ನಿತಿನ್ ಗಡ್ಕರಿ ವಿರುದ್ಧ ಅಪಪ್ರಚಾರ ಆರೋಪ; ನಾಲ್ವರು ಇನ್‌ಫ್ಲುವೆನ್ಸರ್‌ಗಳ ವಿರುದ್ಧ ಎಫ್‌ಐಆರ್

ನಾಗ್ಪುರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಸಂಚು ರೂಪಿಸಿ ಅಪಪ್ರಚಾರ ನಡೆಸಿದ ಆರೋಪದಡಿ ಬಿಹಾರದ ಖ್ಯಾತ ಯೂಟ್ಯೂಬರ್ ಮಣೀಶ ಕಶ್ಯಪ್ ಸೇರಿದಂತೆ ನಾಲ್ವರು ಸಾಮಾಜಿಕ ಜಾಲತಾಣ ಇನ್‌ಫ್ಲುವೆನ್ಸರ್‌ಗಳ ವಿರುದ್ಧ ನಾಗ್ಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಣೀಶ ಕಶ್ಯಪ್ ಹೊರತುಪಡಿಸಿ, ದೇಸಿ ಬಾಯ್ಸ್ ಎನ್‌ಸಿಆರ್ (Desi … Continued

ಭಾರತ ಸೇರಿ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ 500%ರವರೆಗೆ ಸುಂಕ ವಿಧಿಸುವ ಮಸೂದೆಗೆ ಟ್ರಂಪ್ ಬೆಂಬಲ ; ವರದಿ

ವಾಷಿಂಗ್ಟನ್ : ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸುವ ದೇಶಗಳ ವಿರುದ್ಧ ಶೇ.500ರವರೆಗೆ ಆಮದು ಸುಂಕ ವಿಧಿಸಲು ಅವಕಾಶ ಕಲ್ಪಿಸುವ ಪ್ರಸ್ತಾವಿತ ‘ಸ್ಯಾಂಕ್ಷನಿಂಗ್ ರಷ್ಯಾ ಆಕ್ಟ್’ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ದಿವಂಗತ ರಿಪಬ್ಲಿಕನ್ ಸೆನೆಟರ್ ಲಿಂಡ್ಸಿ ಗ್ರಹಾಂ ಹಾಗೂ ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಜಂಟಿಯಾಗಿ ಮಂಡಿಸಿದ್ದ … Continued

ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ

ಭೋಪಾಲ್:  ಪ್ರೀತಿಗೆ ಮಾತುಗಳ ಅಗತ್ಯವಿಲ್ಲ… ನಿಷ್ಠೆಗೆ ಭಾಷೆಯ ಅಗತ್ಯವಿಲ್ಲ… ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ಸಂಬಂಧಗಳ ನಿಜವಾದ ಅರ್ಥವನ್ನು ಬದುಕಿನ ಕೊನೆಯ ಕ್ಷಣದವರೆಗೂ ತೋರಿಸಿಬಿಡುತ್ತವೆ. ಅಂತಹ ಮನಮಿಡಿಯುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. 15 ವರ್ಷಗಳ ಕಾಲ ತನ್ನ ಯಜಮಾನನೇ ತನ್ನ ಪ್ರಪಂಚ ಎಂದು ಬದುಕಿದ ‘ದುಗ್ಗು’ ಎಂಬ ಸಾಕು ನಾಯಿ, ಮೃತಪಟ್ಟ ಯಜಮಾನನ ಅಂತಿಮ … Continued

2022ರಲ್ಲಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸದಂತೆ ರಷ್ಯಾವನ್ನು ತಡೆದದ್ದು ಮೋದಿ : ಪೋಲೆಂಡ್ ಸಚಿವರ ಹೇಳಿಕೆ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ಪ್ರಯತ್ನಗಳಲ್ಲಿ ಭಾರತದ ಪಾತ್ರವನ್ನು ಪೋಲೆಂಡ್ ಪ್ರಶಂಸಿಸಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗಂಭೀರವಾಗಿ ಪರಿಗಣಿಸುವ ಕೆಲವೇ ವಿಶ್ವ ನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಒಬ್ಬರಾಗಿದ್ದು, ಅವರ ಮಾತಿಗೆ ಪುತಿನ್ ವಿಶೇಷ ಮಹತ್ವ ನೀಡುತ್ತಾರೆ ಎಂದು ಪೋಲೆಂಡ್‌ನ ಉಪ ವಿದೇಶಾಂಗ ಸಚಿವ ವ್ಲಾಡಿಸ್ಲಾವ್ ತಿಯೋಫಿಲ್ … Continued

ಭೋಜಶಾಲಾ–ಕಮಾಲ್ ಮೌಲಾ ಪ್ರಕರಣ: ಶುಕ್ರವಾರದ ನಮಾಜ್‌ಗೆ ಮುಸ್ಲಿಮರಿಗೆ ಪ್ರತ್ಯೇಕ ಸ್ಥಳ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ನವದೆಹಲಿ : ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ–ಕಮಾಲ್ ಮೌಲಾ ಮಸೀದಿ ಸಂಕೀರ್ಣವನ್ನು ಹಿಂದೂ ದೇವಾಲಯವೆಂದು ಘೋಷಿಸಿದ್ದ ಮಧ್ಯಪ್ರದೇಶ ಹೈಕೋರ್ಟ್‌ನ ಮೇ 15ರ ತೀರ್ಪನ್ನು ಪ್ರಶ್ನಿಸಿ ಮುಸ್ಲಿಮ್‌ ಪಕ್ಷದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಸೀಮಿತ ಮಧ್ಯಂತರ ಪರಿಹಾರ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ, ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ. ಮೋಹನ … Continued

ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣ : ಎಲ್‌ಇಟಿ ಉಗ್ರ ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್

ನವದೆಹಲಿ: ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯವು ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಹೊರಡಿಸಿದೆ. ಪಹಲ್ಗಾಮ್ ಉಗ್ರ ದಾಳಿಯ ತನಿಖೆಗೆ ಸಂಬಂಧಿಸಿದ ಪೂರಕ ಆರೋಪಪಟ್ಟಿಯಲ್ಲಿ (Supplementary Chargesheet) ಹಫೀಜ್ ಸಯೀದ್ ನನ್ನು ಎನ್‌ಐಎ ಹೆಸರಿಸಿದ್ದು, … Continued

ತಂದೆ-ತಾಯಿ ಕೊಂದಿದ್ದ ಆನೆಯಿಂದ ಪಾರಾಗಲು 2 ನದಿ ದಾಟಿ ಬಂದಿದ್ದ ಕುಟುಂಬ; 14 ವರ್ಷದ ಬಳಿಕ ಅಲ್ಲಿಗೂ ಬಂದು ಮತ್ತಿಬ್ಬರನ್ನು ಸಾಯಿಸಿದ ಅದೇ ಆನೆ !

ಕಠ್ಮಂಡು: ತಂದೆ-ತಾಯಿಯನ್ನು ಬಲಿ ಪಡೆದಿದ್ದ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಮನೆ ಮಾರಾಟ ಮಾಡಿ, ಅದು ಜಾಡು ಹಿಡಿದು ಬರಬಾರದೆಂದು ಎರಡು ದೊಡ್ಡ ನದಿಗಳನ್ನು ದಾಟಿ ಕುಟುಂಬ ಸಮೇತ ವಲಸೆ ಹೋಗಿ ಬೇರೆ ಪ್ರದೇಶದಲ್ಲಿ ಹೊಸ ಜೀವನ ಆರಂಭಿಸಿದ್ದ ವ್ಯಕ್ತಿಗೆ ವಿಧಿ ಮತ್ತೊಮ್ಮೆ ಕ್ರೂರ ಮುಖ ತೋರಿಸಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಅದೇ ಆನೆ ಇವರ ಹೊಸ … Continued

2020ರ ದೆಹಲಿ ಗಲಭೆ : ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ದೋಷಿ

ನವದೆಹಲಿ : 2020ರ ಈಶಾನ್ಯ ದೆಹಲಿ ಗಲಭೆ ವೇಳೆ ನಡೆದ ಗುಪ್ತಚರ ಇಲಾಖೆ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿರುವ ದೆಹಲಿಯ ಕರ್ಕರಡೂಮಾ ನ್ಯಾಯಾಲಯವು ಮಾಜಿ ಆಮ್ ಆದ್ಮಿ ಪಕ್ಷದ (ಎಎಪಿ) ಕೌನ್ಸಿಲರ್ ತಾಹಿರ್ ಹುಸೇನ್ ಅವರನ್ನು ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸೋಮವಾರ ತೀರ್ಪು ಪ್ರಕಟಿಸಿದೆ. ಆದರೆ, ಅವರ … Continued

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ : ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆ ಹಣದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಸಮ್ಮತ ಹಾಗೂ ನಿಗದಿತ ಅವಧಿಯೊಳಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸೋಮವಾರ (ಜುಲೈ 13) ನೋಟಿಸ್ ಜಾರಿಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ … Continued