ಚಂದ್ರನ ಸುತ್ತಲಿನ ಅಂತರಿಕ್ಷದಲ್ಲೂ ಯುದ್ಧಕ್ಕೆ ಸಜ್ಜಾಗುತ್ತಿರುವ ಅಮೆರಿಕ ಸೇನೆ

ವಾಷಿಂಗ್ಟನ್: ಭವಿಷ್ಯದಲ್ಲಿ ಯುದ್ಧಗಳು ಭೂಮಿಯ ಕಕ್ಷೆಯನ್ನು ಮೀರಿ ಚಂದ್ರನ ಸುತ್ತಮುತ್ತಲಿನ ಅಂತರಿಕ್ಷ ಪ್ರದೇಶಕ್ಕೂ ವಿಸ್ತರಿಸಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಅಮೆರಿಕ ತನ್ನ ಸೇನಾ ಸಿದ್ಧತೆಗಳನ್ನು ಮತ್ತಷ್ಟು ಬಲಪಡಿಸುತ್ತಿದೆ. ಬಾಹ್ಯಾಕಾಶ ಯುದ್ಧದ ಸಾಧ್ಯತೆಗಳತ್ತ ಹೆಚ್ಚಿನ ಗಮನ ಹರಿಸಿರುವ ಅಮೆರಿಕ ಸೇನೆ, ಭೂಮಿ ಮತ್ತು ಚಂದ್ರನ ನಡುವಿನ ಪ್ರದೇಶದಲ್ಲಿಯೂ ಸೇನಾ ಕಾರ್ಯಾಚರಣೆ ನಡೆಸಲು ಸಜ್ಜಾಗಬೇಕಾಗಿದೆ ಎಂದು ಉನ್ನತ ಸೇನಾ ಅಧಿಕಾರಿಗಳು … Continued

ಕೇರಳದಲ್ಲಿ ಭಾರೀ ಮಳೆ : ಭೂಕುಸಿತ, ಪ್ರವಾಹಕ್ಕೆ 5 ಸಾವು; ಇಬ್ಬರು ನಾಪತ್ತೆ

ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹಗಳು ಸಂಭವಿಸಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅಧಿಕಾರಿಗಳಿಗೆ ಪ್ರತಿ ಗಂಟೆಗೆ ಪರಿಸ್ಥಿತಿಯ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಯವರ ನಿರ್ದೇಶನದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ವಿಗ್ನೇಶ್ವರಿ … Continued

ಸ್ಟೇಡಿಯಂನಲ್ಲಿ ರನ್ನಿಂಗ್‌ ಮುಗಿಸಿದ ನಂತ್ರ ಕುಸಿದ್ದುಬಿದ್ದು ಬಾಲಕ ಸಾವು ; ಆಘಾತದಿಂದ ನದಿಗೆ ಹಾರಿ ಪ್ರಾಣಬಿಟ್ಟ ತಾಯಿ

ಡೆಹ್ರಾಡೂನ್‌ : ಉತ್ತರಾಖಂಡದ ಪಿಥೋರಾಗಢ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇಡೀ ಪ್ರದೇಶವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. 14 ವರ್ಷದ ಪುತ್ರನ ಹಠಾತ್ ಸಾವಿನ ಆಘಾತವನ್ನು ತಡೆಯಲಾರದೆ, ಕೆಲವೇ ಗಂಟೆಗಳಲ್ಲಿ ತಾಯಿಯೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಪಿಥೋರಾಗಢ ಜಿಲ್ಲಾ ಕೇಂದ್ರದ ಸಮೀಪದ ಮಾಡೆ (Made) ಗ್ರಾಮದಲ್ಲಿ ಈ ಘಟನೆ ನಡೆದಿದೆ. … Continued

ವಿಡಿಯೋ | ಅಖಿಲೇಶ ಯಾದವ್‌ ಮುಂದೆಯೇ ಎಸ್‌ಪಿ ನಾಯಕರ ಕಿತ್ತಾಟ ; ಪರಸ್ಪರ ನಿಂದಿಸಿಕೊಂಡ ನಾಯಕರು

ಲಕ್ನೋ : ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ ಯಾದವ್ ಪಾಲ್ಗೊಂಡಿದ್ದ ಸಭೆಯಲ್ಲಿ ಅವರ ಸುಮ್ಮುಖದಲ್ಲೇ ಇಬ್ಬರು ಹಿರಿಯ ನಾಯಕರು ಪರಸ್ಪರ ವಾಗ್ವಾದಕ್ಕಿಳಿದು, ಜಗಳವಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶನಿವಾರ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಇಬ್ಬರು ನಾಯಕರನ್ನೂ ಸಭೆಯಿಂದ ಹೊರಗೆ ಹೋಗುವಂತೆ ಅಖಿಲೇಶ ಯಾದವ್ ಸೂಚಿಸಿದ್ದಾರೆ. ಘಟನೆಯ ಬೆನ್ನಲ್ಲೇ ಎಟಾ ಮತ್ತು … Continued

ವಿಡಿಯೋ | ಬ್ರಿಟನ್‌ನಲ್ಲಿ ಸಿಖ್ ಬಸ್ ಚಾಲಕನ ಮೇಲೆ ಹಲ್ಲೆ ; ಬಸ್ ಅಪಹರಿಸಿ ವಾಹನಗಳಿಗೆ ಡಿಕ್ಕಿ ಹೊಡೆದ ಯೆಮೆನ್ ಪ್ರಜೆ

ಇಂಗ್ಲೆಂಡ್‌ನ ಟೆಲ್ಫೋರ್ಡ್‌ನಲ್ಲಿ ಸಿಖ್ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ 33 ವರ್ಷದ ಯೆಮೆನ್ ಪ್ರಜೆಯೊಬ್ಬ ಬಸ್‌ನ್ನು ಕದ್ದು, ತಪ್ಪು ದಿಕ್ಕಿನಲ್ಲಿ ಅಪಾಯಕಾರಿಯಾಗಿ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 18ರಂದು ಸಂಜೆ ಸುಮಾರು 6:30ಕ್ಕೆ ಮೇಡ್ಲಿಯ ಕೋರ್ಟ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ … Continued

ದಾರಿ ತಪ್ಪಿ 1200 ಕಿಮೀ ದೂರದ ಗಯಾ ತಲುಪಿದ ವೃದ್ಧ ; ಎಐ ಚಾಟ್‌ಜಿಪಿಟಿ ನೆರವಿನಿಂದ ಕುಟುಂಬ ಪತ್ತೆಹಚ್ಚಿದ ಅಪರಿಚಿತ !

ಚಂಡೀಗಢ : ವೃದ್ಧರೊಬ್ಬರು ಯಾತ್ರೆಯ ವೇಳೆ ದಾರಿ ತಪ್ಪಿ ತಮ್ಮ ಮನೆಯಿಂದ ಸುಮಾರು 1,200 ಕಿಲೋಮೀಟರ್ ದೂರದ ಬಿಹಾರದ ಗಯಾ ನಗರಕ್ಕೆ ತಲುಪಿದ್ದರೂ, ಅಪರಿಚಿತ ವ್ಯಕ್ತಿಯ ಮಾನವೀಯತೆ, ನಿರಂತರ ಪ್ರಯತ್ನ ಮತ್ತು ಚಾಟ್‌ಜಿಪಿಟಿ (ChatGPT) ಸೇರಿದಂತೆ ಆನ್‌ಲೈನ್ ಹುಡುಕಾಟದ ನೆರವಿನಿಂದ ಕೊನೆಗೂ ಸುರಕ್ಷಿತವಾಗಿ ಕುಟುಂಬದವರನ್ನು ಸೇರಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಪಂಜಾಬ್‌ನ ಲೂಧಿಯಾನಾ ಜಿಲ್ಲೆಯ … Continued

ಎಸ್‌ಐಆರ್‌ : ಎಲ್‌.ಕೆ. ಅಡ್ವಾಣಿ, ಸಚಿವ ಜೈಶಂಕರ, ಚುನಾವಣಾ ಆಯುಕ್ತ ಸಂಧು ಸೇರಿ ಹಲವು ಗಣ್ಯರಿಗೆ ನೋಟಿಸ್‌

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆ ವೇಳೆ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ವಿದೇಶಾಂಗ ಸಚಿವ ಎಸ್‌. ಜೈಶಂಕರ ಹಾಗೂ ಚುನಾವಣಾ ಆಯುಕ್ತ ಎಸ್‌.ಎಸ್‌. ಸಂಧು ಸೇರಿದಂತೆ ಹಲವು ಪ್ರಮುಖ ರಾಜಕೀಯ ನಾಯಕರು ಮತ್ತು ಹಿರಿಯ ಅಧಿಕಾರಿಗಳಿಗೆ ನೋಟಿಸ್‌ ಜಾರಿಯಾಗಿದೆ. ವರದಿಗಳ ಪ್ರಕಾರ, ಹೆಸರುಗಳ ಕಾಗುಣಿತದಲ್ಲಿನ ವ್ಯತ್ಯಾಸ, … Continued

ಗದಗ ಬರಪೀಡಿತ ತಾಲೂಕು ಎಂದು ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ತಮ್ಮದೇ ಪಕ್ಷದ ಸರ್ಕಾರಕ್ಕೆ ಎಚ್‌.ಕೆ. ಪಾಟೀಲ ಎಚ್ಚರಿಕೆ

ಗದಗ: ಅಕ್ಟೋಬರ್‌ 10ರ ಒಳಗೆ ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ರಾಜ್ಯ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಮುಳಗುಂದದಲ್ಲಿ ಮಾತನಾಡಿದ ಅವರು, ನಿರಂತರ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಗದಗ ತಾಲೂಕಿನ ಪರಿಸ್ಥಿತಿಯನ್ನು ಅಧಿಕಾರಿಗಳು ಈಗಾಗಲೇ ಪರಿಶೀಲಿಸಿದ್ದಾರೆ. ಜನಪ್ರತಿನಿಧಿಗಳು … Continued

ಟ್ರಾಯ್‌ ಹೊಸ ನಿಯಮ ; ಎ2ಪಿ(A2P) ಫೋನ್‌ ಕರೆಗಳಿಗೆ ನಿಮಿಷಕ್ಕೆ 5 ಪೈಸೆವರೆಗೆ ಶುಲ್ಕ ವಿಧಿಸಿದ ಟ್ರಾಯ್‌

ನವದೆಹಲಿ: ಅನಗತ್ಯ ವಾಣಿಜ್ಯ ಕರೆಗಳು ಮತ್ತು ಸ್ಪ್ಯಾಮ್ ಕರೆಗಳಿಗೆ ಕಡಿವಾಣ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹೊಸ ಹಾಗೂ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಭಾಗವಾಗಿ, ಅಪ್ಲಿಕೇಶನ್-ಟು-ಪರ್ಸನ್ (A2P) ಕರೆಗಳ ಮೇಲೆ ಪ್ರತಿ ನಿಮಿಷಕ್ಕೆ ಗರಿಷ್ಠ 5 ಪೈಸೆಯವರೆಗೆ ಟರ್ಮಿನೇಷನ್ ಶುಲ್ಕ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ಶುಲ್ಕವನ್ನು ಕರೆ ಆರಂಭಿಸುವ … Continued

ಆಕ್ಸ್‌ಫರ್ಡ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ 2026 ; ಕರ್ನಾಟಕದ 6 ನಗರಗಳಿಗೆ ಜಾಗತಿಕ ಸ್ಥಾನ

ಬೆಂಗಳೂರು : ಪ್ರತಿಷ್ಠಿತ ‘ಆಕ್ಸ್‌ಫರ್ಡ್ ಗ್ಲೋಬಲ್ ಸಿಟೀಸ್ ಇಂಡೆಕ್ಸ್ 2026’ (Oxford Global Cities Index 2026) ನಲ್ಲಿ ಕರ್ನಾಟಕದ ಒಟ್ಟು ಆರು ನಗರಗಳು ಸ್ಥಾನ ಪಡೆದಿವೆ. ರಾಜ್ಯದಿಂದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಅವಳಿ ನಗರ, ಮೈಸೂರು, ಮಂಗಳೂರು, ಕಲಬುರಗಿ, ಬೆಳಗಾವಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆಕ್ಸ್‌ಫರ್ಡ್ ಎಕನಾಮಿಕ್ಸ್ ಜಗತ್ತಿನ ಮುಂಚೂಣಿಯಲ್ಲಿರುವ ಸ್ವತಂತ್ರ ಆರ್ಥಿಕ ಸಲಹಾ … Continued