ನೇಪಾಳಕ್ಕೆ ಹೋಗಲು ಗೂಗಲ್‌ ಮ್ಯಾಪ್‌ ಸೂಚಿಸಿದ ದಾರಿಯಲ್ಲಿ ಹೋಗಿ ಬರೇಲಿಯಲ್ಲಿ ಸಿಕ್ಕಿಹಾಕಿಕೊಂಡ ಇಬ್ಬರು ಫ್ರೆಂಚ್ ಸೈಕ್ಲಿಸ್ಟ್‌ಗಳು…!

ಬರೇಲಿ: ದೆಹಲಿಯಿಂದ ಕಠ್ಮಂಡುವಿಗೆ ಸೈಕ್ಲಿಂಗ್ ಮಾಡುತ್ತಿದ್ದ ಇಬ್ಬರು ಫ್ರೆಂಚ್ ಪ್ರವಾಸಿಗರು ದಾರಿ ತಪ್ಪಿ ಬರೇಲಿಯ ಚುರೈಲಿ ಅಣೆಕಟ್ಟಿನ ಬಳಿ ತಲುಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಸೈಕ್ಲಿಂಗ್ ಮಾಡುತ್ತಿದ್ದ ಇವರಿಬ್ಬರನ್ನು ಕೆಲವು ಗ್ರಾಮಸ್ಥರು ಗಮನಿಸಿ ಚುರೈಲಿ ಪೊಲೀಸ್ ಹೊರ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಸೈಕ್ಲಿಸ್ಟ್‌ಗಳನ್ನು ರಾತ್ರಿ ಗ್ರಾಮದ ಪ್ರಧಾನ ಅವರ ಮನೆಯಲ್ಲಿ ಇರಿಸಿದರು ಮತ್ತು ಅವರು … Continued

ಭಾರತಕ್ಕೆ ದೊಡ್ಡ ಗೆಲುವು ; ಮುಂಬೈ ದಾಳಿ ರೂವಾರಿ ತಹವ್ವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ

ವಾಷಿಂಗ್ಟನ್: ಮುಂಬೈ ದಾಳಿಯ ಅಪರಾಧಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಅರ್ಜಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ಹಸ್ತಾಂತರದ ವಿರುದ್ಧದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಕೋರಿದೆ. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾಗೆ ಇದು ಕೊನೆಯ ಕಾನೂನು ಅವಕಾಶವಾಗಿತ್ತು. … Continued

ದಾಖಲೆಯ 1,000 ಸೆಕೆಂಡುಗಳವರೆಗೆ 10 ಕೋಟಿ ಡಿಗ್ರಿ ಸೆಲ್ಸಿಯಸ್‌ ವರೆಗಿನ ತಾಪಮಾನ ತಲುಪಿದ ಚೀನಾದ ‘ಕೃತಕ ಸೂರ್ಯ’…! ಏನಿದು ಕೌತುಕ..?

ಶಕ್ತಿಯ ಹೊಸ ಮೂಲವನ್ನು ಸೃಷ್ಟಿಸುವ ತನ್ನ ಅನ್ವೇಷಣೆಯಲ್ಲಿ ಚೀನಾ ಮತ್ತೊಂದು ಪ್ರಮುಖ ಪರಮಾಣು ಸಮ್ಮಿಳನ ಪ್ರಯೋಗ(nuclear fusion experiment) ವನ್ನು ನಡೆಸಿದೆ. ಚೀನಾದ ‘ಕೃತಕ ಸೂರ್ಯ’ (artificial sun) ಎಂದು ಕರೆಯಲ್ಪಡುವ ಪ್ರಾಯೋಗಿಕವಾದ ಸುಧಾರಿತ ಸೂಪರ್‌ಕಂಡಕ್ಟಿಂಗ್ ಟೋಕಾಮಾಕ್ (EAST) ಫ್ಯೂಷನ್ ಎನರ್ಜಿ ರಿಯಾಕ್ಟರ್ ಪ್ಲಾಸ್ಮಾವನ್ನು 1,000 ಸೆಕೆಂಡುಗಳವರೆಗೆ ಸ್ಥಿರವಾಗಿ ಉಳಿಸಿಕೊಂಡಿದೆ, ಇದು 2023 ರಲ್ಲಿ ಸ್ಥಾಪಿಸಲಾದ … Continued

500ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿದ ಅಮೆರಿಕ ; ಮಿಲಿಟರಿ ವಿಮಾನ ಬಳಸಿ ನೂರಾರು ಜನರ ಗಡೀಪಾರು

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭರವಸೆಯ ಸಾಮೂಹಿಕ ಗಡಿಪಾರು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ 500ಕ್ಕೂ ಹೆಚ್ಚು ವಲಸಿಗರನ್ನು ಬಂಧಿಸಲಾಗಿದೆ ಮತ್ತು ನೂರಾರು ಜನರನ್ನು ಮಿಲಿಟರಿ ವಿಮಾನಗಳ ಮೂಲಕ ದೇಶದಿಂದ ಹೊರಗೆ ಕಳುಹಿಸಲಾಯಿತು ಎಂದು ಶ್ವೇತಭವನ ತಿಳಿಸಿದೆ. ಅಂಕಿಅಂಶಗಳನ್ನು ಹಂಚಿಕೊಂಡ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು, ಅಮೆರಿಕದ ಅಧಿಕಾರಿಗಳು 538 ಅಕ್ರಮ … Continued

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್-ಆರತಿ ದಂಪತಿಯ 20 ವರ್ಷಗಳ ದಾಂಪತ್ಯದಲ್ಲಿ ಬಿರುಕು..?!

ನವದೆಹಲಿ: 20 ವರ್ಷಗಳ ದಾಂಪತ್ಯ ಜೀವನದ ನಂತರ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಅವರು ಬೇರೆಯಾಗುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ. 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಹಲವು ತಿಂಗಳುಗಳಿಂದ ಪ್ರತ್ಯೇಕವಾಗಿ ವಾಸವಿದ್ದು, ಇದೀಗ ಅವರಿಬ್ಬರ ವಿಚ್ಛೇದನದ ಕುರಿತು ಚರ್ಚೆ ನಡೆಯುತ್ತಿದೆ. ದಂಪತಿಗೆ ಇಬ್ಬರು ಗಂಡು … Continued

ವೀಡಿಯೊಗಳು..| ಬಾಲಿವುಡ್‌ ಬೋಲ್ಡ್‌ ನಟಿ ಈಗ ಸನ್ಯಾಸಿನಿ…! ಮಹಾಕುಂಭದಲ್ಲಿ ಕಿನ್ನರ ಅಖಾರದ ‘ಮಹಾಮಂಡಲೇಶ್ವರ’ ಆದ ನಟಿ ಮಮತಾ ಕುಲಕರ್ಣಿ

ಬಾಲಿವುಡ್‌ನ ಮಾಜಿ ನಟಿ ಮಮತಾ ಕುಲಕರ್ಣಿ ಈಗ ಅಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್‌ನ ಬೋಲ್ಡ್‌ ನಟಿ ಎಂದು ಗುರುತಿಸಿಕೊಂಡಿದ್ದ ಮಮತಾ ಕುಲಕರ್ಣಿ ಈಗ ಕುಂಭಮೇಳದಲ್ಲಿ ಮಹಾಮಂಡಲೇಶ್ವರ ಆಗುವ ಮೂಲಕ ಅಧ್ಯಾತ್ಮಿಕ ಹಾದಿ ಹಿಡಿದಿದ್ದಾರೆ. ಕಿನ್ನರ ಅಖಾಡದಿಂದ ಅವರಿಗೆ ಈ ಬಿರುದು ನೀಡಲಾಗಿದೆ. ಈಗ ಅವರ ಹೆಸರನ್ನೂ ಬದಲಾಯಿಸಲಾಗಿದೆ. ಅವರನ್ನು ಈಗ ಶ್ರೀ ಯಾಮಿನಿ … Continued

ವೀಡಿಯೊ..| ಬೆಂಗಳೂರು : ಆಂಬುಲೆನ್ಸ್‌ ಗೆ ದಾರಿ ಕೊಡದ ಆಟೋ ಚಾಲಕ ; ಮುಂದಾಗಿದ್ದು…?

ಬೆಂಗಳೂರು: ತೀವ್ರ ಅಸ್ವಸ್ಥ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ಆಟೋ ರಿಕ್ಷಾ ಚಾಲಕನೊಬ್ಬ ದಾರಿಕೊಡದೆ ಸತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹರ್ಲೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆಟೋ ಚಾಲಕನ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತುರ್ತು ಅಗತ್ಯವಿರುವ ರೋಗಿಯನ್ನು ಕರೆದೊಯ್ಯಲಾಗುತ್ತಿದೆ. … Continued

ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ; 8 ಮಂದಿ ಸಾವು : 5 ಕಿಮೀ ದೂರದ ವರೆಗೆ ಕೇಳಿದ ಸ್ಫೋಟದ ಸದ್ದು

ಮುಂಬೈ: ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ನಾಗ್ಪುರ ಬಳಿಯ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಶುಕ್ರವಾರ ಬೆಳಿಗ್ಗೆ ಭಾರೀ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಧ್ಯಾಹ್ನ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾವನ್ನು ಖಚಿತಪಡಿಸಿದ್ದಾರೆ. “ಭಂಡಾರಾದಲ್ಲಿ, ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ, ದೊಡ್ಡ ಅನಾಹುತ ಸಂಭವಿಸಿದೆ, ಇದರ ಪರಿಣಾಮವಾಗಿ … Continued

ಜನಸಮೂಹದ ಮುಂದೆಯೇ ಜೋರಾಗಿ ಅತ್ತುಕರೆದು ಗೋಳಾಡಿ ಬೊಬ್ಬೆ ಹೊಡೆದ ಕಾಂಗ್ರೆಸ್ ಶಾಸಕಿ…! ವೀಡಿಯೊ ವೈರಲ್

ಉತ್ತರಾಖಂಡದ ಪೌರ ಚುನಾವಣೆ ನಾಟಕೀಯ ತಿರುವು ಪಡೆದುಕೊಂಡಿದ್ದು, ಭಗವಾನಪುರದ ಮತಗಟ್ಟೆಯಲ್ಲಿ ಗದ್ದಲ ನಡೆದಿದೆ. ಕಾಂಗ್ರೆಸ್ ಶಾಸಕಿ ಮಮತಾ ರಾಕೇಶ ಅವರು ತಮ್ಮ ಪುತ್ರ ಹಾಗೂ ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿ ಜನರನ್ನು ಮತದಾನ ಮಾಡದಂತೆ ಪೊಲೀಸರು ತಡೆದಿದ್ದಾರೆ ಎಂದು ಆರೋಪಿಸಿ ಜೋರಾಗಿ ಅತ್ತ ಘಟನೆ ನಡೆದಿದೆ ಎಂದು ವರದಿಯಾಗಿದೆ. ಶಾಸಕಿ ಅತ್ತು ಕರೆದು ಮಾಡುತ್ತಿರುವ ವೀಡಿಯೊ ಸಾಮಾಜಿಕ … Continued