ಆಮದಾಗುವ ಕಾರುಗಳ ಮೇಲೆ 25% ಸುಂಕ ವಿಧಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಅಮೆರಿಕದಲ್ಲಿ ತಯಾರಾಗದ ಆಟೋ ಮೊಬೈಲ್‌ ಆಮದುಗಳ ಮೇಲೆ 25% ಸುಂಕವನ್ನು ಘೋಷಿಸಿದ್ದಾರೆ. ಸುಂಕವು ಏಪ್ರಿಲ್ 2 ರಿಂದ ಜಾರಿಗೆ ಬರಲಿದೆ. ಇತ್ತೀಚಿನ ಕ್ರಮವು ವಿದೇಶಿ ನಿರ್ಮಿತ ಕಾರುಗಳು ಮತ್ತು ಲಘು ಟ್ರಕ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. “ಅಮೆರಿಕದಲ್ಲಿ ತಯಾರಾಗದ ಎಲ್ಲಾ ಕಾರುಗಳ ಮೇಲೆ 25% … Continued

ಕೇವಲ 7 ಸೆಕೆಂಡುಗಳಲ್ಲಿ ಹೃದ್ರೋಗ ಪತ್ತೆ ಹಚ್ಚುವ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಆ್ಯಪ್ ಸಿದ್ಧಪಡಿಸಿದ ಆಂಧ್ರ ಮೂಲದ 14 ವರ್ಷದ ಬಾಲಕ…!

ಈಗ ಅಮೆರಿಕದ ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ನೆಲೆಸಿರುವ ಆಂಧ್ರಪ್ರದೇಶದ ಅನಂತಪುರ ಮೂಲದ ಅದ್ಭುತ ಪ್ರತಿಭೆ 14 ವರ್ಷದ ಸಿದ್ಧಾರ್ಥ ನಂದ್ಯಾಲ ಎಂಬ ಹುಡುಗ ಹೃದಯ ಸಂಬಂಧಿ ಕಾಯಿಲೆ (Heart Disease) ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ(AI) ಬಳಸಿ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಒರಾಕಲ್‌ (Oracle) ಮತ್ತು ಎಆರ್‌ಎಂ(ARM)ನಿಂದ ವಿಶ್ವದ ಅತ್ಯಂತ ಕಿರಿಯ ಕೃತಕ … Continued

ವೀಡಿಯೊ…| ವೈಮಾನಿಕ ದಾಳಿಯಲ್ಲಿ ಐಸಿಸ್‌ ಭಯೋತ್ಪಾದಕ ಗುಂಪಿನ ನಂ.2 ನಾಯಕನ್ನು ಕೊಂದು ಹಾಕಿದ ಅಮೆರಿಕ

ನವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದಲ್ಲಿ, ಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ “ಅಬು ಖದೀಜಾ” ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ (ISIS)ನ ನಂ.2 ನಾಯಕನಾದ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿಯನ್ನು ಕೊಂದಿರುವುದಾಗಿ ಅಮೆರಿಕ ಘೋಷಿಸಿದೆ. ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ … Continued

ಮಾನ್ಯ ವೀಸಾ ಇದ್ದರೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕನ ಗಡೀಪಾರು ಮಾಡಿದ ಅಮೆರಿಕ

ಅಮೆರಿಕದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮುಜುಗರವಾಗಿದ್ದು, ಮಾನ್ಯವಾದ ವೀಸಾ ಮತ್ತು ಅಗತ್ಯ ದಾಖಲೆಗಳನ್ನು ಹೊಂದಿದ್ದರೂ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಿಗೆ ಅಮೆರಿಕಕ್ಕೆ ಪ್ರವೇಶ ನಿರಾಕರಿಸಲಾಯಿತು ಎಂದು ಪಾಕಿಸ್ತಾನದ ಮಾಧ್ಯಮ ಔಟ್ಲೆಟ್ ದಿ ನ್ಯೂಸ್ ವರದಿ ಮಾಡಿದೆ. ತುರ್ಕಮೆನಿಸ್ತಾನಕ್ಕೆ ಪಾಕಿಸ್ತಾನದ ರಾಯಭಾರಿಯಾಗಿದ್ದ ಕೆ.ಕೆ. ವ್ಯಾಗನ್ ಅವರು ಲಾಸ್ ಏಂಜಲೀಸ್‌ಗೆ ಆಗಮಿಸಿದ ನಂತರ ಅಮೆರಿಕ ವಲಸೆ ಇಲಾಖೆ ಅವರನ್ನು ತಡೆದಿದೆ ಮತ್ತು … Continued

ಮೈ ಜುಂ ಎನ್ನುವ ವೀಡಿಯೊ | ದುಸ್ಸಾಹಸ….ದೈತ್ಯಾಕಾರದ ಮೊಸಳೆ ಬಾಯಿ ಬಳಿ ಹೋಗಿ ಬರಿಗೈಯಿಂದ ಆಹಾರ ನೀಡಿದ ವ್ಯಕ್ತಿ….!

ದೈತ್ಯಾಕಾರದ ಮೊಸಳೆಗೆ ನಿರ್ಭಯವಾಗಿ ಬರಿಗೈಯಿಂದ ಆಹಾರ ನೀಡುತ್ತಿರುವ ವ್ಯಕ್ತಿಯೊಬ್ಬರ ಮೈಜುಂ ಎನ್ನುವ ವೀಡಿಯೋ ಇಂಟರ್ನೆಟ್ ಅನ್ನು ದಿಗ್ಭ್ರಮೆಗೊಳಿಸಿದೆ. “ನೇಚರ್ ಈಸ್ ಅಮೇಜಿಂಗ್” ಎಂಬ ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಳ್ಳಲಾದ ದೃಶ್ಯಾವಳಿಯು ವ್ಯಕ್ತಿಯೊಬ್ಬರು ತರಬೇತಿ ಪಡೆದವರಂತೆ ದೈತ್ಯಾಕಾರದ ಮೊಸಳೆಗೆ ಸಾಕುಪ್ರಾಣಿಗೆ ನೀಡುವಂತೆ ಯಾವುದೇ ಭಯವಿಲ್ಲದೆ ಶಾಂತವಾಗಿ ಆಹಾರ ನೀಡುತ್ತಿರುವುದನ್ನು ತೋರಿಸಿದೆ. ಆ ವ್ಯಕ್ತಿ ಯಾವುದೇ ರಕ್ಷಣಾತ್ಮಕ ಕೈವುಸು … Continued

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ದೇವಾಲಯಕ್ಕೆ ಹಾನಿ, ಭಾರತ ವಿರೋಧಿ ಬರಹ ಗೀಚಿ ವಿರೂಪ

ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾದ ಬಾಪ್ಸ್‌ (BAPS) ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಭಾರತ ವಿರೋಧಿ ಬರಹಗಳನ್ನು ಬರೆದು, ಮಂದಿರಕ್ಕೆ ಹಾನಿ ಮಾಡಿದ ಘಟನೆ ಭಾನುವಾರ ನಡೆದಿದೆ. ಇದು ಅಮೆರಿಕದಲ್ಲಿ ಹಿಂದೂ ಸಮುದಾಯದ ವಿರುದ್ಧ ದ್ವೇಷದ ಅಪರಾಧಗಳ ಮತ್ತೊಂದು ಉದಾಹರಣೆಯಾಗಿದೆ. ಕ್ಯಾಲಿಫೋರ್ನಿಯಾದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ ದೇವಾಲಯಕ್ಕೆ ಹಾನಿ ಮಾಡಲಾಗಿದೆ. ಬೋಚಸನ್ವಾಸಿ … Continued

ಏಪ್ರಿಲ್ 2 ರಿಂದ ಭಾರತ, ಚೀನಾ ಸರಕುಗಳ ಮೇಲೆ ಪ್ರತಿ ಸುಂಕ ; ಅಮೆರಿಕ ಅಧ್ಯಕ್ಷ ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಅಮೆರಿಕನ್ನರಿಗೆ ಅನ್ಯಾಯವಾಗುವ ವ್ಯಾಪಾರ ನೀತಿಗಳನ್ನು ಜಾರಿಗೆ ತಂದಿದ್ದಕ್ಕಾಗಿ” ಭಾರತ ಸೇರಿದಂತೆ ಅಮೆರಿಕದ ಬಹುತೇಕ ವ್ಯಾಪಾರ ಪಾಲುದಾರರ ಮೇಲೆ ಏಪ್ರಿಲ್ 2 ರಿಂದ ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ. ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಆಮದುಗಳ ಮೇಲಿನ ಟ್ರಂಪ್‌ ಅವರು ಹೊಸದಾಗಿ ವಿಧಿಸಿರುವ 25% ಸುಂಕಗಳು ಜಾರಿಗೆ ಬಂದ … Continued

ವೀಡಿಯೊ..| ಇಂದು ಚಂದ್ರನ ಅಮೆರಿಕದ ಬಾಹ್ಯಾಕಾಶ ನೌಕೆ ಲ್ಯಾಂಡಿಂಗ್‌ ; ಅದು ತೆಗೆದ ಚಂದ್ರನ ಮೇಲ್ಮೈನ ಅದ್ಭುತ ವೀಡಿಯೊ ಹಂಚಿಕೊಂಡ ಫೈರ್‌ ಫ್ಲೈ ಏರೋಸ್ಪೇಸ್‌

ಸುದೀರ್ಘ ಪ್ರಯಾಣದ ನಂತರ, ಅಮೆರಿಕದ ಕಂಪನಿಯೊಂದು ಚಂದ್ರನ ಮೇಲೆ ಇಳಿಯಲು ಕೆಲವೇ ಗಂಟೆಗಳ ದೂರದಲ್ಲಿದೆ. ಅದು ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್‌ ಮಾಡುವ ಎರಡನೇ ಖಾಸಗಿ ಲ್ಯಾಂಡರ್ ಆಗಲಿದೆ. ಫೈರ್‌ಫ್ಲೈ ಏರೋಸ್ಪೇಸ್‌ನ ಬ್ಲೂ ಘೋಸ್ಟ್ ಮಿಷನ್ 1 ಭಾನುವಾರ ಅಮೆರಿಕದ ಈಸ್ಟರ್ನ್ ಸಮಯ (0834 GMT) 3:34 ಕ್ಕಿಂತ ಮುಂಚೆಯೇ ಲ್ಯಾಂಡಿಂಗ್ ಮಾಡಲು ಸಮಯ ನಿಗದಿಪಡಿಸಿಕೊಂಡಿದೆ. … Continued

ವೀಡಿಯೊ…| ಮಾಧ್ಯಮಗಳ ಎದುರೇ ಅಮೆರಿಕ ಅಧ್ಯಕ್ಷ ಟ್ರಂಪ್-ಉಕ್ರೇನ್ ಅಧ್ಯಕ್ಷ ಜಟಾಪಟಿ…! ಶ್ವೇತಭವನದಿಂದ ಹೊರನಡೆಯಿರಿ ಎಂದು ಟ್ರಂಪ್‌

ವಾಷಿಂಗ್ಟನ್‌ : ಅಮೆರಿಕಕ್ಕೆ ಭೇಟಿ ನೀಡಿರುವ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಜತೆ ನಡೆಸಿದ ಮಾತುಕತೆ ವೇಳೆ ಪರಸ್ಪರ ಕಿತ್ತಾಡಿದ್ದಾರೆ. ಮಾಧ್ಯಮದ ಎದುರೇ ಕಿತ್ತಾಡಿದ ನಂತರ ಉಕ್ರೇನ್‌ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಸಭೆಯಿಂದ ಹೊರನಡೆದರು. ಶುಕ್ರವಾರ ಶ್ವೇತಭವನಕ್ಕೆ ಆಗಮಿಸಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ಅಧ್ಯಕ್ಷ … Continued

ವೀಡಿಯೊ..| ವಿಮಾನ ಲ್ಯಾಂಡ್‌ ಆಗುತ್ತಿದ್ದಾಗ ರನ್‌ ವೇಯಲ್ಲಿ ಅಚಾನಕ್‌ ಆಗಿ ಬಂದ ಮತ್ತೊಂದು ವಿಮಾನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಿದ ಪೈಲಟ್‌…!

ಚಿಕಾಗೋ : ಮಂಗಳವಾರ ಬೆಳಿಗ್ಗೆ ಅಮೆರಿಕದ ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆಯುವುದನ್ನು ಪೈಲಟ್‌ ತನ್ನ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾನೆ. ಸೌತ್‌ವೆಸ್ಟ್ ಏರ್‌ಲೈನ್ಸ್ ಪೈಲಟ್ ಕೊನೆಯ ಕ್ಷಣದಲ್ಲಿ ವಿಮಾನದ ಲ್ಯಾಂಡಿಂಗ್ ಮಾಡುವುದನ್ನು ಕೈಬಿಟ್ಟು ಮತ್ತೆ ವಿಮಾನವನ್ನು ಹಾರಿಸಿ ಸಂಭವನೀಯ ದೊಡ್ಡ ದುರಂತವನ್ನು ತಪ್ಪಿಸಿದ್ದಾನೆ. ಖಾಸಗಿ ಜೆಟ್ ಪೈಲಟ್‌ ಅನುಮತಿಯಿಲ್ಲದೆ ರನ್‌ವೇ … Continued