣೇಶ ಹಬ್ಬದ ಸಂಭ್ರದಲ್ಲಿ ಈಜಲು ಹೋದ 17 ವರ್ಷದ ಅಪ್ರಾಪ್ತ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸುಗಾವಿಯಲ್ಲಿ ಮಂಗಳವಾರ ಸಂಭವಿಸಿದೆ ಎಂದು ವರದಿಯಾಗಿದೆ. ಮೃತನನ್ನು ಸುನಿಲ ಕೃಷ್ಣ ಚೆನ್ನಯ್ಯ ಎಂದು ಗುರುತಿಸಲಾಗಿದೆ. ಮಂಗಳವಾರ ಸ್ಥಳೀಯರಾದ  ಸುನಿಲ ಹಾಗೂ ಕೆಲವರು  ಸುಗಾವಿಯ  ಭಟ್ರಕೆರೆಗೆ ಕೆರೆಗೆ ಈಜಲು ಹೋಗಿದ್ದರು. … Continued

ಬಾಹ್ಯಾಕಾಶ ಕಕ್ಷೆಯಲ್ಲಿ ಅಮೆರಿಕದಿಂದ ಮಿಲಿಟರಿ ಶಸ್ತ್ರಾಸ್ತ್ರ ನಿಯೋಜನೆ…! ಇದೇ ಮೊದಲ ಬಾರಿಗೆ ಬಹಿರಂಗಗೊಂಡ ರಹಸ್ಯ

ವಾಷಿಂಗ್ಟನ್: ಭೂಮಿ ಮೇಲಿನ ಯುದ್ಧ ಸಿದ್ಧತೆಗಳ ನಂತರ ಈಗ ಬಾಹ್ಯಾಕಾಶವೂ ಶಸ್ತ್ರಾಸ್ತ್ರಗಳ ಪೈಪೋಟಿಯ ವೇದಿಕೆಯಾಗುತ್ತಿರುವ ಸೂಚನೆಗಳು ಮತ್ತಷ್ಟು ಸ್ಪಷ್ಟವಾಗಿವೆ. ಅಮೆರಿಕವು ಮೊದಲ ಬಾರಿಗೆ ತನ್ನ ಬಳಿ ಬಾಹ್ಯಾಕಾಶ ಕಕ್ಷೆಯಲ್ಲಿ (Orbit) ಕಾರ್ಯನಿರ್ವಹಿಸುವ ಶಸ್ತ್ರಾಸ್ತ್ರಗಳಿವೆ ಎಂದು ಅಧಿಕೃತವಾಗಿ ಒಪ್ಪಿಕೊಂಡಿದೆ. ಅಮೆರಿಕ ವಾಯುಪಡೆಯ ಕಾರ್ಯದರ್ಶಿ ಟ್ರಾಯ್ ಮಿಂಕ್ ಅವರು ವಾಷಿಂಗ್ಟನ್ ಡಿ.ಸಿ. ಸಮೀಪ ನಡೆದ ಏರ್, ಸ್ಪೇಸ್ ಅಂಡ್ … Continued

ಸವದತ್ತಿ : ಬೈಕ್- ಸಾರಿಗೆ ಬಸ್ ಡಿಕ್ಕಿ ; ಸ್ಥಳದಲ್ಲೇ ಮೂವರು ಸಾವು

ಬೆಳಗಾವಿ : ಜಿಲ್ಲೆಯ ಸವದತ್ತಿ ನಗರದ ಹೊರವಲಯದ ಧಾರವಾಡ ರಸ್ತೆಯಲ್ಲಿ ಸೋಮವಾರ ರಾತ್ರಿ ದ್ವಿಚಕ್ರ ವಾಹನ ಹಾಗೂ ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಇಬ್ಬರನ್ನು ವಿನಯ ಜೋಗೆನ್ನವರ ಹಾಗೂ ಆಕಾಶ ಜಾಧವ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. … Continued

ಬೆಳಗಾವಿ : ಫ್ರಿಜ್‌ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನ

ಬೆಳಗಾವಿ: ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಚವಾಟಗಲ್ಲಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಮನೆಯಲ್ಲಿದ್ದ ಫ್ರಿಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಮನೆಗೆ ಬೆಂಕಿ ಆವರಿಸಿ ಮನೆಯೊಳಗಿದ್ದವರು ಬೆಂಕಿಯಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡ ಪರಿಣಾಮ … Continued

ಚಾಮರಾಜನಗರ: ಹುಲ್ಲು ಕೊಯ್ಯಲು ಹೋಗಿದ್ದ ರೈತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಹುಲಿ

ಚಾಮರಾಜನಗರ: ಹುಲಿ ದಾಳಿಯಲ್ಲಿ 65 ವರ್ಷದ ರೈತ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಸೋಮವಾರ (ಸೆಪ್ಟೆಂಬರ್‌ 14) ನಡೆದಿದೆ ಎಂದು ವರದಿಯಾಗಿದೆ. ಮೃತ ರೈತನನ್ನು ಬಸವಣ್ಣ (65)ಎಂದು ಗುರುತಿಸಲಾಗಿದೆ. ಮಾಹಿತಿಯ ಪ್ರಕಾರ, ಬಸವಣ್ಣ ಅವರು ತಮ್ಮ ದನ ಕರುಗಳಿಗೆ ಮೇವು ತರಲು ಗ್ರಾಮದ ಸಮೀಪದ ಕೃಷಿ ಜಮೀನಿಗೆ ತೆರಳಿದ್ದರು. ಈ ವೇಳೆ … Continued