ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ಹಾಸನ ಜಿಲ್ಲೆಯ ಹೊಳೆನರಸೀಪುರದ ತೋಟದ ಮನೆಯಲ್ಲಿ ಮನೆ ಕೆಲಸದಾಕೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಜೀವಾವಧಿ  ಕಾರಾಗೃಹ ಶಿಕ್ಷೆ ವಿಧಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(n) ಅಡಿಯಲ್ಲಿ (ಅತ್ಯಾಚಾರ) ಅಪರಾಧಕ್ಕಾಗಿ ರೇವಣ್ಣ ಅವರಿಗೆ ನ್ಯಾಯಾಲಯವು 10 ಲಕ್ಷ … Continued

8 ಜನರ ಜೊತೆ ಮದುವೆ…ಲಕ್ಷ ಲಕ್ಷ ಹಣ ಸುಲಿಗೆ…9ನೇ ಮದುವೆ ಪ್ರಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದ ಮಹಿಳೆ…!

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಎಂಟು ಜನರನ್ನು ಮದುವೆಯಾಗಿ ಒಂಬತ್ತನೇ ವ್ಯಕ್ತಿಯನ್ನು ಮದುವೆಯಾಗುವ ಸಿದ್ಧತೆಯಲ್ಲಿದ್ದಾಗ ಮದುವೆಯಾದವರಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ ಆರೋಪದ ಮೇಲೆ 35 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸಮೀರಾ ಫಾತಿಮಾ ಎಂದು ಗುರುತಿಸಲ್ಪಟ್ಟವಳನ್ನು ಜುಲೈ 29 ರಂದು ಬಂಧಿಸಲಾಯಿತು. ಪೊಲೀಸರ ಪ್ರಕಾರ, ಫಾತಿಮಾ ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದು, … Continued

ಮಾಲೆಗಾಂವ್ ಸ್ಫೋಟ | ಮೋಹನ ಭಾಗವತರ ಬಂಧಿಸಲು ಆದೇಶಿಸಲಾಗಿತ್ತು’: ನಿವೃತ್ತ ಎಟಿಎಸ್ ಅಧಿಕಾರಿ ಸ್ಫೋಟಕ ಮಾಹಿತಿ

ಮುಂಬೈ: 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಏಳು ಜನರನ್ನು ಖುಲಾಸೆಗೊಳಿಸಿದ ನಂತರ, ಈ ಪ್ರಕರಣದ ಮಾಜಿ ತನಿಖಾ ಅಧಿಕಾರಿಯೊಬ್ಬರು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆಯ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್ ಅವರನ್ನು ಬಂಧಿಸಲು ಆದೇಶಿಸಲಾಗಿತ್ತು ಎಂದು ಆರೋಪಿಸಿದ್ದಾರೆ. ʼಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯೇ ನಕಲಿ. ಇದನ್ನು … Continued

ವೀಡಿಯೊ…| ವಿಶ್ವಶಾಂತಿಗಾಗಿ ತಮಿಳುನಾಡಿನ ದೇವಸ್ಥಾನದಲ್ಲಿ ವಿಶೇಷ ಯಾಗ ಮಾಡಿದ ಜಪಾನಿಯರು

ಚೆನ್ನೈ : ಜಪಾನಿಯರು ವಿಶ್ವಶಾಂತಿಗಾಗಿ ತಮಿಳುನಾಡಿನ ತಿರುವಣೈಕೋಲಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಪಾನಿನಿಂದ ಆಗಮಿಸಿದ ಸುಮಾರು 120 ಮಂದಿ ವಿಶ್ವ ಶಾಂತಿಗಾಗಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಯಾಗ ಮಾಡಿದ್ದಾರೆ. ಸಯೋಕಾ ಕಿಮುರಾ ಎಂಬವರು ಮಾತನಾಡಿ, ವಿಶ್ವಶಾಂತಿಗಾಗಿ ನಾವು ಜಪಾನಿನಿಂದ ಬಂದ ಸುಮಾರು 120 ಮಂದಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ … Continued

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ : ಶಾರುಖ್ ಖಾನ್, ವಿಕ್ರಾಂತ ಮಸ್ಸಿ ಅತ್ಯುತ್ತಮ ನಟರು, ರಾಣಿ ಮುಖರ್ಜಿ ಅತ್ಯುತ್ತಮ ನಟಿ, ಕಂದೀಲು ಅತ್ಯುತ್ತಮ ಕನ್ನಡ ಚಿತ್ರ-ಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ: ಭಾರತೀಯ ಚಿತ್ರರಂಗದ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು, ಶುಕ್ರವಾರ ನವದೆಹಲಿಯಲ್ಲಿ ಘೋಷಿಸಲಾಗಿದೆ. ನಟನೆ, ನಿರ್ದೇಶನ, ಸಂಗೀತ ಮತ್ತು ನಿರ್ಮಾಣದಂತಹ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ‘ಜವಾನ್’ ಚಿತ್ರದ ಅಭಿನಯಕ್ಕಾಗಿ ಶಾರುಖ್ ಖಾನ್ ಮತ್ತು ‘ಟ್ವೆಲ್ತ್‌ ಫೇಲ್’ ಚಿತ್ರದ ಅಭಿನಯಕ್ಕಾಗಿ ವಿಕ್ರಾಂತ … Continued

ಭಾರತದ ಉಪರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಣೆ

ನವದೆಹಲಿ: ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆಗೆ ಚುನಾವಣಾ ಆಯೋಗ ಶುಕ್ರವಾರ ದಿನಾಂಕ ನಿಗದಿ ಮಾಡಿದೆ. ಜಗದೀಪ ಧನಕರ ಅವರ ಹಠಾತ್ ರಾಜೀನಾಮೆಯ ನಂತರ ತೆರವಾದ ಸ್ಥಾನಕ್ಕೆ ಆಯ್ಕೆ ಮಾಡಲು ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ. ಆಗಸ್ಟ್ 7 ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಮತ್ತು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 21 ಆಗಿದೆ. … Continued

ಜಾಗತಿಕ ನಾಯಕರ ಪಟ್ಟಿ : ಶೇ.75 ಅನುಮೋದನೆಯೊಂದಿಗೆ ಪ್ರಧಾನಿ ಮೋದಿಗೆ ಅಗ್ರಸ್ಥಾನ ; 8ನೇ ಸ್ಥಾನದಲ್ಲಿ ಟ್ರಂಪ್ : ಸಮೀಕ್ಷೆಯ ಟಾಪ್ 10 ನಾಯಕರು

ನವದೆಹಲಿ: ಅಮೆರಿಕ ಮೂಲದ ಡೇಟಾ ವಿಶ್ಲೇಷಣಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ಇತ್ತೀಚೆಗೆ ನಡೆಸಿದ ಜಾಗತಿಕ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶೇ. 75 ರಷ್ಟು ಅನುಮೋದನೆ ರೇಟಿಂಗ್‌ನೊಂದಿಗೆ ಪ್ರಜಾಪ್ರಭುತ್ವದ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ವಿಶ್ವ ನಾಯಕರ ‘ಡೆಮಾಕ್ರಟಿಕ್ ಲೀಡರ್ ಅಪ್ರೂವಲ್ ರೇಟಿಂಗ್ಸ್’ ಪಟ್ಟಿಯಲ್ಲಿ ಶೇ. 75 ರಷ್ಟು ಅನುಮೋದನೆ ರೇಟಿಂಗ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. … Continued

ಸ್ಟಾಲಿನ್ ಜೊತೆ ಬೆಳಗಿನ ವಾಕಿಂಗ್‌ ನಂತರ ಎನ್‌ ಡಿಎ ಜೊತೆ ಮೈತ್ರಿ ಕೊನೆಗೊಳಿಸಿದ ತಮಿಳುನಾಡು ಮಾಜಿ ಸಿಎಂ ಪನ್ನೀರಸೆಲ್ವಂ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ನಾಯಕ ಓ ಪನ್ನೀರಸೆಲ್ವಂ (ಒಪಿಎಸ್) ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆಗಿನ ಸಂಬಂಧ ಕಡಿದುಕೊಳ್ಳುವ ತಮ್ಮ ಬಣದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಬೆಳಗಿನ ವಾಕಿಂಗ್‌ ಸಮಯದಲ್ಲಿ ಭೇಟಿಯಾದ ಸ್ವಲ್ಪ ಸಮಯದ ನಂತರ ಅವರಿಂದ ಈ ನಿರ್ಧಾರ ಹೊರಬಿದ್ದಿದೆ. … Continued

8ನೇ ತರಗತಿಯ ಹುಡುಗಿ ಮದುವೆಯಾದ 40 ವರ್ಷದ ವ್ಯಕ್ತಿ…! ಹುಡುಗಿಯ ಶಿಕ್ಷಕರಿಂದ ಪ್ರಕರಣ ಬೆಳಕಿಗೆ

ತೆಲಂಗಾಣದಲ್ಲಿ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಿಜ ಜೀವನದ ‘ಬಾಲಿಕಾ ವಧು’ ಪ್ರಕರಣ ವರದಿಯಾಗಿದೆ. ಆಕೆಯ ಶಿಕ್ಷಕರು ಜಿಲ್ಲಾ ಮಕ್ಕಳ ರಕ್ಷಣೆ ಸೇವೆಗಳ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆಕೆಯನ್ನು ರಕ್ಷಿಸಲಾಗಿದೆ. ಮೇ 28 ರಂದು 8 ನೇ ತರಗತಿಯ ವಿದ್ಯಾರ್ಥಿನಿಯನ್ನು ರಂಗಾರೆಡ್ಡಿ ಜಿಲ್ಲೆಯ ಕಂಡಿವಾಡಾದ 40 ವರ್ಷದ ಶ್ರೀನಿವಾಸ್ ಗೌಡ್‌ ಎಂಬ ವ್ಯಕ್ತಿಗೆ … Continued

ಭಾರತದಿಂದ ಆಮದಿಗೆ ಸುಂಕ-ದಂಡ ; ಪಾಕಿಸ್ತಾನದ ಜೊತೆ ತೈಲ ಒಪ್ಪಂದಕ್ಕೆ ಸಹಿ ಹಾಕಿದ ಡೊನಾಲ್ಡ್ ಟ್ರಂಪ್ ; ಇದರ ಅರ್ಥವೇನು?

ವಾಷಿಂಗ್ಟನ್‌ : ತನ್ನ “ಸ್ನೇಹಿತ” ಭಾರತದ ಮೇಲೆ ಶೇಕಡಾ 25 ರಷ್ಟು ‘ಪ್ರತಿ ಸುಂಕ’ ಮತ್ತು ರಷ್ಯಾದಿಂದ ಶಸ್ತ್ರಾಸ್ತ್ರಗಳು ಮತ್ತು ತೈಲವನ್ನು ಖರೀದಿಸಿದ್ದಕ್ಕಾಗಿ ದಂಡವನ್ನು ಘೋಷಿಸಿದ ನಂತರ, ಡೊನಾಲ್ಡ್ ಟ್ರಂಪ್ ಗುರುವಾರ ಅಮೆರಿಕವು ಪಾಕಿಸ್ತಾನದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಕಟಿಸಿದ್ದಾರೆ. ಇದರಲ್ಲಿ “ಬೃಹತ್” ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳೂ ಸೇರಿವೆ. ಉಕ್ರೇನ್ ವಿರುದ್ಧ ಯುದ್ಧ … Continued