ಪಾಕಿಸ್ತಾನದಲ್ಲಿ ಇಂಧನ ಬಿಕ್ಕಟ್ಟು: ಲಾಕ್‌ಡೌನ್‌ ಮಾದರಿ ನಿರ್ಬಂಧ ; ವಾಹನ ಖರೀದಿಗೆ ನಿಷೇಧ, ಮದುವೆ ಊಟಕ್ಕೂ ಮಿತಿ….

ಇಸ್ಲಾಮಾಬಾದ್: ಇರಾನ್–ಅಮೆರಿಕ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಹಾಗೂ ತೈಲ ಬೆಲೆ ಏರಿಕೆಯಾಗುವ ಆತಂಕ ಹೆಚ್ಚಿರುವುದರಿಂದ ಪಾಕಿಸ್ತಾನ ಸರ್ಕಾರ ಮತ್ತೆ ಮಿತವ್ಯಯ (ಆಸ್ಟೆರಿಟಿ) ಕ್ರಮಗಳನ್ನು ಜಾರಿಗೊಳಿಸಿದೆ. ಇಂಧನ ಉಳಿತಾಯ ಮತ್ತು ಅನಗತ್ಯ ಸರ್ಕಾರಿ ವೆಚ್ಚ ನಿಯಂತ್ರಿಸುವ ಉದ್ದೇಶದಿಂದ ಘೋಷಿಸಲಾದ ಈ ಕ್ರಮಗಳು ತಕ್ಷಣದಿಂದಲೇ ಜಾರಿಗೆ … Continued

ಮಹಾರಾಷ್ಟ್ರದ ಶಿಕ್ಷಣ ತಜ್ಞ ಅಶೋಕ ಪಾಟೀಲ ಮಗಳು ಸ್ವೀಡನ್ ಸಂಸತ್ತಿಗೆ ಆಯ್ಕೆ

ಸ್ಟಾಕ್‌ಹೋಮ್ (ಸ್ವೀಡನ್): ಶಿಕ್ಷಣ ತಜ್ಞ ಮಹಾರಾಷ್ಟ್ರದ ಅಶೋಕ ವಿಖೆ ಪಾಟೀಲ ಅವರ ಪುತ್ರಿ ನೀಲಾ ವಿಖೆ ಪಾಟೀಲ ಅವರು ಸ್ವೀಡನ್ ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶನಿವಾರ ಘೋಷಿಸಲಾಗಿದೆ. ಸೆಪ್ಟೆಂಬರ್ 13 ರಂದು ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ 41 ವರ್ಷದ ಗ್ರೀನ್ ಪಾರ್ಟಿ ನಾಯಕಿ ನೀಲಾ ವಿಖೆ ಪಾಟೀಲ ಅವರು ಸ್ಟಾಕ್‌ಹೋಮ್ ಸಿಟಿ ಕ್ಷೇತ್ರದಿಂದ ಸಂಸದರಾಗಿ (MP) … Continued

ಕೆಪಿಎಸ್‌ಸಿ ನೇಮಕಾತಿ ಹಗರಣ : ಐಎಎಸ್ ಅಧಿಕಾರಿ, ಮಧ್ಯವರ್ತಿಯನ್ನು ವಶಕ್ಕೆ ಪಡೆದ ಇ.ಡಿ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪಶುವೈದ್ಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ(EDವು, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಹಾಗೂ ಪ್ರಮುಖ ಮಧ್ಯವರ್ತಿ ಬಸವರಾಜ ಕನ್ನಾಳೆ ಅವರನ್ನು ಬಂಧಿಸಿದೆ. ನಾಲ್ಕು ದಿನಗಳ ವಿಚಾರಣೆ ಬಳಿಕ ಇಬ್ಬರನ್ನೂ ಇ.ಡಿ.( (ED) … Continued

ಕಾರವಾರ : 20 ವರ್ಷಗಳಿಂದ ದೇಶದ ಕಡಲ ರಕ್ಷಣೆಯಲ್ಲಿದ್ದ ಸಾವಿತ್ರಿಬಾಯಿ ಫುಲೆ ಹಡಗಿಗೆ ಸೇವೆಯಿಂದ ವಿದಾಯ

ಕಾರವಾರ : ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ಎರಡು ದಶಕಗಳ ಕಾಲ ವಿಶಿಷ್ಟ ಸೇವೆ ಸಲ್ಲಿಸಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆಯ (ಕೋಸ್ಟ್ ಗಾರ್ಡ್) ಹಡಗು ಐಸಿಜಿಎಸ್ ಸಾವಿತ್ರಿಬಾಯಿ ಫುಲೆಗೆ ಶನಿವಾರ ಸಂಜೆ ಕಾರವಾರ ಬಂದರಿನ ಕರಾವಳಿ ರಕ್ಷಣಾ ಪಡೆಯ ಜೆಟ್ಟಿಯಲ್ಲಿ ಸಾಂಪ್ರದಾಯಿಕ ಗೌರವ ನೀಡಿ ವಿದಾಯ ನೀಡಿ ಅಧಿಕೃತವಾಗಿ ಸೇವೆಯಿಂದ ನಿವೃತ್ತಿಗೊಳಿಸಲಾಯಿತು. ಸೂರ್ಯಾಸ್ತದ ಸಮಯದಲ್ಲಿ, … Continued

ವಿಡಿಯೋ | ಸ್ನೇಹಿತರ ಜಗಳದ ಬಳಿಕ ರೋಷಾವೇಶ ; ಗೆಳೆಯರಿದ್ದ ಕಾರಿಗೆ ಪದೇ ಪದೇ ಥಾರ್‌ ಡಿಕ್ಕಿ ಹೊಡೆಸಿದ ಯುವಕ !

ಗುರುಗ್ರಾಮ: ಸ್ನೇಹಿತರ ನಡುವಿನ ಮಾತಿನ ಚಕಮಕಿ ಭಾರೀ ಆಕ್ರೋಶಕ್ಕೆ ತಿರುಗಿ, ವ್ಯಕ್ತಿಯೊಬ್ಬ ತನ್ನ ಮಹೀಂದ್ರಾ ಥಾರ್‌ ಕಾರನ್ನು ಸ್ನೇಹಿತರನ್ನು ಕರೆದೊಯ್ಯುತ್ತಿದ್ದ ಕ್ಯಾಬ್‌ಗೆ ಪದೇ ಪದೇ ಡಿಕ್ಕಿ ಹೊಡೆದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಕ್ಯಾಬ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗದಿದ್ದರೂ, ವಾಹನಕ್ಕೆ ತೀವ್ರ ಹಾನಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. … Continued

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರ್ನಾಟಕದಲ್ಲಿ ನಾಲ್ಕೈದು ದಿನ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 24ರವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 20ರಿಂದ 24ರ ವರೆಗೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ … Continued

ರಾಯಚೂರು : ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್‌ನಿಂದ ಬಿದ್ದು ಇಬ್ಬರು ಬಾಲಕರು ಸಾವು

ರಾಯಚೂರು : ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಟ್ರ್ಯಾಕ್ಟರ್‌ನಿಂದ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ನಗರದಲ್ಲಿ ಶನಿವಾರ ನಡೆದಿದೆ. ನಗರದ ಎಂ. ಎರಣ್ಣ ವೃತ್ತದ ಬಳಿ ಗಣೇಶ ವಿಸರ್ಜನೆ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಾಲಕರು ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ  ಹಂಪ್ … Continued

ವಿಡಿಯೋ | ತೀರ್ಥಹಳ್ಳಿ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಎರಡೇ ಚರಣ ಹಾಡಿದ್ದಕ್ಕೆ ಸಿಎಂ ಎದುರೇ ಬಿಜೆಪಿ ಶಾಸಕ ಆಕ್ಷೇಪ

ಶಿವಮೊಗ್ಗ: ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ರಾಷ್ರೀಯ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕ್ರಮಕ್ಕೆ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮತ್ತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಅವರ ಅಧ್ಯಕ್ಷತೆಯಲ್ಲಿ ಕಸ್ತೂರಿರಂಗನ್ ವರದಿ ಕುರಿತು ಶನಿವಾರ ನಡೆದ ಸಭೆಯಲ್ಲಿ ಈ ವಿಚಾರ ಮತ್ತೆ ಚರ್ಚೆಗೆ … Continued

ಹುಬ್ಬಳ್ಳಿಯಲ್ಲಿ ಅಮಿತ್ ಶಾ ಅಸ್ವಸ್ಥ; ಮೆಡಿಕಲ್ ಕಾಲೇಜು-ಆಸ್ಪತ್ರೆ ಉದ್ಘಾಟನೆಗೆ ಗೈರು

ಹುಬ್ಬಳ್ಳಿ: ಕೆಎಎಚ್‌ಇಆರ್‌ (KAHER)ನ ಜೆಜಿಎಂಎಂ ಮೆಡಿಕಲ್ ಕಾಲೇಜು ಹಾಗೂ ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ (ಸೆ.18) ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ (ಸೆ.19) ನಡೆದ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಗಬ್ಬೂರು ಸಮೀಪದ ಕಾರ್ಯಕ್ರಮದ ಸ್ಥಳದಲ್ಲಿ ಬೆಳಿಗ್ಗೆ 11 … Continued

ಕಲ್ಲಿನಿಂದ ಜಜ್ಜಿ ಮಹಿಳೆ ಕೊಲೆ ಮಾಡಿ ಶವದ ಮೇಲೆಯೇ ಮಗು ಮಲಗಿಸಿ ಹೋದ ಹಂತಕರು !

ರಾಯಚೂರು: ಮಹಿಳೆಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿ, ಆಕೆಯ ಎರಡು ವರ್ಷದ ಮಗುವನ್ನು ಮೃತದೇಹದ ಮೇಲೆಯೇ ಕಳ್ಳಿರಿಸಿ ಹಂತಕರು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಶನಿವಾರ (ಸೆ.19) ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಕೊಲೆಯಾದ ಮಹಿಳೆಯನ್ನು ಸಿಂಧನೂರಿನ ಆರ್‌ಎಚ್. ಕ್ಯಾಂಪ್-4ರ ನಿವಾಸಿ ಸ್ನೇಹಾ (26) ಎಂದು ಗುರುತಿಸಲಾಗಿದೆ. ಸಿಂಧನೂರು ತಾಲೂಕಿನ ಆರ್‌ಎಚ್. ಕ್ಯಾಂಪ್-5ರ … Continued