ವೀಡಿಯೊಗಳು | ‘ನಿಮಗೆ ನಾಚಿಕೆಯಾಗಬೇಕು, ಸಾಮೂಹಿಕ ಕೊಲೆಗಾರ’: ವಾಷಿಂಗ್ಟನ್‌ನಲ್ಲಿ ಅಸಿಮ್ ಮುನೀರ್ ಗೆ ಪ್ರತಿಭಟನೆಯ ಬಿಸಿ-ವೀಕ್ಷಿಸಿ

ಪಾಕಿಸ್ತಾನಿ ಜನರಲ್ ಸೈಯದ್ ಅಸಿಮ್ ಮುನೀರ್ ವಾಷಿಂಗ್ಟನ್‌ನಲ್ಲಿದ್ದಾಗ ಅವರನ್ನು ನಿಂದಿಸಲಾಯಿತು. ಕೆಲವು ಪಾಕಿಸ್ತಾನಿ ಪ್ರತಿಭಟನಾಕಾರರು ಮತ್ತು ಪಾಕಿಸ್ತಾನಿ ಮೂಲದ ಜನರು ಮುನೀರ್ ಅವರ ಹೋಟೆಲ್ ಹೊರಗೆ ಜಮಾಯಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನೀರ್ ಹೋಟೆಲ್‌ನಿಂದ ಹೊರಬರುವಾಗ ಪ್ರತಿಭಟನಾಕಾರರು – “ಪಾಕಿಸ್ತಾನಿಯೋಂ ಕೆ ಕಾತಿಲ್,” “ನೀವು ಹೇಡಿ,” ಮತ್ತು “ನಿಮಗೆ ನಾಚಿಕೆಯಾಗಬೇಕು” – ಎಂಬ ಘೋಷಣೆಗಳನ್ನು … Continued

ವೀಡಿಯೊ..| ಕೊಡೈಕೆನಾಲ್​​​ನಲ್ಲಿ ಕರ್ನಾಟಕದ ಪ್ರವಾಸಿಗರ ₹500 ನೋಟುಗಳ ಬಂಡಲ್ ಗಳನ್ನೇ ಕದ್ದೊಯ್ದ ಕೋತಿ ಮುಂದೆ ಮಾಡಿದ್ದೇನು ಗೊತ್ತೆ..?

ಕೊಡೈಕೆನಾಲ್: ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡೈಕೆನಾಲ್‌ನ ಗುಣ ಗುಹೆಗಳ ಬಳಿ ವ್ಯಕ್ತಿಯೊಬ್ಬರಿಂದ 500 ರೂಪಾಯಿ ನೋಟುಗಳ ಬಂಡಲ್ ಅನ್ನು ಕೋತಿಯೊಂದು ಕದ್ದೊಯ್ದಿದೆ. ನಂತರ ಮರದ ಮೇಲೆ ಏರಿದ ಕೋತಿ ಅಲ್ಲಿಂದ ನೋಟುಗಳನ್ನು ಕೆಳಕ್ಕೆ ಎಸೆದಿದೆ. 500 ರೂಪಾಯಿ ನೋಟುಗಳ ಅನೇಕ ಬಂಡಲ್‌ಗಳನ್ನು ಒಯ್ದಿದ್ದ ಕರ್ನಾಟಕದ ಪ್ರವಾಸಿಗರಿಂದ ಮಂಗ ಹಣವನ್ನು ಕಸಿದುಕೊಂಡಿದೆ. ಮಂಗ ಅನಿರೀಕ್ಷಿತವಾಗಿ ಪ್ರತ್ಯಕ್ಷವಾಯಿತು. … Continued

ಎರಡು ಹಂತಗಳಲ್ಲಿ ಜನಗಣತಿ ; ಜನಗಣತಿಯ ದಿನಾಂಕ ಪ್ರಕಟಿಸಿದ ಕೇಂದ್ರ

ನವದೆಹಲಿ: 2011ರ ನಂತರ ಭಾರತದಲ್ಲಿ ಜನಗಣತಿ ನಡೆಯಲಿದ್ದು, ಇದನ್ನು ಕ್ರಮವಾಗಿ ಅಕ್ಟೋಬರ್ 1, 2026 ಮತ್ತು ಮಾರ್ಚ್ 1, 2027 ರಂದು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಪ್ರಕಟಿಸಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಎಂಬುದು ‘ಸಾಮಾನ್ಯ ನಾಗರಿಕರ’ ಹೆಸರು, ದಿನಾಂಕ ಮತ್ತು ಜನ್ಮ ಸ್ಥಳ, ರಾಷ್ಟ್ರೀಯತೆ, ಉದ್ಯೋಗ, ವಿಳಾಸ, … Continued

ವೀಡಿಯೊ.| ಸೈಪ್ರಸ್‌ ಭೇಟಿ ವೇಳೆ ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿ ಗೌರವ ಸೂಚಿಸಿದ ಅಲ್ಲಿನ ನಾಯಕಿ…!

ನವದೆಹಲಿ: ಸೈಪ್ರಸ್ ದೇಶದ ನಿಕೋಸಿಯಾ ಕೌನ್ಸಿಲ್ ಸದಸ್ಯೆ ಮೈಕೆಲಾ ಕೈಥ್ರಿಯೋಟಿ ಮ್ಲಾಪಾ ಅವರು ಗೌರವ ಸೂಚಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ. ಐತಿಹಾಸಿಕ ನಿಕೋಸಿಯಾ ಕೇಂದ್ರದಲ್ಲಿ ಮ್ಲಾಪಾ ಅವರು ಪ್ರಧಾನಿ ಮೋದಿಯವರನ್ನು ಸ್ವಾಗತಿಸುತ್ತಿದ್ದರು ಈ ವೇಳೆ ಅವರು ಪ್ರಧಾನಿ ಮೋದಿ ಅವರ ಪಾದಕ್ಕೆರಗಿ ನಮಸ್ಕರಿಸಿದ್ದಾರೆ. ಇದನ್ನು ಹೆಚ್ಚಾಗಿ ಭಾರತೀಯ ಸಂಪ್ರದಾಯದಲ್ಲಿ ಅನುಸರಿಸುತ್ತಾರೆ. … Continued

ಅಪರೂಪದ ಸಾಧನೆ | ಟಿ20 ಪಂದ್ಯದಲ್ಲಿ ಸತತ 5 ಎಸೆತಗಳಲ್ಲಿ 5 ವಿಕೆಟ್ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ದಿಗ್ವೇಶ್ ರಾಥಿ-ವೀಡಿಯೊ ವೀಕ್ಷಿಸಿ

ಐಪಿಎಲ್ 2025 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪರ ಆಡಿದ್ದ ಲೆಗ್-ಸ್ಪಿನ್ನರ್ ದಿಗ್ವೇಶ ರಾಥಿ, ಅಪರೂಪದ ಬೌಲಿಂಗ್ ಸಾಧನೆಗಾಗಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, 24 ವರ್ಷದ ಆಟಗಾರ ಸ್ಥಳೀಯ ಟಿ20 ಲೀಗ್ ಪಂದ್ಯವೊಂದರಲ್ಲಿ ಸತತ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಈ … Continued

ಅಂಡಮಾನ್ ಸಮುದ್ರದಲ್ಲಿ ಪ್ರಮುಖ ತೈಲ ನಿಕ್ಷೇಪದ ಶೋಧದ ಸನಿಹದಲ್ಲಿ ಭಾರತ ; ದೇಶಕ್ಕೆ ತೈಲ ಜಾಕ್‌ಪಾಟ್..?

ನವದೆಹಲಿ: ಅಂಡಮಾನ್ ಸಮುದ್ರದಲ್ಲಿ ಮಹತ್ವದ ತೈಲ ನಿಕ್ಷೇಪ ಪತ್ತೆಯಾಗುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳು ಸೂಚಿಸುತ್ತಿದ್ದು, ಭಾರತಕ್ಕೆ ಒಂದು ಪ್ರಮುಖ ಪ್ರಗತಿಯ ನಿರೀಕ್ಷೆಯಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ ಸಿಂಗ್ ಪುರಿ, ಈ ಸಂಭಾವ್ಯ ಶೋಧ ಮತ್ತು ಗಯಾನಾದಲ್ಲಿ ಪತ್ತೆಯಾದ ಬೃಹತ್ ತೈಲ ನಿಕ್ಷೇಪಗಳ ನಡುವೆ ಹೋಲಿಕೆಗಳನ್ನು ಮಾಡಿದ್ದಾರೆ, ಅದು ಪ್ರಸ್ತುತ ಸುಮಾರು … Continued

ವೀಡಿಯೊ | ನಾವು ಭಾರತದ ಐಪಿಎಲ್ ಫ್ಲಡ್‌ಲೈಟ್‌ ಆಫ್‌ ಮಾಡಿದ್ದೇವೆ : ವಿಚಿತ್ರ ಹೇಳಿಕೆಯಿಂದ ನಗೆಪಾಟಲಿಗೀಡಾದ ಪಾಕ್ ರಕ್ಷಣಾ ಸಚಿವ-ವೀಕ್ಷಿಸಿ

ನವದೆಹಲಿ: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ತಮ್ಮ ವಿಲಕ್ಷಣ ಹೇಳಿಕೆಗಳಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ “ಐಪಿಎಲ್ ಫ್ಲಡ್‌ಲೈಟ್‌ಗಳನ್ನು ಪಾಕಿಸ್ತಾನದವರು ಹ್ಯಾಕಿಂಗ್ ಮಾಡಿದ್ದರು” ಎಂದು ಹೇಳುವ ಮೂಲಕ ಮತ್ತೊಮ್ಮೆ ನಗೆಪಾಟಲಿಗೀಡಾಗಿದ್ದಾರೆ. ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ ಖವಾಜಾ ಆಸಿಫ್ ಅವರು , ತಮ್ಮ ದೇಶದ “ಸೈಬರ್ ವಾರಿಯರ್ಸ್” ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ … Continued

ಅಹಮದಾಬಾದ್ ವಿಮಾನ ದರಂತ | ವಿಮಾನ ಬಿದ್ದು ಹೊತ್ತಿ ಉರಿಯುತ್ತಿದ್ದ ಸ್ಥಳದಿಂದ ಬದುಕುಳಿದ ಏಕೈಕ ವ್ಯಕ್ತಿ ನಡೆದು ಬರುವ ಹೊಸ ವೀಡಿಯೊ ವೈರಲ್‌

ಗಾಂಧಿನಗರ: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ-171 ವಿಮಾನ (Air India) ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಾಸಕುಮಾರ ರಮೇಶ ಅವರು, ವಿಮಾನ ಅಪಘಾತವಾದ ಸ್ಥಳದಿಂದ ಹೊರಬರುತ್ತಿರುವುದನ್ನು ತೋರಿಸುವ ಹೊಸ ವೀಡಿಯೊವೊಂದು ಹೊರಬಿದ್ದಿದೆ. ಹೊತ್ತಿ ಉರಿಯುತ್ತಿರುವ ವಿಮಾನದಿಂದ ವ್ಯಕ್ತಿ ಪಾರಾಗಿ ಬಂದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಳದ ಕ್ಯಾಂಪಸ್‌ನಿಂದ ಅವರು ಹೊರಗೆ ಹೋಗುತ್ತಿದ್ದಾಗ, ಬೆಂಕಿ … Continued

ಕಾಂಗ್ರೆಸ್‌ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭಾನುವಾರ ದೆಹಲಿಯಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅವರನ್ನು ಆಸ್ಪತ್ರೆಯ ಗ್ಯಾಸ್ಟ್ರೋ ವಿಭಾಗದಲ್ಲಿ ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ದೃಢಪಡಿಸಿದೆ. ಈ ತಿಂಗಳಲ್ಲಿ 78 ವರ್ಷದ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದು ಎರಡನೇ ಬಾರಿ. ಅಧಿಕೃತ ಹೇಳಿಕೆಯ ಪ್ರಕಾರ, … Continued

ವೀಡಿಯೊಗಳು…| ಪುಣೆ : ಇಂದ್ರಯಾಣಿ ನದಿ ಪ್ರವಾಸಿ ಸೇತುವೆ ಕುಸಿತ ; ಹಲವರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ

ಪುಣೆ: ಭಾನುವಾರ ಮಧ್ಯಾಹ್ನ ಪುಣೆ ಜಿಲ್ಲೆಯ ದೇಹುವಿನ ಕುಂಡ್ಮಲ ಪ್ರದೇಶದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಪಾದಾಚಾರಿ ಸೇತುವೆ ಕುಸಿದು ಹಲವಾರು ಜನರು ನದಿಯ ರಭಸದ ಪ್ರವಾಹಕ್ಕೆ ಸಿಲುಕಿ ಮುಳುಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್ಯಾಹ್ನ 3:30 ರ ಸುಮಾರಿಗೆ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವಿಗೀಡಾಗಿರುವುದು ಎಂದು ದೃಢಪಟ್ಟಿದೆ, ಆದರೆ ಇನ್ನೂ ಅನೇಕರು ಕಾಣೆಯಾಗಿದ್ದಾರೆ. … Continued