ಕಂಪನಿಯ ಚೀಫ್‌ ಹ್ಯಾಪಿನೆಸ್‌ ಆಫೀಸರ್‌ ಆಗಿ ನೇಮಕಗೊಂಡ ನಾಯಿ…! ಇದು ವಿಶೇಷ ಹುದ್ದೆಯಂತೆ…!! ಏನಿದರ ಕೆಲಸ..?

ಪ್ರತಿಯೊಂದು ಕಚೇರಿಯಲ್ಲೂ ಉತ್ಸಾಹ ಹೆಚ್ಚಿಸುವುದು ಮತ್ತು ʼನಗುʼ ಹೆಚ್ಚು ಸಮಯ ಇರುವಂತೆ ಮಾಡುವವರು ಯಾರಾದರೂ ಇದ್ದಿದ್ದರೆ… ಎಂದು ಊಹಿಸಿಕೊಂಡರೇ ಖುಷಿಯಾಗುತ್ತದೆ. ಈಗ ಹೈದರಾಬಾದ್‌ನಲ್ಲಿರುವ ಒಂದು ಕಂಪನಿಯು ಇದನ್ನೇ ಮಾಡಲು ಹೊರಟಿದೆ. ಹಲವರು ಇದನ್ನು ಇಷ್ಟಪಟ್ಟಿದ್ದಾರೆ. ಉದ್ಯಮಿ ರಾಹುಲ್ ಅರೆಪಾಕ ಎಂಬವರು ಇತ್ತೀಚೆಗೆ ತಮ್ಮ ಕಂಪನಿಯಲ್ಲಿ ಹೊಸದಾಗಿ ನೇಮಕಗೊಂಡ ವಿಶೇಷ ಉದ್ಯೋಗಿಯೊಬ್ಬರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ … Continued

ಮಣಿಪುರ | ಸರ್ಕಾರ ರಚಿಸಲು 44 ಶಾಸಕರು ಸಿದ್ಧ ; ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕನ ಹೇಳಿಕೆ

ಇಂಫಾಲ : ಮಣಿಪುರದಲ್ಲಿ ಹೊಸ ಸರ್ಕಾರ ರಚಿಸಲು 44 ಶಾಸಕರು ಸಿದ್ಧರಿದ್ದಾರೆ ಎಂದು ಬಿಜೆಪಿ ಶಾಸಕ ಥೋಕ್ಚೋಮ್ ರಾಧೇಶ್ಯಾಮ ಸಿಂಗ್ ಅವರು ಬುಧವಾರ ರಾಜ್ಯಪಾಲ ಅಜಯಕುಮಾರ ಭಲ್ಲಾ ಅವರನ್ನು ಭೇಟಿ ಮಾಡಿದ ನಂತರ ಹೇಳಿದ್ದಾರೆ. ರಾಧೆಶ್ಯಾಮ ಸಿಂಗ್‌ ಮತ್ತು ಇತರ ಒಂಬತ್ತು ಶಾಸಕರು ಬುಧವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದರು. “ಜನರ ಇಚ್ಛೆಯಂತೆ 44 ಶಾಸಕರು ಸರ್ಕಾರ … Continued

ವೀಡಿಯೊ | ಬುದ್ಧಿವಂತಿಕೆಯಿಂದ ವಿದ್ಯುತ್ ತಂತಿ ಬೇಲಿ ದಾಟಿದ ಆನೆ : ‘ಇದು ಮುಂದಿನ ಹಂತದ ಬುದ್ಧಿಮತ್ತೆ’ ಎಂದ ಇಂಟರ್ನೆಟ್‌-ವೀಕ್ಷಿಸಿ

ಪ್ರಾಣಿಗಳು ತಮ್ಮ ಸಹಜ ಬುದ್ಧಿಮತ್ತೆಯಿಂದ ನಮ್ಮನ್ನು ವಿಸ್ಮಯಗೊಳಿಸುತ್ತಲೇ ಇವೆ, ಮತ್ತು ಅಂತಹ ಒಂದು ಬುದ್ಧಿವಂತಿಕೆಯ ಪ್ರಸ್ತುತಿಯಲ್ಲಿ ಆನೆಯೊಂದು ಸುರಕ್ಷಿತವಾಗಿ ವಿದ್ಯುತ್ ಬೇಲಿಯನ್ನು ಚತುರವಾಗಿ ದಾಟುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಈ ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು X ನಲ್ಲಿ ಹಂಚಿಕೊಂಡಿದ್ದಾರೆ. ಈ ಆನೆ ಭೌತಶಾಸ್ತ್ರದಲ್ಲಿ ಪ್ರವೀಣ. … Continued

ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್‌ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್‌..! ಯಾರು ಗೊತ್ತೆ..?

ನವದೆಹಲಿ: ಒಂದು ದಶಕದ ಹಿಂದೆ, ಈಗ X ಎಂದು ಕರೆಯಲ್ಪಡುವ ಈ ಹಿಂದಿನ ಟ್ವಿಟರ್‌ ಕಂಪನಿಗೆ ಸೇರದಂತೆ ತಡೆಯಲು ಗೂಗಲ್ ಕಂಪನಿಯು ಭಾರತೀಯ-ಅಮೇರಿಕನ್ ಉದ್ಯಮಿಯೊಬ್ಬರಿಗೆ 100 ಮಿಲಿಯನ್ ಡಾಲರ್‌ (ಈಗ ಸುಮಾರು 854 ಕೋಟಿ ರೂ.) ಗಳಷ್ಟು ಪಾವತಿಸಿದ ವಿಷಯ ಈಗ ಬಹಿರಂಗವಾಗಿದೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ, ಯೂಟ್ಯೂಬ್ … Continued

ರಾಜ್ಯಸಭೆ ಪ್ರವೇಶಿಸಲು ಸಿದ್ಧರಾದ ನಟ ಕಮಲ ಹಾಸನ್‌

ಚೆನ್ನೈ: ಅಭಿಜಾತ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ರಾಜ್ಯಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ)ಪಕ್ಕಕ್ಕೆ ಡಿಎಂಕೆ ಕೋಟಾದ ಒಂದು ಸ್ಥಾನವನ್ನು ಮೀಸಲಿಡಲಾಗಿದೆ. ಡಿಎಂಕೆಯು ಪಿ ವಿಲ್ಸನ್ ಅವರನ್ನು ಎರಡನೇ ಅವಧಿಗೆ … Continued

ಭಾರತದ ಸಾಮರ್ಥ್ಯ ಬಹಿರಂಗ…| ಪಾಕಿಸ್ತಾನದ ಮುರಿದ್ ಸೇನಾ ನೆಲೆಯ ಭೂಗತ ಸೌಲಭ್ಯಗಳ ಮೇಲೆ ದಾಳಿ ನಡೆಸಿದ್ದನ್ನು ತೋರಿಸಿದ ಉಪಗ್ರಹ ಚಿತ್ರಗಳು…!

ನವದೆಹಲಿ: ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಮುರಿಯದ್ ವಾಯುನೆಲೆಯ ಮೇಲೆ ನಡೆದ ವಾಯುದಾಳಿಗಳು ಭೂಗತ ಮಿಲಿಟರಿ ಸೌಲಭ್ಯವನ್ನು ಗುರಿಯಾಗಿರಿಸಿಕೊಂಡಿರಬಹುದು ಎಂದು ಹೊಸದಾಗಿ ಬಿಡುಗಡೆಯಾದ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಗಳು ತೋರಿಸಿವೆ. ಬುಧವಾರದ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಗಳು ಪಾಕಿಸ್ತಾನದ ಮುರಿಯದ್ ವಾಯುನೆಲೆಗೆ ವ್ಯಾಪಕ ಹಾನಿಯನ್ನು ಬಹಿರಂಗಪಡಿಸಿವೆ, ಪಾಕಿಸ್ತಾನ ವಾಯುಪಡೆಯ ಭೂಮಿ ಅಡಿಯ ಮಿಲಿಟರಿ ಸೌಲಭ್ಯದಿಂದ … Continued

ಕನ್ನಡ ಭಾಷೆ ಜನಿಸಿದ್ದು ತಮಿಳಿನಿಂದ : ವಿವಾದ ಸೃಷ್ಟಿಸಿದ ನಟ ಕಮಲ ಹಾಸನ್‌ ಹೇಳಿಕೆ

ತಮಿಳು ಮೆಗಾಸ್ಟಾರ್ ಕಮಲ್ ಹಾಸನ್ ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಬಿಡುಗಡೆಯಾಗುವ ವಾರಗಳ ಮೊದಲು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ “ನಿಮ್ಮ ಭಾಷೆ (ಕನ್ನಡ) ತಮಿಳಿನಿಂದ ಜನಿಸಿದೆ” ಎಂಬ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ನಟ ತಮ್ಮ ಭಾಷಣವನ್ನು “ಉಯಿರೆ ಉರವೆ ತಮಿಳೆ” ಎಂಬ ವಾಕ್ಯದೊಂದಿಗೆ ಪ್ರಾರಂಭಿಸಿದರು, ಇದರರ್ಥ “ನನ್ನ ಜೀವನ ಮತ್ತು ನನ್ನ ಕುಟುಂಬ ತಮಿಳು … Continued

ಜೂನ್‌ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ : ಜೂನ್ ನಿಂದ ಸೆಪ್ಟೆಂಬರ್ ಅವಧಿಗೆ ಹವಾಮಾನ ಇಲಾಖೆ ತನ್ನ ಮಾನ್ಸೂನ್ ಮುನ್ಸೂಚನೆಯನ್ನು ಸ್ವಲ್ಪ ಪರಿಷ್ಕರಿಸಿದೆ, ದೀರ್ಘಾವಧಿಯ ಸರಾಸರಿಯ 106 ಪ್ರತಿಶತದಷ್ಟು ಮಳೆಯಾಗುವ ನಿರೀಕ್ಷೆಯಿದೆ ಎಂದು ಅದು ಹೇಳಿದ್ದು, ಇದು ಹಿಂದಿನ ಅಂದಾಜಿನ 105 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಈ ಮುನ್ಸೂಚನೆಯಲ್ಲಿ ಪ್ಲಸ್ ಅಥವಾ ಮೈನಸ್ ಶೇಕಡಾ 4 ರಷ್ಟು ಸಂಭವನೀಯ ವ್ಯತ್ಯಾಸವಾಗಬಹುದು ಎಂದು ಹೇಳಿದೆ. … Continued

ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ 7 ಮಂದಿ ; ಕಾರಣ..?

ಪಂಚಕುಲ: ಹರಿಯಾಣದ ಪಂಚಕುಲದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಒಂದೇ ಕುಟುಂಬದ ಆರು ಸದಸ್ಯರು ಸಾವಿಗೀಡಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. “ಪ್ರಾಥಮಿಕವಾಗಿ ನೋಡಿದರೆ ಇದು ಆತ್ಮಹತ್ಯೆಯ ವಿಷಯವೆಂದು ತೋರುತ್ತದೆ. ಆದಾಗ್ಯೂ, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪಂಚಕುಲ ಉಪ ಪೊಲೀಸ್ ಆಯುಕ್ತ ಹಿಮಾದ್ರಿ ಕೌಶಿಕ ಅವರು ಹೇಳಿದ್ದಾರೆ. ಪಂಚಕುಲದ ಸೆಕ್ಟರ್ … Continued

ಪೊಲೀಸರು ಮೂವರನ್ನು ರಸ್ತೆಯಲ್ಲಿ ಕೂಡ್ರಿಸಿ ಲಾಠಿಯಿಂದ ಥಳಿಸುತ್ತಿರುವ ವೀಡಿಯೊ ವೈರಲ್ ; ಪೊಲೀಸ್‌ ಅಮಾನತು

ಆಂಧ್ರಪ್ರದೇಶದ (Andhra Pradesh) ಗುಂಟೂರು ಜಿಲ್ಲೆಯ ಐತಾನಗರದಲ್ಲಿ ಕಾನ್‌ಸ್ಟೆಬಲ್ ಚಿರಂಜೀವಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಪೊಲೀಸರು ಮೂವರಿಗೆ ನಡು ರಸ್ತೆಯಲ್ಲಿ ಸಾರ್ವಜನಿಕವಾಗಿ ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ಪೊಲೀಸರು ಸಾರ್ವಜನಿಕವಾಗಿ ಆರೋಪಿಗಳಿಗೆ ಲಾಠಿಯಿಂದ ಹೊಡೆದು ಶಿಕ್ಷೆ ನೀಡಿರುವ ವೀಡಿಯೊ ವೈರಲ್‌ ಆದ ನಂತರ ಇದು ವಿವಾದಕ್ಕೆ ಕಾರಣವಾಗಿದ್ದು, ಅದಕ್ಕೆ … Continued