ಟಿ20 ಕ್ರಿಕೆಟ್‌ : ಸತತ 5 ಎಸೆತಗಳಲ್ಲಿ 5 ವಿಕೆಟ್‌ ಪಡೆದ ಕರ್ಟಿಸ್‌ ಕ್ಯಾಂಪರ್‌…!

ಐರ್ಲೆಂಡ್ ಆಲ್‌ರೌಂಡರ್ ಕರ್ಟಿಸ್ ಕ್ಯಾಂಪರ್(Curtis Campher) ಟಿ20 ಕ್ರಿಕೆಟ್‌ನಲ್ಲಿ ಐದು ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಹಾಗೂ ಈ ಸಾಧನೆ ಮಾಡಿದ ಮೊದಲನೇ ಆಟಗಾರ ಎನಿಸಿಕೊಂಡರು. ಐರ್ಲೆಂಡ್‌ನಲ್ಲಿ ಅಂತರ-ಪ್ರಾಂತೀಯ ಟಿ20 ಟ್ರೋಫಿ (Inter-Provincial T20 trophy) ಟೂರ್ನಿಯ ನಾರ್ತ್-ವೆಸ್ಟ್ ವಾರಿಯರ್ಸ್ ವಿರುದ್ಧ ಮನ್‌ಸ್ಟರ್ ರೆಡ್ಸ್ (Munster Reds) ಪರ ಆಡುವಾಗ ಕ್ಯಾಂಪರ್ … Continued

ಅಫ್ಘಾನಿಸ್ತಾನದಲ್ಲಿ 45 ವರ್ಷದ ವ್ಯಕ್ತಿ ಜೊತೆ 6 ವರ್ಷದ ಬಾಲಕಿಯ ವಿವಾಹ…! ಮನೆಗೆ ಬಾಲಕಿಯನ್ನು ಕರೆದೊಯ್ಯದಂತೆ ತಡೆದ ತಾಲಿಬಾನ್‌

ದಕ್ಷಿಣ ಅಫ್ಘಾನಿಸ್ತಾನದಲ್ಲಿ ಆರು ವರ್ಷದ ಬಾಲಕಿಯನ್ನು 45 ವರ್ಷದ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ವರದಿಯಾಗಿದೆ. ಅಮೆರಿಕ ಮೂಲದ ಅಫಘಾನ್ ಮಾಧ್ಯಮ Amu.tv ಪ್ರಕಾರ, ಈ ಮದುವೆ ಮಾರ್ಜಾ ಜಿಲ್ಲೆಯಲ್ಲಿ ನಡೆದಿದ್ದು, ಇಬ್ಬರು ಪತ್ನಿಯರನ್ನು ಹೊಂದಿರುವ ಆ ವ್ಯಕ್ತಿ ಮದುವೆಗೆ ಪ್ರತಿಯಾಗಿ ಹುಡುಗಿಯ ಕುಟುಂಬಕ್ಕೆ ಹಣ ನೀಡಿದ್ದಾನೆ ಎನ್ನಲಾಗಿದೆ. ತಾಲಿಬಾನ್ ಆಡಳಿತವು ಮಗುವನ್ನು ಒಂಬತ್ತು … Continued

ವೀಡಿಯೊ | ಹತ್ತಿರ ಬಂದು, ಕಾರಿನ ಕೆಳಕ್ಕೆ ತೂರಿ ಕಾರನ್ನು ಸ್ವಯಂ ಎತ್ತಿ-ಒಯ್ದು, ಪರ್ಫೆಕ್ಟ್‌ ಪಾರ್ಕ್ ಮಾಡುವ ರೋಬೋಟ್ ವ್ಯಾಲೆಟ್ | ವೀಕ್ಷಿಸಿ

ಕಾರುಗಳನ್ನು ಮೇಲಕ್ಕೆತ್ತಿ ನಂತರ ಒಯ್ದು ಪಾರ್ಕಿಂಗ್ ಸ್ಥಳಗಳ ಕ್ಲಿಷ್ಟಕರ ಜಾಗದಲ್ಲಿ ಅಚ್ಚುಕಟ್ಟಾಗಿ ಹಾಗೂ ಕರಾರುವಕ್ಕಾಗಿ ಇರಿಸುವ ಸಂಪೂರ್ಣ ತಾನೇ ಸ್ವಯಂ ಕಾರ್ಯನಿರ್ವಹಿಸುವ ರೋಬೋಟ್ ವ್ಯಾಲೆಟ್ ತಂತ್ರಜ್ಞಾನದ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಬೆರಗುಗೊಳಿಸಿದೆ. ತಾನೇ ಸ್ವಯಂ ಆಗಿ ಕಾರ್ಯನಿರ್ವಹಿಸುವ ರೋಬೋಟ್ ವ್ಯಾಲೆಟ್‌ ವಾಹನಗಳ ಕೆಳಗೆ ತೂರಿಕೊಳ್ಳುತ್ತದೆ, ಚಕ್ರಗಳ ಮೂಲಕ ವಾಹನವನ್ನು ಮೇಲಕ್ಕೆ ಎತ್ತುತ್ತದೆ ಮತ್ತು ನಿಗದಿತ ಸ್ಥಳಕ್ಕೆ … Continued

10 ವರ್ಷಗಳಿಗೂ ಹೆಚ್ಚು ಕಾಲ ವೈದ್ಯರಿಗೇ ತಿಳಿಯದ ನಿಗೂಢ ಕಾಯಿಲೆಯ ಮೂಲ ಕಾರಣ ಪತ್ತೆಹಚ್ಚಿದ ಚಾಟ್‌ ಜಿಪಿಟಿ…!

ದಶಕಗಳ ಕಾಲದ ನಿಗೂಢವಾಗಿದ್ದ ಅನಾರೋಗ್ಯದ ಮೂಲ ಕಾರಣವನ್ನು ಕಂಡುಹಿಡಿಯಲು ಚಾಟ್‌ ಜಿಪಿಟಿ (ChatGPT) ಹೇಗೆ ಸಹಾಯ ಮಾಡಿತು ಎಂದು ಬಳಕೆದಾರರೊಬ್ಬರು ಹೇಳಿಕೊಂಡ ನಂತರ ರೆಡ್ಡಿಟ್ ಪೋಸ್ಟ್ ಗಮನ ಸೆಳೆಯುತ್ತಿದೆ. ಈ ನಿಗೂಢ ಆರೋಗ್ಯ ಸಮಸ್ಯೆಗೆ ಕಾರಣ ಏನೆಂದು ಒಂದು ದಶಕಕ್ಕೂ ಹೆಚ್ಚು ಕಾಲ ಪತ್ತೆ ಮಾಡಲು ಸಾಧ್ಯವಾಗದೆ ಹಲವಾರು ವೈದ್ಯರು, ತಜ್ಞರು ಮತ್ತು ನರವಿಜ್ಞಾನಿಗಳನ್ನು ಸಹ … Continued

ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆಗಿನ ಭಿನ್ನಾಭಿಪ್ರಾಯದ ನಂತರ ಹೊಸ ಪಕ್ಷ ಘೋಷಿಸಿದ ಎಲೋನ್‌ ಮಸ್ಕ್‌…

ವಾಷಿಂಗ್ಟನ್‌ : ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರು ಶನಿವಾರ ‘ಅಮೇರಿಕಾ ಪಾರ್ಟಿ’ ಎಂಬ ಹೆಸರಿನ ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಘೋಷಿಸಿದ್ದಾರೆ. ಸಾಮಾಜಿಕ ವೇದಿಕೆ X ನಲ್ಲಿ ತಾವು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ. ಮಸ್ಕ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಾರ್ವಜನಿಕ ತಿಕ್ಕಾಟದ ನಂತರ ಈ ಘೋಷಣೆ … Continued

ಜನನಿಬಿಡ ಬೀದಿಯಲ್ಲಿ ಮಹಿಳೆ-ಮಕ್ಕಳ ಮೇಲೆ ದಾಳಿ ಮಾಡಿದ ತಪ್ಪಿಸಿಕೊಂಡ ಸಾಕಿದ ಸಿಂಹ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪಾಕಿಸ್ತಾನದ ಲಾಹೋರಿನ ಜನನಿಬಿಡ ಬೀದಿಯಲ್ಲಿ ತಪ್ಪಿಸಿಕೊಂಡ ಸಾಕಿದ ಸಿಂಹವೊಂದು ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಬೆನ್ನಟ್ಟಿ, ಗೋಡೆ ಹಾರಿ, ಅವರ ಮೇಲೆ ದಾಳಿ ಮಾಡಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗುರುವಾರ ರಾತ್ರಿ ಸಿಂಹವು ತನ್ನ ಮನೆಯ ಸುತ್ತಲಿನ ತಡೆಗೋಡೆಯನ್ನು ಹಾರಿ, ಶಾಪಿಂಗ್‌ಗೆ ತನ್ನ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಹಿಳೆಯನ್ನು … Continued

ವೀಡಿಯೊಗಳು..| ಚೀನಾದ ರೋಬೋ ಲೀಗ್‌ನಲ್ಲಿ ಫುಟ್‌ಬಾಲ್ ಆಡುವ ರೋಬೋಟ್‌ಗಳು; ವೀಡಿಯೊ ಭಾರಿ ವೈರಲ್‌

ಅಸಾಮಾನ್ಯ ಘಟನೆಯೊಂದರಲ್ಲಿ, ಚೀನಾ ತನ್ನ ಮೊದಲ 3v3 ಆರ್ಟಿಫಿಶಿಯಲ್‌ (AI) ರೋಬೋಟ್ ಫುಟ್ಬಾಲ್‌ ಪಂದ್ಯವನ್ನು ಆಯೋಜಿಸಿದೆ. ಇದರಲ್ಲಿ ನಾಲ್ಕು ತಂಡಗಳ ಹುಮನಾಯ್ಡ್ ರೋಬೋಟ್‌ಗಳು ಬೀಜಿಂಗ್‌ನಲ್ಲಿ ಪರಸ್ಪರ ಸೆಣಸಾಡಿವೆ. ಪಂದ್ಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದು ರೋಬೋ (ROBO) ಲೀಗ್ ರೋಬೋಟ್ ಫುಟ್ಬಾಲ್‌ ಪಂದ್ಯಾವಳಿಯ ದೃಶ್ಯಗಳನ್ನು ತೋರಿಸುತ್ತದೆ. ವರದಿಗಳ ಪ್ರಕಾರ, ಮುಂಬರುವ 2025 ರ … Continued

ಎದೆ ಝಲ್‌ ಎನ್ನುವ ವೀಡಿಯೊ…| ಪಾಕಿಸ್ತಾನದ ಪ್ರವಾಹದಲ್ಲಿ ಕೊಚ್ಚಿಹೋದ ಒಂದೇ ಕುಟುಂಬದ 9 ಜನ ; ದುರಂತವಾದ ಪಿಕ್ನಿಕ್‌

ಪಾಕಿಸ್ತಾನದಲ್ಲಿ ಸ್ವಾತ್ ನದಿಯ ಹಠಾತ್ ಪ್ರವಾಹದಲ್ಲಿ ಕುಟುಂಬದ 18 ಜನರಲ್ಲಿ ಒಂಬತ್ತು ಮಂದಿ ಕೊಚ್ಚಿಹೋಗಿ ಸಾವಿಗೀಡಾದ ನಂತರ, ಕುಟುಂಬಕ್ಕೆ ಪಿಕ್ನಿಕ್ ಪ್ರವಾಸವು ದುರಂತವಾಗಿ ಪರಿಣಮಿಸಿತು. ಶುಕ್ರವಾರ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದೆ. ಮೈ ಜುಂ ಎನ್ನುವ ವೀಡಿಯೊದಲ್ಲಿ, ಬಲವಾದ ಪ್ರವಾಹದ ಮಧ್ಯೆ ನದಿ ಉಕ್ಕಿ ಹರಿಯುತ್ತಿದ್ದು, ಅದರ ಮಧ್ಯದಲ್ಲಿ ದಿನ್ನೆಯಂತೆ ಕಾಣುವ ಸ್ಥಳದಲ್ಲಿ … Continued

ಪಾಕಿಸ್ತಾನದಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ 13 ಸೈನಿಕರು ಸಾವು

ಪಾಕಿಸ್ತಾನಿ ತಾಲಿಬಾನ್ ನಡೆಸಿರುವ ಆತ್ಮಹತ್ಯಾ ದಾಳಿಯಲ್ಲಿ 13 ಸೈನಿಕರು ಸಾವಿಗೀಡಾಗಿದ್ದಾರೆ. ಅಲ್ಲದೆ, ನಾಗರಿಕರು, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 29 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ. “ಆತ್ಮಹತ್ಯಾ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ಸ್ಫೋಟದಲ್ಲಿ 13 ಸೈನಿಕರು ಸಾವಿಗೀಡಾಗಿದ್ದಾರೆ. ಅಲ್ಲದೆ, … Continued

ಅಮೆರಿಕ ದಾಳಿಯಲ್ಲಿ ತನ್ನ ಪರಮಾಣು ಕೇಂದ್ರಗಳು “ತೀವ್ರವಾಗಿ ಹಾನಿಗೊಳಗಾಗಿವೆ” ಎಂದು ಒಪ್ಪಿಕೊಂಡ ಇರಾನ್‌

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಅವರು ಬುಧವಾರ, ಅಮೆರಿಕದ ದಾಳಿಯಿಂದ ದೇಶದ ಪರಮಾಣು ಕೇಂದ್ರಗಳು “ತೀವ್ರವಾಗಿ ಹಾನಿಗೊಳಗಾಗಿವೆ” ಎಂದು ದೃಢಪಡಿಸಿದ್ದಾರೆ. ಅಲ್ ಜಜೀರಾ ಟಿವಿ ಜೊತೆ ಮಾತನಾಡಿದ ಬಘೈ ಅವರು, ಈ ಬಗ್ಗೆ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಆದರೆ ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿಕೊಂಡು ಅಮೆರಿಕದ ಬಿ -2 ಬಾಂಬರ್‌ಗಳು ಭಾನುವಾರ ನಡೆಸಿದ … Continued