ವೀಡಿಯೊಗಳು : ಸಿರಿಯಾದ ಅಧ್ಯಕ್ಷೀಯ ಭವನ ಪ್ರವೇಶಿಸಿ ಅಸ್ಸಾದ್ ಕುಟುಂಬದ ಭಾವಚಿತ್ರಗಳು, ವಸ್ತುಗಳನ್ನು ಧ್ವಂಸಗೊಳಿಸಿದ ಬಂಡುಕೋರರು…!

ಇಸ್ಲಾಮಿಸ್ಟ್ ನೇತೃತ್ವದ ಸಿರಿಯಾ ಬಂಡುಕೋರರು ಭಾನುವಾರ ಮಿಂಚಿನ ಆಕ್ರಮಣದಲ್ಲಿ ಸಿರಿಯಾ ರಾಜಧಾನಿ ದಮಾಸ್ಕಸ್ ಅನ್ನು ವಶಕ್ಕೆ ಪಡೆದಿರುವುದಾಗಿ ಪ್ರಕಟಿಸಿದ್ದಾರೆ. ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದು, ಸಿರಿಯಾದಲ್ಲಿ ಐದು ದಶಕಗಳ ಅವರ ಬಾತ್ ಪಕ್ಷದ ಆಳ್ವಿಕೆ ಕೊನೆಗೊಂಡಿದೆ. ಸಿರಿಯಾ ರಾಜಧಾನಿ ದಮಾಸ್ಕಸ್‌ನಲ್ಲಿರುವ ಅಧ್ಯಕ್ಷರ ಭವನದೊಳಗೆ ಬಂಡುಕೋರರು ತಿರುಗಾಡುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು ತೋರಿಸಿವೆ. ಅವರು … Continued

ವೀಡಿಯೊಗಳು…| ಸಿರಿಯಾ ಬಿಕ್ಕಟ್ಟು : ಅಧ್ಯಕ್ಷ ಅಸ್ಸಾದ್ ತಂದೆಯ ಪ್ರತಿಮೆಗಳನ್ನು ಉರುಳಿಸಿ ರಸ್ತೆಯಲ್ಲಿ ಎಳೆದೊಯ್ದ ಬಂಡುಕೋರರ ಬೆಂಬಲಿಗರು..!

ಸಿರಿಯಾ ರಾಜಧಾನಿ ದಮಾಸ್ಕಸ್‌ಗೆ ಪ್ರವೇಶಿಸಲಾಗಿದೆ ಎಂದು ಬಂಡುಕೋರರು ಘೋಷಿಸಿದ ನಂತರ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದಾರೆ. ಇದೇವೇಳೆ ಅಸ್ಸಾದ್‌ ವಿರೋಧಿ ಬಂಡುಕೋರ ಪಡೆಗಳಿಗೆ ಬೆಂಬಲ ನೀಡಿರುವ ಪ್ರತಿಭಟನಾಕಾರರು, ಬಶರ್ ಅಲ್-ಅಸ್ಸಾದ್ ತಂದೆ ಮತ್ತು ಮಾಜಿ ಅಧ್ಯಕ್ಷ ಹಫೀಜ್ ಅಲ್-ಅಸ್ಸಾದ್ ಅವರ ಪ್ರತಿಮೆಗಳನ್ನು ಕೆಡಗಿದ ನಂತರ ಅದನ್ನು ಬಿದಿಯಲ್ಲಿ ಎಳೆದುಕೊಂಡು ಹೋಗಿದ್ದಾರೆ. 1970 ರಲ್ಲಿ ದಂಗೆಯ … Continued

ವೀಡಿಯೊ..| ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಬೆಚ್ಚಿ ಬಿದ್ದ ಪಕ್ಷಿಗಳು ; ದೃಶ್ಯ ಕ್ಯಾಮರಾದಲ್ಲಿ ಸೆರೆ

ಉತ್ತರ ಕ್ಯಾಲಿಫೋರ್ನಿಯಾದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದರ ಕ್ಷಣವನ್ನು ಸೆರೆಹಿಡಿದ ತುಣುಕನ್ನು ಅಮೆರಿಕದ ಮೀನು ಮತ್ತು ವನ್ಯಜೀವಿ ಸರ್ವಿಸ್‌ ಬಿಡುಗಡೆ ಮಾಡಿದೆ. ಸ್ಯಾಕ್ರಮೆಂಟೊ ನ್ಯಾಷನಲ್ ವೈಲ್ಡ್‌ಲೈಫ್ ರೆಫ್ಯೂಜ್ ಕಾಂಪ್ಲೆಕ್ಸ್‌ನಲ್ಲಿರುವ ಪಕ್ಷಿಗಳು ಮತ್ತು ಸ್ಯಾಕ್ರಮೆಂಟೊ ಕಣಿವೆಯ ಸುತ್ತಮುತ್ತಲಿನ ಪ್ರದೇಶಗಳು ನಡುಕಕ್ಕೆ ಹೇಗೆ ಪ್ರತಿಕ್ರಿಯಿಸಿದವು ಎಂಬುದನ್ನು ವೀಡಿಯೊ ತೋರಿಸುತ್ತದೆ. ಪ್ರಬಲ ಭೂಕಂಪವು ಗುರುವಾರ (ಡಿಸೆಂಬರ್ 5) ಉತ್ತರ … Continued

ಗಿನ್ನೆಸ್‌ ದಾಖಲೆಗೆ ಸೇರಿದ ವಿಶ್ವದ ಅತ್ಯಂತ ಹಿರಿಯ ನವ ವಿವಾಹಿತರು..! ಇವರಿಬ್ಬರ ಒಟ್ಟು ವಯಸ್ಸು 200 ವರ್ಷಗಳಿಗೂ ಹೆಚ್ಚು…!!

ಅಮೆರಿಕದ 100 ವರ್ಷದ ಅಜ್ಜ ಮತ್ತು 102 ವರ್ಷದ ಅಜ್ಜಿ ಇತ್ತೀಚೆಗೆ ಅಮೆರಿಕದಲ್ಲಿ ಮದುವೆಯಾಗಿದ್ದಾರೆ. ಇದು ಈಗ ಗಿನ್ನೆಸ್ ವಿಶ್ವ ದಾಖಲೆಗೆ ಸೇರಿದೆ. ಶತಾಯುಷಿ ದಂಪತಿ – ಬರ್ನಿ ಲಿಟ್‌ಮ್ಯಾನ್ ಮತ್ತು ಮರ್ಜೋರಿ ಫಿಟರ್‌ಮ್ಯಾನ್ – ಈಗ ಅವರಿಬ್ಬರ ಒಟ್ಟು ವಯಸ್ಸು 202 ವರ್ಷ ಮತ್ತು 271 ದಿನಗಳಾಗಿವೆ. ವಿಶ್ವದ ಅತ್ಯಂತ ಹಿರಿಯ ನವವಿವಾಹಿತರು ಎಂಬ … Continued

ಮೆಕ್ಸಿಕನ್‌ ಅಧ್ಯಾತ್ಮಿಕ ಶುದ್ಧೀಕರಣ ಆಚರಣೆ ಸಮಯದಲ್ಲಿ ಅಮೆಜಾನಿಯನ್ ಕಪ್ಪೆ ವಿಷದ ಅಂಶ ಸೇವಿಸಿದ ನಂತರ ಸಾವಿಗೀಡಾದ ನಟಿ..!

ನಂಬಿಕೆಯು ಮಹತ್ತರವಾದ ಪ್ರಾಮುಖ್ಯತೆ ಹೊಂದಿದೆ, ಆದರೆ ಅದು ತರ್ಕಬದ್ಧ ಚಿಂತನೆ ಹೊಂದಿಲ್ಲದ ಕುರುಡು ನಂಬಿಕೆಯಾದರೆ ಅದು ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಒಂದು ನಿದರ್ಶನ ಎಂದೇ ಹೇಳಬಹುದು. ಇದು ಮೆಕ್ಸಿಕನ್ ನಟಿ ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್ ಅವರ ಪ್ರಕರಣವಾಗಿದೆ. ಅವರು ವಾಂತಿ ಮತ್ತು ಅತಿಸಾರದಿಂದ ಬಳಲಿದ ನಂತರ ಡಿಸೆಂಬರ್ 1 ರಂದು ತಮ್ಮ ಪ್ರಾಣವನ್ನು … Continued

ವೀಡಿಯೊ…| ‘ಪೂರ್ವಯೋಜಿತ ದಾಳಿ’ಯಲ್ಲಿ ಹೋಟೆಲ್ ಹೊರಗೆ ಗುಂಡು ಹಾರಿಸಿ ಯುನೈಟೆಡ್ ಹೆಲ್ತ್‌ಕೇರ್ ಕಂಪನಿಯ ಸಿಇಒ ಹತ್ಯೆ…

ನವದೆಹಲಿ : ಅಮೆರಿಕ ಮೂಲದ ಯುನೈಟೆಡ್ ಹೆಲ್ತ್‌ಕೇರ್‌ನ ಸಿಇಒ ಬ್ರಿಯಾನ್ ಥಾಂಪ್ಸನ್ ಅವರನ್ನು ಬುಧವಾರ ನ್ಯೂಯಾರ್ಕ್ ಹೋಟೆಲ್‌ನ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬ್ರಿಯಾನ್‌ ಥಾಂಪ್ಸನ್ (50) ಅವರು, ನ್ಯೂಯಾರ್ಕ್ ಹಿಲ್ಟನ್ ಮಿಡ್‌ಟೌನ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಹಿಂದಿನಿಂದ ಗುಂಡಿನ ದಾಳಿ ನಡೆಸಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಬ್ರಿಯಾನ್‌ ಥಾಂಪ್ಸನ್ ಹೂಡಿಕೆದಾರರ ಸಮ್ಮೇಳನದಲ್ಲಿ ಪ್ರಮುಖ … Continued

ಬಾಂಗ್ಲಾದೇಶದ ಹಂಗಾಮಿ ಮುಖ್ಯಸ್ಥ “ಮುಹಮ್ಮದ್ ಯೂನಸ್ ಅಲ್ಪಸಂಖ್ಯಾತರ ನರಮೇಧದಲ್ಲಿ ಭಾಗಿ”: ಪದಚ್ಯುತಿ ನಂತರ ಶೇಖ್ ಹಸೀನಾ ಮೊದಲ ಭಾಷಣ

ನವದೆಹಲಿ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ದೇಶದ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಶೇಖ್ ಹಸೀನಾ ಅವರು ಮುಹಮ್ಮದ್ ಯೂನಸ್ “ಹತ್ಯಾಕಾಂಡ” ನಡೆಸುತ್ತಿದ್ದಾರೆ ಮತ್ತು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲರಾಗಿದ್ದಾರೆ ಎಂದು … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬ್ರಿಟನ್‌ ಸಂಸದರು

ಲಂಡನ್: ಬಾಂಗ್ಲಾದೇಶದಲ್ಲಿನ ಚಿಂತಾಜನಕ ಪರಿಸ್ಥಿತಿಯ ಕುರಿತು ಬ್ರಿಟನ್‌ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಗಳವಾರ ‘ತುರ್ತು’ ವಿಷಯವನ್ನು ಮಂಡಿಸಲಾಯಿತು. ಸಂಸತ್ತಿನ ಸದಸ್ಯರು ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ದೇಶದಲ್ಲಿ ಮಧ್ಯಂತರ ಸರ್ಕಾರವು ಹಿಂದೂ ಸನ್ಯಾಸಿಗಳ ಮೇಲಿನ ಧಾರ್ಮಿಕ ದಮನದ ಬಗ್ಗೆಯೂ ಚರ್ಚಿಸಿದರು. ಲೇಬರ್ ಪಕ್ಷದ ಸಂಸದ ಬ್ಯಾರಿ … Continued

ವೀಡಿಯೊ | ವಿಕೆಟ್ ಪಡೆದ ನಂತ್ರ ಸಂಭ್ರಮಿಸುವ ‘ಸ್ಟೈಲ್‌ ನಕಲು’ ಮಾಡಲು ಹೋಗಿ ಗಾಯಗೊಂಡ ಬೌಲರ್ ; ಗೆಲ್ಲಬಹುದಾದ ಪಂದ್ಯ ಸೋತ ನೇಪಾಳ..!

ಬಾಂಗ್ಲಾದೇಶ ವಿರುದ್ಧದ U-19 ಏಷ್ಯಾಕಪ್ ಪಂದ್ಯದಲ್ಲಿ ನೇಪಾಳ ಕ್ರಿಕೆಟ್ ತಂಡದ ಬೌಲರ್ ಯುವರಾಜ ಖತ್ರಿ ಅವರು ವಿಕೆಟ್‌ ಪಡೆದ ಖುಚಿಯಲ್ಲಿ ಚಿತ್ರವಿಚಿತ್ರ ಸಂಭ್ರಮಾಚರಣೆ ಮಾಡಲು ಹೋಗಿ ಗಾಯಗೊಂಡು ಮೈದಾನದಿಂದ ನಿರ್ಗಮಿಸಬೇಕಾಯಿತು. ಇದರಿಂದಾಗಿ ಗೆಲ್ಲುವ ಸ್ಥಿತಿಯಲ್ಲಿದ್ದ ನೇಪಾಳ ಪಂದ್ಯವನ್ನೇ ಸೋಲಬೇಕಾಯಿತು. ಪಂದ್ಯದಲ್ಲಿ ಯುವರಾಜ ಅವರು ನಾಲ್ಕು ವಿಕೆಟ್‌ಗಳನ್ನು ಪಡೆದು ಅದ್ಭುತ ಫಾರ್ಮ್‌ನಲ್ಲಿದ್ದರು ಆದರೆ ಅವರ ಸಂತೋಷವು ಶೀಘ್ರದಲ್ಲೇ … Continued

ಬಾಂಗ್ಲಾದೇಶ | ಬಂಧಿತ ಹಿಂದೂ ಸ್ವಾಮೀಜಿಯ ವಕೀಲರ ಮೇಲೆ ದಾಳಿ ; ಐಸಿಯುನಲ್ಲಿ ಚಿಕಿತ್ಸೆ : ಇಸ್ಕಾನ್

ನವದೆಹಲಿ: ಬಂಧಿತ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿಯ ಪರ ವಾದಿಸುತ್ತಿರುವ ಬಾಂಗ್ಲಾದೇಶದ ವಕೀಲರ ಮೇಲೆ “ಇಸ್ಲಾಮಿಸ್ಟ್‌ಗಳು ಅವರ ಮನೆಯಲ್ಲಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ” ಮತ್ತು ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಇಸ್ಕಾನ್ ಇಂಡಿಯಾ ಹೇಳಿಕೊಂಡಿದೆ. ದೇಶದ್ರೋಹದ ಆರೋಪದ ಮೇಲೆ ಸನ್ಯಾಸಿಯ ಬಂಧನದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂಸಾಚಾರದ … Continued