ಪಾಕಿಸ್ತಾನದಿಂದ ದೂರವಾಣಿ ಕರೆ ; ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ ; ಮಿಲಿಟರಿ ಕಾರ್ಯಾಚರಣೆಗಳು ಸ್ಥಗಿತ | ವಿದೇಶಾಂಗ ಸಚಿವಾಲಯ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಮತ್ತು ಸಂಜೆ 5 ಗಂಟೆಗೆ (IST) ಮಿಲಿಟರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಶ್ರಿ ನವದೆಹಲಿಯಲ್ಲಿ ಸಂಕ್ಷಿಪ್ತ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ. “ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಇಂದು, ಶನಿವಾರ ಸಂಜೆ 3:35 ಕ್ಕೆ ಭಾರತದ … Continued

ವೀಡಿಯೊಗಳು…| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

ನವದೆಹಲಿ: ಶನಿವಾರ (ಮೇ 10) ಭಾರತವು ಪಾಕಿಸ್ತಾನದ ಕನಿಷ್ಠ ನಾಲ್ಕು ವಾಯುನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ. ಪಾಕಿಸ್ತಾನದ ಮೂರು ಪ್ರಮುಖ ಮಿಲಿಟರಿ ವಾಯುನೆಲೆಗಳ ಮೇಲೆ ಹಾಗೂ ಸಿಯಾಲ್‌ಕೋಟ್ ಮತ್ತು ನರೋವಾಲ್‌ನಲ್ಲಿರುವ ಪಾಕಿಸ್ತಾನಿ ಪೋಸ್ಟ್‌ಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದೆ. ಟ್ಯೂಬ್-ಲಾಂಚಡ್ ಡ್ರೋನ್‌ಗಳನ್ನು ಸಹ … Continued

ವೀಡಿಯೊ..| ಭಾರತದ ಜೊತೆ ಸಂಘರ್ಷದಿಂದ ಪಾಕಿಸ್ತಾನಕ್ಕೆ ದೊಡ್ಡ ಶಾಕ್‌ : ತಮ್ಮದು ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ಬಲೂಚಿಸ್ತಾನ ಪ್ರಾಂತ್ಯ…!

ಪಾಕಿಸ್ತಾನವು ತನ್ನ ಪೂರ್ವ ಭಾಗದಲ್ಲಿ ಭಾರತೀಯ ನಾಗರಿಕರು ಮತ್ತು ಮಿಲಿಟರಿ ನೆಲೆಗಳ ಮೇಲೆ ನಿರರ್ಥಕ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುವಲ್ಲಿ ನಿರತವಾಗಿದ್ದರೆ, ಅತ್ತ ಪಾಕಿಸ್ತಾನದಲ್ಲಿ ಬಲೂಚ್ ಬಂಡುಕೋರರು ಪಾಕ್‌ ಭದ್ರತಾ ಪಡೆಗಳ ವಿರುದ್ಧ ತಮ್ಮ ದಾಳಿಯನ್ನು ಹೆಚ್ಚಿಸಿದ್ದಾರೆ. ಬಲೂಚ್ ಹೋರಾಟಗಾರರ ಕನಿಷ್ಠ ಮೂರು ಗುಂಪುಗಳು ಅದರ ಪಶ್ಚಿಮ ಪ್ರಾಂತ್ಯವಾದ ಬಲೂಚಿಸ್ತಾನದ ಕೆಲವು ಭಾಗಗಳ ನಿಯಂತ್ರಣವನ್ನು … Continued

ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ…

ಜಮ್ಮು: ಪಾಕಿಸ್ತಾನ’ ಮತ್ತೆ ಜಮ್ಮು ಸೇರಿದಂತೆ ವಿವಿಧೆಡೆ ದಾಳಿ ನಡೆಸಿದೆ. ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣ ಮತ್ತು ಆವಂತಿಪೋರಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನಾದ್ಯಂತ 20 ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಡ್ರೋನ್‌ಗಳು ಸತತ ಎರಡನೇ … Continued

ತನ್ನ ಡ್ರೋನ್‌ಗಳ ಮೇಲೆ ಭಾರತದ ದಾಳಿಯಿಂದ ಪಾರಾಗಲು ಪ್ರಯಾಣಿಕ ವಿಮಾನಗಳನ್ನು ಬಳಸಿಕೊಂಡು ಪಾಕಿಸ್ತಾನ ಸೇನೆ…!

ನವದೆಹಲಿ : ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಹಿಂದಿನ ರಾತ್ರಿ ಮಿಲಿಟರಿ ಘಟಕಗಳ ಮೇಲೆ ಸರಣಿ ದಾಳಿ ನಡೆಸಿದಾಗ ಪಾಕಿಸ್ತಾನ ನಾಗರಿಕ ವಿಮಾನಗಳನ್ನು ಬಳಸಿಕೊಂಡಿದೆ ಎಂದು ಭಾರತ ಶುಕ್ರವಾರ ಹೇಳಿದೆ. ಭಾರತದ ಮೇಲೆ ದಾಳಿ ಮಾಡಿದ ನಂತರವೂ ನೆರೆಯ ದೇಶವು ತನ್ನ ವಾಯುಪ್ರದೇಶವನ್ನು ತೆರೆದಿಟ್ಟಿದೆ ಎಂದು ಅದು ಹೇಳಿದೆ. ಗುರುವಾರ ರಾತ್ರಿ (ಮೇ … Continued

ಪಾಕಿಸ್ತಾನಕ್ಕೆ ಐಎಂಎಫ್‌ನ ಬೇಲ್‌ಔಟ್ ಪ್ಯಾಕೇಜ್ ಮೇಲಿನ ಮತದಾನದಿಂದ ದೂರ ಉಳಿದ ಭಾರತ ; ಪಾಕಿಸ್ತಾನದ ‘ಕಳಪೆ ದಾಖಲೆ’ಯ ಉಲ್ಲೇಖ

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ ಪ್ರಸ್ತಾಪಿಸಿದ 1.3 ಶತಕೋಟಿ ಡಾಲರ್ ಬೇಲ್‌ಔಟ್ ಪ್ಯಾಕೇಜ್‌ನ ಮೇಲಿನ ಮತದಾನದಿಂದ ಭಾರತ ಶುಕ್ರವಾರ ದೂರ ಉಳಿದಿದೆ. ಭಾರತವು ಇಪಾಕಿಸ್ತಾನದ ‘ಕಳಪೆ ದಾಖಲೆ’ಯನ್ನು ಉಲ್ಲೇಖಿಸಿ, ಪಾಕಿಸ್ತಾನದ ವಿಷಯದಲ್ಲಿ ಐಎಂಎಫ್‌ (IMF) ಕಾರ್ಯಕ್ರಮಗಳ ಪರಿಣಾಮಕಾರಿತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿತು. ಪಾಕಿಸ್ತಾನದ ಕಡೆಯಿಂದ ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಸಾಲ ಹಣಕಾಸು … Continued

ಟರ್ಕಿಶ್ ಡ್ರೋನ್‌ ಸೇರಿದಂತೆ ಪಾಕಿಸ್ತಾನದ 400 ಡ್ರೋನ್ ಗಳನ್ನು ಉಡೀಸ್ ಮಾಡಿದ ಭಾರತದ ಸೇನೆ…!

ನವದೆಹಲಿ: ಪಾಕಿಸ್ತಾನವು ಗುರುವಾರ ಸಂಜೆ ಭಾರತೀಯ ಮಿಲಿಟರಿ ನೆಲೆಗಳ ಮೇಲೆ ಅಪ್ರಚೋದಿತ ದಾಳಿ ನಡೆಸಲು ಟರ್ಕಿಶ್ ಡ್ರೋನ್‌ಗಳನ್ನು ಬಳಸಿದೆ ಮತ್ತು ಭಾರತೀಯ ವಾಯುಪಡೆಯು ಗಣನೀಯ ಸಂಯಮವನ್ನು ತೋರಿಸಿದೆ ಮತ್ತು ತನ್ನ ನಾಗರಿಕ ವಾಯುಪ್ರದೇಶವನ್ನು ರಕ್ಷಿಸಿದೆ ಎಂದು ವಿದೇಶಾಂಗ ಸಚಿವಾಲಯ (MEA) ಬಹಿರಂಗಪಡಿಸಿದೆ. ಸತತ ಮೂರನೇ ದಿನವೂ ವಿದೇಶಾಂಗ ಸಚಿವಾಲಯ (MEA)ದ ಬ್ರೀಫಿಂಗ್‌ನಲ್ಲಿ, ಕರ್ನಲ್ ಸೋಫಿಯಾ ಖುರೇಷಿ … Continued

ವೀಡಿಯೊ | ಮೋದಿ ಹೆಸರು ಹೇಳಲು ಹೆದರುವ ರಣಹೇಡಿ..ಸೇನೆಗೆ ಇವ್ರೇನು ಸಂದೇಶ ಕೊಡ್ತಾರೆ ; ಪಾಕ್‌ ಪ್ರಧಾನಿಯನ್ನು ಜರೆದ ಸಂಸದ-ವೀಕ್ಷಿಸಿ

ಭಾರತದೊಂದಿಗಿನ ಗಡಿ ಉದ್ವಿಗ್ನತೆಯ ನಡುವೆ ಶೆಹಬಾಜ್ ಶರೀಫ್‌ಗೆ ಭಾರಿ ಮುಜುಗರವಾಗಿದ್ದು, ಪಾಕಿಸ್ತಾನದ ಸಂಸದರೊಬ್ಬರು ತಮ್ಮದೇ ಪ್ರಧಾನಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು “ಉಚ್ಚರಿಸಲು” ಹೆದರುವ “ಹೇಡಿ” ಎಂದು ಜರೆದಿದ್ದಾರೆ. “ಅವರಿಂದ ಭಾರತದ ವಿರುದ್ಧ ಒಂದೇ ಒಂದು ಹೇಳಿಕೆಯೂ ಬಂದಿಲ್ಲ. ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ನಿಮ್ಮ ನಾಯಕ … Continued

ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

ವಿಜಯಪುರ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ವೇಳೆ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನದ ಪರ ಪೋಸ್ಟ್‌ ಹಾಕಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕ್‌ ಪ್ರೇಮ ಮೆರೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಜಯಪುರ ಅಲ್ ಅಮೀನ್ ಮೆಡಿಕಲ್ … Continued

ವೀಡಿಯೊ..| ಒಳಗೆ ನುಗ್ಗಿ ಹೊಡೀತಿದ್ದಾರೆ, ದೇವರೇ ನಮ್ಮನ್ನು ಕಾಪಾಡಬೇಕು : ಭಾರತದ ದಾಳಿ ನಂತ್ರ ಸಂಸತ್ತಿಲ್ಲಿ ಕಣ್ಣೀರಿಟ್ಟ ಪಾಕ್‌ ಸಂಸದ-ವೀಕ್ಷಿಸಿ

ಭಾರತದ ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಪಾಕಿಸ್ತಾನದ ಸಂಸತ್ತಿನಲ್ಲಿಯೂ ಭಾರತದ ದಾಳಿಯ ಭೀತಿ ಪ್ರತಿಧ್ವನಿಸಿದೆ. ಭಾರತವು ಪಾಕಿಸ್ತಾನದ ಸಂಸತ್ತಿನ ಅಧಿವೇಶನದಲ್ಲಿ, ಸಂಸದ ಮತ್ತು ಮಾಜಿ ಸೇನಾ ಮೇಜರ್ ತಹೀರ್ ಇಕ್ಬಾಲ್ ಕಣ್ಣೀರಿಟ್ಟರು. ಅದು ಈಗ ವೈರಲ್‌ ಆಗುತ್ತಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಸೇನೆಯ ನಿಖರ ದಾಳಿಯಿಂದ … Continued