ವೀಡಿಯೊ | ಕುಮಟಾ : ಸಮುದ್ರ ತೀರದಲ್ಲಿ ಬೃಹತ್‌ ತಿಮಿಂಗಿಲದ ಮೃತದೇಹ ಪತ್ತೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಕ್ಕನಳ್ಳಿ ಬಂದರಿನ ಸಮುದ್ರ ತೀರದಲ್ಲಿ ಬೃಹತ್‌ ಗಾತ್ರದ ತಿಮಿಂಗಿಲದ ಮೃತದೇಹ ಬುಧವಾರ ಪತ್ತೆಯಾಗಿದೆ. ಸುಮಾರು 40 ಅಡಿಗಳಷ್ಟು ಉದ್ದವಿರುವ ಈ ತಿಮಿಂಗಿಲವು ಸತ್ತು 10-15 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ತಿಮಿಂಗಿಲದ ಮೃತದೇಹವು ಬುಧವಾರ (ಜೂನ್‌ 15) ಸಮುದ್ರ ತೀರಕ್ಕೆ ಬಂದು ಬಿದ್ದಿದ್ದರೂ ಅದು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, … Continued

ಕಾರ್ಮಿಕರನ್ನು ಒಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ವಿದ್ಯುತ್‌ ಕಂಬ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಮುಂಡಗೋಡ ತಾಲೂಕುಗಳಿಗೆ ಹೊಂದಿಕೊಂಡಿರುವ ಗಡಿ ಭಾಗದ ಬೆಡಸಗಾಂವನಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಯಾವುದೇ ಅಪಾಯ ಸಂಭವಿಸಿದ ವರದಿಯಾಗಿಲ್ಲ. ರಾಮಾಪುರದಿಂದ ಹುಲೆಕಲ್‌ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರನ್ನು ಒಯ್ಯುತ್ತಿದ್ದ ವಾಹನದ ಮೇಲೆ ವಿದ್ಯುತ್‌ ಕಂಬ ಮುರಿದು … Continued

ಹಾರಲು ಅನುಮತಿ ಕೇಳಬೇಡಿ’…: ಮೋದಿ ಲೇಖನದ ಕುರಿತು ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಟೀಕೆಗಳ ನಂತ್ರ ಶಶಿ ತರೂರ ಮಾರ್ಮಿಕ ಪೋಸ್ಟ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪಕ್ಷದ ನಾಯಕ ಶಶಿ ತರೂರ್ ಅವರನ್ನು ಟೀಕಿಸಿದ ಕೆಲವೇ ಗಂಟೆಗಳ ನಂತರ, ತಿರುವನಂತಪುರಂ ಸಂಸದ X ನಲ್ಲಿ ಮಾರ್ಮಿಕವಾದ ಪೋಸ್ಟ್ ಮಾಡಿದ್ದಾರೆ. ಇದು ಅವರ ಪಕ್ಷದ ಸಹೋದ್ಯೋಗಿಗಳ ವಾಗ್ದಾಳಿಗೆ ಉತ್ತರವಾಗಿ ಕಂಡುಬಂದಿದೆ. “ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು. … Continued

ವೀಡಿಯೊ..| ಬಾಹ್ಯಾಕಾಶಕ್ಕೆ ಹಾರಿದ ಶುಭಾಂಶು ಶುಕ್ಲಾ ; 41 ವರ್ಷಗಳ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ

ನವದೆಹಲಿ: ಭಾರತವು ತನ್ನ ಕಾಸ್ಮಿಕ್ ಜಿಗಿತವನ್ನು ಮಾಡಿದೆ. ಭಾರತೀಯ ವಾಯುಪಡೆಯ ಪೈಲಟ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಫಾಲ್ಕನ್ 9 ರಾಕೆಟ್‌ನಲ್ಲಿ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿದ್ದಾರೆ. 1969 ರಲ್ಲಿ ಅಪೊಲೊ 11 ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ … Continued

ಯಲ್ಲಾಪುರ | ಅರೆಬೈಲ್‌ ಘಟ್ಟದ ಪ್ರಪಾತದ ಬಳಿ ಖಾಸಗಿ ಬಸ್ ಪಲ್ಟಿ

ಯಲ್ಲಾಪುರ : ಪ್ರಪಾತದ ಬಳಿ ಖಾಸಗಿ ಬಸ್ಸೊಂದು ಲಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ ಘಟ್ಟದಲ್ಲಿ ಬುಧವಾರ  ಬೆಳಿಗ್ಗೆ  ನಡೆದಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ 25 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಲಾರಿಗೆ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದೆ. … Continued

ಭಾರಿ ಮಳೆ ; ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ಇಂದು (ಜೂ.25) ರಜೆ ಘೋಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಜೊಯಿಡಾ ಹಾಗೂ ದಾಂಡೇಲಿ ಈ ನಾಲ್ಕು ತಾಲೂಕುಗಳ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ ಜೂನ್ 25ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹವಾಮಾನ ಇಲಾಖೆಯು ಭಾರಿ ಮಳೆ … Continued

ಇರಾನಿನ 400 ಕೆಜಿ ಯುರೇನಿಯಂ ಕಾಣೆಯಾದ ಬಗ್ಗೆ ಅಮೆರಿಕಕ್ಕೆ ಭಯ ? ಯಾಕಂದ್ರೆ ಇದ್ರಿಂದ 10 ಪರಮಾಣು ಬಾಂಬ್‌ ತಯಾರಿಸಬಹುದಂತೆ…

ನಾಲ್ಕು ದಿನಗಳ ಹಿಂದೆ ಇರಾನಿನ ಮೂರು ಕೇಂದ್ರ ಪರಮಾಣು ಕೇಂದ್ರಗಳ ಮೇಲೆ ಅಮೆರಿಕದ “ಬಂಕರ್ ಬಸ್ಟರ್” ಬಾಂಬ್‌ ದಾಳಿಯ ನಂತರ, ಗರಿಷ್ಠ 10 ಪರಮಾಣು ಬಾಂಬ್‌ಗಳನ್ನು ನಿರ್ಮಿಸಲು ಸಾಕಾಗುವಷ್ಟು, ಶೇಕಡಾ 60 ರಷ್ಟು ಪುಷ್ಟೀಕರಿಸಿದ ಯುರೇನಿಯಂನ 400 ಕಿಲೋಗ್ರಾಂಗಳಷ್ಟು ಸಂಗ್ರಹವು ಕಾಣೆಯಾಗಿದೆ. ಕಾಣೆಯಾದ ಯುರೇನಿಯಂ ಇನ್ನೂ ಇದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅಮೆರಿಕದ … Continued

ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಸೋಮವಾರ ಉತ್ತರಪ್ರದೇಶದ ಲಖಿಂಪುರ ಖೇರಿಯ ಧೌರಪುರ ಅರಣ್ಯ ಪ್ರದೇಶದ ಜುಗ್ನುಪುರದ ಇಟ್ಟಂಗಿ ತಯಾರಿಕೆ ಘಟಕದ ಕೆಲಸಗಾರರ ಮೇಲೆ ಕಪ್ಪು ಚಿರತೆಯೊಂದು ದಾಳಿ ನಡೆಸಿದೆ. ನಾಟಕೀಯ ಹಾಗೂ ಅಪರೂಪದ ವಿದ್ಯಮಾನದಲ್ಲಿ ಹೆದರದ ಯುವಕನೊಬ್ಬ ಚಿರತೆಯನ್ನು ಕೆಡವಿ ಬಾಯಿಯನ್ನು ಹಿಡಿದು ನೆಲಕ್ಕೆ ಒತ್ತಿ ಹಿಡಿದು ಅದನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾನೆ. ಗದ್ದಲದಿಂದ ಎಚ್ಚೆತ್ತ ಗ್ರಾಮಸ್ಥರು ಒಟ್ಟುಗೂಡಿ ಚಿರತೆಯ ಮೇಲೆ ಇಟ್ಟಿಗೆಗಳು … Continued

ಅಥಣಿ | ಶಾಲೆಯಲ್ಲಿ ಆಟವಾಡುವಾಗಲೇ ಹೃದಯಾಘಾತ ; ವಿದ್ಯಾರ್ಥಿನಿ ಸಾವು

ಬೆಳಗಾವಿ : ಶಾಲೆಯಲ್ಲಿ ಆಟವಾಡುವ ವೇಳೆ ಹೃದಯಾಘಾತ ಸಂಭವಿಸಿ ಹೈಸ್ಕೂಲ್‌ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ವಿದ್ಯಾರ್ಥಿನಿಗೆ ರೇಣುಕಾ ಸಂಜಯ ಬಂಡಗಾರ (15) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ‌ಚಮಕೇರಿ ಗ್ರಾಮದ ಖಾಸಗಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ … Continued

ಮಾದಕ ವಸ್ತು ಪ್ರಕರಣ : ನಟ ಶ್ರೀಕಾಂತ ಬಂಧನ

ಚೆನ್ನೈ: ಕೊಕೇನ್ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರಿಯ ತಮಿಳು ಮತ್ತು ತೆಲುಗು ಚಲನಚಿತ್ರ ನಟ ಶ್ರೀಕಾಂತ ಅವರನ್ನು ಪೊಲೀಸರು ಬಂಧಿಸಿದ್ದು, ಚೆನ್ನೈ ನ್ಯಾಯಾಲಯವು ಜುಲೈ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನುಂಗಂಬಾಕ್ಕಂ ಪೊಲೀಸ್ ಠಾಣೆಯಲ್ಲಿ ನಟನನ್ನು ಹಲವಾರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅಧಿಕೃತವಾಗಿ ಬಂಧಿಸಲಾಯಿತು. ಸೋಮವಾರ ಮಧ್ಯಾಹ್ನ ನಟ ಶ್ರೀಕಾಂತ ಅವರನ್ನು … Continued