ನೇಪಾಳದ ಭೀಕರ ಪ್ರವಾಹ : ಆ ಒಂದು ಕರೆ….1643 ಮಕ್ಕಳ ಜೀವ ಉಳಿಸಿದ ಶಿಕ್ಷಕನ ಆ ಕ್ಷಣದ ನಿರ್ಧಾರ….

ಕಠ್ಮಂಡು: “ಗ್ರಾಮವೇ ಕೊಚ್ಚಿಹೋಗಿದೆ… ನದಿಯು ಎಲ್ಲವನ್ನೂ ನುಂಗಿದೆ… ಮಕ್ಕಳನ್ನು ಕರೆದುಕೊಂಡು ಓಡಿ ಹೋಗಿ!” ಬುಧವಾರ ಬೆಳಿಗ್ಗೆ 9:20ಕ್ಕೆ ಬಂದ ಈ ದೂರವಾಣಿ ಕರೆ ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಜೇಂದ್ರ ದವಾಡಿ ಅವರ ಬದುಕಿನ ಅತ್ಯಂತ ನಿರ್ಣಾಯಕ ಕ್ಷಣವಾಗಿ ಪರಿಣಮಿಸಿತು. ಆ ಕ್ಷಣದಲ್ಲಿ ಅವರು ತೆಗೆದುಕೊಂಡ ಒಂದು ತ್ವರಿತ ನಿರ್ಧಾರ 1,643 … Continued

ಭಾರತದಲ್ಲಿ ಮುಸ್ಲಿಮರು ಇರಲೇಬಾರದು ಎನ್ನುವಾತ ಹಿಂದೂ ಅಲ್ಲ ; ಅಮೆರಿಕದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್

ನ್ಯೂಯಾರ್ಕ್: ರಾಷ್ಟ್ರಿಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್ ಅವರು ಶನಿವಾರ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ‘ಒನ್ ವರ್ಲ್ಡ್: ಒನ್ ಹ್ಯೂಮ್ಯಾನಿಟಿ’ (ಒಂದು ವಿಶ್ವ: ಒಂದು ಮಾನವತೆ) ಧಾರ್ಮಿಕ ನಾಯಕರ ಸಮ್ಮೇಳನದಲ್ಲಿ ಮಾತನಾಡಿ, ವಿವಿಧ ಧರ್ಮಗಳ ನಡುವೆ ಏಕತೆ ಮತ್ತು ಸೌಹಾರ್ದತೆಯ ಅಗತ್ಯವನ್ನು ಒತ್ತಿ ಹೇಳಿದರು. ವಿವಿಧ ಧರ್ಮಗಳ ನಾಯಕರ ಜೊತೆ ವೇದಿಕೆ ಹಂಚಿಕೊಂಡು … Continued

ವಿಡಿಯೋ | ನೇಪಾಳ ಭೀಕರ ಪ್ರವಾಹದ ಕೆಸರಿನಡಿ ಹೂತುಹೋಗಿದ್ದ 97ರ ವೃದ್ಧೆ; ಆದ್ರೂ ಸಾವನ್ನು ಗೆದ್ದು ಬಂದ ಗಟ್ಟಿಗಿತ್ತಿ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದ ನಡುವೆ, ವೃದ್ಧಾಶ್ರಮದ ಅವಶೇಷಗಳಡಿ ಸಿಲುಕಿದ್ದ 97 ವರ್ಷದ ಮಹಿಳೆಯೊಬ್ಬರು ಜೀವಂತವಾಗಿದ್ದು, ಅವರನ್ನು ಸುರಕ್ಷಿತವಾಗಿ ರಕ್ಷಿಸಿರುವ ಘಟನೆ ಆಶಾಕಿರಣವಾಗಿ ಮೂಡಿಬಂದಿದೆ. ಪ್ರವಾಹದಲ್ಲಿ ಅವಶೇಷಗಳಡಿ ಸಿಲುಕಿದ್ದ ಗುನಾ ಮಾಯಾ ಬೊಹಾರಾ (97) ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಚೇತರಿಕೆಯ ಹಾದಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬುಧವಾರ … Continued

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 3ರ ವರೆಗೆ ಮಳೆ : ಮುನ್ಸೂಚನೆ

ಬೆಂಗಳೂರು : ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿಯಲ್ಲಿ ಮಧ್ಯಮ ಸ್ತರದಲ್ಲಿ ಉಂಟಾಗಿರುವ ವಾಯುಭಾರ ತಿರುವಿನ ಪ್ರಭಾವದಿಂದ, ದಕ್ಷಿಣ ಬಾರತದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ, ತೆಲಂಗಾಣ, ಆಂಧ್ರ ಮತ್ತು ಕೇರಳದ ಕೆಲವು ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಅಥವಾ ಅಲ್ಲಲ್ಲಿ ಚದುರಿದ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕರ್ನಾಟಕದ … Continued

ನೇಪಾಳ : ಪ್ರವಾಹದಲ್ಲಿ ಕೊಚ್ಚಿಹೋದ ಬ್ಯಾಂಕ್ ಲಾಕರ್ ; ಹಣಕ್ಕಾಗಿ ಮುಗಿಬಿದ್ದು ಲಾಕರ್‌ ಒಡೆದು 58 ಲಕ್ಷ ರೂ. ದೋಚಿದ ಜನ !

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹ ದುರಂತದಲ್ಲಿ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 2500 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 537 ವಿದೇಶಿ ಪ್ರಜೆಗಳಿದ್ದು, ಅವರಲ್ಲಿ 320 ಮಂದಿ ಭಾರತೀಯರು ಸೇರಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿದ್ದು, ಮತ್ತಷ್ಟು ಅಪಾಯದ ಸಾಧ್ಯತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ತುರ್ತು ಕ್ರಮಗಳನ್ನು … Continued

ಕೆಪಿಎಸ್‌ಸಿ ಹಗರಣ : ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ ಸಿಐಡಿ ವಶಕ್ಕೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KSPC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಇಲಾಖೆಯ ಅಪರಾಧ ತನಿಖಾ ಇಲಾಖೆ (CID) ಶನಿವಾರ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಗಂಗ್ವಾರ್ ಅವರನ್ನು ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಅವರನ್ನು ಭಾನುವಾರ ನ್ಯಾಯಾಧೀಶರ ಎದುರು ಹಾಜರುಪಡಿಸುವ ಸಾಧ್ಯತೆ ಇದೆ. 2016ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ … Continued

ಒಬ್ಬರು ಐಎಫ್‌ಎಸ್‌, ನಾಲ್ವರು ಐಎಎಸ್‌, 15 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರವು ಒಬ್ಬರು ಐಎಫ್‌ಎಸ್‌ ಅಧಿಕಾರಿ, ನಾಲ್ವರು ಐಎಎಸ್‌ ಅಧಿಕಾರಿಗಳು ಹಾಗೂ 15 ಐಪಿಎಸ್ ಅಧಿಕಾರಿಗಳನ್ನು (IPS Officers) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಐಎಫ್‌ಎಸ್‌ ಅಧಿಕಾರಿ ಲಿಂಗರಾಜ ಎಸ್.ಎಸ್ :  ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಯಲಗೌಡ ಶಿವನಗೌಡ ಪಾಟೀಲ (ಐಎಎಸ್): ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ … Continued

ಉತ್ತರ ಕನ್ನಡದ ಮೆಡಿಕಲ್ ಕಾಲೇಜು, ಶ್ರೇಷ್ಠ ಪಂಚಾಯತ ಪ್ರಶಸ್ತಿಗೆ ರಾಮಕೃಷ್ಣ ಹೆಗಡೆ ಹೆಸರು ; ಸಿಎಂ ಶಿವಕುಮಾರ ಘೋಷಣೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೆಡಿಕಲ್ ಕಾಲೇಜಿಗೆ ಮತ್ತು ಬೆಂಗಳೂರಿನ ಮುಖ್ಯ ರಸ್ತೆಗೆ ರಾಮಕೃಷ್ಣ ಹೆಗಡೆ ಅವರ ಹೆಸರ‌ನ್ನು ಇಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರಕಟಿಸಿದ್ದಾರೆ.  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ … Continued

ಯಲ್ಲಾಪುರ : ಸಾರಿಗೆ ಸಂಸ್ಥೆ ಬಸ್-ಮಿನಿ ಬಸ್ ಡಿಕ್ಕಿ : 10 ಮಂದಿಗೆ ಗಾಯ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ ಪ್ರದೇಶದ ಕಡಿದಾದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಮಿನಿ ಬಸ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಮಾರು 10 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಕಡಿದಾದ ತಿರುವಿನಲ್ಲಿ ಅತಿ ವೇಗವಾಗಿ ಬಂದ ಮಿನಿ ಬಸ್ ನಿಯಂತ್ರಣ … Continued

ಶಿರಸಿ ; ಪಡಿತರ ಅಕ್ಕಿ ಅಕ್ರಮ ಸಾಗಾಟ ; ಲಾರಿ ಸಮೇತ 473 ಚೀಲ ಅಕ್ಕಿ ವಶ

ಶಿರಸಿ: ಪಡಿತರ ವ್ಯವಸ್ಥೆಯಡಿ ಜನರಿಗೆ ವಿತರಿಸಬೇಕಾದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ  ಭಾರಿ ಪ್ರಮಾಣದ ಪಡಿತರ ಅಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನೀಲೇಕಣಿ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದುವರದಿಯಾಗಿದೆ. ಪಡಿತರ ಅಕ್ಕಿಯ ಅಕ್ರಮ ಸಾಗಾಟದ ಜಾಲದ ವಿರುದ್ಧ ಶಿರಸಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ  ಸಿದ್ದಾಪುರದಿಂದ ಮಹಾರಾಷ್ಟ್ರದ … Continued